HomeCropಸಾಸಿವೆಯನ್ನು ಬೆಳೆಯಲು ಉತ್ತಮ ಕೃಷಿ ಪದ್ಧತಿಗಳು

ಸಾಸಿವೆಯನ್ನು ಬೆಳೆಯಲು ಉತ್ತಮ ಕೃಷಿ ಪದ್ಧತಿಗಳು

ಸಾಸಿವೆ   -ಭಾರತೀಯ ಸಾಸಿವೆ, ಕಂದು ಮತ್ತು ಹಳದಿ ಸಾರ್ಸನ್, ರಾಯ ಮತ್ತು ಟೋರಿಯಾ ಬೆಳೆ ಸೇರಿವೆ.

ಸಾಸಿವೆ (ಬ್ರಾಸಿಕಾ ನೇಪಸ್) – ಭಾರತದಲ್ಲಿ ಸಾಸಿವೆ ಎಣ್ಣೆಯು ನಾಲ್ಕನೇ ಅತಿದೊಡ್ಡ ಕೊಡುಗೆಯಾಗಿದೆ, ರೇಪ್ಸೀಡ್  ಮತ್ತು ಸಾಸಿವೆಯು ಒಟ್ಟು ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಸುಮಾರು ಶೇಕಡಾ 28.6 ರಷ್ಟು ಕೊಡುಗೆ ನೀಡುತ್ತಿವೆ. ಸೋಯಾಬೀನ್ ಮತ್ತು ತಾಳೆ ಎಣ್ಣೆಯ ನಂತರ, ಇದು ವಿಶ್ವದ ಮೂರನೇ ಪ್ರಮುಖ ಎಣ್ಣೆಬೀಜವಾಗಿದೆ. ಸಾಸಿವೆ ಬೀಜಗಳು ಮತ್ತು ಅದರ ಎಣ್ಣೆಯನ್ನು ಅಡುಗೆ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಎಳೆಯ ಎಲೆಗಳನ್ನು ತರಕಾರಿ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಇದರ ಹಿಂಡಿಯನ್ನು ದನಕರುಗಳ ಮೇವಿಗಾಗಿಯೂ ಬಳಸಲಾಗುತ್ತದೆ. ಸಾಸಿವೆಯನ್ನು ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಹರಿಯಾಣ, ಗುಜರಾತ್‌,  ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನಂತಹ ದಕ್ಷಿಣಭಾರತದ ಕೆಲವು ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. 

ಮಣ್ಣು

ಸಾಸಿವೆ  ಬೆಳೆಯು ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಯಬಹುದು ಆದರೆ ಗೋಡು ಮಣ್ಣಿನಿಂದ ಹಿಡಿದು ಭಾರೀ ಮಣ್ಣಿನ ವರೆಗೆ  ಸಾಸಿವೆಯನ್ನು ಬೆಳೆಯಲು ಸೂಕ್ತವಾಗಿದೆ. 

ಭೂಮಿ ತಯಾರಿ

ಎರಡರಿಂದ ಮೂರು ಬಾರಿ ಮಣ್ಣನ್ನು ಉಳುಮೆ ಮಾಡಿ ನಂತರ ಎರಡು ಬಾರಿ ಆಳವಾದ ಬೇಸಿಗೆ ಉಳುಮೆ ಮಾಡಬೇಕು. ಪ್ರತಿ ಉಳುಮೆಯ ನಂತರ ಹಲಗೆ ಹೊಡೆಯುವುದರಿಂದ, ಬೀಜ ಮೊಳಕೆಯೊಡೆಯಲು ಸಹಾಯ ಮಾಡುತ್ತದೆ. 

ಬಿತ್ತನೆ ಸಮಯ

ಸಾಸಿವೆ ಬೆಳೆ ಬಿತ್ತನೆಗೆ ಸೂಕ್ತ ಸಮಯ ಸೆಪ್ಟೆಂಬರ್‌ನಿಂದ ಅಕ್ಟೋಬರ್ ತಿಂಗಳವರೆಗೆ. ಸಾಸಿವೆ – ರೇಪ್ಸೀಡ್ ಅನ್ನು  ಅಂತರ ಬೆಳೆಯಾಗಿ ಬೆಳೆದಾಗ, ಬಿತ್ತನೆಯ ಸಮಯವು ಮುಖ್ಯ ಬೆಳೆಯ ಕೃಷಿ ಮೇಲೆ ಅವಲಂಬಿತವಾಗಿರುತ್ತದೆ.

ಅಂತರ

ಸಾಲಿನಿಂದ ಸಾಲಿಗೆ 30 ಸೆಂಟಿಮೀಟರ್‌ಗಳ ಅಂತರವನ್ನು, ಸಸ್ಯದಿಂದ ಸಸ್ಯದ ಅಂತರವು 10-15 ಸೆಂ.ಮೀ. ಇಡಬೇಕಾಗುತ್ತದೆ. 

ಬೀಜಗಳನ್ನ  ಬಿತ್ತಲು – ಸೀಡ್ ಡ್ರಿಲ್ ಅನ್ನು ಬಳಸಬಹುದು. 

ಬೀಜಗಳ  ಪ್ರಮಾಣ 

 ಸಾಸಿವೆಗಳನ್ನು ಪ್ರತ್ಯೇಕವಾಗಿ ಬೆಳೆಯುವಾಗ, ಪ್ರತಿ ಎಕರೆಗೆ 1.5 ಕೆಜಿ ಬೀಜಗಳು ಬೇಕಾಗುತ್ತವೆ. ಬಿತ್ತನೆ ಮಾಡಿದ ಮೂರು ವಾರಗಳ ನಂತರ ತೆಳು ಮಾಡಿ ಮತ್ತು ಆರೋಗ್ಯಕರ ಮೊಳಕೆಗಳನ್ನು ಅಥವಾ ಸಸಿಗಳನ್ನು ಮಾತ್ರ ಕ್ಷೇತ್ರದಲ್ಲಿ ಹಾಗೆಯೇ ಬಿಡಬೇಕು. 

ಬೀಜೋಪಚಾರ : 

 ಮಣ್ಣಿನಿಂದ  ಹಾಗೂ ಬೀಜದಿಂದ ಹರಡುವ ಕೀಟ ಮತ್ತು ರೋಗದಿಂದ ರಕ್ಷಿಸಲು, ಬಿತ್ತನೆ ಮಾಡುವ ಮೊದಲು ಪ್ರತಿ ಕೆಜಿ ಬೀಜಕ್ಕೆ ಥೈರಮ್ @ 3 ಗ್ರಾಂ ನೊಂದಿಗೆ ಬೀಜೋಪಚಾರ ಮಾಡಬೇಕು. 

ಗೊಬ್ಬರ 

ಪೌಷ್ಟಿಕಾಂಶದ ಅವಶ್ಯಕತೆ (ಕೆಜಿ/ಎಕರೆ) 

ಬೆಳೆ ನೈಟ್ರೋಜನ್                         ಫಾಸ್ಫರಸ್                                    ಪೊಟ್ಯಾಷ್ 
ಸಾಸಿವೆ                                                                    25 8 ಮಣ್ಣಿನ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ 
ರಾಯಾ ಮತ್ತು 

ಗೋಭಿ ಸರ್ಸನ್      

  40       12              6

 

ಹೊಲವನ್ನು ಸಿದ್ಧಪಡಿಸುವಾಗ, 70 ರಿಂದ 120 ಕ್ವಿಂಟಲ್ ಕೊಟ್ಟಿಗೆ ಗೊಬ್ಬರವನ್ನು ಅಥವಾ ಚೆನ್ನಾಗಿ ಕೊಳೆತ ಹಸುವಿನ ಸಗಣಿಯನ್ನು ಮಣ್ಣಿಗೆ ಹಾಕಬೇಕು. ನೀರಾವರಿಯ ಬೆಳೆಯಾಗಿದ್ದಲ್ಲಿ, ಯೂರಿಯಾ @55kg/ಎಕರೆ ಮತ್ತು ಸೂಪರ್ ಫಾಸ್ಫೇಟ್ @ 50kg/ಎಕರೆಗೆ ಹಾಕಬೇಕು.  ಮಣ್ಣಿನಲ್ಲಿ ಪೊಟ್ಯಾಷ್ ನ  ಕೊರತೆ ಕಂಡುಬಂದಾಗ ಮಾತ್ರ ಪೊಟ್ಯಾಷ್ ಕೊಡಬೇಕು.  

ಕಳೆ ನಿಯಂತ್ರಣ

ಕಳೆಗಳನ್ನು ನಿಯಂತ್ರಿಸಲು ಬಿತ್ತನೆ ಮಾಡಿದ ಮೂವತ್ತು ದಿನಗಳೊಳಗೆ ಎರಡರಿಂದ ಮೂರು ಬಾರಿ ಕೈಕಳೆ ಮಾಡಬೇಕು ಮತ್ತು ಕಳೆಗಳ ತೀವ್ರತೆ ಕಡಿಮೆ ಇರುವಾಗ ಎರಡು ವಾರಗಳ ಮಧ್ಯಂತರದಲ್ಲಿ ಎರಡು ಬಾರಿ ಗುದ್ದಲಿಯಿಂದ ಕಳೆ ತೆಗೆಯಬೇಕು.

ಸಾಸಿವೆ ಬೆಳೆಯಲ್ಲಿ, ಕಳೆಗಳನ್ನು ನಿಯಂತ್ರಿಸಲು, ಪ್ರತಿ ಎಕರೆಗೆ ಟ್ರೈಫ್ಲುರಾಲಿನ್ @ 400ml/200 ಲೀಟರ್  ನೀರಿನಲ್ಲಿ ಬೆರೆಸಿ ಬಿತ್ತುವ ಮುಂಚೆ ಭೂಮಿಗೆ  ಸಿಂಪಡಣೆ ಮಾಡಬೇಕು. 

ನೀರಾವರಿ

ಬೀಜಗಳನ್ನು ಬಿತ್ತುವ ಮೊದಲು – ಹೊಲಕ್ಕೆ ನೀರನ್ನು ಕೊಡಬೇಕು. ಸಾಮಾನ್ಯವಾಗಿ, ಬೆಳೆ ಬಿತ್ತನೆಯ ನಂತರ ಮೂರು ವಾರಗಳ ಮಧ್ಯಂತರದಲ್ಲಿ ನೀರನ್ನು ಕೊಡಬೇಕಾಗುತ್ತದೆ. ಮಣ್ಣಿನಲ್ಲಿ ಉತ್ತಮ ಪ್ರಮಾಣದ ಸಾವಯವ ಗೊಬ್ಬರಗಳನ್ನು ಹಾಕುವುದರಿಂದ, ಮಣ್ಣಿನ ತೇವಾಂಶವನ್ನು ಸಂರಕ್ಷಿಸಲು ಸಹಾಯವಾಗುತ್ತದೆ. 

ಕೀಟಗಳು  ಮತ್ತು ಅವುಗಳ ನಿಯಂತ್ರಣ:

ಗಿಡಹೇನು:

ಇವುಗಳು ರಸ ಹೀರುವ  ಕೀಟಗಳಾಗಿದ್ದು, ಹಾವಳಿ ಕಂಡುಬಂದಲ್ಲಿ ಸಸ್ಯ ಬೆಳೆವಣಿಗೆಯು ಕುಂಠಿತವಾಗುತ್ತದೆ ಮತ್ತು ನಂತರದ ಹಂತದಲ್ಲಿ ಕಾಯಿಗಳು ಕಚ್ಚುವುದಿಲ್ಲ. 

ಹೆಚ್ಚು ಯೂರಿಯ ಬಳಕೆಯನ್ನು ತಪ್ಪಿಸಬೇಕು. ಕೀಟಬಾಧೆ ಕಂಡುಬಂದಲ್ಲಿ, ಥೈಯಾಮಿಥಾಕ್ನೋಸ್   @ 80ಗ್ರಾಂ ಅಥವಾ ಕ್ವಿನಾಲ್ಫಾಸ್ ನಂತಹ ಯಾವುದಾದರೂ ಒಂದು ಕೀಟನಾಶಕವನ್ನು ಎಕರೆಗೆ 100-125 ಮಿಲಿ  ಪ್ರತೀ 15 ಲೀಟರ್ ಸ್ಪ್ರೇ ಟ್ಯಾಂಕಿನಲ್ಲಿ  ಬೆರೆಸಿ  ಸಿಂಪಡಿಸಬೇಕು .

ಎಲೆ ತಿನ್ನುವ ಹುಳು :

ಈ ಹುಳದ ಮರಿಹುಳುಗಳು ಎಳೆಯ ಎಲೆಗಳನ್ನು ತಿನ್ನುತ್ತವೆ  ಮತ್ತು ಅವುಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತವೆ. ಜಮೀನಿನಲ್ಲಿ ಎಲೆ ತಿನ್ನುವ ಹುಳು ಕಂಡುಬಂದಲ್ಲಿ, ಮಲಾಥಿಯಾನ್ 5% @ 15 ಕೆಜಿ / ಎಕರೆ ಅಥವಾ ಡೈಕ್ಲೋರ್ವೋಸ್ @ 200 ಮಿಲಿ / ಎಕರೆಗೆ ಸಿಂಪಡಿಸಬೇಕು. 

ರೋಗಗಳು  ಮತ್ತು ಅವುಗಳ ನಿಯಂತ್ರಣ:

ಬೂಜು ತುಪ್ಪಟ ರೋಗ :

ಎಲೆಗಳ ಕೆಳಭಾಗದಲ್ಲಿ ಮಚ್ಚೆಗಳು ತ್ತು ಬೂದು ನೀಲಿ ಬಣ್ಣ  ಹಾಗೂ ಎಲೆಗಳ ಮೇಲೆ ಹಳದಿ ಚುಕ್ಕೆಗಳನ್ನು ಕಾಣಬಹುದು. 

ನಿರ್ವಹಣೆ : ಬೆಳೆ ಬಿತ್ತನೆಗೆ ಮುಂಚೆ  ಹಿಂದಿನ ಬೆಳೆಗಳ ಅವಶೇಷಗಳನ್ನು ತೆಗೆದುಹಾಕಬೇಕು. ಮೆಲೋಡಿ ಡುಯೊ – ೩-೪ ಗ್ರಾಂ ಅಥವಾ ಆಕ್ರೊಬ್ಯಾಟ್ ಕಂಪ್ಲೀಟ್ – ೪ ಗ್ರಾಂ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ ತೀವ್ರತೆ ಹೆಚ್ಚಿದಲ್ಲಿ ಸಿಂಪಡಣೆಯನ್ನು ಎರಡು ವಾರಗಳಿಗೆ ಒಮ್ಮೆ ಕೈಗೊಳ್ಳಬಹುದು. 

ಕೊಯ್ಲು

ಸಾಸಿವೆಯು ಕೊಯ್ಲಿಗೆ ಬರಲು 110 ರಿಂದ 140 ದಿನಗಳನ್ನು ತೆಗೆದುಕೊಳ್ಳುತ್ತದೆ. ಬೀಜಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಮತ್ತು ಬೀಜಗಳು ಗಟ್ಟಿಯಾದಾಗ ಕೊಯ್ಲು ಮಾಡಬೇಕು. 

ಕೊಯ್ಲು ಮಾಡುವಾಗ ಕಾಳುಗಳು ಸಿಡಿಯುವುದನ್ನು ತಪ್ಪಿಸಲು ಬೆಳಿಗಿನ ಸಮಯದಲ್ಲಿ ಕೊಯ್ಲು ಮಾಡಬೇಕಾಗುತ್ತದೆ.  

ಕುಡಗೋಲಿನ  ಸಹಾಯದಿಂದ, ನೆಲದ ಹತ್ತಿರ ಬೆಳೆಗಳನ್ನು ಕತ್ತರಿಸಬೇಕು,  ನಂತರ ಕೊಯ್ಲು ಮಾಡಿದ ಬೆಳೆಗಳನ್ನು 7-10 ದಿನಗಳವರೆಗೆ ಒಣಗಿಸಿ  ಒಕ್ಕಣೆ ಮಾಡಬೇಕು. 

ಶುಚಿಗೊಳಿಸಿದ ಬೀಜವನ್ನು 4-5 ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಬೇಕು ಮತ್ತು  ತೇವಾಂಶವು 8 ಪ್ರತಿಶತಕ್ಕೆ ಬಂದ  ನಂತರ  ಬೀಜಗಳನ್ನು ಗೋಣಿ ಚೀಲಗಳಲ್ಲಿ ಸಂಗ್ರಹಿಸಿಡಬೇಕು. 

 

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು