ವಜ್ರ ಬೆನ್ನಿನ ಪತಂಗವನ್ನು ಕೆಲವೊಮ್ಮೆ ಎಲೆಕೋಸು ಪತಂಗ ಎಂದು ಕರೆಯಲಾಗುತ್ತದೆ, ಇದು ಚಿಟ್ಟೆಯಾಗಿದ್ದು, ಚಿಕ್ಕದಾದ, ಬೂದು-ಕಂದು ಬಣ್ಣದ ಪತಂಗವು ಹಾಗೂ ಕೆಲವೊಮ್ಮೆ ತಿಳಿ ಬಿಳೀ ಬಣ್ಣದ ಗೆರೆಗಳನ್ನು ಹಾಗೂ ವಜ್ರದ ಗುರುತನ್ನು ಬೆನ್ನಿನ ಮೇಲೆ ಹೊಂದಿರುತ್ತದೆ, ಆದ್ದರಿಂದ ಇದಕ್ಕೆ ವಜ್ರ ಬೆನ್ನಿನ ಪತಂಗ ಎಂದು ಕರೆಯಲಾಗುತ್ತದೆ. ಈ ಕೀಟವು ಹೆಚ್ಚಾಗಿ ಕೋಸು ಬೆಳೆಗಳನ್ನು ದಾಳಿ ಮಾಡುತ್ತವೆ ಹಾಗೂ ಇಳುವರಿಯನ್ನು ಕಡಿಮೆ ಮಾಡುತ್ತವೆ.
ಕೋಸು ಬೆಳೆಗಳಲ್ಲಿ ವಜ್ರ ಬೆನ್ನಿನ ಹುಳುವಿನ ಲಕ್ಷಣಗಳು
- ವಜ್ರ ಬೆನ್ನಿನ ಹುಳುಗಳು [DBM] ಎಲೆಗಳನ್ನು ತಿನ್ನುವ ಮಾದರಿಯನ್ನು ವಿಂಡೋಯಿಂಗ್ ಎಂದೂ ಕರೆಯಲಾಗುತ್ತದೆ, ಏಕೆಂದರೆ DBM ಹುಳುಗಳು ಎಲೆಗಳನ್ನು ತಿಂದು, ಮೇಲಿನ ಪದರವನ್ನು ಅರೆಪಾರದರ್ಶಕವಾಗಿ ಮಾಡಿಬಿಡುತ್ತದೆ.
- DBM ಆಕ್ರಮಿತ ಸಸಿ ಭಾಗಗಳ ಮೇಲೆ ಹುಳು-ತಿಂದು ಬಿಟ್ಟ ರಂಧ್ರಗಳು ಮತ್ತು ಅರೆಪಾರದರ್ಶಕ ಮಚ್ಚೆಗಳನ್ನು ಕಾಣಬಹುದು
- ಹೊಸದಾಗಿ ಮೊಟ್ಟೆಯೊಡೆದ ಮರಿಹುಳುಗಳು ಎಲೆಗಳನ್ನು ತಿಂದು, ಎಲೆಯ ಪದರದೊಳಗೆ ಒಳಗೆ ಇರುತ್ತವೆ ಮತ್ತು ವಯಸ್ಕ ಹುಳುಗಳು ಸಸಿಯ ಎಲ್ಲಾ ಭಾಗಗಳನ್ನು ತಿನ್ನುತ್ತವೆ.
- ಹುಳುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾಗ, ನಿರಂತರವಾಗಿ ಎಲೆಗಳನ್ನು ತಿಂದು ಎಲೆಯ ನಾಳಗಳನ್ನು ಮಾತ್ರ ಬಿಡುತ್ತವೆ
- ನಿಯಂತ್ರಿಸಲಾಗದ ಸಂದರ್ಭಗಳಲ್ಲಿ DBM ಹುಳುಗಳು ಎಲೆಕೋಸು ಅಥವಾ ಹೂಕೋಸು ಒಳಗೆ ಸಹ ದಾಳಿ ಮಾಡುತ್ತವೆ ಮತ್ತು ಹೂವನ್ನು ಸೇವಿಸಲು, ಮಾರಾಟ ಮಾಡಲು ಅನರ್ಹಗೊಳಿಸುತ್ತದೆ.
ಕೋಸು ಬೆಳೆಗಳಲ್ಲಿ ವಜ್ರ ಬೆನ್ನಿನ ಹುಳುವಿನ ನಿಯಂತ್ರಣ ಕ್ರಮಗಳು
- DBM ನ ಮೊಟ್ಟೆಗಳ ಅಥವಾ ಹುಳುಗಳ ಆಕ್ರಮಣವಿಲ್ಲದ ವಾತಾವರಣದಲ್ಲಿ ಸಸಿಗಳನ್ನು ಬೆಳೆಸಬೇಕು
- ಕಳೆ ಮುಕ್ತ ಭೂಮಿಯಲ್ಲಿ ಬಿತ್ತನೆ ಮಾಡಿ ಮತ್ತು ಕಳೆ ಮುಕ್ತ ಬೆಳೆಯನ್ನು ಕಾಪಾಡಿಕೊಳ್ಳಿ
- ಬೆಳೆ ಸರದಿ ಅನುಸರಿಸಿದ್ದಲ್ಲಿ ಸಹ DBM ನ ಆಕ್ರಮಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- DBM ಅನ್ನು ತಡೆಯಲು ಅಂತರ ಬೆಳೆ ಮತ್ತು ಬಲೆ ಬೆಳೆಯನ್ನು ಅನುಸರಿಸಬಹುದು.ಕೋಸು ಬೆಳೆಗಳ ಜೊತೆ ಮೆಣಸಿನಕಾಯಿ ಸಸಿಗಳನ್ನು ಬೆಳೆದಿದ್ದಲ್ಲಿ DBM ಅನ್ನು ತಡೆಯಬಹುದು. ಟ್ರ್ಯಾಪ್ ಬೆಳೆಗಳಾದ ಸಾಸಿವೆ ಮತ್ತು ರೇಪ್ ಸೀಡ್ ಬೆಳೆಗಳು ಸಹ DBM ನ ದಾಳಿಯನ್ನು ತಡೆಯುತ್ತವೆ.
ವಜ್ರ ಬೆನ್ನಿನ ಹುಳುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ರಾಸಾಯನಿಕಗಳು
ಕೀಫನ್ ಕೀಟನಾಶಕ –
- ಟೋಲ್ಫೆನ್ಪಿರಾಡ್ 15% ಇಸಿ ಅನ್ನು ಹೊಂದಿರುತ್ತದೆ
- ಎಲ್ಲಾ ತರಹದ ರಸ ಹೀರುವ ಕೀಟಗಳು ಮತ್ತು ಜಗಿಯುವ ಕೀಟಗಳ ವಿರುದ್ಧ ಹೆಚ್ಚು ಪರಿಣಾಮಕಾರಿ.
- ಇತರೆ ಕೀಟನಾಶಕಗಳಿಗೆ ನಿರೋಧಕತೆ ತೋರುವ ಕೀಟಗಳ ವಿರುದ್ಧ ಸಹ ಪರಿಣಾಮಕಾರಿ
- ಬಳಕೆಯ ಪ್ರಮಾಣ – 1.5 – 2 ಮಿಲಿ / ಲೀಟರ್ ನೀರು.
ಸಿಗ್ನಾ ಕೀಟನಾಶಕ –
- ಲುಫೆನ್ಯೂರಾನ್ 5.4 % ಇಸಿ ಅನ್ನು ಹೊಂದಿರುತ್ತದೆ
- ಕೈಟಿನ್ ಸಂಶ್ಲೇಷಣೆಯನ್ನು ತಡೆಯುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತದೆ
- ಬಳಕೆಯ ಪ್ರಮಾಣ : ಪ್ರತಿ ಲೀಟರ್ ನೀರಿಗೆ 1.5 ರಿಂದ 2 ಮಿಲಿ
ಇಂಟರ್ ಪ್ರಿಡ್ ಕೀಟನಾಶಕ –
- ಕ್ಲೋರ್ಫೆನಾಪಿರ್ 10% ಎಸ್ಸಿ ಅನ್ನು ಹೊಂದಿದೆ
- ವಜ್ರ ಬೆನ್ನಿನ ಹುಳುಗಳು ಮತ್ತು ಮೈಟ್ ನುಸಿಗಳಂತಹ ಕೀಟ ನಿಯಂತ್ರಣ ಮಾಡುತ್ತದೆ.
- ಇದು ಎಲೆಗಳ ಕೆಳಭಾಗದಲ್ಲಿ ಅಡಗಿರುವ ಕೀಟಗಳನ್ನು ಸಹ ನಿಯಂತ್ರಿಸುತ್ತದೆ.
- ಬಳಕೆಯ ಪ್ರಮಾಣ – 1.5 ಮಿಲಿ/ಲೀಟರ್ ನೀರು
ನಿರ್ಣಯ:
ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗ್ಗ್ ನೀಡಲಾದ ಲಿಂಕ್ಗಳನ್ನು ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ.