HomeCropಮೆಣಸಿನಕಾಯಿ ಬೆಳೆಯಲ್ಲಿ ಆಂಥ್ರಾಕ್ನೋಸ್ ರೋಗದ ಪರಿಣಾಮಕಾರಿ ನಿರ್ವಹಣ ಕ್ರಮಗಳು 

ಮೆಣಸಿನಕಾಯಿ ಬೆಳೆಯಲ್ಲಿ ಆಂಥ್ರಾಕ್ನೋಸ್ ರೋಗದ ಪರಿಣಾಮಕಾರಿ ನಿರ್ವಹಣ ಕ್ರಮಗಳು 

ಕೊಲೆಟ್ರೋಟ್ರೀಕಮ್ ಕ್ಯಾಪ್ಸಿಸಿ ಎಂಬ ಶಿಲೀಂಧ್ರದಿಂದ ಉಂಟಾಗುವ ಮೆಣಸಿನಕಾಯಿ  ಆಂಥ್ರಾಕ್ನೋಸ್ ರೋಗದಿಂದ  ವಿಶ್ವದಾದ್ಯಂತ ಮೆಣಸಿನಕಾಯಿ ಬೆಳೆಯುವ ರೈತರಿಗೆ ಗಮನಾರ್ಹ ನಷ್ಟವಾಗುತ್ತಿದೆ.  ಈ ವಿನಾಶಕಾರಿ ರೋಗವು ಬೆಳೆಯ ಕಾಂಡ, ಎಲೆ ಮತ್ತು ಹಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ, ಇದು ಇಳುವರಿ ನಷ್ಟಕ್ಕೆ ಕಾರಣವಾಗುತ್ತದೆ ಮತ್ತು ಮೆಣಸಿನ ಕಾಯಿಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಆಂಥ್ರಾಕ್ನೋಸ್‌ನ ಹಾನಿಕಾರಕ ಪರಿಣಾಮಗಳಿಂದ ತಮ್ಮ ಮೆಣಸಿನಕಾಯಿ ಕೊಯ್ಲುಗಳನ್ನು ರಕ್ಷಿಸಲು ಬಯಸುವ ರೈತರಿಗೆ ಕಾರಣಗಳು, ಲಕ್ಷಣಗಳು ಮತ್ತು ಪರಿಣಾಮಕಾರಿ ನಿರ್ವಹಣಾ ತಂತ್ರಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ಲೇಖನದಲ್ಲಿ, ಈ ಶಿಲೀಂಧ್ರ ಸೋಂಕಿನ ಮುಖ್ಯ ಲಕ್ಷಣಗಳು ಮತ್ತು ಅದನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ತಿಳಿದುಕೊಳ್ಳೋಣ.

ಹರಡುವಿಕೆ ಮತ್ತು ಬದುಕುಳಿಯುವ ವಿಧಾನ:

  • ಸುಮಾರು 28°C ತಾಪಮಾನ, ಸಾಪೇಕ್ಷ ಆರ್ದ್ರತೆ 92- 95% ಮತ್ತು ಹಣ್ಣು ಹಣ್ಣಾಗುವ ಹಂತದಲ್ಲಿರುವಾಗ ಮಳೆಯಾದರೆ  ರೋಗದ ಬೆಳವಣಿಗೆಗೆ ಇದು ಅನುಕೂಲಕರವಾಗಿರುತ್ತದೆ.
  • ಶಿಲೀಂಧ್ರವು ಬೀಜದಿಂದ ಹರಡುತ್ತದೆ ಮತ್ತು ಗಾಳಿಯ ಮುಖಾಂತರ ಕೋನಿಡಿಯಾವು ದ್ವಿತೀಯಕ ಹರಡುವಿಕೆ ಸಂಭವಿಸುತ್ತದೆ.
  • ರೋಗ ಪೀಡಿತ ಬೆಳೆಗಳು ಸತ್ತ ಕೊಂಬೆಗಳು  ಮತ್ತು ಹಳೇ ಬೆಳೆಗಳ ಅವಶೇಷಗಳಲ್ಲಿ ಬದುಕುಳಿಯುವಿಕೆಯುತ್ತವೆ.

ರೋಗಲಕ್ಷಣಗಳು:

ರೋಗವು ಎರಡು ರೀತಿಗಳಲ್ಲಿ ಕಾಣಿಸಿಕೊಳ್ಳುತ್ತದೆ : ಡೈಬ್ಯಾಕ್ ಮತ್ತು ಮಾಗಿದ ಹಣ್ಣು ಕೊಳೆತ.

ಡೈಬ್ಯಾಕ್ ಹಂತ:

  • ಪ್ರಾಥಮಿಕ ರೋಗಲಕ್ಷಣಗಳು ಎಳೆ  ಕೊಂಬೆಗಳ ಹಳದಿ ತೇಪೆಗಳನ್ನು ಒಳಗೊಂಡಿರುತ್ತವೆ, ಇವುಗಳು ತುದಿಯಿಂದ ಪ್ರಾರಂಭಿಸಿ ಕೆಳಮುಖವಾಗಿ ಮುಂದುವರಿಯುತ್ತವೆ.
  • ರೋಗವು ಮುಂದುವರೆದಂತೆ, ಕೊಂಬೆಗಳು ಒಣಹುಲ್ಲಿನಂತಾಗುತ್ತವೆ.
  • ಹಲವಾರು ಕಪ್ಪು ಚುಕ್ಕೆಗಳು (ಶಿಲೀಂಧ್ರ ಅಸೆರ್ವುಲಿ) ಹಳದಿ ತೇಪೆಗಳಿಗೆ  ಹರಡಿರುವುದನ್ನು ಅಥವಾ ಆಕ್ರಮಿಸಿದಂತೆ ಕಾಣಬಹುದು.
  • ತೀವ್ರವಾದ ದಾಳಿಗಳು ಇಡೀ ಸಸ್ಯದ ಒಣಗುವಿಕೆಗೆ ಕಾರಣವಾಗಬಹುದು.
  • ಶಿಲೀಂಧ್ರವು ಹಣ್ಣಿನ ಕಾಂಡದ ಮೇಲೂ ಪರಿಣಾಮ ಬೀರಬಹುದು.

 ಹಣ್ಣು ಕೊಳೆಯುವ ಹಂತ:

  • ಹಣ್ಣಿನ ಮೇಲೆ ಸಣ್ಣ, ಕಪ್ಪು, ವೃತ್ತಾಕಾರದ ಕಲೆಗಳು ಕಾಣಿಸಿಕೊಳ್ಳುತ್ತವೆ.
  • ಕಪ್ಪು ಅಂಚುಗಳನ್ನು ಹೊಂದಿರುವ ಈ ಕಲೆಗಳು ಶಿಲೀಂಧ್ರದ ಬೀಜಕಗಳ ಕೆಂಪು  ದ್ರವ್ಯರಾಶಿಯನ್ನು ಅಭಿವೃದ್ಧಿಪಡಿಸುತ್ತವೆ.
  • ತೀವ್ರತೆ ಹೆಚ್ಚಾದಂತೆ, ಕಪ್ಪು ಕಲೆಗಳು  (ಶಿಲೀಂಧ್ರ ಅಸೆರ್ವುಲಿ) ಕಾಣಿಸಿಕೊಳ್ಳುತ್ತವೆ, ಇದು ಅಕಾಲಿಕ ಹಣ್ಣಿನ ಉದುರುವಿಕೆ  ಮತ್ತು ಇಳುವರಿ ನಷ್ಟಕ್ಕೆ ಕಾರಣವಾಗುತ್ತದೆ.
  • ರೋಗಪೀಡಿತ ಮೆಣಸಿನಕಾಯಿಗಳನ್ನು ಕತ್ತರಿಸಿದಾಗ,  ಶಿಲೀಂಧ್ರವು  ಸಣ್ಣ, ಕಪ್ಪು ಸ್ಟ್ರೋಮ್ಯಾಟಿಕ್ ದ್ರವ್ಯರಾಶಿಗಳಿಂದ ಮುಚ್ಚಲ್ಪಟ್ಟಿರುತ್ತವೆ.

ನಿರೋಧಕ ಕ್ರಮಗಳು:

  • ರೋಗದ ಗುರುತುಗಳಿಗೆ  ನಿಯಮಿತವಾಗಿ ಬೀಜಗಳು ಅಥವಾ ಬೆಳೆಗಳನ್ನು  ಪರೀಕ್ಷಿಸಿ.
  • ಹೊಲಗಳಲ್ಲಿ ಸರಿಯಾದ ಒಳಚರಂಡಿಯನ್ನು ಖಚಿತಪಡಿಸಿಕೊಳ್ಳಿ.
  • ಆತಿಥೇಯವಲ್ಲದ ಬೆಳೆಗಳೊಂದಿಗೆ (3-4 ವರ್ಷ ಅಥವಾ ಅದಕ್ಕಿಂತ ಹೆಚ್ಚು) ವಿಸ್ತೃತ ಬೆಳೆ ಸರದಿ ಯೋಜನೆಯನ್ನು ಅನುಸರಿಸಿ.
  • ನಾಟಿಗೆ ರೋಗರಹಿತ ಮೆಣಸಿನ ಬೀಜಗಳನ್ನು ಬಳಸಿ.
  • ಸೋಂಕಿತ ಹಣ್ಣುಗಳು ಮತ್ತು ಸೋಂಕಿತ ಬೆಳೆ ಅವಶೇಷಗಳನ್ನು ಹೊಲದಿಂದ ತೆಗೆದುಹಾಕಿ, ಏಕೆಂದರೆ ಅವು ರೋಗದ ಹರಡುವಿಕೆಗೆ  ಕಾರಣವಾಗಬಹುದು.
  • ರೋಗಲಕ್ಷಣಗಳ ತೀವ್ರತೆ ಹೆಚ್ಚಾದರೆ ಬೆಳೆಗಳನ್ನು ಆದಷ್ಟು ಬೇಗ ಕಟಾವು ಮಾಡಿ.  

ಮೆಣಸಿನಕಾಯಿಯಲ್ಲಿ  ಆಂಥ್ರಾಕ್ನೋಸ್ ರೋಗದ ನಿರ್ವಹಣೆ:

ಮೆಣಸಿನಕಾಯಿ ಬೆಳೆಗಳಲ್ಲಿ ಆಂಥ್ರಾಕ್ನೋಸ್ ಸೋಂಕನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಜೈವಿಕ ಮತ್ತು ರಾಸಾಯನಿಕ ನಿಯಂತ್ರಣ ಕ್ರಮಗಳ ಸಂಯೋಜನೆಯು ಹೆಚ್ಚಾಗಿ ಅಗತ್ಯವಾಗಿರುತ್ತದೆ. ಈ ರೋಗವನ್ನು ನಿಯಂತ್ರಿಸಲು ಬಳಸಬಹುದಾದ ಶಿಲೀಂಧ್ರನಾಶಕಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ :

ಉತ್ಪನ್ನದ ಹೆಸರು  ತಾಂತ್ರಿಕ ಅಂಶ  ಬಳಕೆಯ ಪ್ರಮಾಣ 
ಜೈವಿಕ ನಿರ್ವಹಣೆ 
ಫಂಗೋ ರೇಜ್   ಜೈವಿಕ ಸಾರಗಳು   1-2 ಮಿಲಿ/ಲೀಟರ್ ನೀರಿಗೆ 
ಜಿಯೋಲೈಫ್ ರಿಕವರ್ ನ್ಯೂಟ್ರಿ  ನೈಸರ್ಗಿಕ ಸಾರಗಳು ಮತ್ತು ಉತ್ಕರ್ಷಣ ನಿರೋಧಕಗಳು 0.5-1 ಗ್ರಾಂ/ಲೀಟರ್ ನೀರಿಗೆ 
ಟೆರ್ರಾ ಫಂಗಿಕಿಲ್ ಜೈವಿಕ ಸಾರಗಳು   3-4 ಮಿಲಿ/ಲೀಟರ್ ನೀರಿಗೆ  
ಅಂಶುಲ್ ಸ್ಯೂಡೋಮ್ಯಾಕ್ಸ್ ಬಯೋ  ಶಿಲೀಂಧ್ರನಾಶಕ ಸ್ಯೂಡೋಮೊನಸ್ ಫ್ಲೋರೊಸೆನ್ಸ್ 3 ಗ್ರಾಂ/ಲೀಟರ್ ನೀರಿಗೆ 

 

ರಾಸಾಯನಿಕ ನಿರ್ವಹಣೆ 
ಕೋಸೈಡ್ ಶಿಲೀಂಧ್ರನಾಶಕ ಕಾಪರ್ ಹೈಡ್ರಾಕ್ಸೈಡ್ 53.8% ಡಿ ಎಫ್   2 ಗ್ರಾಂ/ಲೀಟರ್ ನೀರಿಗೆ
ಟಾಟಾ ಎಂ45 ಶಿಲೀಂಧ್ರನಾಶಕ ಮ್ಯಾಂಕೋಜೆಬ್ 75% ಡಬ್ಲ್ಯೂ ಪಿ  2-2.5 ಗ್ರಾಂ/ಲೀಟರ್ ನೀರಿಗೆ 
ಲೂನಾ ಎಕ್ಸ್ಪೀರಿಯೆನ್ಸ್  ಶಿಲೀಂಧ್ರನಾಶಕ ಫ್ಲೂಪಿರಾಮ್ 17.7% + ಟೆಬುಕೊನಜೋಲ್ 17.7% ಯಸ್ ಸಿ  1 ಮಿಲಿ/ಲೀಟರ್ ನೀರಿಗೆ
ಮೆರಿವಾನ್ ಶಿಲೀಂಧ್ರನಾಶಕ ಫ್ಲಕ್ಸಾಪೈರಾಕ್ಸಾಡ್ 250 ಗ್ರಾಂ/ಲೀಟರ್ + ಪೈರಾಕ್ಲೋಸ್ಟ್ರೋಬಿನ್ 250 ಗ್ರಾಂ/ಲೀಟರ್ ಯಸ್ ಸಿ  0.4-0.5ಮಿಲಿ/ಲೀಟರ್ ನೀರಿಗೆ  
ಇಂಡೋಫಿಲ್ ಎಮ್45 ಶಿಲೀಂಧ್ರನಾಶಕ ಮ್ಯಾಂಕೋಜೆಬ್ 75% ಡಬ್ಲ್ಯೂ ಪಿ  3 ಗ್ರಾಂ/ಲೀಟರ್ ನೀರಿಗೆ
ರೋಕೊ ಶಿಲೀಂಧ್ರನಾಶಕ ಥಿಯೋಫನೇಟ್ ಮೀಥೈಲ್ 70%ಡಬ್ಲ್ಯೂ ಪಿ 

 

0.5 ಗ್ರಾಂ/ಲೀಟರ್ ನೀರಿಗೆ 
ಸಾರ್ಥಕ್ ಶಿಲೀಂಧ್ರನಾಶಕ ಕ್ರೆಸೊಕ್ಸಿಮ್-ಮೀಥೈಲ್ 15% + ಕ್ಲೋರೊಥಲೋನಿಲ್ 56% ಡಬ್ಲ್ಯೂ ಜಿ  2 ಗ್ರಾಂ/ಲೀಟರ್ ನೀರಿಗೆ 
ಎರ್ಗಾನ್ ಶಿಲೀಂಧ್ರನಾಶಕ ಕ್ರೆಸೊಕ್ಸಿಮ್-ಮೀಥೈಲ್ 44.3% ಯಸ್ ಸಿ  0.6 ಮಿಲಿ/ಲೀಟರ್ ನೀರಿಗೆ  
ಅಮಿಸ್ಟಾರ್ ಟಾಪ್ ಶಿಲೀಂಧ್ರನಾಶಕ ಅಜೋಕ್ಸಿಸ್ಟ್ರೋಬಿನ್ 18.2% + ಡಿಫೆನೊಕೊನಜೋಲ್ 11.4% ಯಸ್ ಸಿ 1 ಮಿಲಿ/ಲೀಟರ್ ನೀರಿಗೆ
ಕಾತ್ಯಾಯನಿ ಅಜಾಕ್ಸಿ ಶಿಲೀಂಧ್ರನಾಶಕ ಅಜೋಕ್ಸಿಸ್ಟ್ರೋಬಿನ್ 23% ಯಸ್ ಸಿ  1-1.5 ಮಿಲಿ/ಲೀಟರ್ ನೀರಿಗೆ
ಟಾಟಾ ಇಶಾನ್ ಶಿಲೀಂಧ್ರನಾಶಕ  ಕ್ಲೋರೋಥಲೋನಿಲ್ 75% ಡಬ್ಲ್ಯೂ ಪಿ  2.5 ಗ್ರಾಂ/ಲೀಟರ್ ನೀರಿಗೆ
ಸ್ಕೋರ್ ಶಿಲೀಂಧ್ರನಾಶಕ ಡಿಫೆನೊಕೊನಜೋಲ್ 25% ಇಸಿ  0.5 ಮಿಲಿ/ಲೀಟರ್ ನೀರಿಗೆ
ಬ್ಲಿಟಾಕ್ಸ್ ಶಿಲೀಂಧ್ರನಾಶಕ ಕಾಪರ್ ಆಕ್ಸಿಕ್ಲೋರೈಡ್ 50% ಡಬ್ಲ್ಯೂ ಪಿ   2 ಗ್ರಾಂ/ಲೀಟರ್ ನೀರಿಗೆ 

 

ಅವನ್ಸರ್ ಗ್ಲೋ ಶಿಲೀಂಧ್ರನಾಶಕ ಅಜೋಕ್ಸಿಸ್ಟ್ರೋಬಿನ್ 8.3% + ಮ್ಯಾಂಕೋಜೆಬ್ 66.7% ಡಬ್ಲ್ಯೂ ಜಿ  3 ಗ್ರಾಂ/ಲೀಟರ್ ನೀರಿಗೆ
ಕ್ಯಾಬ್ರಿಯೊ ಟಾಪ್ ಶಿಲೀಂಧ್ರನಾಶಕ ಮೆಟಿರಾಮ್ 55% + ಪೈಕ್ಲೋಸ್ಟ್ರೋಬಿನ್ 5% ಡಬ್ಲ್ಯೂ ಜಿ   3-3.5 ಗ್ರಾಂ/ಲೀಟರ್ ನೀರಿಗೆ

 

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು