HomeCropಚೆಂಡು ಹೂವಿನ ಸಮಗ್ರ ಕೃಷಿ: ಹೆಚ್ಚು ಹೂವಿನ ಇಳುವರಿಗಾಗಿ ಸಂಪೂರ್ಣ ಕೃಷಿ ಕೈಪಿಡಿ

ಚೆಂಡು ಹೂವಿನ ಸಮಗ್ರ ಕೃಷಿ: ಹೆಚ್ಚು ಹೂವಿನ ಇಳುವರಿಗಾಗಿ ಸಂಪೂರ್ಣ ಕೃಷಿ ಕೈಪಿಡಿ

ಚೆಂಡು ಹೂವು (ಮಾರಿಗೋಲ್ಡ್) ಅತ್ಯಂತ ಜನಪ್ರಿಯ, ಉತ್ತಮ ಬೆಳೆವಣಿಗೆ ಮತ್ತು ಕಡಿಮೆ ಅವಧಿಯಲ್ಲಿ ಹೂಬಿಡುವ ಬೆಳೆಗಳಲ್ಲಿ ಒಂದಾಗಿದೆ. ಚೆಂಡು ಹೂವುಗಳು ತಮ್ಮ  ಕಿತ್ತಳೆ ಮತ್ತು ಹಳದಿ ಬಣ್ಣದ ಹೂವುಗಳಿಗೆ ಹೆಸರುವಾಸಿಯಾಗಿದೆ, ಇದು ಉದ್ಯಾನಗಳು ಮತ್ತು (ಲ್ಯಾಂಡ್ಸ್ಕೇಪ್) ಉತ್ತಮವಾಗಿದ್ದು,  ಚೆಂಡುಹೂವುಗಳು ಮೆಕ್ಸಿಕೋ ಮತ್ತು ಮಧ್ಯ ಅಮೇರಿಕಾದಲ್ಲಿ ಉಗಮವಾಗಿರುತ್ತವೆ, ಆದರೆ ಈಗ ಪ್ರಪಂಚದಾದ್ಯಂತ ಬೆಳೆಯಲಾಗುತ್ತಿದೆ. ಭಾರತದಲ್ಲಿ, ಚೆಂಡು ಹೂವು  ಬೆಳೆಯುವ ಪ್ರಮುಖ ರಾಜ್ಯಗಳು ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ. ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮಾರಂಭಗಳಲ್ಲಿ ಚೆಂಡು ಹೂವನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಇವುಗಳನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ತಮ್ಮ ಅಲಂಕಾರಿಕ ಮೌಲ್ಯದ ಜೊತೆಗೆ, ಚೆಂಡುಹೂವುಗಳು ತಮ್ಮ ಔಷಧೀಯ ಬಳಕೆಗಾಗಿ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ಬೆಳೆಯುವ ಚೆಂಡು ಹೂವುಗಳ ಜಾತಿಗಳು:  ಆಫ್ರಿಕನ್ ಚೆಂಡು ಹೂವು  (ಎತ್ತರದ) ಮತ್ತು ಫ್ರೆಂಚ್ ಚೆಂಡು ಹೂವು (ಡ್ವಾರ್ಫ್). ಚೆಂಡು ಹೂವಿನ  ಕೃಷಿ ಭಾರತದ ಅನೇಕ ರೈತರಿಗೆ ಉತ್ತಮ ಆದಾಯದ ಪ್ರಮುಖ ಮೂಲವಾಗಿದೆ.

ಭಾರತದಲ್ಲಿ ಚೆಂಡುಹೂವಿನ ಸ್ಥಳೀಯ ಹೆಸರುಗಳು: 

ಗೆಂಡ (ಹಿಂದಿ), ಬಂಟಿ ಪುವ್ವು (ತೆಲುಗು), ಸಮಂತಿ (ತಮಿಳು), ಚೆಂಡು ಹೂವು (ಕನ್ನಡ), ಜಮಂಧಿ (ಮಲಯಾಳಂ), ಗೈಂಡ (ಬಂಗಾಳಿ), ಝೆಂಡು (ಮರಾಠಿ).

ಹವಾಮಾನ ಮತ್ತು ಮಣ್ಣು: 

ಚೆಂಡುಹೂವಿನ ಸಮೃದ್ಧ ಬೆಳವಣಿಗೆ ಮತ್ತು ಹೂಬಿಡುವಿಕೆಗೆ ಸಾಧಾರಣ ಹವಾಮಾನದ ಅಗತ್ಯವಿರುತ್ತದೆ. ಚೆಂಡುಹೂವಿನ  ಬೆಳವಣಿಗೆಗೆ ಸೂಕ್ತವಾದ ತಾಪಮಾನ 18 – 20˚C ಇರಬೇಕು. ಹೆಚ್ಚಿನ ತಾಪಮಾನವು (> 35 ˚C) ಸಸ್ಯದ ಬೆಳವಣಿಗೆ,  ಹೂವಿನ ಗಾತ್ರ ಮತ್ತು ಹೂವಿನ ಸಂಖ್ಯೆಯಲ್ಲಿ ಕುಂಠಿತವಾಗುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಹಿಮದಿಂದಾಗಿ ಸಸ್ಯಗಳು ಮತ್ತು ಹೂವುಗಳು ಹಾನಿಗೊಳಗಾಗಬಹುದು.

ಮಣ್ಣು ಮತ್ತು ಹವಾಮಾನ : 

ಚೆಂಡುಹೂವನ್ನು ವ್ಯಾಪಕವಾದ ಮಣ್ಣಿನಲ್ಲಿ ಬೆಳೆಯಬಹುದು, ಏಕೆಂದರೆ ಇದು ವಿವಿಧ ಮಣ್ಣಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತದೆ. ಚೆಂಡುಹೂವು 7 – 7.5 ರ ಮಣ್ಣಿನ pH ನೊಂದಿಗೆ ಚೆನ್ನಾಗಿ ಬರಿದುಹೋದ ಲೋಮಿ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಆಮ್ಲೀಯ ಮತ್ತು ಕ್ಷಾರೀಯ ಮಣ್ಣಿನಲ್ಲಿ ಚೆಂಡುಹೂವು   ಬೆಳೆಯುವುದನ್ನು ತಪ್ಪಿಸಬೇಕು.

ತಳಿಗಳು : 

ತಳಿಗಳು  ಬಿಗ್ ಹಾಟ್ ಆನ್ ಲೈನ್ ಸ್ಟೋರ್ ನಲ್ಲಿ ಲಭ್ಯವಿರುವ ಬೀಜಗಳು 
1.  ಆಫ್ರಿಕನ್ ಚೆಂಡುಹೂವು  ಡಬಲ್ ಕಿತ್ತಳೆ ಬಣ್ಣದ ಬೀಜಗಳು, ಎನ್ ಯಸ್ ಬೀಜಗಳು, ಎನ್ ಯಸ್ F1 ವೆನಿಲ್ಲಾ ಬಿಳಿ,  ಎನ್ ಯಸ್ ಮೆಜೆಸ್ಟಿಕ್ ಹಳದಿ ಬೀಜಗಳು,  ಡಬಲ್ ಹಳದಿ ಚೆಂಡುಹೂವು ಬೀಜಗಳು, ಎನ್ ಯಸ್  F1 ಇಂಕಾ ಮಿಶ್ರಣ
2. ಫ್ರೆಂಚ್ ಚೆಂಡುಹೂವು  ಫ್ರೆಂಚ್ ಚೆಂಡುಹೂವು, ಸರ್ಪನ್ ಹೈಬ್ರಿಡ್ (ಯಸ್ ಎಫ್ ಆರ್), ಐರಿಸ್  ಹೈಬ್ರಿಡ್, ಸ್ಕಾರ್ಲೆಟ್ ಬೀಜಗಳು

ಹೆಚ್ಚಿನ ಚೆಂಡುಹೂವಿನ  ಬೀಜಗಳನ್ನು ಖರೀದಿಸಲು  ಇಲ್ಲಿ ಕ್ಲಿಕ್ ಮಾಡಿ

ಚೆಂಡುಹೂವನ್ನು ಬಿತ್ತಲು ಉತ್ತಮ ಸಮಯ 

ಚೆಂಡುಹೂವನ್ನು  ವರ್ಷವಿಡೀ ಬೆಳೆಯಬಹುದು.

ನಾಟಿ ಕಾಲ ಬಿತ್ತನೆ ಸಮಯ ನಾಟಿ ಸಮಯ ಹೂಬಿಡುವ ಸಮಯ ಟಿಪ್ಪಣಿಗಳು 
ಬೇಸಿಗೆ ಜನವರಿ – ಫೆಬ್ರುವರಿ ಫೆಬ್ರುವರಿ – ಮಾರ್ಚ್ ಮಧ್ಯ-ಮೇ – ಜುಲೈ
 • ಹೆಚ್ಚಿನ ತಾಪಮಾನದಿಂದ  ಹೂವುಗಳ ಗಾತ್ರವು ಚಿಕ್ಕದಾಗಿರುತ್ತದೆ. 
 • ಹೆಚ್ಚಿನ ಮಾರುಕಟ್ಟೆ ಬೇಡಿಕೆಯಿಂದಾಗಿ ಉತ್ತಮ ಆದಾಯವನ್ನು ಪಡೆಯಲಾಗಿದೆ
ಮಳೆ ಕಾಲ  ಮಧ್ಯ ಜೂನ್ ಮಧ್ಯ ಜುಲೈ ಮಧ್ಯ ಸೆಪ್ಟೆಂಬರ್- ನವೆಂಬರ್
 • ಹೆಚ್ಚಿನ ಮಾರುಕಟ್ಟೆ ಬೇಡಿಕೆಯಿಂದಾಗಿ, ಹೂವುಗಳಿಗೆ ಉತ್ತಮ ಬೆಲೆ ಸಿಗುತ್ತದೆ.
ಚಳಿಗಾಲ ಮಧ್ಯ – ಸೆಪ್ಟೆಂಬರ್ ಮಧ್ಯ ಅಕ್ಟೋಬರ್ ಮಧ್ಯ ಜನವರಿ
 • ಹೆಚ್ಚಿನ  ಹೂಬಿಡುವಿಕೆ, ಉತ್ತಮ ಗುಣಮಟ್ಟದ ಹೂವುಗಳು, ಪ್ರತಿ ಕೊಯ್ಲಿನಲ್ಲೂ  ಹೆಚ್ಚಿನ ಇಳುವರಿ ಆದರೆ ಕಡಿಮೆ ಮಾರುಕಟ್ಟೆ ಬೆಲೆ.

 

ಬೀಜ ಪ್ರಮಾಣ

500 – 800 ಗ್ರಾಂ ಬೀಜಗಳು ಪ್ರತೀ ಎಕರೆಗೆ  

ಸಸಿಮಡಿ ತಯಾರಿ : 

ಚೆಂಡುಹೂವುಗಳನ್ನು ಸಾಮಾನ್ಯವಾಗಿ ಬೀಜಗಳ ಮೂಲಕ ಬಿತ್ತನೆ ಮಾಡಲಾಗುತ್ತದೆ. ಬಿತ್ತನೆ ಮಾಡುವ ಮೊದಲು ಬೀಜಗಳನ್ನು 10 ಮಿಲಿ ಅಜೋಸ್ಪಿರಿಲಮ್ ನೊಂದಿಗೆ  ತಣ್ಣನೆಯ ಬೆಲ್ಲದ ದ್ರಾವಣದಲ್ಲಿ ಬೆರೆಸಿ ಬೀಜದ ಮೇಲ್ಮೈಗೆ ಈ ದ್ರಾವಣವು ಸಮವಾಗಿ ಲೇಪನೆಯಾಗಬೇಕು. ಅನುಕೂಲಕರ ಉದ್ದ, 75 ಸೆಂ ಅಗಲ ಮತ್ತು 10 – 20 ಸೆಂ ಎತ್ತರದ ನರ್ಸರಿ ಸಸಿ ಮಡಿಗಳನ್ನು ತಯಾರಿಸಿಕೊಳ್ಳಬೇಕು. ಸಾಕಷ್ಟು ಪ್ರಮಾಣದಲ್ಲಿ ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರವನ್ನು ಸಸಿಮಡಿಗೆ ಹಾಕಬೇಕು ಮತ್ತು ಮಣ್ಣಿನೊಂದಿಗೆ ಸರಿಯಾಗಿ ಬೆರೆಸಬೇಕು. ಬೀಜಗಳನ್ನು  ಸಾಲಿಂದ  ಸಾಲಿಗೆ 5 ಸೆಂ.ಮೀ ಅಂತರದಂತೆ  ಬಿತ್ತಬೇಕು. ಬಿತ್ತನೆಯ ಆಳವು 2-3 ಸೆಂ.ಮೀ ಅಷ್ಟಿರಬೇಕು.  ಬೀಜಗಳನ್ನುಕೊಟ್ಟಿಗೆ ಗೊಬ್ಬರ ಅಥವಾ ಉತ್ತಮವಾದ ಮರಳಿನಿಂದ ಮುಚ್ಚಿ ನಂತರ ರೋಸ್ ಕ್ಯಾನ್ ನಂತಹ ತೂತುಮಡಿಕೆಯಿಂದ  ಲಘು ನೀರಾವರಿ ಮಾಡಬೇಕು. ಬಿತ್ತನೆ ಮಾಡಿದ 4-5 ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯುತ್ತವೆ. ಬಿತ್ತನೆ ಮಾಡಿದ ಒಂದು ತಿಂಗಳ ನಂತರ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ.

ಮುಖ್ಯ ಕ್ಷೇತ್ರ ತಯಾರಿಕೆ ಮತ್ತು ಸಸಿಗಳನ್ನು ನಾಟಿ ಮಾಡುವುದು : 

ಮುಖ್ಯ ಹೊಲವನ್ನು ಉತ್ತಮ ಸಮತಟ್ಟಿಗೆ ಬರುವ ರೀತಿ ಉಳುಮೆ ಮಾಡಿ  ಹಾಗೂ ನಂತರದಲ್ಲಿ ಒಂದು ಎಕರೆ ಹೊಲಕ್ಕೆ 10 ಟನ್ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಬೆರೆಸಬೇಕು. ಬಿತ್ತನೆ ಮಾಡುವ ಮೊದಲು ಹೊಲಕ್ಕೆ ನೀರು ಕೊಡಬೇಕು. ಬಿತ್ತನೆ ಮಾಡಿದ 1 ತಿಂಗಳ ನಂತರ ಅಥವಾ ಸಸಿಗಳು 4-5 ಎಲೆಗಳನ್ನು ಹೊಂದಿರುವಾಗ ಅವುಗಳನ್ನು  ನಾಟಿ ಮಾಡಲು ಬಳಸಬಹುದು. ಆಫ್ರಿಕನ್ ಚೆಂಡುಹೂವಿನ ವಿಧಕ್ಕೆ ಸಾಲಿಂದ  ಸಾಲಿಗೆ  45 ಸೆಂ ಮತ್ತು ಗಿಡದಿಂದ ಗಿಡಕ್ಕೆ 45 ಸೆಂ ಅಂತರದಲ್ಲಿ ನೆಡಬೇಕು. ಫ್ರೆಂಚ್ ಚೆಂಡುಹೂವಿನ ವಿಧಕ್ಕೆ  ಸಾಲಿನ ನಡುವೆ 30 ಸೆಂ ಮತ್ತು ಗಿಡಗಳ ನಡುವೆ 30 ಸೆಂಟಿಮೀಟರ್ ನಂತೆ  ನೆಡಬೇಕು. 

(ಗಮನಿಸಿ: ತಾಪಮಾನವು ಕಡಿಮೆಯಾದಾಗ ಸಂಜೆ ಸಮಯದಲ್ಲಿ ನಾಟಿ/ ಕಸಿ ಮಾಡಬಹುದು)

ರಸಗೊಬ್ಬರದ ಅವಶ್ಯಕತೆ: 

ಚೆಂಡುಹೂವಿಗೆ ಗೊಬ್ಬರದ ಸಾಮಾನ್ಯ ಪ್ರಮಾಣವು ಏನ್: ಪಿ :ಕೆ 36:36:30 ಕೆಜಿ/ಎಕರೆಗೆ.

ಪೋಷಕಾಂಶಗಳು  ರಸಗೊಬ್ಬರಗಳು  ಗೊಬ್ಬರದ ಪ್ರಮಾಣ (ಪ್ರತಿ ಎಕರೆಗೆ) ಹಾಕುವ ಸಮಯ
ಸಾವಯವ ಗೊಬ್ಬರಗಳು  ಕೊಟ್ಟಿಗೆ ಗೊಬ್ಬರ  10 ಟನ್ ಕೊನೆ ಉಳುಮೆ ಮಾಡುವ  ಸಮಯದಲ್ಲಿ 
ಕಾತ್ಯಾಯನಿ ಆಕ್ಟಿವೇಟೆಡ್ ಹ್ಯೂಮಿಕ್ ಆಸಿಡ್ (ಪೋಷಕಾಂಶಗಳು ಮತ್ತು ಮಣ್ಣಿನ ತೇವಾಂಶ  ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ) ಸಿಂಪಡಣೆ – 1ಗ್ರಾಂ/ಲೀಟರ್ ನೀರಿನಲ್ಲಿ  1 ನೇ ಸಿಂಪರಣೆ: ಬಿತ್ತನೆ ಮಾಡಿದ 15 ದಿನಗಳ ನಂತರ

ಹೂಬಿಡುವವರೆಗೆ 10-12 ದಿನಗಳ ಮಧ್ಯಂತರದಲ್ಲಿ ಸಿಂಪಡಿಸುವುದನ್ನು ಮುಂದುವರಿಸಿ

ಸಾರಜನಕ  ಯೂರಿಯಾ 36 ಕೆಜಿ  ತಳ ಗೊಬ್ಬರವಾಗಿ 
36 ಕೆಜಿ ಮೇಲುಗೊಬ್ಬರವಾಗಿ  (ನಾಟಿ ಮಾಡಿದ 45 ದಿನಗಳ ನಂತರ)
ರಂಜಕ  ಸಿಂಗಲ್ ಸೂಪರ್ ಫಾಸ್ಫೇಟ್ (SSP)  30 ಕೆಜಿ  ತಳ ಗೊಬ್ಬರವಾಗಿ
ಪೊಟ್ಯಾಷಿಯಂ  ಮ್ಯೂರಿಯೇಟ್ ಆಫ್ ಪೊಟ್ಯಾಶ್  50 ಕೆ.ಜಿ  ತಳ ಗೊಬ್ಬರವಾಗಿ
ಅಗತ್ಯ ಪೋಷಕಾಂಶಗಳು (ಪ್ರಮುಖ, ಮಾಧ್ಯಮಿಕ ಮತ್ತು ಸೂಕ್ಷ್ಮ ಪೋಷಕಾಂಶಗಳು) ಮಲ್ಟಿಪ್ಲೆಕ್ಸ್ ಹೂವಿನ ಬೂಸ್ಟರ್ (ಹೂವುಗಳ ಗಾತ್ರ ಮತ್ತು ಸಂಖ್ಯೆಯನ್ನು ಹೆಚ್ಚಿಸುತ್ತದೆ) ಎಲೆಗಳ ಮೇಲೆ ಸಿಂಪರಣೆ –  4 ಗ್ರಾಂ / ಲೀಟರ್ ನೀರಿನಲ್ಲಿ  ಮೊದಲನೇ ಸಿಂಪರಣೆ: ಕಸಿ ಮಾಡಿದ 25 – 30 ದಿನಗಳ ನಂತರ.

20 ದಿನಗಳ ಮಧ್ಯಂತರದಲ್ಲಿ 2 ರಿಂದ 3 ಸಿಂಪಡಣೆಗಳನ್ನು  ಮಾಡಬೇಕು 

ಕಡಲಕಳೆ ಸಾರ ಬಯೋಪ್ರೈಮ್‌ನ ಪ್ರೈಮ್  7525 (ಎಲೆಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚು ಹೂಬಿಡುವಿಕೆಯನ್ನು ಪ್ರೇರೇಪಿಸುತ್ತದೆ) ಎಲೆಗಳ ಮೇಲೆ ಸಿಂಪರಣೆ : 2 ಮಿಲಿ/ಲೀಟರ್ ನೀರಿನಲ್ಲಿ  1 ನೇ ಸಿಂಪಡಣೆ : ಹೂಬಿಡುವ ಆರಂಭದಲ್ಲ, 

2 ರಿಂದ 3 ಸಿಂಪಡಣೆಗಳು: 

 15-20 ದಿನಗಳ ಮಧ್ಯಂತರದಲ್ಲಿ ಮಾಡಬೇಕು. 

ನೀರಾವರಿ: 

ಮುಖ್ಯ ಹೊಲಕ್ಕೆ ಸಸಿಗಳನ್ನು ನಾಟಿ ಮಾಡಿದ ತಕ್ಷಣ ನೀರು ನೀಡಬೇಕು. ಸಸ್ಯಗಳ ಬೆಳವಣಿಗೆಯ ಸಮಯದಲ್ಲಿ ಉತ್ತಮ ನೀರನ್ನು ಬೆಳೆಗಳಿಗೆ ನೀಡಬೇಕು, ಸಸಿಗಳಿಗೆ ನೀರಿನ ಕೊರತೆಯಾದರೆ ಸಸ್ಯದ ಬೆಳವಣಿಗೆ ಮತ್ತು ಹೂಬಿಡುವಿಕೆಯು ಕುಂಠಿತವಾಗಬಹುದು. ನೀರಾವರಿಯ ಪುನರಾವರ್ತನೆಯು  ಮುಖ್ಯವಾಗಿ ಮಣ್ಣಿನ ಪ್ರಕಾರ ಮತ್ತು ಋತುವಿನ ಮೇಲೆ ಅವಲಂಬಿತವಾಗಿರುತ್ತದೆ. ಚಳಿಗಾಲದಲ್ಲಿ, 8-10 ದಿನಗಳ ಮಧ್ಯಂತರದಲ್ಲಿ ನೀರನ್ನು  ನೀಡಬಹುದು ಮತ್ತು ಬೇಸಿಗೆಯಲ್ಲಿ, 4-5 ದಿನಗಳ ಮಧ್ಯಂತರದಲ್ಲಿ ನೀರಾವರಿ ಮಾಡಬಹುದು. ಮುಖ್ಯ ಭೂಮಿಯಲ್ಲಿ ನೀರು ನಿಲ್ಲುವುದನ್ನು  ತಪ್ಪಿಸಬೇಕು. ನೀರಿನ ಒತ್ತಡವನ್ನು ತಪ್ಪಿಸಲು ಹೂವು ಬಿಡುವ ಸಮಯದಿಂದ ಕೊಯ್ಲಿನ  ಹಂತದವರೆಗೆ ಮಣ್ಣಿನಲ್ಲಿ ತೇವಾಂಶದ ನಿರಂತರ ಪೂರೈಕೆಯನ್ನು ನಿರ್ವಹಿಸಬೇಕು.

ಅಂತರ ಬೆಳೆ  ಪದ್ಧತಿಗಳು 

ಮಣ್ಣನ್ನು ಗಿಡದ ಸುತ್ತ ಹಾಕುವುದು : (ಅರ್ಥಿ೦ಗ್ ಅಪ್)

ಗಿಡದ  ಸ್ಥಿರತೆಯನ್ನು ಕಾಪಾಡಲು, ಉತ್ತಮ ಒಳಚರಂಡಿಯನ್ನು ಉತ್ತೇಜಿಸಲು ಮತ್ತು ಕಳೆಗಳ ಬೆಳವಣಿಗೆಯನ್ನು ತಡೆಯಲು ಕಸಿ ಮಾಡಿದ 3-4 ವಾರಗಳ ನಂತರ  ಸಾಮಾನ್ಯವಾಗಿ (ಅರ್ಥಿ೦ಗ್ ಅಪ್) ಅಂದರೆ ಮಣ್ಣನ್ನು ಗಿಡದ ಸುತ್ತ ಎತ್ತಿ ಹಾಕಲಾಗುತ್ತದೆ. 

ಕಳೆ ನಿರ್ವಹಣೆ: 

ಸಸ್ಯಗಳ ಸಮೃದ್ಧ ಬೆಳವಣಿಗೆಗಾಗಿ ಮುಖ್ಯ ಹೊಲವನ್ನು ಕಳೆ ಮುಕ್ತವಾಗಿರುವಂತೆ ಕಾಪಾಡಿಕೊಳ್ಳಬೇಕು. ಅಗತ್ಯವಿದ್ದಾಗ ಕೈಯಿಂದ   ಕಳೆ ಕೀಳಬೇಕು. ಸಾಮಾನ್ಯವಾಗಿ, ಚೆಂಡುಹೂವಿನ ಬೆಳವಣಿಗೆಯ ಅವಧಿಯಲ್ಲಿ 4-6 ಕೈ ಕಳೆ ಮಾಡುವುದು ಅಗತ್ಯ.

ಚಿವುಟುವುದು : 

ಇದರಲ್ಲಿ ತುದಿಯ ಮೊಗ್ಗುಗಳನ್ನು ಕೈಯಿಂದ ಚಿವುಟಬೇಕು, ಹೀಗೆ ಮಾಡುವುದರಿಂದ ಬದಿಯ ಕವಲುಗಳು ಉತ್ತೇಜನಗೊಂಡು ಹೆಚ್ಚು ಹೂವುಗಳುಳ್ಳ, ಪೊದೆಗಳುಳ್ಳ ಸಸ್ಯ ಬೆಳೆವಣಿಗೆಗೆ ಕಾರಣವಾಗುತ್ತದೆ. ಇದರಿಂದ ಹೂಬಿಡುವಿಕೆಯು ವಿಳಂಬಗೊಳ್ಳುತ್ತದೆ, ಆದರೆ ಹೆಚ್ಚಿನ ಸಂಖ್ಯೆಯ ಹೂವುಗಳ ಉತ್ಪಾದನೆಗೆ ಕಾರಣವಾಗುತ್ತದೆ. ನಾಟಿ  ಮಾಡಿದ 40 ದಿನಗಳ ನಂತರ ಇದನ್ನು (ಚಿವುಟುವುದನ್ನು)  ಮಾಡುವುದು  ಉತ್ತಮ. ಮೊಗ್ಗುಗಳನ್ನು ಹೆಬ್ಬೆರಳು ಮತ್ತು ತೋರುಬೆರಳಿನಿಂದ ಹಿಸುಕು ಹಾಕುವ ಮೂಲಕ ಅಥವಾ ಚೂಪಾದ  ಚಾಕು / ಕತ್ತರಿ ಬಳಸಿ ತೆಗೆಯಬಹುದು.

ಸ್ಟೇಕಿಂಗ್ (ಊರುಗೋಲು ನೀಡುವುದು):

ಆಫ್ರಿಕನ್ ಮಾದರಿಯ ಚೆಂಡುಹೂವುಗಳು  ತೂಕ ಅಥವಾ ಬಲವಾದ ಗಾಳಿಯಿಂದಾಗಿ ಬಾಗುವಂತಹ  ಎತ್ತರ ಸಸಿಗಳ ಬೆಂಬಲಕ್ಕಾಗಿ ಬಿದಿರಿನ ಕೋಲುಗಳನ್ನು ಸಸಿಯ ಬುಡದಿಂದ ಜೋಡಿಸಲಾಗುತ್ತದೆ / ನೆಡಲಾಗುತ್ತದೆ.

 ಸಸ್ಯ ಸಂರಕ್ಷಣಾ ಕ್ರಮಗಳು : 

ಚೆಂಡುಹೂವಿನಲ್ಲಿ ಕಾಣಬಹುದಾದ  ಕೀಟಗಳು: 

ಪ್ರಮುಖ ಕೀಟಗಳು  ಕೀಟ ಹಾನಿ ಲಕ್ಷಣಗಳು  ನಿಯಂತ್ರಣ ಕ್ರಮಗಳು
ಬಿಳಿ ಹಿಟ್ಟು ತಿಗಣೆಗಳು 
 • ಎಳೆಯ ಚಿಗುರುಗಳು, ಕಾಂಡ ಮತ್ತು ಎಲೆಗಳ ಮೇಲೆ ಬಿಳಿ ಹತ್ತಿಯಂತ ರಾಶಿ ಕಾಣುತ್ತದೆ.
 • ಜೇನು ಹನಿಯಂತ  ಜಿಗುಟಾದ ವಸ್ತುವಿನ ಇರುವಿಕೆ, ಇದು ಕಪ್ಪು ಮಸಿ ಅಚ್ಚಿನ  ಬೆಳವಣಿಗೆಗೆ ಕಾರಣವಾಗುತ್ತದೆ.
 • ಸುಕ್ಕುಗಟ್ಟಿದ ಎಲೆಗಳು.
 • ಚಿಗುರುಗಳ ತುದಿಯ ಭಾಗಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ.  
 • ಸೋಂಕಿತ ಸಸ್ಯ ಭಾಗಗಳನ್ನು ಕತ್ತರಿಸಬೇಕು.
 • 25 ಗ್ರಾಂ/ಲೀಟರ್ ನೀರಿಗೆ ಫಿಶ್ ಆಯಿಲ್ ರೋಸಿನ್ ಸೋಪ್ ಅನ್ನು ಸಿಂಪಡಿಸಬೇಕು.
 • ಕೆ ಬೀ ಮಿಲಿ ರೇಜ್  ಜೈವಿಕ ಕೀಟನಾಶಕವನ್ನು 1 – 2 ಮಿಲಿ  /ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ರಾಸಾಯನಿಕ ನಿಯಂತ್ರಣ:

ಆಕ್ಟಾರಾ ಕೀಟನಾಶಕವನ್ನು 0.5 ಗ್ರಾಂ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಸಿವಾಂಟೊ ಬೇಯರ್ ಕೀಟನಾಶಕವನ್ನು 2 ಮಿಲಿ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಗಿಡಹೇನುಗಳು  
 • ಇವು  ರಸವನ್ನುಹೀರುವ ಕೀಟಗಳಾಗಿದ್ದು, ಇವುಗಳು ಸುರುಳಿಯಾಕಾರದ ಮತ್ತು ವಿರೂಪಗೊಂಡ ಎಲೆಗಳನ್ನು ಉಂಟುಮಾಡುತ್ತವೆ.
 • ಸೋಂಕಿತ  ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಒಣಗುತ್ತವೆ.
 • ಜೇನು ಹನಿಯಂತ ದ್ರಾವಣದಿಂದ ಕಪ್ಪು ಮಸಿ ಅಚ್ಚು ಬೆಳವಣಿಗೆಯನ್ನು ಕಾಣಬಹುದು.
 • ಎಲೆಗಳ ಕೆಳಭಾಗದಲ್ಲಿ ಅಥವಾ ಕಾಂಡಗಳ ಮೇಲೆ ಸಣ್ಣ, ಸಮೂಹದ ಕೀಟಗಳನ್ನು ಕಾಣಬಹುದು  (ಗಿಡಹೇನುಗಳು).
 • ಬೆಳೆ ಸರದಿಯನ್ನು ಅಭ್ಯಾಸ ಮಾಡುವುದು ಉತ್ತಮ.
 • ಕ್ಷೇತ್ರ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು.
 • ಜೋಳ, ಬೀನ್ಸ್ ಅಥವಾ ಬೆಳ್ಳುಳ್ಳಿಯೊಂದಿಗೆ ಅಂತರ ಬೆಳೆ ಪದ್ದತಿ.
 • ಪ್ರತಿ ಎಕರೆಗೆ 4 – 6 ಅಂಟು ಬಲೆ,  ತಪಸ್ ಹಳದಿ ಅಂಟು  ಬಲೆಗಳನ್ನು ಅಳವಡಿಸುವುದು.
 • ಬೇವಿನ ದ್ರಾವಣ  0.3% ಅನ್ನು 2.5 – 3 ಮಿಲಿ / ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
 • ಬೂದಿ ಮತ್ತು ಅರಿಶಿನ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ಗಿಡದ ಮೇಲೆ ಸಿಂಪಡಿಸಬಹುದು.

ರಾಸಾಯನಿಕ ನಿಯಂತ್ರಣ:

 • ಮಾರ್ಷಲ್ ಕೀಟನಾಶಕವನ್ನು 2.5 ಮಿಲಿ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. 
 • ಸ್ಟಾರ್ಥೇನ್ ಕೀಟನಾಶಕವನ್ನು 1.7 – 2.5 ಗ್ರಾಂ/ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಕೆಂಪು ಜಿಗಿ ಹುಳು 
 • ಈ ಹುಳುಗಳು  ಎಲೆಗಳಿಂದ ರಸವನ್ನು ಹೀರಿ, ಎಲೆಯ ಮೇಲ್ಮೈಯಲ್ಲಿ ಸಣ್ಣ, ಕೆಂಪು ಅಥವಾ ಕಂದು ಬಣ್ಣದ ಚುಕ್ಕೆಗಳನ್ನು ಉಂಟುಮಾಡುತ್ತವೆ. 
 • ಎಲೆಗಳು ಮತ್ತು ಹೂವುಗಳ ಮೇಲೆ ಬಲೆ ಆವರಿಸಿರುವಂತೆ ಕಾಣುತ್ತದೆ. 
 • ನಂತರದ ಹಂತಗಳಲ್ಲಿ ಸೋಂಕಿತ  ಎಲೆಗಳು ಸುಲಭವಾಗಿ ದುರ್ಬಲಗೊಳ್ಳುತ್ತವೆ ಹಾಗೂ ಕೆಂಪು ಮತ್ತು ಕಂದು (ಕಂಚಿನ) ಬಣ್ಣಕ್ಕೆ ತಿರುಗುತ್ತವೆ.
 • ಎಲೆಗಳ ಅಕಾಲಿಕ ಉದುರುವಿಕೆ/ ಹಾನಿ  ಮತ್ತು ಕುಂಠಿತ ಬೆಳವಣಿಗೆ.
 • ಸಸ್ಯದಿಂದ ಜಿಗಿ ಹುಳಗಳನ್ನು ಹೊಡೆದು ಹಾಕಲು ಹೆಚ್ಚಿನ ಒತ್ತಡದ ನೀರಿನ ಸಿಂಪಡಣೆಯನ್ನು ಮಾಡಬೇಕು.
 • ಬೇವಿನ ಎಣ್ಣೆಯ ಸಾರಗಳನ್ನು 1 – 2 ಮಿಲಿ / ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ.
 • ರಾಯಲ್ ಕ್ಲಿಯರ್ ಮೈಟ್ಸ್  ಯನ್ನು 2 ಮಿಲಿ/ಲೀಟರ್ ನೀರಿನಲ್ಲಿ ಬೆರೆಸಿ  ಸಿಂಪಡಿಸಬೇಕು. 
 • ನೀರಿನಲ್ಲಿ ಬೆರೆಸಿದ ಗೋಮೂತ್ರವನ್ನು ಸಿಂಪಡಿಸಬೇಕು(1:20). 

ರಾಸಾಯನಿಕ ನಿಯಂತ್ರಣ:

 • ಒಬೆರಾನ್ ಕೀಟನಾಶಕವನ್ನು 0.3 ಮಿಲಿ/ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ ಅಥವಾ
 • ಮೇಡನ್ ಕೀಟನಾಶಕವನ್ನು 1 ಮಿಲಿ/ಲೀಟರ್ ನೀರಿನಲ್ಲಿ  ಬೆರೆಸಿ ಸಿಂಪಡಿಸಬೇಕು.
ಜೀರುಂಡೆಗಳು ಮತ್ತು ವೀವಿಲ್ ಗಳು 
 • ಅವು  ಎಳೆಯ ಎಲೆಗಳು ಮತ್ತು ನವಿರಾದ ಚಿಗುರುಗಳನ್ನು ತಿನ್ನುತ್ತವೆ.
 • ಅವು  ಎಲೆಗಳಲ್ಲಿ ರಂಧ್ರಗಳನ್ನು ಉಂಟುಮಾಡುತ್ತವೆ. 
 • ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ.
 • ಬೇವಿನ ಎಣ್ಣೆಯ ಸಾರಗಳನ್ನು 1 – 1.5 ಮಿಲಿ / ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
 • 10 ಮಿಲಿ/ಲೀಟರ್ ನೀರಿಗೆ ಮೆಟಾರೈಜಿಯಮ್ ಅನಿಸೋಪ್ಲಿಯಾವನ್ನು ಬೆರೆಸಿ ಸಿಂಪಡಿಸಬೇಕು.

ರಾಸಾಯನಿಕ ನಿಯಂತ್ರಣ:

 • ಕರಾಟೆ ಕೀಟನಾಶಕವನ್ನು 1.5 – 1.7 ಮಿಲಿ / ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ.
 • ಡ್ಯಾನಿಟಾಲ್ ಕೀಟನಾಶಕವನ್ನು 1.5 – 2 ಮಿಲಿ / ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ.
ಜಿಗಿ ಹುಳುಗಳು 
 • ವಿಶೇಷವಾಗಿ ಮಳೆಗಾಲದಲ್ಲಿ ಇವು  ಸಸ್ಯದ  ಎಲೆಗಳಿಗೆ ಹಾನಿಯನ್ನುಂಟುಮಾಡುತ್ತವೆ.
 • ಬಾಧಿತ ಎಲೆಗಳು ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗುತ್ತವೆ.
 • ಸೋಂಕಿತ  ಚಿಗುರುಗಳ ಒಣಗುವಿಕೆಯ  ಜೊತೆಗೆ ಎಲೆಗಳ ಸುರುಳಿಯನ್ನುಸಹ  ಉಂಟುಮಾಡುತ್ತದೆ.
 • ಫ್ರೆಂಚ್ ಚೆಂಡುಹೂವಿನ ವಿಧವು ಇದರ ಸೋಂಕಿಗೆ  ಹೆಚ್ಚು ಒಳಗಾಗುತ್ತದೆ.
 • ಪ್ರತಿ ಎಕರೆಗೆ ಬ್ಯಾರಿಕ್ಸ್ ಮ್ಯಾಜಿಕ್ ಸ್ಟಿಕ್ಕರ್ ಕ್ರೋಮ್ಯಾಟಿಕ್ ಹಳದಿ ಹಾಳೆಯ ಟ್ರ್ಯಾಪ್ – ಇದನ್ನು 10 ಹಾಳೆಗಳಂತೆ  ಬಳಸಿ.
 • ನಿಂಬೆಸಿಡಿನ್ ಅನ್ನು 6 ಮಿಲಿ / ಲೀಟರ್ ನೀರಿಗೆ ಬೆರೆಸಿ  ಸಿಂಪಡಿಸಿ.

ರಾಸಾಯನಿಕ ನಿಯಂತ್ರಣ:

 • ಟಾಮಿಡಾ ಎಸ್ಎಲ್ ಕೀಟನಾಶಕವನ್ನು 1 – 2 ಮಿಲಿ / ಲೀಟರ್ ನೀರಿಗೆ  ಬೆರೆಸಿ ಸಿಂಪಡಿಸಬೇಕು.
 • ಪೊಲೀಸ್ ಕೀಟನಾಶಕವನ್ನು 0.2 – 0.3 ಗ್ರಾಂ/ಲೀಟರ್ ನೀರಿಗೆ ಬೆರೆಸಿ  ಸಿಂಪಡಿಸಬೇಕು.
 • ಕೀಫನ್ ಕೀಟನಾಶಕವನ್ನು 2 ಮಿಲಿ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಥ್ರಿಪ್ಸ್ 
 • ಪೀಡಿತ ಎಲೆಗಳು ವಿರೂಪಗೊಳ್ಳುತ್ತವೆ.
 • ಎಲೆಗಳ ಮೇಲೆ ಬಿಳಿ  ಚುಕ್ಕೆಗಳು ಕಾಣುತ್ತವೆ.
 • ಹೂವಿನ ದಳಗಳ ಮೇಲೆ ಕಪ್ಪು   ಕಲೆಗಳನ್ನು ಕಾಣಬಹುದು ಹಾಗೂ ಬಣ್ಣ ಮತ್ತು ಸೌಂದರ್ಯವನ್ನು ಕಡಿಮೆಮಾಡುತ್ತವೆ. 
 • ಅವು  ಬೆಳೆಯುತ್ತಿರುವ ಮೊಗ್ಗುಗಳನ್ನು ತಿನ್ನುತ್ತವೆ  ಮತ್ತು ಹೂವುಗಳನ್ನು ವಿರೂಪಗೊಳಿಸುತ್ತವೆ. 
 • 1 ಎಕರೆ ಹೊಲಕ್ಕೆ 6 – 8 ಹಳದಿ ಜಿಗುಟಾದ ಅಂಟು ಬಲೆಗಳನ್ನು ಅಳವಡಿಸಬೇಕು.
 • ಕೇ ಬೀ ಥ್ರಿಪ್ಸ್ ರೇಜ್ ಕೀಟನಾಶಕವನ್ನು 1 – 2 ಮಿಲಿ/ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
 • ಬೇವು ದ್ರಾವಣ 0.15% ಅನ್ನು 2 – 2.5 ಮಿಲಿ / ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
 • ಅಲೋವೆರಾದೊಂದಿಗೆ ಬೇವಿನ ಹಿಂಡಿಯನ್ನು ಮಿಶ್ರಣ ಮಾಡಿ ರುಬ್ಬಿಕೊಂಡು  ಇದನ್ನು  10 ದಿನಗಳವರೆಗೆ ನೀರಿನಲ್ಲಿ ನೆನೆಸಿಡಬೇಕು. ನಂತರ, ಈ ಮಿಶ್ರಣವನ್ನು ಸೋಸಿಕೊಂಡು ಬಳಸಬೇಕು. 

ರಾಸಾಯನಿಕ ನಿಯಂತ್ರಣ:

 • ಬೆನೆವಿಯಾ ಕೀಟನಾಶಕವನ್ನು 1.7 – 2 ಮಿಲಿ / ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
 • ಅನಂತ್ ಕೀಟನಾಶಕವನ್ನು 0.3 – 0.5 ಗ್ರಾಂ/ಲೀಟರ್ ನೀರಿಗೆ  ಬೆರೆಸಿ ಸಿಂಪಡಿಸಬೇಕು.
ರಂಗೋಲಿ ಹುಳುಗಳು 
 • ಎಲೆಗಳ ಮೇಲೆ ಬಿಳಿ ಅಥವಾ ಬಿಳಿ  ಜಾಡುಗಳು ಕಂಡುಬರುತ್ತವೆ.
 • ಎಲೆಯ ಮೇಲೆ ಸಣ್ಣ ಕಂದು ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುವುದು.
 • ಬಾಧಿತ ಎಲೆಗಳು ಸುಕ್ಕುಗಟ್ಟುತ್ತವೆ ಅಥವಾ ವಿರೂಪಗೊಳ್ಳುತ್ತವೆ.
 • ಅಕಾಲಿಕ ಎಲೆಗಳ ಉದುರುವಿಕೆ.
 • ಪ್ರತಿ ಎಕರೆಗೆ 4 – 6 ತಪಸ್ ಹಳದಿ ಜಿಗುಟಾದ ಅಂಟು ಬಲೆಗಳನ್ನು ಅಳವಡಿಸುವುದು.
 • ಟೆರ್ರಾ ಜೈವಿಕ ಕೀಟನಾಶಕವನ್ನು 3 – 7 ಮಿಲಿ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು.
 • ಪ್ರತಿ ಲೀಟರ್ ನೀರಿಗೆ 5 ಮಿಲಿ ಬ್ಯೂವೇರಿಯಾ ಬಾಸ್ಸಿಯಾನಾ/ಬ್ರಾಂಗ್ನಿಯಾರ್ಟಿಯನ್ನು ಸಿಂಪಡಿಸಬೇಕು.

ರಾಸಾಯನಿಕ ನಿಯಂತ್ರಣ:

 • ಏಕಲಕ್ಸ್ ಕೀಟನಾಶಕವನ್ನು 2 ಮಿಲಿ/ಲೀಟರ್ ನೀರಿಗೆ ಬೆರೆಸಿ  ಸಿಂಪಡಿಸಿ.
 • ಸಿವಾಂಟೊ ಬೇಯರ್ ಕೀಟನಾಶಕವನ್ನು 2 ಮಿಲಿ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ.

ಚೆಂಡುಹೂವಿನ ಬೆಳೆಯನ್ನು ಬಾಧಿಸುವ ರೋಗಗಳು: 

ಪ್ರಮುಖ ರೋಗಗಳು  ರೋಗದ ಲಕ್ಷಣಗಳು  ನಿರ್ವಹಣಾ ಕ್ರಮಗಳು 
ಸಸಿ ಸಾಯುವ ರೋಗ 
 • ಮೊಳಕೆ ಹಂತದಲ್ಲಿ ಹೆಚ್ಚು ವ್ಯಾಪಕವಾಗಿರುತ್ತದೆ .
 • ಎಳೆಯ ಸಸಿಗಳ ಮೇಲೆ ಹಳದಿ ಉಂಗುರಗಳಂತ ಮಚ್ಚೆಗಳು ಅಥವಾ ಕಲೆಗಳು ಕಾಣಿಸಿಕೊಳ್ಳುತ್ತವೆ.
 • ತೀವ್ರತೆ ಹೆಚ್ಚಾದಲ್ಲಿ, ಮೊಳಕೆಗಳು ಮಣ್ಣಿನಿಂದ ಸೋಂಕಿಗೆ ಒಳಗಾಗಿ ಅವುಗಳು  ಹೊರಬರುವ ಮೊದಲೇ  ಬಾಗಿರುವಂತೆ ಕಾಣುತ್ತವೆ ಅಥವಾ ಮೊಳಕೆಗಳು ಸಾಯಬಹುದು.
 • 1 ಕೆಜಿ ಬೀಜಗಳನ್ನು 10 ಗ್ರಾಂ ಸ್ಯೂಡೋಮೊನಾಸ್ ಫ್ಲೋರೊಸೆನ್ಸ್ ನೊಂದಿಗೆ 10 ಮಿಲಿ ನೀರಿನಲ್ಲಿ ಬೆರೆಸಿ ಬೀಜೋಪಚಾರ ಮಾಡಬೇಕು. 
 • ನರ್ಸರಿ ಸಸಿ ಮಡಿಗಳನ್ನು ಎಕೋಡರ್ಮಾ ಬಯೋ ಶಿಲೀಂಧ್ರನಾಶಕವನ್ನು 10 ಗ್ರಾಂ/ಲೀಟರ್ ನೀರಿನಲ್ಲಿ ನೆನೆಸಿಡಬೇಕು.

ರಾಸಾಯನಿಕ ನಿಯಂತ್ರಣ:

 • ಮ್ಯಾಟ್ಕೊ ಶಿಲೀಂಧ್ರನಾಶಕವನ್ನು 4 ಗ್ರಾಂ/ಲೀಟರ್ ನೀರಿಗೆ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು. 
 • ಹೈಫೀಲ್ಡ್ ರಿಡೋಮೆಟ್ 35 ಶಿಲೀಂಧ್ರನಾಶಕವನ್ನು 1.5 ಗ್ರಾಂ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. 
ಬೂದು ರೋಗ 
 • ಎಲೆ, ಕಾಂಡ ಮತ್ತು ಹೂವುಗಳ ಮೇಲೆ ಬಿಳಿ ಪುಡಿಯಂತಹ ಬೆಳವಣಿಗೆಯು ಕಂಡುಬರುತ್ತದೆ. 
 • ಸೋಂಕಿತ ಎಲೆಗಳು ಹಳದಿ ಬಣ್ಣಕ್ಕೆ ತಿರುಗಬಹುದು ಮತ್ತು ಪೂರ್ಣ ಬೆಳೆವಣಿಗೆಯ ಮುಂಚೆಯೇ ಉದುರಬಹುದು.
 • ಸೋಂಕಿತ ಸಸ್ಯಗಳಲ್ಲಿ  ಹೂಬಿಡುವಿಕೆ ಕುಂಠಿತಗೊಳ್ಳುತ್ತದೆ.
 • ಕೇ ಬೀ ಫಂಗೊ ರೇಜ್ ಅನ್ನು 1 – 2 ಮಿಲಿ / ಲೀಟರ್ ನೀರಿನಲ್ಲಿ ಬೆರೆಸಿ  ಸಿಂಪಡಿಸಬೇಕು.
 • 2 ಕೆಜಿ ಅರಿಶಿನ ಪುಡಿ ಮತ್ತು 8 ಕೆಜಿ ಮರದಪುಡಿ ಮತ್ತು ಬೂದಿಯನ್ನು  ಮಿಶ್ರಣಮಾಡಿ  ಎಲೆಗಳ ಮೇಲೆ ಒಣ ಪುಡಿಯನ್ನು ಉದುರಿಸುವುದು.

ರಾಸಾಯನಿಕ ನಿಯಂತ್ರಣ:

  • ಅಮಿಸ್ಟಾರ್ ಟಾಪ್ ಶಿಲೀಂಧ್ರನಾಶಕವನ್ನು 1 ಮಿಲಿ / ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
  • ರೋಕೋ ಶಿಲೀಂಧ್ರನಾಶಕವನ್ನು 0.5 – 1 ಗ್ರಾಂ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
 • ಸುಲ್ತಾಫ್ ಶಿಲೀಂಧ್ರನಾಶಕವನ್ನು 2 ಗ್ರಾಂ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. 
ಸೊರಗು ಮತ್ತು ಕಾಂಡ ಕೊಳೆ  ರೋಗ 
 • ಸೋಂಕಿತ  ಸಸ್ಯಗಳ ಎಲೆಗಳು ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿದ್ದರೂ, ಬಾಗಿದಂತೆ ಮತ್ತು ಕಳೆಗುಂದಿದಂತೆ ಕಾಣಬಹುದು. 
 • ಬಾಧಿತ ಕಾಂಡಗಳು ಮೃದುವಾಗಿ, ತೆಳ್ಳಗಾಗುತ್ತವೆ ಹಾಗೂ  ಕಂದು ಬಣ್ಣಕ್ಕೆ ತಿರುಗಿ ನಂತರದಲ್ಲಿ ಕಾಂಡಗಳು ಕೊಳೆಯಬಹುದು.
 • ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ.
 • 10 ಮಿಲಿ/ಲೀಟರ್ ನೀರಿನಲ್ಲಿ ಸ್ಯೂಡೋಮೊನಾಸ್ ಫ್ಲೋರೊಸೆನ್ಸ್ ಅನ್ನು ಮಣ್ಣಿನಲ್ಲಿ ಹಾಕುವುದು.
 • 100 ಕೆಜಿ ಕೊಟ್ಟಿಗೆ ಗೊಬ್ಬರಕ್ಕೆ  2 ಕೆಜಿ ಅನ್ಶುಲ್ ಟ್ರೈಕೋಮ್ಯಾಕ್ಸ್ ಅನ್ನು ಬೆರೆಸಿ ಅದನ್ನು  1 ಎಕರೆ ಭೂಮಿಗೆ ಮೇಲು ಗೊಬ್ಬರವಾಗಿ ಹಾಕಬೇಕು.

ರಾಸಾಯನಿಕ ನಿಯಂತ್ರಣ:

 • ರಿಡೋಮಿಲ್ ಗೋಲ್ಡ್ ಅನ್ನು ಮಣ್ಣಿನ ಸಂಸ್ಕರಣೆಗೆ 1 – 1.5 ಗ್ರಾಂ / ಲೀಟರ್ ನೀರಿಗೆ ಬೆರೆಸಿ ಬಳಸಬಹುದು.
ಬುಡ ಕೊಳೆ ರೋಗ 
 • ಕಾಂಡದ ಕೆಳ ಭಾಗದಲ್ಲಿ ಗಾಢ ಕಂದು ಅಥವಾ ಕಪ್ಪು ಗಾಯಗಳಂತೆ ಮಚ್ಚೆಗಳು  ಕಾಣಿಸಿಕೊಳ್ಳುತ್ತವೆ.
 • ಕಾಂಡ ಕೊಳೆತದಿಂದಾಗಿ  ಸಸ್ಯದ ಬುಡ  ಪ್ರದೇಶವು ಮೆತ್ತಗೆ  ಮತ್ತು ಮೃದುವಾಗುತ್ತದೆ.
 • ನಂತರ, ಸಸ್ಯದ ಸಾವಿಗೆ ಕಾರಣವಾಗುತ್ತದೆ.
 • ಸಸ್ಯಗಳಿಗೆ ಹೆಚ್ಚು ನೀರು ಕೊಡುವುದನ್ನು ತಪ್ಪಿಸಬೇಕು. 
 • ಸರದಿ ಬೆಳೆ ಪದ್ಧತಿಯನ್ನು ಅಭ್ಯಾಸ ಮಾಡಬೇಕು.
 • ನರ್ಸರಿ ಸಸಿ ಮಡಿಗಳನ್ನು ಎಕೋಡರ್ಮಾ ಬಯೋ ಶಿಲೀಂಧ್ರನಾಶಕವನ್ನು 10 ಗ್ರಾಂ/ಲೀಟರ್ ನೀರಿನಲ್ಲಿ ನೆನೆಸಬೇಕು.
 • ಟ್ರೈಕೋಡರ್ಮಾ ವಿರಿಡೆ ನೊಂದಿಗೆ 6 ಮಿಲಿ/ಕೆಜಿ ಬೀಜಕ್ಕೆ ಬೆರೆಸಿ ಬೀಜ ಸಂಸ್ಕರಣೆಯನ್ನು ಮಾಡಬೇಕು. 

ರಾಸಾಯನಿಕ ನಿಯಂತ್ರಣ:

 • ಬೀಜೋಪಚಾರವನ್ನು  ಸಿಕ್ಸರ್ ಶಿಲೀಂಧ್ರನಾಶಕವನ್ನು 2.5 ಗ್ರಾಂ/ಕೆಜಿ ಬೀಜದಲ್ಲಿ ಬೆರೆಸಿ ಮಾಡಬೇಕು.
 • ಧನುಸ್ಟಿನ್ ಶಿಲೀಂಧ್ರನಾಶಕವನ್ನು 0.5 – 0.7 ಗ್ರಾಂ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು .
 • 3 ಗ್ರಾಂ/ಲೀಟರ್ ನೀರಿಗೆ ಬ್ಲಿಟಾಕ್ಸ್ ಶಿಲೀಂಧ್ರನಾಶಕವನ್ನು  ಗಿಡದ ಸುತ್ತಲೂ ಹಾಕಬೇಕು. 
ಬೆಂಕಿ ರೋಗ ಮತ್ತು ಎಲೆ ಚುಕ್ಕೆ ರೋಗ 
 • ಪೀಡಿತ ಎಲೆಗಳ ಮೇಲೆ ಸಣ್ಣ, ಕಂದು ಕಲೆಗಳು ಕಾಣುತ್ತವೆ.
 • ನಂತರದ ಹಂತಗಳಲ್ಲಿ, ಈ ಕಲೆಗಳು ಒಂದಕ್ಕೆ ಒಂದು ಸೇರಿ ದೊಡ್ಡವಾಗುತ್ತವೆ  ಮತ್ತು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಹಾಗೂ ಎಲೆಗಳು ಉದುರುತ್ತವೆ.
 • ಸಸ್ಯದ ಬೆಳೆವಣಿಗೆ ಕುಂಠಿತವಾಗುತ್ತದೆ. 
ಸ್ಯೂಡೋಮೊನಾಸ್ ಫ್ಲೋರೊಸೆನ್ಸ್ ಮತ್ತು ಬ್ಯಾಸಿಲಸ್ ಸಬ್ಟಿಲಿಸ್ ಅನ್ನು 5 ಗ್ರಾಂ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ರಾಸಾಯನಿಕ ನಿಯಂತ್ರಣ:

ಕಾಂಟಾಫ್ ಜೊತೆಗೆ ಶಿಲೀಂಧ್ರನಾಶಕವನ್ನು 2 ಮಿಲಿ/ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಇಂಡೋಫಿಲ್ M45 ಶಿಲೀಂಧ್ರನಾಶಕವನ್ನು 0.8 – 1 ಗ್ರಾಂ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. 

ಮೊಗ್ಗು ಕೊಳೆ  ರೋಗ 
 • ಎಳೆ  ಹೂವಿನ ಮೊಗ್ಗುಗಳಲ್ಲಿ ಈ ರೋಗದ ಸೋಂಕು ಹೆಚ್ಚಾಗಿ ಕಂಡುಬರುತ್ತದೆ.
 • ಸೋಂಕಿತ ಹೂವಿನ ಮೊಗ್ಗುಗಳು ಬಾಡಬಹುದು  ಮತ್ತು ಕಡು ಕಂದು ಬಣ್ಣಕ್ಕೆ ತಿರುಗಬಹುದು ನಂತರದಲ್ಲಿ ಮೊಗ್ಗುಗಳು  ಒಣಗಬಹುದು.
 • ರೋಗಕಾರಕವು ಎಲೆಗಳನ್ನು ಸೋಂಕಿಗೆ ಒಳಪಡಿಸುವ ಮೂಲಕ ಉಂಟುಮಾಡಬಹುದು, ಇದರ ಪರಿಣಾಮವಾಗಿ ಹಳೆಯ ಎಲೆಗಳ ಅಂಚಿನಲ್ಲಿ ಕಂದು ಬಣ್ಣದ ನೀರು ಸೋಂಕಿತ  ಕಲೆಗಳು ಕಂಡುಬರುತ್ತವೆ.
ರಾಸಾಯನಿಕ ನಿಯಂತ್ರಣ:

ಡೈಥೇನ್ ಎಂ 45 ಶಿಲೀಂಧ್ರನಾಶಕವನ್ನು 2 – 2.5 ಗ್ರಾಂ/ಲೀಟರ್ ನೀರಿಗೆ ಬೆರೆಸಿ  ಸಿಂಪಡಿಸಬೇಕು.

ಬ್ಲೂ ಕಾಪರ್  ಶಿಲೀಂಧ್ರನಾಶಕವನ್ನು 2.5 ಗ್ರಾಂ/ಲೀಟರ್ ನೀರಿಗೆ ಬೆರೆಸಿ  ಸಿಂಪಡಿಸಬೇಕು. 

ಬೊಟ್ರೈಟಿಸ್ ರೋಗ/ ಬೂದು ಅಚ್ಚು ರೋಗ 
 • ಚೆಂಡು ಹೂವುಗಳು ನೀರು ಸೋಂಕಿತ ಮಚ್ಚೆಗಳು ಕಾಣಿಸಬಹುದು ಮತ್ತು ರೋಗದ ತೀವ್ರತೆ ಹೆಚ್ಚಾದಂತೆ  ಕಂದು ಅಥವಾ ಬೂದು ಬಣ್ಣಕ್ಕೆ ತಿರುಗಬಹುದು.
 • ಬೂದು ಅಸ್ಪಷ್ಟ ಅಚ್ಚು ಬೆಳವಣಿಗೆಯು ಹೂವುಗಳು ಮತ್ತು ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತದೆ.
 • ಕಾಂಡಗಳು ಕೊಳೆಯಬಹುದು, ಇದು ಸಸ್ಯಗಳ ಕುಂಠಿತ ಬೆಳೆವಣಿಗೆ ಕಾರಣವಾಗುತ್ತದೆ.
 • ಕ್ಷೇತ್ರವನ್ನು / ಮುಖ್ಯ ಭೂಮಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.  
 • ಆಂಪೆಲೋಮೈಸಸ್ ಕ್ವಿಸ್ಕ್ವಾಲಿಸ್ ಅನ್ನು 5 – 10 ಮಿಲಿ / ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ರಾಸಾಯನಿಕ ನಿಯಂತ್ರಣ:

 • ಆನಂದ್ ಆಗ್ರೋ ನ್ಯಾನೋ ಶೀಲ್ಡ್ ಅನ್ನು 2 ಮಿಲಿ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
 • ಲತೀಫಾ ಶಿಲೀಂಧ್ರನಾಶಕವನ್ನು 0.5 ಮಿಲಿ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಚೆಂಡುಹೂವನ್ನು ಕೊಯ್ಯುವುದು: 

ಚೆಂಡು ಹೂವುಗಳು ಸಾಮಾನ್ಯವಾಗಿ ನಾಟಿ ಮಾಡಿದ ದಿನದಿಂದ ಸುಮಾರು 2.5 ತಿಂಗಳ ನಂತರ  ಸಂಪೂರ್ಣ ಗಾತ್ರ ತಲುಪಿದಾಗ ಚೆಂಡುಹೂವನ್ನು ಕೊಯ್ಯಬಹುದು. ಮೊದಲ ಕೊಯ್ಲಿನ  ನಂತರ, ಸಸ್ಯವು ಇನ್ನೊಂದು 2 – 2.5 ತಿಂಗಳುಗಳವರೆಗೆ ಹೂವುಗಳನ್ನು ಬಿಡುತ್ತವೆ. ಇಳುವರಿಯನ್ನು ಹೆಚ್ಚಿಸಲು  ಹೂವುಗಳನ್ನು 3 ದಿನಗಳಿಗೊಮ್ಮೆ ಕೀಳಬೇಕು. ಕೊಯ್ಲನ್ನು ದಿನದ ತಂಪಾದ ಸಮಯದಲ್ಲಿ  ಮಾಡಬೇಕು, ಅಂದರೆ, ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಮಾಡಬೇಕು. ಕಾಂಡದ ಭಾಗದೊಂದಿಗೆ ಹೂವುಗಳನ್ನು ತೆಗೆಯಬೇಕು. ಕೊಯ್ಲಿನ ನಂತರ ಚೆಂಡುಹೂವುಗಳ ಶೇಖರಣಾ ಸಮಯವನ್ನು  ಹೆಚ್ಚಿಸಲು, ಹೂವುಗಳನ್ನು ಕೊಯ್ಲು ಮಾಡುವ ಮೊದಲು ಹೊಲಕ್ಕೆ ನೀರುಣಿಸಬೇಕು. ಆದರೆ ಅತಿಯಾದ ನೀರಾವರಿ ನೀಡುವುದನ್ನು  ತಡೆಯಬೇಕು, ಏಕೆಂದರೆ ಹೂವುಗಳು ಭಾರವಾಗಿ   ಮತ್ತು ಮೃದುವಾಗುವಂತೆ ಮಾಡುತ್ತದೆ, ಇದರಿಂದಾಗಿ ಹೂವುಗಳು  ಹಾನಿಗೊಳಗಾಗುತ್ತವೆ.

ಸ್ಥಳೀಯ ಮಾರುಕಟ್ಟೆ ಸಾರಿಗೆ, ತಾಜಾ ಚೆಂಡುಹೂವುಗಳನ್ನು  ಬಿದಿರಿನ ಬುಟ್ಟಿಗಳು ಅಥವಾ ಗೋಣಿ ಚೀಲಗಳಲ್ಲಿ ಪ್ಯಾಕ್ ಮಾಡಬೇಕು.

ಇಳುವರಿ : 

ಹೂವುಗಳ ಇಳುವರಿಯು ಋತು, ಮಣ್ಣಿನ ಫಲವತ್ತತೆ ಮತ್ತು ವೈವಿಧ್ಯತೆಯನ್ನು ಅವಲಂಬಿಸಿರುತ್ತದೆ.

 • ಆಫ್ರಿಕನ್ ಚೆಂಡುಹೂವು : 3 – 4 ಟನ್ /ಎಕರೆ. 
 • ಫ್ರೆಂಚ್ ಚೆಂಡುಹೂವು : 4.5 – 7 ಟನ್ /ಎಕರೆ.
spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು