ಭಾರತೀಯ ಡ್ರೋನ್ ಆಧಾರಿತ ಸ್ಟಾರ್ಟ್ಅಪ್ ಗರುಡಾ ಏರೋಸ್ಪೇಸ್, ಚೆನ್ನೈ- ಉತ್ಪಾದನಾ ವಿಭಾಗದಲ್ಲಿ ಡ್ರೋನ್ ಕೌಶಲ್ಯ ಮತ್ತು ತರಬೇತಿಗಾಗಿ ಭಾರತದ ಮೊದಲ ವರ್ಚುವಲ್ ಇ-ಲರ್ನಿಂಗ್ ವೇದಿಕೆಯನ್ನು ಸಚಿವರು ಅನುರಾಗ್ ಸಿಂಗ್ ಠಾಕೂರ್ ರವರು ಉದ್ಘಾಟಿಸಿದರು. ಇದು ಅಗ್ರಿ-ಡ್ರೋನ್ ಅನ್ನು ಬಳಸಿಕೊಂಡು ರಾಷ್ಟ್ರದಾದ್ಯಂತ ಭಾರತೀಯ ರೈತರನ್ನು ಸಜ್ಜುಗೊಳಿಸುವ ಹಾಗು ಸಬಲೀಕರಿಸುವ ಗುರಿಯನ್ನು ಹೊಂದಿದೆ.
ಅವರು ಚೆನ್ನೈನಲ್ಲಿ ಗರುಡ ಏರೋಸ್ಪೇಸ್ನ ಉತ್ಪಾದನಾ ವಿಭಾಗದಲ್ಲಿ ಯೋಜಿಸಲಾದ 1000 ಡ್ರೋನ್ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ, “ಆಪರೇಷನ್ 777” ಎಂಬ ಡ್ರೋನ್ ಯಾತ್ರೆಯನ್ನು ತೆರೆದರು. ಅಧಿಕೃತ ಪ್ರಕಟಣೆಯ ಪ್ರಕಾರ, ಯಾತ್ರಾ ಡ್ರೋನ್ಗಳನ್ನು ರೈತರಿಗೆ ತಂತ್ರಜ್ಞಾನದ ಬಗ್ಗೆ ಮಾಹಿತಿ ತಿಳಿಸಲು ಮತ್ತು ಕೃಷಿ ಉದ್ದಿಮೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ.
ಗರುಡಾ ಏರೋಸ್ಪೇಸ್ ಕಂಪನಿಯು ಚೆನ್ನೈ ಮೂಲದ ಡ್ರೋನ್ ತಂತ್ರಜ್ಞಾನದ ನವೋದ್ಯಮವಾಗಿದೆ.ಇದು ಕಿಸಾನ್ ಡ್ರೋನ್, ಸೆನ್ಸರ್ಗಳು, ಕ್ಯಾಮೆರಾಗಳು ಮತ್ತು ಅಟೊಮೈಜರ್ಗಳನ್ನು ಹೊಂದಿದ್ದು, ಆಹಾರ ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಲು, ಬೆಳೆ ನಷ್ಟವನ್ನು ಕಡಿಮೆ ಮಾಡಲು ಮತ್ತು ರೈತರು ಹಾನಿಕಾರಕ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರೈತರನ್ನು ಹಾನಿಕಾರಕ ವಸ್ತುಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.