ಬೆಂಡಿ (ಅಬೆಲ್ಮೊಸ್ಕೂಸ್ ಎಸ್ಕುಲೆಂಟಸ್), ಇದನ್ನು ಓಕ್ರಾ ಅಥವಾ ಲೇಡಿಸ್ ಫಿಂಗರ್ ಎಂದೂ ಕರೆಯುತ್ತಾರೆ, ಇದನ್ನು ಭಾರತದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ ಮತ್ತು ಸೇವಿಸಲಾಗುತ್ತದೆ. ಯಾವುದೇ ಇತರ ಬೆಳೆಗಳಂತೆ, ಫ್ಯುಸಾರಿಯಮ್ ಸೊರಗು ರೋಗ, ಬೂದು ರೋಗ, ಎಲೆ ಚುಕ್ಕೆ ಮತ್ತು ಹಳದಿ ಮೊಸಾಯಿಕ್ ವೈರಾಣು ರೋಗದಂತಹ ವಿವಿಧ ರೋಗಗಳಿಗೆ ಬೆಂಡೆಕಾಯಿಯು ಕೂಡ ಒಳಗಾಗುತ್ತದೆ ಹಾಗೂ ಅದರ ಬೆಳವಣಿಗೆ ಮತ್ತು ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಇವುಗಳಲ್ಲಿ, ಹಳದಿ ಮೊಸಾಯಿಕ್ವೈರಾಣು ರೋಗವು ಭಾರತದ ಎಲ್ಲಾ ಬೆಂಡೆ ಬೆಳೆಯುವ ಪ್ರದೇಶಗಳಲ್ಲಿ ಅತ್ಯಂತ ವಿನಾಶಕಾರಿ ವೈರಾಣು ರೋಗವಾಗಿದೆ. ಬೆಳೆಗೆ ಆರಂಭಿಕ ಹಂತಗಳಲ್ಲಿ ವೈರಾಣುವಿನಿಂದ ಪ್ರಭಾವಿತವಾಗಿದ್ದರೆ, ಶೇಕಡಾ 80% ರಷ್ಟು ಬೆಳೆ ನಷ್ಟವನ್ನು ನಿರೀಕ್ಷಿಸಬಹುದು.
ಬೆಂಡೆಕಾಯಿಯಲ್ಲಿ ಹಳದಿ ಮೊಸಾಯಿಕ್ ವೈರಾಣು ರೋಗ :
ವೈರಾಣುವು ಯಾವುದೇ ಬೆಳವಣಿಗೆಯ ಹಂತದಲ್ಲಿ ಸಸ್ಯಗಳಿಗೆ ಸೋಂಕು ಉಂಟುಮಾಡಬಹುದು. ಬೇಸಿಗೆಯ ತಿಂಗಳುಗಳಲ್ಲಿ ಬಿಳಿ ನೊಣಗಳ ಸಂಭವ ಮತ್ತು ಮುತ್ತಿಕೊಳ್ಳುವಿಕೆಯ ತೀವ್ರತೆ ಹೆಚ್ಚಾಗಿರುತ್ತದೆ ಮತ್ತು ಈ ರೋಗವನ್ನು ಹರಡುವ ಸಂಭವವೂ ಹೆಚ್ಚಿರುತ್ತದೆ.
ಕಾರಣ ಜೀವಿ: ಬೆಂಡೆಕಾಯಿಯ ಹಳದಿ ಮೊಸಾಯಿಕ್ ವೈರಾಣು ರೋಗ
ವಾಹಕ : ಬಿಳಿ ನೊಣ (ಬೆಮಿಸಿಯಾ ಟಬಾಸಿ)
ಬೆಂಡೆಕಾಯಿಯಲ್ಲಿ ಹಳದಿ ಮೊಸಾಯಿಕ್ ವೈರಾಣು ರೋಗದ ಲಕ್ಷಣಗಳು:
- ಎಲೆಗಳ ನಾಳಗಳು ಮತ್ತು ನರಗಳು ಹಳದಿಯಾಗುತ್ತವೆ.
- ನಂತರ, ಎಲೆಗಳ ಮಧ್ಯಭಾಗದ ಕೆಲವು ಪ್ರದೇಶಗಳು ಹಳದಿ ಅಥವಾ ಬಿಳಿ ಬಣ್ಣಕ್ಕೆ ತಿರುಗುತ್ತವೆ.
- ಸೋಂಕಿತ ಸಸ್ಯದ ಎಲೆಗಳು ಹಳದಿ ಮತ್ತು ಹಸಿರು ಮೊಸಾಯಿಕ್ ಲಕ್ಷಣಗಳನ್ನು ತೋರಿಸಬಹುದು.
- ತೀವ್ರತೆ ಹೆಚ್ಚಾದಾಗ, ಸೋಂಕಿತ ಎಳೆಯ ಎಲೆಗಳು ಸಂಪೂರ್ಣವಾಗಿ ಹಳದಿಯಾಗುತ್ತವೆ.
- ಸೋಂಕಿತ ಸಸ್ಯಗಳು ಕುಂಠಿತ ಬೆಳವಣಿಗೆಯನ್ನು ತೋರಿಸುತ್ತವೆ ಮತ್ತು ಇಳುವರಿಯನ್ನು ಕ್ಷೀಣಿಸುತ್ತವೆ.
- ಎಲೆಗಳು ಮುಟುರಾಗುತ್ತವೆ ಮತ್ತು ವಿರೂಪಗೊಳ್ಳುತ್ತವೆ.
- ಬಾಧಿತ ಸಸ್ಯಗಳು ಕಡಿಮೆ ಹೂವುಗಳು ಮತ್ತು ಹಣ್ಣುಗಳನ್ನು ಉತ್ಪಾದಿಸಬಹುದು, ಮತ್ತು ಹಣ್ಣುಗಳು ವಿರೂಪಗೊಳ್ಳಬಹುದು, ಗಾತ್ರದಲ್ಲಿ ಚಿಕ್ಕದಾಗಿರುತ್ತವೆ ಮತ್ತು ಹಳದಿ ಬಣ್ಣಕ್ಕೆ ತಿರುಗುತ್ತವೆ.
ನಿರೋಧಕ ಕ್ರಮಗಳು:
- ಹಳದಿ ಮೊಸಾಯಿಕ್ ವೈರಾಣುವಿಗೆ ಯಾವುದೇ ತಿಳಿದಿರುವ ನಿರ್ವಹಣಾ ಚಿಕಿತ್ಸೆಗಳಿಲ್ಲ, ಒಮ್ಮೆ ಸಸ್ಯವು ಸೋಂಕಿಗೆ ಒಳಗಾದರೆ ಈ ರೋಗವನ್ನು ತಡೆಯುವ ತಂತ್ರಗಳನ್ನು ಅಳವಡಿಸಿದ್ದಲ್ಲಿ , ಈ ರೋಗದಿಂದಾಗುವ ಇಳುವರಿ ನಷ್ಟವನ್ನು ಪರಿಣಾಮಕಾರಿಯಾಗಿ ತಡೆಯಬಹುದು.
- ಹಳದಿ ಮೊಸಾಯಿಕ್ ವೈರಾಣುವಿನ (YVMV) ಸಹಿಷ್ಣು ಮಿಶ್ರತಳಿಗಳಾದ : ರುದ್ರಾಕ್ಷಿ F1 ರೋಶನಿ ಓಕ್ರಾ, ಉರ್ಜಾ ಅಗ್ರಿ – ಭಿಂಡಿ ಮರೀನಾ, ಸರ್ಪನ್ F1 ಹೈಬ್ರಿಡ್ ಭಿಂಡಿ, ಇಂಡಮ್ 9821 ಭೆಂಡಿ, ಪ್ಯಾನ್ 2127 ಹೈಬ್ರಿಡ್ ಬೀಜಗಳನ್ನು ಬಳಸಿ.
- ಬೇಸಿಗೆಯಲ್ಲಿ ಬೆಂಡೆಕಾಯಿಯ ಮೊಸಾಯಿಕ್ ರೋಗದ ಸಹಿಷ್ಣು ತಳಿಗಳನ್ನು ಪ್ರಭೇದಗಳನ್ನು ಬೆಳೆದರೆ ಈ ರೋಗದಿಂದಾಗುವ ಹಾನಿಯನ್ನು ತಪ್ಪಿಸಬಹುದು. ಏಕೆಂದರೆ ಬೇಸಿಗೆ ಕಾಲದಲ್ಲಿ ಬಿಳಿನೊಣಗಾಲ ಚಟುವಟಿಕೆಯು ಹೆಚ್ಚಾಗಿರುತ್ತದೆ.
- ಹರಡುವಿಕೆಯನ್ನು ತಪ್ಪಿಸಲು ರೋಗ ಪೀಡಿತ ಸಸ್ಯಗಳನ್ನು ಹೊಲದಿಂದ ತೆಗೆದುಹಾಕಿ ಮತ್ತು ನಾಶಮಾಡಿ.
- ಹೊಲವನ್ನು ಸ್ವಚ್ಛವಾಗಿ ಮತ್ತು ಕಳೆಗಳಿಂದ ಮುಕ್ತವಾಗಿಡಿ.
- ಬಿಳಿ ನೊಣಗಳ ಸಂಖ್ಯೆಯನ್ನು ನಿಯಂತ್ರಿಸಿ ಮತ್ತು ರೋಗ ಹರಡುವುದನ್ನು ತಡೆಯಿರಿ.
- ಬಿಳಿನೊಣಗಳ ನೈಸರ್ಗಿಕ ಪರಭಕ್ಷಕಗಳಾದ ಜೀರುಂಡೆಗಳನ್ನು ಮತ್ತು ಲೇಸ್‌ವಿಂಗ್ ಜೀರುಂಡೆಗಳನ್ನು ರೋಗ ಸೋಂಕಿತ ಕ್ಷೇತ್ರಕ್ಕೆ ಬಿಡಬೇಕು. .
- ಸಾರಜನಕ ಮಿಶ್ರಿತ ರಸಗೊಬ್ಬರಗಳ ಅತಿಯಾದ ಬಳಕೆಯನ್ನು ತಪ್ಪಿಸಿ, ಏಕೆಂದರೆ ಇದು ವೈರಾಣು ಸೋಂಕುಗಳನ್ನು ಹೆಚ್ಚಿಸುತ್ತದೆ.
- ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಮತ್ತು ರೋಗ ಹರಡುವ ಅಪಾಯವನ್ನು ಕಡಿಮೆ ಮಾಡಲು ದ್ವಿದಳ ಧಾನ್ಯದ ಬೆಳೆಗಳನ್ನು ಬೆಳೆದ ಭೂಮಿಯಲ್ಲಿ ಬೆಂಡೆಕಾಯಿಯನ್ನು ಬೆಳೆದರೆ ಈ ರೋಗವನ್ನು ಪರಿಣಾಮಕಾರಿಯಾಗಿ ತಡೆಯಬಹುದು.
- ವಾಹಕಗಳಾದ, ಬಿಳಿನೊಣಗಳನ್ನ ನಿರ್ವಹಿಸಲು ಚೆಂಡು ಹೂವು, ಜೋಳ ಅಥವಾ ಸೂರ್ಯಕಾಂತಿಗಳನ್ನು ಗಡಿ ಬೆಳೆಗಳಾಗಿ ನೆಡಬೇಕು.
- ಬಿಳಿ ನೊಣಗಳನ್ನು ಹಿಮ್ಮೆಟ್ಟಿಸಲು ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ರಸ ಸಾರಗಳನ್ನು ಔಷದಿಯ ರೀತಿ ಸಿಂಪಡಿಸಬೇಕು.
- ಈ ರೋಗಕ್ಕೆ ಸಸ್ಯದ ಪ್ರತಿರೋಧವನ್ನು ಹೆಚ್ಚಿಸಲು ಮತ್ತು ರೋಗದ ಸಂಭವವನ್ನು ಕಡಿಮೆ ಮಾಡಲು ಮ್ಯಾಗ್ನಮ್ ಎಂ ಏನ್ ಮತ್ತು ಜಿಯೋ ಲೈಫ್ ನೋ ವೈರಸ್ ಅನ್ನು ಸಿಂಪಡಿಸಿ .
- ಅತಿಥೇಯವಲ್ಲದ ಬೆಳೆಗಳೊಂದಿಗೆ ಬೆಳೆ ಸರದಿ.
- ಪ್ರತಿ ಎಕರೆಗೆ @ 6-8 ಹಳದಿ ಜಿಗುಟಾದ ಬಲೆಗಳ ಅಳವಡಿಕೆ.
ವಾಹಕವಾದ ಬಿಳಿನೊಣಗಳ ನಿಯಂತ್ರಣ ಕ್ರಮಗಳು
ಉತ್ಪನ್ನದ ಹೆಸರು | ತಾಂತ್ರಿಕ ಅಂಶ | ಬಳಕೆಯ ಪ್ರಮಾಣ |
ಯಾಂತ್ರಿಕ ನಿರ್ವಹಣೆ | ||
ತಪಸ್ ಹಳದಿ ಜಿಗುಟು ಬಲೆ | ಅಂಟು ಬಲೆ | 4 – 6 ಪ್ರತೀ ಎಕರೆಗೆ |
ಜೈವಿಕ ನಿಯಂತ್ರಣ | ||
ಗ್ರೀನ್ಪೀಸ್ ನೀಮೋಲ್ | ಬೇವಿನ ಎಣ್ಣೆ | 1 – 2ಮಿಲಿ /ಲೀಟರ್ ನೀರಿಗೆ |
ಆನಂದ್ ಡಿಆರ್ ಬ್ಯಾಕ್ಟಸ್ ಬ್ರೇವ್ | ಬ್ಯೂವೇರಿಯಾ ಬಾಸ್ಸಿಯಾನಾ | 2.5 ಮಿಲಿ /ಲೀಟರ್ ನೀರಿಗೆ |
ರಾಸಾಯನಿಕ ನಿರ್ವಹಣೆ | ||
ಅನಂತ್ ಕೀಟನಾಶಕ | ಥಿಯಾಮಿಥೋಕ್ಸಾಂ 25% ಡಬ್ಲ್ಯೂ ಜಿ | 0.3 – 0.5 ಗ್ರಾಂ/ಲೀಟರ್ ನೀರಿಗೆ |
ಬೆನೆವಿಯಾ ಕೀಟನಾಶಕ | ಸೈಂಟ್ರಾನಿಲಿಪ್ರೋಲ್ 10.26% ಓ ಡಿ | 1.7 – 2 ಮಿಲಿ /ಲೀಟರ್ ನೀರಿಗೆ |
ಧನ್ಪ್ರೀತ್ ಕೀಟನಾಶಕ | ಅಸಿಟಾಮಪ್ರಿಡ್ 20% ಯಸ್ ಪಿ | 0.2 – 0.4 ಗ್ರಾಂ/ಲೀಟರ್ ನೀರಿಗೆ |
ಟಾಟಾ ಮಿಡ ಕೀಟನಾಶಕ | ಇಮಿಡಾಕ್ಲೋಪ್ರಿಡ್ 17.8% ಯಸ್ ಎಲ್ | 1 – 2 ಮಿಲಿ /ಲೀಟರ್ ನೀರಿಗೆ |
ಪೊಲೀಸ್ ಕೀಟನಾಶಕ | ಫಿಪ್ರೋನಿಲ್40 + ಇಮಿಡಾಕ್ಲೋಪ್ರಿಡ್ 40%ಡಬ್ಲ್ಯೂ ಜಿ | 0.2 – 0.6 ಗ್ರಾಂ/ಲೀಟರ್ ನೀರಿಗೆ |
ಓಷೀನ್ ಕೀಟನಾಶಕ | ಡಿನೋಟ್ಫುರಾನ್ 20 % SG | 0.3 – 0.4 ಗ್ರಾಂ/ಲೀಟರ್ ನೀರಿಗೆ |
ಮೊವೆಂಟೋ ಎನೆರ್ಜಿ ಕೀಟನಾಶಕ | ಸ್ಪೈರೊಟೆಟ್ರಾಮ್ಯಾಟ್11.01% + ಇಮಿಡಾಕ್ಲೋಪ್ರಿಡ್ 11.01% SC | 0.5 – 1 ಮಿಲಿ /ಲೀಟರ್ ನೀರಿಗೆ |