ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ ನಷ್ಟವನ್ನು ಉಂಟುಮಾಡುತ್ತದೆ. ಇದು 80 ಕ್ಕೂ ಹೆಚ್ಚು ವಿವಿಧ ಜಾತಿಯ ಬೆಳೆಗಳನ್ನು ದಾಳಿ ಮಾಡುವ ಗಂಭೀರ ಕೀಟವೆಂದು ಪರಿಗಣಿಸಲಾಗಿದೆ. ಮೆಕ್ಕೆಜೋಳ ಬೆಳೆಯ ನಂತರ ಜೋಳದ ಬೆಳೆ ಸೈನಿಕ ಹುಳುಗಳಿಂದ ಹೆಚ್ಚು ಹಾನಿಗೊಳಗಾದ ಬೆಳೆಯಾಗಿದೆ.ಹಾಗಾಗಿ, ಇದನ್ನು ಸಕಾಲದಲ್ಲಿ ಹತೋಟಿಯಲ್ಲಿಡದಿದ್ದರೆ ಬೆಳೆ ಇಳುವರಿಯಲ್ಲಿ ದೊಡ್ಡ ಮೊತ್ತದ ನಷ್ಟವಾಗುವುದಂತೂ ಖಂಡಿತ. ಈ ಲೇಖನದಲ್ಲಿ, ನಾವು ಜೋಳದ ಬೆಳೆಯಲ್ಲಿ ಸೈನಿಕ ಹುಳುಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲು ಸಮಗ್ರ ಕೀಟ ನಿರ್ವಹಣೆಯ ವಿವಿಧ ವಿಧಾನಗಳನ್ನು ಅನ್ವೇಷಿಸೋಣ.
ಸೈನಿಕ ಹುಳುವಿನ ಜೀವನ ಚಕ್ರವು ನಾಲ್ಕು ಹಂತಗಳನ್ನು ಒಳಗೊಂಡಿದೆ: ಮೊಟ್ಟೆ, ಮರಿಹುಳು, ಪ್ಯೂಪಾ ಮತ್ತು ವಯಸ್ಕ/ಪ್ರೌಢಾವ್ಯಸ್ಥೆ. ಮರಿಹುಳುಗಳ ಹಂತವು ಕೀಟದ ಅತ್ಯಂತ ಹಾನಿಕಾರಕ ಹಂತವಾಗಿದೆ. ಆರಂಭಿಕ ಹಂತದಲ್ಲಿ ಮರಿಹುಳುಗಳು ಹಸಿರು ಬಣ್ಣವನ್ನು ಹೊಂದಿರುತ್ತವೆ, ನಂತರ ಬೆಳೆವಣಿಗೆಯಾದಂತೆ ಕಂದು ಬಣ್ಣಕ್ಕೆ ಬದಲಾಗುತ್ತವೆ & ದೇಹದ ಮೇಲೆ ಉದ್ದವಾದ ಪಟ್ಟೆಗಳು ಸಹ ಉಂಟಾಗುತ್ತವೆ. ಹುಳುವಿನ ಮುಖದ ಮೇಲೆ ತಲೆಕೆಳಗಾದ “Y” ಆಕಾರದ ಗುರುತನ್ನು ಸಹ ಕಾಣಬಹುದು. ತಂಪಾದ, ತೇವಾಂಶವುಳ್ಳ ಮತ್ತು ವಸಂತ ಹವಾಮಾನವು ಸೈನಿಕ ಹುಳುಗಳ ಬೆಳವಣಿಗೆಗೆ ಹೆಚ್ಚು ಅನುಕೂಲಕರ.
ಹುಳುಗಳ ದಾಳಿಯ ವಿಧ
ಜೋಳದ ಬೆಳೆಯಲ್ಲಿ ಸೈನಿಕ ಹುಳುಗಳ ಬಾಧೆಯನ್ನು ಎರಡು ವಿಧಗಳಾಗಿ ವಿಂಗಡಿಸಬಹುದು: ಆಕಸ್ಮಿಕ ಮತ್ತು ಸಾಂಕ್ರಾಮಿಕ. ಈ ಹುಳುಗಳ ಆಕಸ್ಮಿಕ ದಾಳಿ ಪ್ರತ್ಯೇಕ ಪ್ರದೇಶಗಳಲ್ಲಿ ಸಂಭವಿಸುತ್ತವೆ ಮತ್ತು ಸಾಮಾನ್ಯವಾಗಿ ವ್ಯಾಪಕವಾಗಿರುವುದಿಲ್ಲ. ಮತ್ತೊಂದೆಡೆ, ಸಾಂಕ್ರಾಮಿಕ ದಾಳಿ ವ್ಯಾಪಕವಾಗಿ ಹರಡುತ್ತದೆ ಮತ್ತು ಸಸ್ಯದ ಎಲ್ಲಾ ಭಾಗಗಳನ್ನು ತಿನ್ನುವ ಮೂಲಕ ಬೆಳೆಗೆ ಗಮನಾರ್ಹ ಹಾನಿಯನ್ನು ಉಂಟುಮಾಡುತ್ತದೆ.
ವೈಜ್ಞಾನಿಕ ಹೆಸರು: ಸ್ಪೋಡೋಪ್ಟೆರಾ ಫ್ರುಗಿಪರ್ಡ
ಭಾರತದಲ್ಲಿ ಸೈನಿಕ ಹುಳುಗಳಿಂದ ಹೆಚ್ಚು ಬಾಧಿತ ರಾಜ್ಯಗಳು
ಈ ಹುಳುಗಳು ದೇಶದಾದ್ಯಂತ ತನ್ನ ಹಾವಳಿಯನ್ನು ತೋರುತ್ತವೆ, ಆದರೆ ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು ಹೆಚ್ಚು ಬಾಧಿತವಾಗಿವೆ.
ದಾಳಿಯ ಲಕ್ಷಣಗಳು
ಸೈನಿಕ ಹುಳುಗಳ ದಾಳಿಯ ಲಕ್ಷಣಗಳು ಕೆಳಕಂಡಂತಿವೆ
- ತೆಳುವಾದ ಅರೆಪಾರದರ್ಶಕ: ಆರಂಭಿಕ ಹಂತದಲ್ಲಿ ಮರಿಹುಳುಗಳು ಎಲೆಯ ಅಂಗಾಂಶಗಳನ್ನು ತಿಂದು, ಅಂಗಾಂಶದ ತೆಳುವಾದ ಅರೆಪಾರದರ್ಶಕ ಪದರವನ್ನು ಮಾತ್ರ ಹಾಗೇ ಬಿಡುತ್ತವೆ, ಇದನ್ನು ವಿಂಡೋ ಫೀಡಿಂಗ್ ಎಂದು ಕರೆಯಲಾಗುತ್ತದೆ.
- ಮರಿಹುಳುಗಳ ಬೆಳೆವಣಿಗೆಯಾದಂತೆ ಅವುಗಳು ಎಲೆಗಳ ಅಂಚಿನಿಂದ ತಿನ್ನಲು ಪ್ರಾರಂಭಿಸುತ್ತವೆ ಮತ್ತು ಎಲೆಗಳ ಮೇಲೆ ವೃತ್ತಾಕಾರ ಅಥವಾ ಆಯತಾಕಾರದ ರಂಧ್ರಗಳನ್ನು ಮಾಡುತ್ತವೆ.
- ಮರಿಹುಳುಗಳು ಅವುಗಳ ಲದ್ದಿಯನ್ನು ಹೊರಹಾಕುತ್ತವೆ, ಇದು ಎಲೆಗಳ ಮೇಲೆ ಸಂಗ್ರಹವಾಗುತ್ತವೆ.
- ಇವುಗಳ ಹಾವಳಿ ತೀವ್ರವಾದರೆ ಎಲೆಗಳು ಉದುರುತ್ತವೆ.
- ಇವು ಸಸ್ಯದ ತೆನೆಯ ಭಾಗಗಳನ್ನು ಸಹ ಹಾನಿಗೊಳಿಸುತ್ತವೆ.
ನಿಯಂತ್ರಣ ಕ್ರಮಗಳು
ವಿವಿಧ ನಿಯಂತ್ರಣ ಕ್ರಮಗಳ ಸಂಯೋಜನೆಯು ಜೋಳದ ಬೆಳೆಯನ್ನು ಸೈನಿಕ ಹುಳುಗಳಿಂದ ಕಾಪಾಡಲು ಪರಿಣಾಮಕಾರಿಯಾಗಿವೆ.ಸೈನಿಕ ಹುಳುಗಳನ್ನು ನಿಯಂತ್ರಿಸಲು ಸಾಮಾನ್ಯವಾಗಿ ಬಳಸುವ ಕೆಲವು ಸಮಗ್ರ ಕೀಟ ನಿರ್ವಹಣೆಯ ಅಭ್ಯಾಸಗಳ ಬಗ್ಗೆ ತಿಳಿಯೋಣ.
ಸಾಂಸ್ಕೃತಿಕ ಪದ್ಧತಿಗಳು
- ಸೈನಿಕ ಹುಳುಗಳ ಮರಿಹುಳುಗಳು ಮತ್ತು ಪ್ಯೂಪಾಗಳು ಮಣ್ಣಿನಲ್ಲಿ ನೆಲೆಗೊಂಡಿರುತ್ತವೆ. ಹಾಗಾಗಿ, ಬೇಸಿಗೆ ಸಮಯದಲ್ಲಿ ಹೊಲಗಳಲ್ಲಿ ಆಳವಾದ ಉಳುಮೆ ಮಾಡುವುದರಿಂದ ಅಧಿಕ ತಾಪಮಾನದಿಂದ ಅವು ಸಾಯುತ್ತವೆ ಅಥವಾ ಪಕ್ಷಿಗಳು ಅವುಗಳನ್ನು ತಿಂದುಬಿಡುತ್ತವೆ.
- ಆತಿಥೇಯವಲ್ಲದ ಬೆಳೆಗಳೊಂದಿಗೆ ಬೆಳೆ ಸರದಿಯನ್ನು ಅನುಸರಿಸುವುದರಿಂದ ಸೈನಿಕ ಹುಳುಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು.
- ಬಿತ್ತನೆಯನ್ನು ಬೇಗ ಮಾಡುವುದರಿಂದ ಸಹ ಹುಳುಗಳ ಹಾವಳಿಯನ್ನು ತಪ್ಪಿಸಬಹುದು.
- ಕಳೆಗಳು ಮತ್ತು ಬೆಳೆ ಉಳಿಕೆಗಳನ್ನು ತೆಗೆದುಹಾಕುವುದರಿಂದ ಹುಳುಗಳ ದಾಳಿಯನ್ನು ಕಡಿಮೆ ಮಾಡಬಹುದು.
- ತ್ವರಿತವಾಗಿ ಕೊಯ್ಲು ಮಾಡುವುದರಿಂದ ಹಾನಿಯನ್ನು ತಪ್ಪಿಸಬಹುದು.
- ಬೆಳೆಗೆ ಸಮತೋಲಿತ ರಸಗೊಬ್ಬರಗಳು ಮತ್ತು ನೀರಾವರಿ ಸೇರಿದಂತೆ ಸರಿಯಾದ ಪೋಷಣೆ ಒದಗಿಸದ್ದಲ್ಲಿ ಸಹ ಸೈನಿಕ ಹುಳುಗಳ ದಾಳಿಗೆ ಜೋಳದ ಬೆಳೆ ತುತ್ತಾಗುವುದನ್ನು ಕಡಿಮೆ ಮಾಡಬಹುದು.
ಭೌತಿಕ ಪದ್ಧತಿ
ವಯಸ್ಕ/ಪ್ರೌಢಾವ್ಯಸ್ಧೆಯಲ್ಲಿರುವ ಸೈನಿಕ ಹುಳುಗಳನ್ನು ಆಕರ್ಷಿಸಿ ಕೊಲ್ಲಲು ಬೆಳಕಿನ ಬಲೆಗಳು/ಲೈಟ್ ಟ್ರ್ಯಾಪ್ ಗಳು ಪ್ರಮುಖ ಪಾತ್ರವಹಿಸುತ್ತವೆ. ಪ್ರತಿ ಎಕರೆಗೆ ಒಂದರಂತೆ ಜೋಳದ ಹೊಲದಲ್ಲಿ ಫಾರ್ಮೊಗಾರ್ಡ್ ಸೋಲಾರ್ ಲೈಟ್ ಟ್ರ್ಯಾಪ್ ಅನ್ನು ಅಳವಡಿಸಿ.
ಯಾಂತ್ರಿಕ ಪದ್ದತಿಗಳು
- ಮೊಟ್ಟೆಗಳನ್ನು ಮತ್ತು ಮರಿಹುಳುಗಳನ್ನು ಕೈಗಳಿಂದ ತೆಗೆದು ನಾಶಮಾಡುವುದು ಅಥವಾ ಅವುಗಳನ್ನು ಸೀಮೆಎಣ್ಣೆಯಲ್ಲಿ ಮುಳುಗಿಸಿ ಕೈಯಿಂದ ಆರಿಸಿ, ನಾಶಮಾಡುವುದು.
- ಜಮೀನಿನಲ್ಲಿ ಸೈನಿಕ ಹುಳುಗಳ ದಾಳಿಯ ಲಕ್ಷಣಗಳು ಪತ್ತೆಯಾದ ನಂತರ, ಪೀಡಿತ ಜೋಳದ ಸಸ್ಯ ಸುರುಳಿಗೆ ಒಣ ಮರಳನ್ನು ಹಾಕಬೇಕು
- ತಪಸ್ ಫಾಲ್ ಆರ್ಮಿವರ್ಮ್ (FAW) ಲ್ಯೂರ್ ಅನ್ನು ಬಳಸಿ , ಹುಳುಗಳನ್ನು ಬಲೆಗೆ ಬೀಳಿಸಿ ಕೊಲ್ಲಬಹುದು. ಪ್ರತಿ ಹೆಕ್ಟೇರ್‌ಗೆ 15 ರಂತೆ ಫನಲ್ ಟ್ರ್ಯಾಪ್ ನಲ್ಲಿ ತಪಸ್ ಫಾಲ್ ಆರ್ಮಿವರ್ಮ್ ಲ್ಯೂರ್ ಅನ್ನು ಹಾಕಿ ಅಳವಡಿಸಿ
ಜೈವಿಕ ಪದ್ದತಿಗಳು
- ಜೈವಿಕ ಹುಳುಗಳ ಸಂಖ್ಯೆಯನ್ನು ಕಡಿಮೆ ಮಾಡಲು ವಾರದ ಅಂತರದಲ್ಲಿ ಪ್ರತಿ ಎಕರೆಗೆ 50,000 ಪ್ರಮಾಣದಲ್ಲಿ ಟ್ರೈಕೊಗ್ರಾಮಾ ಪ್ರಿಟಿಯೊಸಮ್ ಅಥವಾ ಟೆಲಿನೋಮಸ್ ರೆಮಸ್‌ನಂತಹ ಮೊಟ್ಟೆಯ ಪರಾವಲಂಬಿಗಳನ್ನು ಬಿಡುಗಡೆ ಮಾಡಿ.
- ಹುಳುಗಳನ್ನು ತಿನ್ನುವ ಪಕ್ಷಿಗಳನ್ನು ಪ್ರೋತ್ಸಾಹಿಸಲು ಪಕ್ಷಿ ನೆಲೆಗಳನ್ನು ನಿರ್ಮಿಸಿ.
- ಅಜಾಡಿರಕ್ಟಿನ್ ಅನ್ನು ಹೊಂದಿರುವ ಎಕೊನೀಮ್ ಪ್ಲಸ್ ಜೈವಿಕ ಕೀಟನಾಶಕವನ್ನು ಪ್ರತಿ ಲೀಟರ್‌ಗೆ 3 ಮಿಲಿ ಪ್ರಮಾಣದಲ್ಲಿ ಅಂಡಾಣು ನಿರೋಧಕವಾಗಿ ಬಿತ್ತನೆ ಮಾಡಿದ ಒಂದು ವಾರದಲ್ಲಿ ಬಳಸಿ
- ಕಾತ್ಯಾಯನಿ ಸಾವಯವ ಲಾರ್ವಿಸೈಡ್, ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಅನ್ನು ಹೊಂದಿರುತ್ತದೆ. ಇದು ಕೀಟಗಳ ಜೀರ್ಣಾಂಗ ವ್ಯವಸ್ಥೆಯನ್ನು ನಿರ್ಬಂಧಿಸುವ ಪ್ರೋಟೀನ್ ಅನ್ನು ಉತ್ಪಾದಿಸುತ್ತದೆ ಮತ್ತು ಅವುಗಳನ್ನು ಕೊಲ್ಲುತ್ತದೆ. ಶಿಫಾರಸು ಮಾಡಲಾದ ಬಳಕೆಯ ಪ್ರಮಾಣ ಪ್ರತಿ ಲೀಟರ್ ನೀರಿಗೆ 10 ಮಿಲಿ.
- ಆನಂದ್ ಡಾ. ಬ್ಯಾಕ್ಟೋಸ್ ಬ್ರೇವ್ ಒಂದು ಪರಿಸರ ಸ್ನೇಹಿ ಜೈವಿಕ ಕೀಟನಾಶಕವಾಗಿದ್ದು, ಬ್ಯವೇರಿಯಾ ಬಾಸ್ಸಿಯಾನಾವನ್ನು ಹೊಂದಿದ್ದು, ಸೈನಿಕ ಹುಳುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ಶಿಫಾರಸು ಮಾಡಲಾದ ಬಳಕೆಯ ಪ್ರಮಾಣ ಪ್ರತಿ ಲೀಟರ್ ನೀರಿಗೆ 2.5 ಮಿಲಿ.
ರಾಸಾಯನಿಕ ಪದ್ದತಿಗಳು
ಜೋಳದ ಬೆಳೆಯಲ್ಲಿ ಸೈನಿಕ ಹುಳುಗಳ ರಾಸಾಯನಿಕ ನಿಯಂತ್ರಣಕ್ಕೆ ಕೆಲವು ಪರಿಣಾಮಕಾರಿ ಕೀಟನಾಶಕಗಳ ಬಗ್ಗೆ ತಿಳಿಯೋಣ
ಉತ್ಪನ್ನದ ಹೆಸರು | ತಾಂತ್ರಿಕ ಅಂಶ/ ಸಕ್ರಿಯ ಘಟಕ | ಬಳಕೆಯ ಪ್ರಮಾಣ |
ಕೊರಾಜೆನ್ ಕೀಟನಾಶಕ | ಕ್ಲೋರಂಟ್ರಾನಿಲಿಪ್ರೋಲ್ 18.5% SC | 0.4 ಮಿಲಿ / ಲೀಟರ್ ನೀರಿಗೆ |
ಡೆಲಿಗೇಟ್ ಕೀಟನಾಶಕ | ಸ್ಪೈನೆಟೋರಾಮ್ 11.7% SC | 0.9 ಮಿಲಿ / ಲೀಟರ್ ನೀರಿಗೆ |
EM 1 ಕೀಟನಾಶಕ | ಎಮಾಮೆಕ್ಟಿನ್ ಬೆಂಜೊಯೇಟ್ 5% SG | 0.4 – 0.5 ಗ್ರಾಂ / ಲೀಟರ್ ನೀರಿಗೆ |
ಗ್ರೀನೋವೇಟ್ ಮಾಹೆರು ಕೀಟನಾಶಕ | ಲ್ಯಾಂಬ್ಡಾ ಸೈಹಲೋಥ್ರಿನ್ 9.5% + ಥಯಾಮೆಥಾಕ್ಸಮ್ 12.6% ZC | 0.5 ಮಿಲಿ / ಲೀಟರ್ ನೀರಿಗೆ |
ಸ್ಟಾರ್ ಕ್ಲೈಮ್ ಕೀಟನಾಶಕ | ಎಮಾಮೆಕ್ಟಿನ್ ಬೆಂಜೊಯೇಟ್ 5% SG | 0.5 ಗ್ರಾಂ / ಲೀಟರ್ ನೀರಿಗೆ |
ಪ್ಲೆಥೋರಾ ಕೀಟನಾಶಕ | ನೊವಲೂರನ್ 5.25% + ಇಂಡಕ್ಸಕಾರ್ಬ್ 4.5% w/w SC | 2 ಮಿಲಿ / ಲೀಟರ್ ನೀರಿಗೆ |
ಆಂಪ್ಲಿಗೊ ಕೀಟನಾಶಕ | ಕ್ಲೋರಂಟ್ರಾನಿಲಿಪ್ರೋಲ್ 10 % + ಲ್ಯಾಂಬ್ಡಾಸೈಹಲೋಥ್ರಿನ್ 5% ZC | 0.4 – 0.5 ಮಿಲಿ / ಲೀಟರ್ ನೀರಿಗೆ |
ಗಮನಿಸಿ: ಹುಳುಗಳ ಪಾಷಾಣವು, ವಯಸ್ಕ ಮರಿಹುಳುಗಳನ್ನು ಪರಿಣಾಮಕಾರಿಯಾಗಿ ಕೊಲ್ಲುತ್ತದೆ. ಪಾಷಾಣವನ್ನು ತಯಾರಿಸಲು, 10 ಕೆಜಿ ಅಕ್ಕಿ ಹೊಟ್ಟು ಮತ್ತು 2 ಕೆಜಿ ಬೆಲ್ಲದ ಮಿಶ್ರಣವನ್ನು 2-3 ಲೀಟರ್ ನೀರಿನಲ್ಲಿ 24 ಗಂಟೆಗಳ ಕಾಲ ನೆನೆಯಲು ಬಿಡಬೇಕು. ಹೊಲದಲ್ಲಿ ಬಳಸುವ ಅರ್ಧ ಗಂಟೆ ಮೊದಲು, 100 ಗ್ರಾಂ ಥಿಯೋಡಿಕಾರ್ಬ್ಅನ್ನು ಪಾಷಾಣದ ಮಿಶ್ರಣಕ್ಕೆ ಸೇರಿಸಬೇಕು. ನಂತರ ಪಾಷಾಣವನ್ನು ಸಸ್ಯಗಳ ಸುರುಳಿಯಲ್ಲಿ ಇಡಬೇಕು.