HomeCropಹತ್ತಿಯಲ್ಲಿ ಕೀಟಗಳ ನಿರ್ವಹಣೆ

ಹತ್ತಿಯಲ್ಲಿ ಕೀಟಗಳ ನಿರ್ವಹಣೆ

ಕೃಷಿ ಮಾಡಬಹುದಾದ ಹತ್ತಿ ಬೆಳೆಯ ತಳಿಗಳು ಗಾಸಿಪಿಯಮ್ ಅರ್ಬೋರಿಯಮ್, ಗಾಸಿಪಿಯಮ್ ಹರ್ಬೇಸಿಯಂ, ಗಾಸಿಪಿಯಮ್ ಹಿರ್ಸುಟಮ್, ಗಾಸಿಪಿಯಮ್ ಬಾರ್ಬಡೆನ್ಸ್

ಹತ್ತಿಯು ಭಾರತದ ಪ್ರಮುಖ ನಗದು ಮತ್ತು ನಾರಿನ ಬೆಳೆಗಳಲ್ಲಿ ಒಂದಾಗಿದೆ.  ಹತ್ತಿಯು ದೇಶದ ಕೃಷಿ ಮತ್ತು ಕೈಗಾರಿಕಾ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರ ಆರ್ಥಿಕ ಪ್ರಾಮುಖ್ಯತೆಯಿಂದಾಗಿ, ಇದನ್ನು ಸಾಮಾನ್ಯವಾಗಿ “ಬಿಳಿ ಬಂಗಾರ” ಎಂದು ಕರೆಯಲಾಗುತ್ತದೆ. ಸುಮಾರು 120.55 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯುವ ಮೂಲಕ ಭಾರತವು ವಿಶ್ವದಲ್ಲಿ ಸ್ಥಾನದಲ್ಲಿದೆ. 

ವಿಶ್ವದ ಅತಿ ಹೆಚ್ಚು ಹತ್ತಿ ಉತ್ಪಾದಿಸುವ ದೇಶ ಚೀನಾ, ನಂತರದ ಸ್ಥಾನದಲ್ಲಿ ಭಾರತ ಮತ್ತು ಅಮೇರಿಕಾ  ದೇಶಗಳು ಇವೆ. ಭಾರತವು ಸುಮಾರು 5.34 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಹತ್ತಿಯನ್ನು  ಉತ್ಪಾದಿಸುತ್ತದೆ, ಇದು 2021 – 22 ರಲ್ಲಿ ವಿಶ್ವದ ಹತ್ತಿ ಉತ್ಪಾದನೆಯ 21% ರಷ್ಟಿದೆ. ಭಾರತವು ಸುಮಾರು 0.68 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ರಫ್ತು ಮಾಡುತ್ತದೆ ಅಂದರೆ, 2021 – 22 ರಲ್ಲಿ ವಿಶ್ವ ರಫ್ತಿನ 7%. ಹತ್ತಿಯನ್ನು ವ್ಯಾಪಕವಾಗಿ ಉತ್ಪಾದಿಸಲು ಬಳಸಲಾಗುತ್ತದೆ. ಹತ್ತಿ ಉದ್ಯಮವು ಭಾರತದಲ್ಲಿ ಕೃಷಿ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.

ಹತ್ತಿ ಬೆಳೆಯಲ್ಲಿ ಕಾಣಬರುವ ಕೀಟಗಳು ಬೆಳೆಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತವೆ, ಇದು ಕಡಿಮೆ ಇಳುವರಿ ಮತ್ತು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ರಸ ಹೀರುವ ಕೀಟಗಳು, ಎಲೆ ತಿನ್ನುವ ಹುಳಗಳು ಮತ್ತು ಕೊರಕಗಳು  ಹತ್ತಿ ಬೆಳೆಗಳಿಗೆ ಗಂಭೀರ ಹಾನಿಯನ್ನುಂಟುಮಾಡುತ್ತವೆ, ಇದನ್ನು ಸರಿಯಾದ ಸಮಯದಲ್ಲಿ ನಿರ್ವಹಿಸದಿದ್ದರೆ 40 – 50% ನಷ್ಟು ಬೆಳೆ ನಷ್ಟಕ್ಕೆ ಕಾರಣವಾಗುತ್ತದೆ.

ಹತ್ತಿ ಬೆಳೆಯಲ್ಲಿ ಕಾಣಬರುವ ಕೀಟಗಳು

  1. ಕಾಯಿ ಕೊರಕ :

  • ವೈಜ್ಞಾನಿಕ ಹೆಸರು: ಹೆಲಿಕೋವರ್ಪಾ ಆರ್ಮಿಜೆರಾ
  • ಕೀಟದ ಹಾನಿ ಹಂತ: ಮರಿ ಹುಳುವಾಗಿದ್ದಾಗ (ಲಾರ್ವಾಗಳಾಗಿದ್ದಾಗ)
  • ಸಂಭವಿಸುವ ಹಂತ: ಎಲ್ಲಾ ಹಂತಗಳು

ಹತ್ತಿಯಲ್ಲಿ ಕಾಯಿ ಕೊರಕದ  ಲಕ್ಷಣಗಳು:

  • ಹುಳುಗಳು  ಎಲೆ, ಹೂವು  ಮತ್ತು ಸಣ್ಣ ಕಾಯಿಗಳನ್ನು ತಿನ್ನುತ್ತವೆ
  • ಹುಳುಗಳು  ಆರಂಭದಲ್ಲಿ ಎಲೆಗಳನ್ನು ತಿನ್ನುತ್ತವೆ ಮತ್ತು ನಂತರ ತಮ್ಮ ತಲೆಯನ್ನು ಮಾತ್ರ ಕಾಯಿಯೊಳಗೆ ತಳ್ಳುತ್ತದೆ ಮತ್ತು ದೇಹದ ಉಳಿದ ಭಾಗವನ್ನು ಹೊರಗೆ ಕಾಣಿಸುವ ರೀತಿ ಇರುತ್ತವೆ, ಹೀಗೆ ಮಾಡುವುದರಿಂದ ಕಾಯಿಯನ್ನು ಕೊರೆಯುತ್ತವೆ.
  • ಸೋಂಕಿತ ಕಾಯಿಗಳ ತಳದಲ್ಲಿ ದೊಡ್ಡದಾದ, ವೃತ್ತಾಕಾರದ ರಂಧ್ರಗಳನ್ನು ಕಾಣಬಹುದು ಮತ್ತು ರಂಧ್ರದ ಹೊರಗೆ ಕೊರಕವು ಹಾಕಿರುವ ಹಿಕ್ಕೆಗಳನ್ನು ಕಾಣಬಹುದು . 
  • ಒಂದು ಹುಳು  30 – 40 ಕಾಯಿಗಳನ್ನು  ಹಾನಿಗೊಳಿಸಬಹುದು
  • ಸೋಂಕಿತ ಕಾಯಿಗಳು ಉದುರುತ್ತವೆ. 

ಹತ್ತಿಯಲ್ಲಿ ಕಾಯಿಕೊರಕಕ್ಕೆ ಅನುಕೂಲಕರ ಪರಿಸ್ಥಿತಿಗಳು:

  • ಒಂದೇ ರೀತಿಯ  ಬೆಳೆ, ಏಕಬೆಳೆ ಪದ್ಧತಿ, ಹಳೇ ಬೆಳೆಗಳ ಅವಶೇಷಗಳು ಭೂಮಿಯಲ್ಲಿರುವುದು, ಸಾರಜನಕಯುಕ್ತ ಗೊಬ್ಬರಗಳ ಅತಿಯಾದ ಬಳಕೆ : ಇವು ಕಾಯಿ ಕೊರಕದ ಹಾವಳಿಗೆ ಅನುಕೂಲಕರವಾದ ಕೆಲವು ಪರಿಸ್ಥಿತಿಗಳು.

ಆರ್ಥಿಕ ಮಿತಿ : ಪ್ರತಿ ಗಿಡಕ್ಕೆ 1 ಮೊಟ್ಟೆ ಅಥವಾ 1 ಹುಳು 

ಹತ್ತಿಯಲ್ಲಿ ಕಾಯಿ ಕೊರಕದ  ನಿರ್ವಹಣೆ:

ಉತ್ಪನ್ನದ ಹೆಸರು  ತಾಂತ್ರಿಕ ಅಂಶ  ಬಳಕೆಯ ಪ್ರಮಾಣ (ಪ್ರತೀ ಒಂದು ಲೀಟರ್ ನೀರಿಗೆ)
ಯಾಂತ್ರಿಕ ನಿರ್ವಹಣೆ
ತಪಸ್ ಹೆಲಿಕೋ – ಹತ್ತಿ ಕಾಯಿ ಕೊರಕ (ಹೆಲಿಯೊ-ಒ-ಆಮಿಷ)  ಫೆರೋಮೋನ್ ಲೂರ್ ಫನಲ್ ಟ್ರ್ಯಾಪ್ ನೊಂದಿಗೆ  – ಪ್ರತಿ ಎಕರೆಗೆ 6
ಜೈವಿಕ ನಿರ್ವಹಣೆ 
ಸನ್ ಬಯೋ ಹ್ಯಾನ್‌ಪಿವಿ ನ್ಯೂಕ್ಲಿಯರ್ ಪಾಲಿಹೈಡ್ರೋಸಿಸ್ ವೈರಸ್ 1 x 109 ಪಿಒಬಿ (ಪಾಲಿಹೆಡ್ರಲ್ ಆಕ್ಲೂಡೆಡ್ ಬಾಡೀಸ್) 1 ಮಿಲಿ/ಲೀಟರ್ ನೀರಿಗೆ 
ವೇದಜ್ಞಾ ನೋಬೋರ್ (ಜೈವಿಕ  ಕೀಟನಾಶಕ) ನೈಸರ್ಗಿಕ ಸಾರಗಳು  2.5 ರಿಂದ 3 ಮಿಲಿ / ಲೀಟರ್ ನೀರಿಗೆ 
ಡೆಲ್ಫಿನ್ ಕೀಟನಾಶಕ ಬ್ಯಾಸಿಲಸ್ ತುರಿಂಜಿಯೆನ್ಸಿಸ್ (ಕುರ್ಸ್ತಾಕಿ) 1 ಗ್ರಾಂ/ಲೀಟರ್ ನೀರಿಗೆ 
ಕಂಟ್ರೋಲ್ ಟಿ ಆರ್ ಎಂ ಜೈವಿಕ ಕೀಟನಾಶಕ  ಸಾವಯವ ಜೈವಿಕ ಸಾರಗಳ ಮಿಶ್ರಣ  2 ಮಿಲಿ / ಲೀಟರ್ ನೀರಿಗೆ 
ರಾಸಾಯನಿಕ ನಿರ್ವಹಣೆ 
ಬೆನೆವಿಯಾ ಕೀಟನಾಶಕ ಸೈಂಟ್ರಾನಿಲಿಪ್ರೋಲ್ 10.26% ಓಡಿ 1.5 ಮಿಲಿ/ಲೀಟರ್ ನೀರಿಗೆ 
ಸಿಗ್ನಾ ಕೀಟನಾಶಕ ಲುಫೆನ್ಯುರಾನ್ 5.4 % ಇಸಿ 2 ಮಿಲಿ/ಲೀಟರ್ ನೀರಿಗೆ 
ಸ್ಟಾರ್ ಕ್ಲೇಮ್ ಕೀಟನಾಶಕ ಎಮಾಮೆಕ್ಟಿನ್ ಬೆಂಜೊಯೇಟ್ 5% SG 0.5 ಗ್ರಾಂ/ಲೀಟರ್ ನೀರು
ಡೆಲಿಗೇಟ್  ಕೀಟನಾಶಕ ಸ್ಪಿನೆಟೋರಾಮ್ 11.7% SC 0.9 – 1 ಮಿಲಿ/ಲೀಟರ್ ನೀರಿಗೆ 
ಪ್ಲೆಥೋರಾ ಕೀಟನಾಶಕ ನೊವಾಲುರಾನ್ 5.25% + ಇಂಡೋಕ್ಸಾಕಾರ್ಬ್ 4.5% SC 2 ಮಿಲಿ/ಲೀಟರ್ ನೀರಿಗೆ 
ರಿಮೋನ್ ಕೀಟನಾಶಕ ನೊವಾಲುರಾನ್ 10% ಇಸಿ 2 ಮಿಲಿ/ಲೀಟರ್ ನೀರಿಗೆ 
ಫ್ಲೂಟಾನ್ ಕೀಟನಾಶಕ ಫ್ಲುಬೆಂಡಿಯಾಮೈಡ್ 20% WG 0.5 ಗ್ರಾಂ/ಲೀಟರ್ ನೀರಿಗೆ 
ವೆಸ್ಟಿಕೋರ್ ಕೀಟನಾಶಕ ಕ್ಲೋರಂಟ್ರಾನಿಲಿಪ್ರೋಲ್ 18.5 % SC 0.3 ಮಿಲಿ/ಲೀಟರ್ ನೀರಿಗೆ 

 

  1. ಹತ್ತಿಯಲ್ಲಿ ಗುಲಾಬಿ ಕಾಯಿ ಕೊರಕ :

  • ವೈಜ್ಞಾನಿಕ ಹೆಸರು: ಪೆಕ್ಟಿನೊಫೊರೊ ಗಾಸಿಪಿಯೆಲ್ಲಾ
  • ಕೀಟದ ಹಾನಿ ಹಂತ: ಹುಳು 
  • ಸಂಭವಿಸುವ ಹಂತ: ಬೆಳೆ ಮಧ್ಯದ ಹಂತದಿಂದ ಕೊನೆಯ ಹಂತದವರೆಗೆ

ಹತ್ತಿಯಲ್ಲಿ ಗುಲಾಬಿ ಕಾಯಿ ಕೊರಕದ  ಲಕ್ಷಣಗಳು:

  • ಹುಳುಗಳು ಹೂವು,  ಮೊಗ್ಗು, ಮತ್ತು ಹತ್ತಿ ಕಾಯಿಗಳನ್ನು ಕೊರೆದು  ತಿನ್ನುತ್ತವೆ
  • ಗುಲಾಬಿ ಕೊರಕದ  ದಾಳಿಯ ವಿಶಿಷ್ಟ ಲಕ್ಷಣವೆಂದರೆ “ರೋಸೆಟೆಡ್ ಹೂಗಳು” ಅಂದರೆ ಹೂವುಗಳು ಗೊಂಚಲುಗಳಂತಾಗುತ್ತವೆ. 
  • ಕೊರಕಗಳು  ಹೂವಿನ ಭಾಗಗಳನ್ನು ತಿನ್ನುತ್ತವೆ ಮತ್ತು ಬಾಧಿತ ಹೂವುಗಳು ಅರಳುವುದಿಲ್ಲ ಹಾಗೂ ಉದುರುತ್ತವೆ.   
  • ಕೊರಕದಿಂದಾದ ರಂಧ್ರಗಳು ಕಾಯಿಗಳ  ಒಳಗೆ ಆಹಾರವನ್ನು ಪಡೆದು ಮತ್ತು ಹುಳುಗಳು ಅವುಗಳ ಹಿಕ್ಕೆಗಳಿಂದ  ಮುಚ್ಚಲಾಗುತ್ತದೆ. 
  • ಇದು ಹತ್ತಿಯ ನಾರಿನ  ಮೂಲಕ ಕಾಯಿಯನ್ನು  ಕೊರೆಯುತ್ತದೆ ಮತ್ತು ಹತ್ತಿ ಬೀಜಗಳನ್ನು ತಿನ್ನುತ್ತದೆ
  • ಸೋಂಕಿತ ಮೊಗ್ಗುಗಳು ಮತ್ತು ಬಲಿಯದ ಕಾಯಿಗಳು ಉದುರುತ್ತವೆ 
  • ಕಾಯಿಗಳು  ಉದುರುತ್ತವೆ  ಮತ್ತು ಹತ್ತಿಯ ನಾರು ತಿಳಿ ಬಣ್ಣಕ್ಕೆ  ತಿರುಗುತ್ತದೆ. 

ಹತ್ತಿಯಲ್ಲಿ ಗುಲಾಬಿ ಕಾಯಿ ಕೊರಕದ ರೈತರ ಬಾಧೆಗೆ ಅನುಕೂಲಕರ ಪರಿಸ್ಥಿತಿಗಳು:

  • ಆಗಾಗ್ಗೆ ನೀರಾವರಿ ಕೊಡುವುದು, ಹೆಚ್ಚಿನ ರಸಗೊಬ್ಬರಗಳ ಬಳಕೆ, ಏಕ ಬೆಳೆ ಕೃಷಿ, ಸಮೀಪದ ಹೊಲದಲ್ಲಿ ಬಿತ್ತನೆ ಸಮಯದಲ್ಲಿ ವ್ಯತ್ಯಾಸ ಮತ್ತು ವಿಳಂಬವಾದ ಕೃಷಿ ಪದ್ಧತಿಗಳು ಗುಲಾಬಿ ಕಾಯಿ ಕೊರಕ ಹುಳುವಿನ ಹಾವಳಿಗೆ ಕೆಲವು ಅನುಕೂಲಕರ ಪರಿಸ್ಥಿತಿಗಳಾಗಿವೆ.

ಆರ್ಥಿಕ ಮಿತಿ : 10% ಹಾನಿಗೊಳಗಾದ ಹೂವುಗಳು ಅಥವಾ ಕಾಯಿಗಳು 

ಹತ್ತಿಯಲ್ಲಿ ಗುಲಾಬಿ ಕಾಯಿ ಕೊರಕದ  ನಿರ್ವಹಣೆ:

ಉತ್ಪನ್ನದ ಹೆಸರು  ತಾಂತ್ರಿಕ ಅಂಶ  ಬಳಕೆಯ ಪ್ರಮಾಣ (ಪ್ರತೀ ಒಂದು ಲೀಟರ್ ನೀರಿಗೆ)
ಯಾಂತ್ರಿಕ ನಿರ್ವಹಣೆ
ತಪಸ್ ಗುಲಾಬಿ ಕಾಯಿ ಕೊರಕದ  ಲೂರ್ ಫೆರೋಮೋನ್ ಲೂರ್ ಫನಲ್ ಟ್ರ್ಯಾಪ್ ನೊಂದಿಗೆ 6/ಎಕರೆಗೆ 
ಜೈವಿಕ ನಿರ್ವಹಣೆ 
ಅಮೃತ್ ಆರ್ಗಾನಿಕ್ ಅಲ್ಮಿಡ್  ಮೆಟಾರೈಜಿಯಮ್ ಅನಿಸೋಪ್ಲಿಯಾ 2 ಮಿಲಿ/ಲೀಟರ್ ನೀರಿಗೆ 
ಮಲ್ಟಿಪ್ಲೆಕ್ಸ್ ಮೆಟಾರೈಜಿಯಮ್ ಮೆಟಾರೈಜಿಯಮ್ ಅನಿಸೋಪ್ಲಿಯೇ 1 ಮಿಲಿ/ಲೀಟರ್ ನೀರಿಗೆ 
ಕಾತ್ಯಾಯನಿ ಸಾವಯವ ಲಾರ್ವಿಸೈಡ್ ಬ್ಯಾಸಿಲಸ್ ತುರಿಂಜಿಯೆನ್ಸಿಸ್ ವರ್ ಕುರ್ಸ್ತಾಕಿ 10 ಮಿಲಿ/ಲೀಟರ್ ನೀರಿಗೆ 
ರಾಸಾಯನಿಕ ನಿರ್ವಹಣೆ 
ಪ್ರೋಕ್ಲೈಮ್ ಕೀಟನಾಶಕ ಎಮಾಮೆಕ್ಟಿನ್ ಬೆಂಜೊನೇಟ್ 5% ಎಸ್ ಜಿ  0.4 ಗ್ರಾಂ / ಲೀಟರ್ ನೀರಿಗೆ 
ನಾಗಾಟಾ ಕೀಟನಾಶಕ ಎಥಿಯಾನ್ 40% + ಸೈಪರ್‌ಮೆಥ್ರಿನ್ 5% ಇಸಿ 2.5 ಮಿಲಿ/ ಲೀಟರ್ ನೀರಿಗೆ 
ಆಂಪ್ಲಿಗೋ ಕೀಟನಾಶಕ  ಕ್ಲೋರಂಟ್ರಾನಿಲಿಪ್ರೋಲ್ (10 %) + ಲ್ಯಾಂಬ್ಡಾಸಿಹಾಲೋಥ್ರಿನ್ (5%) ZC 0.5 ಮಿಲಿ/ಲೀಟರ್ ನೀರಿಗೆ 
ಟ್ರೇಸರ್ ಕೀಟನಾಶಕ ಸ್ಪಿನೋಸ್ಯಾಡ್ 44.03% SC 0.5 ಮಿಲಿ/ಲೀಟರ್ ನೀರಿಗೆ 
ಗ್ರೀನೋವೇಟ್ ಮಿಯೋಗಿ

ಕೀಟನಾಶಕ

ಕ್ಲೋರ್‌ಪೈರಿಫಾಸ್ 50% + ಸೈಪರ್‌ಮೆಥ್ರಿನ್ 5% ಇಸಿ 2 ಮಿಲಿ/ಲೀಟರ್ ನೀರಿಗೆ 
ಕೆಮ್ಕ್ರಾನ್ ಕೀಟನಾಶಕ ಪ್ರೊಫೆನೊಫಾಸ್ 50 % ಇಸಿ 1.5-2 ಮಿಲಿ/ಲೀಟರ್ ನೀರಿಗೆ 

 

  1. ಹತ್ತಿಯಲ್ಲಿ ತಂಬಾಕು ಹುಳು 

  • ತಂಬಾಕು ಹುಳುವಿನ  ವೈಜ್ಞಾನಿಕ ಹೆಸರು: ಸ್ಪೋಡೋಪ್ಟೆರಾ ಲಿಟುರಾ
  • ಕೀಟದ ಹಾನಿ ಹಂತ: (ಲಾರ್ವ) ಮರಿಹುಳು ಹಂತ 
  • ಸಂಭವಿಸುವ ಹಂತ: ಬೆಳೆ ಅವಧಿಯ ಉದ್ದಕ್ಕೂ ಸಂಭವಿಸುತ್ತದೆ

ಹತ್ತಿಯಲ್ಲಿ ತಂಬಾಕು ಹುಳುವಿನ  ಲಕ್ಷಣಗಳು:

  • ಹುಳುಗಳು  ಎಲೆಗಳ ಮೇಲೆ ಯಥೇಚ್ಛವಾಗಿ ತಿನ್ನುತ್ತವೆ ಮತ್ತು ಎಲೆಗಳನ್ನು  ಅಸ್ಥಿಪಂಜರದ ರೀತಿ ಮಾಡಿ  ಮಧ್ಯನಾಳಗಳನ್ನ ಮಾತ್ರ ಬಿಡುತ್ತವೆ
  • ಇದರಿಂದ ಎಲೆಗಳು ಕಾಗದದಂತೆ ಆಗುತ್ತವೆ . 
  • ಹುಳುಗಳು  ಎಲೆ ಮತ್ತು ಕಾಯಿಗಳನ್ನು  ತಿನ್ನುತ್ತವೆ, ಇದು ರಂಧ್ರಗಳನ್ನು ಮಾಡುವ ಮೂಲಕ ಎಲೆಗಳ ಬೀಳುವಿಕೆ  ಮತ್ತು ಚಿಗುರುಗಳು ಉದುರುವಿಕೆಗೆ   ಕಾರಣವಾಗುತ್ತದೆ.
  • ತೀವ್ರವಾದ ಬಾಧೆಯ ಸಂದರ್ಭದಲ್ಲಿ, ಕಾಂಡ ಮತ್ತು ಚಿಗುರುಗಳು ಯಾವುದೇ ಎಲೆ ಅಥವಾ ಕಾಯಿಗಳಿಲ್ಲದೆ  ಜಮೀನಿನಲ್ಲಿ ನಿಂತಿರುವುದನ್ನು ಕಾಣಬಹುದು.

ಹತ್ತಿಯಲ್ಲಿ ತಂಬಾಕು ಹುಳುಗಳ ಹಾವಳಿಗೆ ಅನುಕೂಲಕರ ಪರಿಸ್ಥಿತಿಗಳು:

ಬೆಚ್ಚಗಿನ ಮತ್ತು ಆರ್ದ್ರ ವಾತಾವರಣ, ತಡವಾಗಿ ಬಿತ್ತನೆ, ಏಕ ಬೆಳೆ ಕೃಷಿ, ಕಳಪೆ ನೀರಾವರಿ ನಿರ್ವಹಣೆ ಮತ್ತು ನೈಸರ್ಗಿಕ ಪರಭಕ್ಷಕಗಳ ಕೊರತೆಯು ತಂಬಾಕು ಹುಳುಗಳ ಹಾವಳಿಗೆ ಅನುಕೂಲಕರವಾದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ.

ಆರ್ಥಿಕ ಮಿತಿ : 100-ಮೀಟರ್ ಸಾಲಿಗೆ 8 ಮೊಟ್ಟೆಯ ರಾಶಿ. 

ಹತ್ತಿಯಲ್ಲಿ ತಂಬಾಕು ಮರಿಹುಳುಗಳ ನಿರ್ವಹಣೆ:

ಉತ್ಪನ್ನದ ಹೆಸರು  ತಾಂತ್ರಿಕ ಅಂಶ  ಬಳಕೆಯ ಪ್ರಮಾಣ (ಪ್ರತೀ ಒಂದು ಲೀಟರ್ ನೀರಿಗೆ)
ಯಾಂತ್ರಿಕ ನಿರ್ವಹಣೆ
ತಪಸ್ ತಂಬಾಕು ಕ್ಯಾಟರ್ಪಿಲ್ಲರ್ ಲೂರ್  ಫೆರೊಮೋನ್ ಲೂರ್  ಫನಲ್ ಟ್ರ್ಯಾಪ್ ಜೊತೆಗೆ 6/ಎಕರೆ
ಜೈವಿಕ ನಿರ್ವಹಣೆ 
ಟೆರ್ರಾ ಪಿಲ್ಲರ್ (ಜೈವಿಕ ಕೀಟನಾಶಕ) ಅನ್ನೊನಾ ಸ್ಕ್ವಾಮೊಸಾ, ಸಿಟಸ್ ಲಿಮನ್, ಬೇವಿನ ಎಣ್ಣೆ ಮತ್ತು ಪೈಪರ್ ನಿಗ್ರಮ್ 50 ಮಿಲಿ ಪ್ರತಿ 15 ಲೀಟರ್ ನೀರಿಗೆ 
ಆಲ್ ಬಾಟಾ ರಾಯಲ್ ಲಾರ್ವೆಂಡ್ (ಬಯೋ

ಲಾರ್ವಿಸೈಡ್)

ಗಿಡಮೂಲಿಕೆಗಳ ಸಾರ  2 ಮಿಲಿ/ಲೀಟರ್ ನೀರಿಗೆ 
ಸನ್ ಬಯೋ ಎಸ್ ಎಲ್ ಏನ್ ಪಿ ವಿ  (ಬಯೋ ಕೀಟನಾಶಕ) ಸ್ಪೋಡೋಪ್ಟೆರಾ ಲಿಟುರಾ ನ್ಯೂಕ್ಲಿಯರ್ ಪಾಲಿಹೈಡ್ರೋಸಿಸ್ ವೈರಸ್ 1 x 109 POB (ಪಾಲಿಹೆಡ್ರಲ್ ಮುಚ್ಚಿದ ದೇಹಗಳು) 1 ಮಿಲಿ/ಲೀಟರ್ ನೀರಿಗೆ 
ಡೆಲ್ಫಿನ್ ಕೀಟನಾಶಕ ಬ್ಯಾಸಿಲಸ್ ತುರಿಂಜಿಯೆನ್ಸಿಸ್  ಕುರ್ಸ್ತಾಕಿ 1 ಗ್ರಾಂ/ಲೀಟರ್ ನೀರಿಗೆ 
ರಾಸಾಯನಿಕ ನಿರ್ವಹಣೆ 
ಬೆನೆವಿಯಾ ಕೀಟನಾಶಕ ಸೈಂಟ್ರಾನಿಲಿಪ್ರೋಲ್ 10.26% ಓಡಿ 1.5 ಮಿಲಿ/ಲೀಟರ್ ನೀರಿಗೆ 
ಕಾತ್ಯಾಯನಿ ಚಕ್ರವರ್ತಿ ಥಿಯಾಮೆಥಾಕ್ಸಮ್ 12.6% + ಲ್ಯಾಂಬ್ಡಾ ಸೈಹಲೋಥ್ರಿನ್ 9.5% ZC 0.4 ಮಿಲಿ/ಲೀಟರ್ ನೀರಿಗೆ 
ಲಾರ್ಗೋ ಕೀಟನಾಶಕ ಸ್ಪಿನೆಟೋರಾಮ್ 11.7% SC 0.9 ಮಿಲಿ/ಲೀಟರ್ ನೀರಿಗೆ 
ಫ್ಲೂಟಾನ್ ಕೀಟನಾಶಕ ಫ್ಲುಬೆಂಡಿಯಾಮೈಡ್ 20% WG 0.5 ಗ್ರಾಂ/ಲೀಟರ್ ನೀರಿಗೆ 
ಗೋದ್ರೇಜ್ ಗ್ರೇಸಿಯಾ ಕೀಟನಾಶಕ ಫ್ಲಕ್ಸಾಮೆಟಮೈಡ್ 10% ಇಸಿ 0.8 ಮಿಲಿ/ಲೀಟರ್ ನೀರಿಗೆ 
ಸ್ಟಾರ್ಕ್ಲೈಮ್ ಕೀಟನಾಶಕ ಎಮಾಮೆಕ್ಟಿನ್ ಬೆಂಜೊಯೇಟ್ 5% SG 0.5 ಗ್ರಾಂ/ಲೀಟರ್ ನೀರಿಗೆ 
ಕೀಫುನ್ ಕೀಟನಾಶಕ ಟೋಲ್ಫೆನ್‌ಪಿರಾಡ್ 15% ಇಸಿ 2 ಮಿಲಿ/ಲೀಟರ್ ನೀರಿಗೆ 

 

4.ಚುಕ್ಕೆ ಕಾಯಿ ಕೊರಕ 

  • ವೈಜ್ಞಾನಿಕ ಹೆಸರು: ಇರಿಯಾಸ್ ವಿಟ್ಟೆಲ್ಲಾ ಮತ್ತು ಇ.ಇನ್ಸುಲಾನಾ
  • ಕೀಟದ ಹಾನಿ ಹಂತ: ಮರಿಹುಳು 
  • ಸಂಭವಿಸುವ ಹಂತ: ಪೂರ್ವ-ಹೂಬಿಡುವಿಕೆಯಿಂದ ಕಾಯಿ ಕಚ್ಚುವ ಹಂತ

ಹತ್ತಿಯಲ್ಲಿ ಚುಕ್ಕೆ ಕಾಯಿ ಕೊರಕದ ಲಕ್ಷಣಗಳು:

  • ಪೂರ್ವ ಹೂಬಿಡುವ ಹಂತದಲ್ಲಿ ಕೀಟಗಳ ಬಾಧೆಯು ಚಿಗುರುಗಳು ಒಣಗುವಿಕೆ  ಮತ್ತು ಉದುರುವಿಕೆಗೆ ಕಾರಣವಾಗುತ್ತದೆ. 
  • ಲಾರ್ವಾಗಳು ರಂಧ್ರಗಳನ್ನು ಮಾಡುವ ಮೂಲಕ ಕಾಯಿಗಳನ್ನು ತಿನ್ನುತ್ತವೆ. 
  • ತೊಟ್ಟುಗಳ ಉದುರುವಿಕೆಗೆ  ಕಾರಣವಾಗುತ್ತದೆ. 

ಹತ್ತಿಯಲ್ಲಿ ಚುಕ್ಕೆ ಕಾಯಿ ಕೊರಕದ ಬಾಧೆಗೆ ಅನುಕೂಲಕರ ಪರಿಸ್ಥಿತಿಗಳು:

  • ಅಧಿಕ ತಾಪಮಾನ (20-30°C), ಭಾರೀ ಮಳೆ, ತಡವಾಗಿ ಬಿತ್ತುವುದು  ಮತ್ತು ಬೆಳೆ ಸರದಿಯ ಕೊರತೆಯು ಹತ್ತಿ ಗಿಡಗಳಲ್ಲಿ ಚುಕ್ಕೆ ಕಾಯಿ ಕೊರಕದ  ಬಾಧೆಗೆ ಅನುಕೂಲಕರವಾದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ.

ಆರ್ಥಿಕ ಗರಿಷ್ಟ ಮಿತಿ : 10% ಸೋಂಕಿತ ಚಿಗುರುಗಳು ಅಥವಾ ಕಾಯಿಗಳು 

ಹತ್ತಿಯಲ್ಲಿ ಚುಕ್ಕೆ ಕಾಯಿ ಕೊರಕದ ನಿರ್ವಹಣೆ:

ಉತ್ಪನ್ನದ ಹೆಸರು  ತಾಂತ್ರಿಕ ಅಂಶ  ಬಳಕೆಯ ಪ್ರಮಾಣ (ಪ್ರತೀ ಒಂದು ಲೀಟರ್ ನೀರಿಗೆ)
ಜೈವಿಕ ನಿರ್ವಹಣೆ
ಮಲ್ಟಿಪ್ಲೆಕ್ಸ್ ಮೆಟಾರೈಜಿಯಮ್ ಮೆಟಾರೈಜಿಯಮ್ ಅನಿಸೋಪ್ಲಿಯೇ 1 ಮಿಲಿ
ಕಾತ್ಯಾಯನಿ ಸಾವಯವ ಲಾರ್ವಿಸೈಡ್ ಬ್ಯಾಸಿಲಸ್ ತುರಿಂಜಿಯೆನ್ಸಿಸ್ (ಕುರ್ಸ್ತಾಕಿ ಬಯೋ ಲಾರ್ವಿಸೈಡ್) 10 ಮಿಲಿ
ರಾಸಾಯನಿಕ ನಿರ್ವಹಣೆ
ಸ್ಟಾರ್ಥೇನ್ ಸೂಪರ್ ಕೀಟನಾಶಕ ಅಸಿಫೇಟ್ 75% SP 1.75-2.5 ಮಿಲಿ
ಕ್ರಿ-ಸ್ಟಾರ್ 5 ಕೀಟನಾಶಕ ಎಮಾಮೆಕ್ಟಿನ್ ಬೆಂಜೊಯೇಟ್ 5% SG 0.2 – 0.4 ಗ್ರಾಂ
ಡೆಲಿಗೇಟ್  ಕೀಟನಾಶಕ ಸ್ಪಿನೆಟೋರಾಮ್ 11.7% SC 0.9 – 1 ಮಿಲಿ
ಕವರ್ ಕೀಟನಾಶಕ ಕ್ಲೋರಂಟ್ರಾನಿಲಿಪ್ರೋಲ್ 18.5% ಎಸ್ಸಿ 0.3 ಮಿಲಿ
ಕೊರಂಡಾ ಕೀಟನಾಶಕ ಕ್ಲೋರ್‌ಪೈರಿಫಾಸ್ 50% + ಸೈಪರ್‌ಮೆಥ್ರಿನ್ 5% ಇಸಿ 250-300 ಮಿಲಿ
ನಾಗಾಟಾ ಕೀಟನಾಶಕ ಎಥಿಯಾನ್ 40% + ಸೈಪರ್‌ಮೆಥ್ರಿನ್ 5% ಇಸಿ 2.5 ಮಿಲಿ
ಪ್ರೊಫೆಕ್ಸ್ ಸೂಪರ್ ಕೀಟನಾಶಕ ಪ್ರೊಫೆನೊಫಾಸ್ 40% + ಸೈಪರ್‌ಮೆಥ್ರಿನ್ 4% ಇಸಿ 1 – 3 ಮಿಲಿ

 

  1. ಹತ್ತಿಯಲ್ಲಿ  ಗಿಡಹೇನುಗಳು: 

  • ವೈಜ್ಞಾನಿಕ ಹೆಸರು: ಎಫಿಸ್ ಗಾಸಿಪ್ಪಿ 
  • ಕೀಟದ ಹಾನಿ ಹಂತ: ಮೊಟ್ಟೆಯ ಮೊದಲ  ಮತ್ತು ವಯಸ್ಕ ಹಂತಗಳು 
  • ಸಂಭವಿಸುವ ಹಂತ: ಆರಂಭಿಕ ಬೆಳವಣಿಗೆಯ ಹಂತಗಳು

ಹತ್ತಿಯಲ್ಲಿ  ಗಿಡಹೇನುಗಳ ಲಕ್ಷಣಗಳು:

  • ಎಳೆ  ಚಿಗುರುಗಳು ಮತ್ತು ಎಲೆಗಳ ಕೆಳಭಾಗವು ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತದೆ. 
  • ಎಲೆಗಳು ಕೆಳಕ್ಕೆ ಸುರುಳಿಯಾಗಿ  ಮತ್ತು ಸುಕ್ಕುಗಟ್ಟಿದಂತೆ ಕಾಣುತ್ತದೆ. 
  • ಅವು ರಸವನ್ನು ಹೀರುತ್ತವೆ ಮತ್ತು ಕುಂಠಿತ ಬೆಳವಣಿಗೆಗೆ ಕಾರಣವಾಗುತ್ತವೆ
  • ಜೇನು ಸ್ರವಿಸುವಿಕೆಯಿಂದ ಮಸಿ ಅಚ್ಚು ಬೆಳವಣಿಗೆಗೆ ಕಾರಣವಾಗಿ ಸಸಿಗಳ ಮೇಲೆ ಕಪ್ಪು ಮಸಿ ಅಚ್ಚಿನಂತೆ ಕಾಣುತ್ತದೆ. 
  • ತೀವ್ರತೆ ಹೆಚ್ಚಾದ  ಸಂದರ್ಭದಲ್ಲಿ, ಇದು ಸಸ್ಯಗಳ ಸಾವಿಗೆ ಕಾರಣವಾಗುತ್ತದೆ.

ಹತ್ತಿಯಲ್ಲಿ ಗಿಡಹೇನುಗಳ ಆಕ್ರಮಣಕ್ಕೆ ಅನುಕೂಲಕರ ಪರಿಸ್ಥಿತಿಗಳು:

  • ಅತಿಥೇಯ ಸಸ್ಯಗಳಿರುವುದರಿಂದ ಹೆಚ್ಚಿನ ತಾಪಮಾನ ಮತ್ತು ಹೆಚ್ಚಿನ ಆರ್ದ್ರತೆ, ಹೆಚ್ಚಿನ ಸಾರಜನಕ, ಬಿತ್ತನೆ  ಮಾಡುವಾಗ ಸರಿಯಾದ ಅಂತರ ನೀಡದಿರುವುದು, ಮಣ್ಣಿನಲ್ಲಿ ಸಾಕಷ್ಟು ತೇವಾಂಶದ ಮಟ್ಟಗಳು ಮತ್ತು ನೈಸರ್ಗಿಕ ಶತ್ರುಗಳ ಕೊರತೆಯು ಹೆಚ್ಚಿನ ಹತ್ತಿ ಗಿಡಹೇನುಗಳ ಹಾವಳಿಗೆ  ಕಾರಣವಾಗುತ್ತದೆ. 

ಆರ್ಥಿಕ ಗರಿಷ್ಟ ಮಿತಿ :  ಸೋಂಕಿತ ಸಸ್ಯದ 5%

  1. ಹತ್ತಿಯಲ್ಲಿ ಜಿಗಿ ಹುಳುಗಳು 

  • ವೈಜ್ಞಾನಿಕ ಹೆಸರು: ಅಮ್ರಾಸ್ಕಾ (ಬಿಗುಟ್ಟುಲಾ ಬಿಗುಟ್ಟುಲಾ) ದೇವಸ್ತಾನ್ಸ್
  • ಕೀಟದ ಹಾನಿ ಹಂತ: ಮೊಟ್ಟೆಯ ಹಂತ ಮತ್ತು ವಯಸ್ಕ ಹಂತ 
  • ಸಂಭವಿಸುವ ಹಂತ: ಬೆಳೆಯ ಎಲ್ಲಾ ಹಂತಗಳು ಆದರೆ ಪ್ರಧಾನವಾಗಿ ಮೊಳಕೆ ಹಂತದಲ್ಲಿ

ಹತ್ತಿಯಲ್ಲಿ ಜಿಗಿ ಹುಳುಗಳ  ಲಕ್ಷಣಗಳು:

  • ಮೊಟ್ಟೆಗಳು  ಮತ್ತು ವಯಸ್ಕ ಹುಳುಗಳು  ಎಲೆಗಳ ಮೇಲ್ಮೈಯಿಂದ ರಸವನ್ನು ಹೀರುವುದರಿಂದ ಎಲೆಗಳು ಹಳದಿಯಾಗುತ್ತವೆ. 
  • ಎಲೆಗಳ ಅಂಚನ್ನು ಕೆಳಮುಖವಾಗಿ ಸುರುಳಿ  ಮಾಡುವುದು ಮತ್ತು ಎಲೆಗಳು ಕೆಂಪಾಗುವುದು
  • ಹಾವಳಿ ಹೆಚ್ಚಾದ ಸಂದರ್ಭದಲ್ಲಿ, ಬಾಧಿತ ಎಲೆಗಳು ಕಂದು  ಅಥವಾ ಇಟ್ಟಿಗೆ ಕೆಂಪು ಬಣ್ಣಕ್ಕೆ ತಿರುಗುತ್ತವೆ, ಸಾಮಾನ್ಯವಾಗಿ “ಸುಟ್ಟ ” ಲಕ್ಷಣವನ್ನು ಕಾಣಬಹುದು. 
  • ಬೆಳೆಯ ಕುಂಠಿತ ಬೆಳವಣಿಗೆಗೆ ಕಾರಣವಾಗುತ್ತದೆ. 

ಹತ್ತಿಯಲ್ಲಿ ಜಿಗಿ ಹುಳುಗಳ ಹಾವಳಿಗೆ ಅನುಕೂಲಕರ ಪರಿಸ್ಥಿತಿಗಳು:

ಜಿಗಿ ಹುಳುಗಳ  ಹಾವಳಿಯನ್ನು ಬೆಂಬಲಿಸುವ ಕೆಲವು ಪರಿಸ್ಥಿತಿಗಳು ಯಾವುವೆಂದರೆ: ತಡವಾದ  ಬಿತ್ತನೆ, ಬಿಸಿ ಮತ್ತು ಶುಷ್ಕ ಹವಾಮಾನ ಪರಿಸ್ಥಿತಿಗಳು, ಸಾರಜನಕ ಗೊಬ್ಬರಗಳ ಅಸಮತೋಲಿತ ಬಳಕೆ ಮತ್ತು ಜಮೀನಿನ ಮಣ್ಣಿನಲ್ಲಿ ಸಾಕಷ್ಟು ತೇವಾಂಶವನ್ನು ಒಳಗೊಂಡಿರುವುದು. 

ಆರ್ಥಿಕ ಗರಿಷ್ಟ ಮಿತಿ : ಪ್ರತಿ ಎಲೆಗೆ 1 ಮೊಟ್ಟೆ / ವಯಸ್ಕ ಅಥವಾ ಹೊಲದಲ್ಲಿನ 25% ಸಸ್ಯಗಳು ; ಮಧ್ಯದಿಂದ ಮೇಲಿನ ಭಾಗಕ್ಕೆ ಹಳದಿ ಮತ್ತು ಸುರುಳಿಯಾಕಾರದ ಲಕ್ಷಣವನ್ನು ತೋರಿಸುತ್ತವೆ. 

ಹತ್ತಿಯಲ್ಲಿ ಜಿಗಿ ಹುಳುಗಳು ಮತ್ತು ಗಿಡಹೇನುಗಳ ನಿರ್ವಹಣೆ:

ಉತ್ಪನ್ನದ ಹೆಸರು  ತಾಂತ್ರಿಕ ಅಂಶ  ಬಳಕೆಯ ಪ್ರಮಾಣ (ಪ್ರತೀ ಒಂದು ಲೀಟರ್ ನೀರಿಗೆ)
ಯಾಂತ್ರಿಕ  ನಿರ್ವಹಣೆ
ತಪಸ್ ಹಳದಿ ಜಿಗುಟು ಬಲೆ 11 ಸೆಂ x 28 ಸೆಂ 4 – 6/ಎಕರೆ
ಜೈವಿಕ ನಿರ್ವಹಣೆ
ಅಮೃತ್ ಅಲೆಸ್ಟ್ರಾ ಲಿಕ್ವಿಡ್ ವರ್ಟಿಸಿಲಿಯಮ್ ಲೆಕಾನಿ 2 ಮಿಲಿ / ಲೀಟರ್
ಇಕೋನೀಮ್ ಪ್ಲಸ್ ಬಯೋಪೆಸ್ಟಿಸೈಡ್ ಅಜಾಡಿರಾಕ್ಟಿನ್ 10000 ಪಿಪಿಎಂ 325-480 ಮಿಲಿ 
ರಾಸಾಯನಿಕ ನಿರ್ವಹಣೆ
ಬೆಟಾಲಿಯನ್ ಕೀಟನಾಶಕ ಥಿಯಾಮೆಥಾಕ್ಸಮ್ 25% WG 0.5ಗ್ರಾಂ/ಲೀಟರ್ ನೀರಿಗೆ 
ಕಾತ್ಯಾಯನಿ ಐ ಎಮ್ ಡಿ  – 178 ಇಮಿಡಾಕ್ಲೋಪ್ರಿಡ್ 17.8 % SL 0.25 ml/ಲೀಟರ್ ನೀರಿಗೆ 
ಉಲಾಲಾ ಕೀಟನಾಶಕ ಫ್ಲೋನಿಕಾಮಿಡ್ 50 WG 0.4 ಗ್ರಾಂ/ಲೀಟರ್ ನೀರಿಗೆ 
ಪೇಜರ್ ಕೀಟನಾಶಕ ಡಯಾಫೆನ್ಥಿಯುರಾನ್ 50% ಡಬ್ಲ್ಯೂ ಪಿ  1 ಗ್ರಾಂ/ಲೀಟರ್ ನೀರಿಗೆ 
ಹೈಫೀಲ್ಡ್ ಎಜಿ ಪಿರಮಿಡ್

ಕೀಟನಾಶಕ

ಅಸಿಟಾಮಾಪ್ರಿಡ್ 20% SP 0.5ಗ್ರಾಂ /ಲೀಟರ್  ನೀರಿಗೆ 
ಓಶೀನ್ ಕೀಟನಾಶಕ ಡೈನೋಟ್ಫುರಾನ್ 20 % SG 0.6 – 0.8 ಗ್ರಾಂ /ಲೀಟರ್ ನೀರಿಗೆ
ಉಲಾಲ ಕೀಟನಾಶಕ ಫ್ಲೋನಿಕಾಮಿಡ್ 50 WG 0.3 – 0.4 gm/ಲೀಟರ್ ನೀರಿಗೆ

ಜಿಗಿ ಹುಳುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು – ಹತ್ತಿ ಬೆಳೆಗಳಲ್ಲಿ ಜಿಗಿ ಹುಳುಗಳನ್ನು ನಿಯಂತ್ರಿಸಲು ಸುಲಭ ಮತ್ತು ವೆಚ್ಚ-ಪರಿಣಾಮಕಾರಿ ವಿಧಾನಗಳು. 

  1. ಥ್ರಿಪ್ಸ್ 

  • ವೈಜ್ಞಾನಿಕ ಹೆಸರು: ಥ್ರಿಪ್ಸ್ ತಬಾಸಿ
  • ಕೀಟದ ಹಾನಿ ಹಂತ: ಮರಿ ಹುಳುಗಳುಮತ್ತು ವಯಸ್ಕ
  • ಸಂಭವಿಸುವ ಹಂತ: ಸಸ್ಯಕ ಹಂತ

ಹತ್ತಿಯಲ್ಲಿ ಥ್ರಿಪ್ಸ್ ಲಕ್ಷಣಗಳು:

  • ಮೊಟ್ಟೆಯ ಹಂತ ಮತ್ತು ವಯಸ್ಕ ಹುಳುಗಳು ಎಲೆಯ ಕ್ಲೋರೋಫಿಲ್ ಅಂಶವನ್ನು ಕೆರೆದುಮತ್ತು ಎಲೆಗಳ ಹೊರಪದರದಿಂದ ರಸವನ್ನು ಹೀರುತ್ತವೆ. 
  • ಇದು ಎಲೆಗಳ  ಸುರುಳಿಯಾಗುವಿಕೆಗೆ ಕಾರಣವಾಗುತ್ತದೆ. 
  • ಎಲೆಗಳ ಕೆಳಭಾಗದಲ್ಲಿ ಬಿಳಿಯ ಹೊಳಪಿನ ರೀತಿ  ಕಾಣಬಹುದು. 
  • ಈ ಕೀಟವು ಹತ್ತಿಯಲ್ಲಿ ‘ತಂಬಾಕು ಸ್ಟ್ರೀಕ್ ವೈರಸ್’ ವಾಹಕವಾಗಿದೆ. 

ಹತ್ತಿಯಲ್ಲಿ ಥ್ರಿಪ್ಸ್ ಹಾವಳಿಗೆ ಅನುಕೂಲಕರ ಪರಿಸ್ಥಿತಿಗಳು:

  • ಸುಮಾರು 25 – 30 ಡಿಗ್ರಿ ಸೆಲ್ಸಿಯಸ್‌ಗಿಂತ  ಅಧಿಕ ತಾಪಮಾನ, ಮಣ್ಣಿನಲ್ಲಿನ ಅತಿಯಾದ ತೇವಾಂಶ, ಮುಂಚಿತವಾಗಿ  ನಾಟಿ ಮಾಡುವುದು, ಹೆಚ್ಚಿನ ಪ್ರಮಾಣದ ಸಾರಜನಕ ಗೊಬ್ಬರದ ಬಳಕೆ ಮತ್ತು ಕಳೆಗಳ ಅನಿಯಂತ್ರಣ, ಇವು  ಹತ್ತಿ ಹೊಲದಲ್ಲಿ ಥ್ರಿಪ್ಸ್ ಹಾವಳಿಗೆ  ಕೆಲವು ಅನುಕೂಲಕರ ಪರಿಸ್ಥಿತಿಗಳು.

ಆರ್ಥಿಕ ಗರಿಷ್ಟ ಮಿತಿ : ಪ್ರತಿ ಎಲೆಗೆ 1 ಮೊಟ್ಟೆ  / ವಯಸ್ಕ

ಹತ್ತಿ ಹೊಲದಲ್ಲಿ  ಥ್ರಿಪ್ಸ್  ನಿರ್ವಹಣೆ:

ಉತ್ಪನ್ನದ ಹೆಸರು  ತಾಂತ್ರಿಕ ಅಂಶ  ಬಳಕೆಯ ಪ್ರಮಾಣ (ಪ್ರತೀ ಒಂದು ಲೀಟರ್ ನೀರಿಗೆ)
ಯಾಂತ್ರಿಕ  ನಿರ್ವಹಣೆ
ತಪಸ್ ಹಳದಿ ಅಂಟು  ಬಲೆ 22 cm x 28 cm 6 – 8/ಎಕರೆ
ಜೈವಿಕ ನಿರ್ವಹಣೆ
ಪೆಸ್ಟೊ ರೇಜ್ ಜೈವಿಕ ಕೀಟನಾಶಕ ಸಾವಯವ ಸಾರಗಳು  ಮಿಲಿ/ಲೀಟರ್ ನೀರಿಗೆ 
ಕಂಟ್ರೋಲ್ ಟಿಆರ್ ಎಮ್  ಜೈವಿಕ ಕೀಟನಾಶಕ ಸಾವಯವ ಸಾರಗಳ ಮಿಶ್ರಣ  2 ಮಿಲಿ / ಲೀಟರ್ ನೀರಿಗೆ 
ಇಕೋನೀಮ್ ಪ್ಲಸ್ ಅಜಾಡಿರಾಕ್ಟಿನ್ 10000 ಪಿಪಿಎಂ 2 ಮಿಲಿ/ಲೀಟರ್ ನೀರಿಗೆ 
ರಾಸಾಯನಿಕ ನಿರ್ವಹಣೆ
ಸಮ್ಮಿಟ್ ಕೀಟನಾಶಕ ನೆಟೋರಾಮ್ 11.7 % SC 0.5- 1ಮಿಲಿ /ಲೀಟರ್ ನೀರಿಗೆ
ಅಡ್ಮಯಿರ್  ಕೀಟನಾಶಕ ಇಮಿಡಾಕ್ಲೋಪ್ರಿಡ್ 70% ಡಬ್ಲ್ಯೂ ಜಿ  0.3 ಗ್ರಾಂ/ಲೀಟರ್ ನೀರಿಗೆ
ಕರಾಟೆ ಕೀಟನಾಶಕ ಲ್ಯಾಂಬ್ಡಾಸಿಹಲೋಥ್ರಿನ್ 5% ಇಸಿ 1.5 ಮಿಲಿ/ಲೀಟರ್ ನೀರಿಗೆ
ನುರೆಲ್ಲೆ ಡಿ ಕೀಟನಾಶಕ ಕ್ಲೋರ್ಪಿರಿಫಾಸ್ 50% + ಸೈಪರ್ಮೆಥ್ರಿನ್ 5% ಇಸಿ 2 ಮಿಲಿ/ಲೀಟರ್ ನೀರಿಗೆ
ಕಾತ್ಯಾಯನಿ ಥಿಯೋಕ್ಸಮ್ ಥಿಯಾಮೆಥಾಕ್ಸಮ್ 25% ಡಬ್ಲ್ಯೂ ಜಿ 0.4 ಗ್ರಾಂ/ಲೀಟರ್ ನೀರಿಗೆ
ಶಿನ್ಜೆನ್ ಪ್ಲಸ್ ಕೀಟನಾಶಕ ಫಿಪ್ರೊನಿಲ್ 5 % ಎಸ್ ಸಿ  3 ಗ್ರಾಂ/ಲೀಟರ್ ನೀರಿಗೆ
ಓಶೀನ್ ಕೀಟನಾಶಕ ಡೈನೋಟ್ಫುರಾನ್ 20 % ಎಸ್ ಜಿ  0.6 – 0.8 ಗ್ರಾಂ //ಲೀಟರ್ ನೀರಿಗೆ

 

8.ಹತ್ತಿಯಲ್ಲಿ ಬಿಳಿ ನೊಣಗಳು : 

  • ವೈಜ್ಞಾನಿಕ ಹೆಸರು: ಬೆಮಿಸಿಯಾ ತಬಾಸಿ
  • ಕೀಟದ ಹಾನಿ ಹಂತ: ಮೊಟ್ಟೆ  ಮತ್ತು ವಯಸ್ಕ
  • ಸಂಭವಿಸುವ ಹಂತ: ಎಲ್ಲಾ ಬೆಳೆ ಹಂತಗಳು

ಹತ್ತಿಯಲ್ಲಿ ಬಿಳಿ ನೊಣದ ಲಕ್ಷಣಗಳು:

  • ಎಲೆಯ ಮೇಲೆ ಅನಿಯಮಿತ ಹಳದಿ ಕಲೆಗಳು 
  • ತೀವ್ರತೆ ಹೆಚ್ಚಾದಾಗ  ಅಕಾಲಿಕ ಎಲೆಗಳು ಉದುರುತ್ತವೆ 
  • ಜೇನು ಹನಿಯಂತೆ ರಸ ಸ್ರವಿಸುವುದರಿಂದ ಎಲೆ ಮತ್ತು ಕಾಂಡಗಳ ಮೇಲೆ ಕಪ್ಪು ಮಸಿ ಅಚ್ಚಿನ  ಬೆಳವಣಿಗೆಯನ್ನು ಕಾಣಬಹುದು. 
  • ಇದು ಪೀಡಿತ ಮೊಗ್ಗುಗಳು ಮತ್ತು ಕಾಯಿಗಳ  ಉದುರುವಿಕೆಗೆ ಮತ್ತು ಬೆಳೆಯ ಬೆಳವಣಿಗೆ ಕುಂಠಿತವಾಗುತ್ತದೆ. 
  • ಇದು ಹತ್ತಿಯಲ್ಲಿ “ಎಲೆ ಸುರುಳಿ]ನಂಜಾಣು ರೋಗವನ್ನು” ಹರಡುತ್ತದೆ

ಹತ್ತಿಯಲ್ಲಿ ಬಿಳಿನೊಣಗಳ ಹಾವಳಿಗೆ ಅನುಕೂಲಕರ ಪರಿಸ್ಥಿತಿಗಳು:

  • ಅಧಿಕ ತಾಪಮಾನ (27 – 32 °C), ಅಧಿಕ ಆರ್ದ್ರತೆ, ನೈಸರ್ಗಿಕ ಶತ್ರುಗಳ ಕೊರತೆ, ಪರ್ಯಾಯ ಆತಿಥೇಯ ಸಸ್ಯಗಳು, ಕಾಕಮಾಚಿ ಗಿಡ  ಮತ್ತು ದಾಸವಾಳ ಗಿಡಗಳ ಉಪಸ್ಥಿತಿ, ತಡವಾಗಿ ಬಿತ್ತನೆ, ಅಸಮತೋಲನ ಗೊಬ್ಬರದ ಬಳಕೆ,  ಹತ್ತಿಯಲ್ಲಿ ಬಿಳಿನೊಣಗಳ ಹಾವಳಿಯ ಸಾಧ್ಯತೆಯನ್ನು ಹೆಚ್ಚಿಸಬಹುದು.

ಆರ್ಥಿಕ ಗರಿಷ್ಟ ಮಿತಿ : 5 – 10 ಮೊಟ್ಟೆಗಳು ಪ್ರತೀ ಎಲೆಗೆ 

ಹತ್ತಿಯಲ್ಲಿ ಬಿಳಿ ನೊಣಗಳ ನಿರ್ವಹಣೆ:

ಉತ್ಪನ್ನದ ಹೆಸರು  ತಾಂತ್ರಿಕ ಅಂಶ  ಬಳಕೆಯ ಪ್ರಮಾಣ (ಪ್ರತೀ ಒಂದು ಲೀಟರ್ ನೀರಿಗೆ)
ಯಾಂತ್ರಿಕ  ನಿರ್ವಹಣೆ
ತಪಸ್ ಹಳದಿ ಜಿಗುಟಾದ ಬಲೆ 11 ಸೆಂ x 28 ಸೆಂ 4 – 6/ಎಕರೆ
ಜೈವಿಕ ನಿರ್ವಹಣೆ
ಅಮೃತ್ ಅಲೆಸ್ಟ್ರಾ ಲಿಕ್ವಿಡ್ ವರ್ಟಿಸಿಲಿಯಮ್ ಲೆಕಾನಿ 2 ಮಿಲಿ
ಟಿ ಸ್ಟೇನ್ಸ್ ನಿಂಬೆಸಿಡಿನ್  ಅಜಾಡಿರಾಕ್ಟಿನ್ 300 ಪಿ ಪಿ ಎಮ್  5 ಮಿಲಿ
ರಾಸಾಯನಿಕ ನಿರ್ವಹಣೆ
ಕರಾಟೆ ಕೀಟನಾಶಕ ಲ್ಯಾಂಬ್ಡಾಸಿಹಲೋಥ್ರಿನ್ 5% ಇಸಿ 1.5 ಮಿಲಿ
ಲ್ಯಾನ್ಸರ್ ಗೋಲ್ಡ್ ಕೀಟನಾಶಕ ಅಸಿಫೇಟ್ 50 % + ಇಮಿಡಾಕ್ಲೋಪ್ರಿಡ್ 1.8 % ಎಸ್ ಪಿ  0.4 ಮಿಲಿ
ಗ್ರೀನೋವೇಟ್ ಮಿಯೋಗಿ ಕ್ಲೋರ್‌ಪೈರಿಫಾಸ್ 50% + ಸೈಪರ್‌ಮೆಥ್ರಿನ್ 5% ಇಸಿ 2 ಮಿಲಿ
ಟೈಚಿ ಕೀಟನಾಶಕ ಟೋಲ್ಫೆನ್‌ಪಿರಾಡ್ 15% ಇಸಿ 2 ಮಿಲಿ
ಒಬೆರಾನ್ ಕೀಟನಾಶಕ ಸ್ಪಿರೊಮೆಸಿಫೆನ್ 22.9 % ಎಸ್ ಸಿ  0.3 ಮಿಲಿ
ಪೇಜರ್ ಕೀಟನಾಶಕ ಡಯಾಫೆನ್ಥಿಯುರಾನ್ 50% ಡಬ್ಲ್ಯೂ ಪಿ  1.2 ಗ್ರಾಂ
ಉಲಾಲ ಕೀಟನಾಶಕ ಫ್ಲೋನಿಕಾಮಿಡ್ 50 ಡಬ್ಲ್ಯೂ ಜಿ 0.3 ಗ್ರಾಂ
ಆಕ್ಟಾರಾ ಕೀಟನಾಶಕ ಥಿಯಾಮೆಥಾಕ್ಸಮ್ 25 % ಡಬ್ಲ್ಯೂ ಜಿ 0.5 ಗ್ರಾಂ
ಟಾಮಿಡಾ ಕೀಟನಾಶಕ ಇಮಿಡಾಕ್ಲೋಪ್ರಿಡ್ 17.8% ಎಸ್ ಎಲ್  1-2ಮಿಲಿ 
ಕೈಟಾಕು ಕೀಟನಾಶಕ ಅಸಿಟಾಮಿಪ್ರಿಡ್ 20 % ಎಸ್ ಪಿ  0.1 – 0.2 ಮಿಲಿ 

 

  1. ಬಿಳಿ ಹಿಟ್ಟು ತಿಗಣೆಗಳು :  

  • ವೈಜ್ಞಾನಿಕ ಹೆಸರು: ಫೆನಾಕೊಕಸ್ ಸೋಲನ್
  • ಕೀಟದ ಹಾನಿ ಹಂತ: ಮೊಟ್ಟೆ ಮತ್ತು ಹೆಣ್ಣು ಹುಳುಗಳ ವಯಸ್ಕ ಹಂತ
  • ಸಂಭವಿಸುವ ಬೆಳೆ ಹಂತ: ಎಲ್ಲಾ ಬೆಳೆ ಹಂತಗಳು ಆದರೆ ಸಸ್ಯ ಬಲಿಯುವ ಹಂತ  ಮತ್ತು ಹೂಬಿಡುವ ಹಂತದಲ್ಲಿ ಹೆಚ್ಚು ಸೋಂಕಿಗೆ ಒಳಗಾಗುತ್ತದೆ. 

ಹತ್ತಿಯಲ್ಲಿ ಬಿಳಿ ಹಿಟ್ಟು ತಿಗಣೆಗಳ ಲಕ್ಷಣಗಳು:

  • ಬಿಳಿ ತೇಪೆಗಳಂತೆ ಕಾಣುವ ಈ ಬಿಳಿ ಹಿಟ್ಟು ತಿಗಣೆಗಳು ಎಲೆಗಳ ಕೆಳಭಾಗದಲ್ಲಿ ಮತ್ತು  ಬೆಳೆಯುತ್ತಿರುವ ಕಾಂಡಗಳ ತುದಿಯ ಬಳಿ ಮೇಣದಂತಹ ಸ್ರವಿಸುವಿಕೆಯೊಂದಿಗೆ ಕಾಂಡಗಳನ್ನು ಮತ್ತು ಸಸ್ಯದಲ್ಲಿ ಸೋಂಕು  ಉಂಟುಮಾಡುತ್ತದೆ. 
  • ಸಸ್ಯ ಬೆಳೆಯುವ  ಹಂತದಲ್ಲಿ ಸೋಂಕಿಗೀಡಾದ  ಸಸ್ಯಗಳ ಎಲೆಗಳು ವಿರೂಪಗೊಂಡ ಅಥವಾ ಪೊದೆಯ ಚಿಗುರುಗಳು ಮತ್ತು ಸುಕ್ಕುಗಟ್ಟಿದ ಅಥವಾ ತಿರುಚಿದ ಗೊಂಚಲು ಎಲೆಗಳನ್ನು ಕಾಣಬಹುದು. 
  • ಬೆಳೆಯುತ್ತಿರುವ ಸಸ್ಯ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ, ಇದು ಸಣ್ಣ ವಿರೂಪಗೊಂಡ ಕಾಯಿಗಳನ್ನು ಮತ್ತು ಹೂವುಗಳನ್ನು ಉತ್ಪಾದಿಸುತ್ತದೆ. 
  • ಜೇನುತುಪ್ಪದಂತಹ ಸ್ರವಿಸುವಿಕೆಯಿಂದಾಗಿ ಎಲೆಗಳ ಮೇಲೆ ಕಪ್ಪು ಮಸಿ ಅಚ್ಚಿನ  ಬೆಳವಣಿಗೆಯನ್ನು ಕಾಣಬಹುದು. 
  • ಸೋಂಕಿತ  ಸಸ್ಯಗಳು ಅನಾರೋಗ್ಯ ಮತ್ತು ಎಲೆಗಳು ಸುಟ್ಟಂತೆ ಕಾಣುತ್ತದೆ. 

ಹತ್ತಿಯಲ್ಲಿ ಬಿಳಿ ಹಿಟ್ಟು ತಿಗಣೆಗಳ  ಹಾವಳಿಗೆ  ಅನುಕೂಲಕರ ಪರಿಸ್ಥಿತಿಗಳು:

  • ಹೊಲದಲ್ಲಿ ಕಳೆಗಳ ಅನಿಯಂತ್ರಣ,  ಬೆಚ್ಚಗಿನ ಮತ್ತು ಆರ್ದ್ರ ವಾತಾವರಣ, ಸ್ವಚ್ಛಗೊಳಿಸದ ಕೃಷಿ ಉಪಕರಣಗಳ ಬಳಕೆ, ಅಸಮತೋಲನದ ರಸಗೊಬ್ಬರ ಬಳಕೆ, ಬೆಳೆ ಸರದಿ ಕೊರತೆ, ನೀರಾವರಿ ಅಥವಾ ಪ್ರವಾಹ ಪರಿಸ್ಥಿತಿಗಳು ಮತ್ತು  ಹೊಲದ ಸ್ವಚ್ಛತೆಯ  ಕೊರತೆಯು ಹತ್ತಿಯಲ್ಲಿ ಬಿಳಿ ಹಿಟ್ಟು ತಿಗಣೆಗಳ ಹಾವಳಿಗೆ ಕಾರಣವಾಗಬಹುದು. 

ಆರ್ಥಿಕ ಗರಿಷ್ಟ ಮಿತಿ : 3 – 4 ಸಂಖ್ಯೆಗಳು/ಎಲೆಗೆ 

ಹತ್ತಿಯಲ್ಲಿ ಬಿಳಿ ಹಿಟ್ಟು ತಿಗಣೆಗಳ  ನಿರ್ವಹಣೆ:

ಉತ್ಪನ್ನದ ಹೆಸರು  ತಾಂತ್ರಿಕ ಅಂಶ  ಬಳಕೆಯ ಪ್ರಮಾಣ (ಪ್ರತೀ ಒಂದು ಲೀಟರ್ ನೀರಿಗೆ)
ಯಾಂತ್ರಿಕ  ನಿರ್ವಹಣೆ
ತಪಸ್ ಹಳದಿ ಅಂಟು  ಬಲೆ 11 ಸೆಂ x 28 ಸೆಂ 4 – 6/ಎಕರೆ
ಜೈವಿಕ ನಿರ್ವಹಣೆ
ಅಮೃತ್ ಅಲೆಸ್ಟ್ರಾ ಲಿಕ್ವಿಡ್ ವರ್ಟಿಸಿಲಿಯಮ್ ಲೆಕಾನಿ 2 ಮಿಲಿ
ಕೇಬೀ ಮೀಲಿ ರೇಜ್ (ಬಯೋ

ಕೀಟನಾಶಕ)

ಸಾವಯವ ಉತ್ಪನ್ನ  2 ಮಿಲಿ
ಕಂಟ್ರೋಲ್ ಟಿ ಆರ್ ಎಮ್ ಜೈವಿಕ ಕೀಟನಾಶಕ ಸಾವಯವ ಮಿಶ್ರಣ 2 ಮಿಲಿ
ರಾಸಾಯನಿಕ ನಿರ್ವಹಣೆ
ಸಿವಾಂಟೊ ಬೇಯರ್ ಕೀಟನಾಶಕ ಫ್ಲುಪಿರಾಡಿಫ್ಯೂರಾನ್ 2 ಮಿಲಿ
ಕ್ರಾಪ್ನಾಸಿಸ್ ಚಿವಾಸ್ ಕೀಟನಾಶಕ ಥಯಾಮೆಥಾಕ್ಸಮ್ 25% ಡಬ್ಲ್ಯೂ ಜಿ  0.3-0.5 ಗ್ರಾಂ
ಹಂಕ್ ಕೀಟನಾಶಕ ಅಸಿಫೇಟ್ 95% ಯಸ್ ಜಿ  1-1.5  ಗ್ರಾಂ
ಕಾನ್ಫಿಡಾರ್ ಕೀಟನಾಶಕ ಇಮಿಡಾಕ್ಲೋಪ್ರಿಡ್ 200 ಎಸ್ ಎಲ್  .75 ರಿಂದ 1 ಮಿಲಿ 
ಹೈಫೀಲ್ಡ್ ಎಜಿ ಪಿರಮಿಡ್

ಕೀಟನಾಶಕ

ಅಸಿಟಾಮಾಪ್ರಿಡ್ 20% ಯಸ್ ಪಿ  0.5 ಗ್ರಾಂ 
ಟೋಕನ್ ಕೀಟನಾಶಕ ಡೈನೋಟ್ಫುರಾನ್ 20% ಯಸ್ ಜಿ 0.2 – 0.3 ಗ್ರಾಂ 
ಕ್ಯುರಾಕ್ರಾನ್ ಕೀಟನಾಶಕ ಪ್ರೊಫೆನೊಫಾಸ್ 50% ಇಸಿ 4 ಮಿಲಿ

 

  1. ಹತ್ತಿಯಲ್ಲಿ ಮೈಟ್ ನುಶಿಗಳು  : 

ವೈಜ್ಞಾನಿಕ ಹೆಸರುಗಳು:

  • ಕೆಂಪು ಜೇಡ ಮೈಟ್ ನುಶಿ – ಟೆಟ್ರಾನಿಕಸ್ ನಿಯೋಕಾಲೆಡೋನಿಕಸ್
  • ವೊಲಿ ಮೈಟ್ ನುಶಿ  – ಅಸೆರಿಯಾ ಗಾಸಿಪಿ
  • ಹಳದಿ ಮೈಟ್ ನುಶಿ  / ಬ್ರಾಡ್ ಮೈಟ್ ನುಶಿ – ಪಾಲಿಫಗೋಟಾರ್ಸೋನೆಮಸ್ ಲ್ಯಾಟಸ್

ಕೀಟದ ಹಾನಿ ಹಂತ: ಮೊಟ್ಟೆ  ಮತ್ತು ವಯಸ್ಕ

ಸಂಭವಿಸುವ ಹಂತ: ಎಲ್ಲಾ ಬೆಳೆ ಹಂತಗಳು

ಹತ್ತಿಯಲ್ಲಿ ಮೈಟ್ ನುಶಿಗಳ  ಲಕ್ಷಣಗಳು:

  • ಎಲೆಗಳ ಕೆಳಭಾಗದಲ್ಲಿ ಸೂಕ್ಷ್ಮವಾದ ಅಥವಾ ತೆಳ್ಳಗಿನ ಜಾಲರಿಗಳಂತ ಬಲೆಗಳನ್ನ ಕಾಣಬಹುದು. 
  • ಮೈಟ್ ನುಶಿಗಳು ಎಲೆಯ ಕೆಳಗಿನಿಂದ ಎಲೆಅಂಗಾಂಶಗಳನ್ನು ಚುಚ್ಚಿ ತಿನ್ನುತ್ತವೆ ಮತ್ತು ರಸವನ್ನು ಹೀರುತ್ತವೆ. 
  • ಕ್ಲೋರೊಫಿಲ್ ಅಂಶ ಮತ್ತು ಇತರ ವರ್ಣದ್ರವ್ಯಗಳೊಂದಿಗೆ ಸಸ್ಯದ ರಸವನ್ನು ಹೀರುವುದರಿಂದ  ಎಲೆಗಳ ಮೇಲೆ ಕೆಂಪು – ಕಂಡು ಬಣ್ಣವು ಉಂಟಾಗುತ್ತದೆ (ಕೆಂಪು ಜೇಡ ಮೈಟ್ ನುಶಿ). 
  • ಎಲೆಯ ಎರಡೂ ಭಾಗಗಳಲ್ಲಿ  ಬಿಳಿ ಕೂದಲಿನ ರೀತಿ ಬಲೆಗಳನ್ನು ಕಾಣಬಹುದು (ವೂಲಿ  ಮೈಟ್ ನುಶಿ). 
  • ಎಲೆಗಳು ಮೇಲಕ್ಕೆ ಸುರುಳಿಯಾಗುತ್ತವೆ ಮತ್ತು ಸಸ್ಯ ಬೆಳವಣಿಗೆ ಕುಂಠಿತವಾಗುತ್ತದೆ (ಹಳದಿ ಮೈಟ್ ನುಶಿ)
  • ಬಾಧಿತ ಎಲೆಗಳು  ಒಣಗುತ್ತವೆ ಮತ್ತು ಉದುರುತ್ತವೆ. 

ಹತ್ತಿಯಲ್ಲಿ ಮೈಟ್ ನುಶಿಗಳ ಹಾವಳಿಗೆ ಅನುಕೂಲಕರ ಪರಿಸ್ಥಿತಿಗಳು:

ಹೆಚ್ಚಿನ ತಾಪಮಾನ ಮತ್ತು ಕಡಿಮೆ ಆರ್ದ್ರತೆಯ ಮಟ್ಟ, ಹೊಲದ ನೈರ್ಮಲ್ಯದ ಕೊರತೆ ಮತ್ತು ನೀರಿನ ಒತ್ತಡದ ಪರಿಸ್ಥಿತಿಗಳು ಅಂದರೆ, ಅತಿಯಾಗಿ ನೀರಾವರಿ ಅಥವಾ ಕಡಿಮೆ ನೀರಾವರಿ ಮೈಟ್ ನುಶಿಯ ಹಾವಳಿಗೆ ಹೆಚ್ಚಿನ ಸಾಧ್ಯತೆಯನ್ನು ಒದಗಿಸಬಹುದು.

ಆರ್ಥಿಕ ಗರಿಷ್ಟ ಮಿತಿ : ಪ್ರತಿ ಚದರ ಮೀಟರ್‌ಗೆ 10 ಹುಳಗಳು

ಹತ್ತಿಯಲ್ಲಿ ಮೈಟ್ ನುಶಿಗಳ  ನಿರ್ವಹಣೆ:

ಉತ್ಪನ್ನದ ಹೆಸರು  ತಾಂತ್ರಿಕ ಅಂಶ  ಬಳಕೆಯ ಪ್ರಮಾಣ (ಪ್ರತೀ ಒಂದು ಲೀಟರ್ ನೀರಿಗೆ)
ಜೈವಿಕ ನಿರ್ವಹಣೆ
ಕಂಟ್ರೋಲ್ ಟಿ ಆರ್ ಎಮ್ ಜೈವಿಕ ಕೀಟನಾಶಕ ಸಾವಯವ ಮಿಶ್ರಣ 1.5 ರಿಂದ 2ಮಿಲಿ 
ರಾಯಲ್ ಕ್ಲಿಯರ್ ಮಿಟೆ 100% ಸಾವಯವ ಮಿಶ್ರಣ 2 ಮಿಲಿ
ಆರ್ ಮೈಟ್ ಬಯೋ ಅಕಾರಿಸೈಡ್ ಗಿಡಮೂಲಿಕೆಗಳ ಸಾರಗಳು  1 – 2 ಮಿಲಿ
ಪರ್ಫೋಮೈಟ್ ಫೈಟೊ-ಸಾರಗಳು – 30%, ಕಿಣ್ವದ ಸಾರಗಳು – 5%, ಕೈಟಿನ್  ಡಿಸ್ಸಾಲ್ವರ್ಸ್ 2 ಮಿಲಿ
ರಾಸಾಯನಿಕ ನಿರ್ವಹಣೆ
ಒಬೆರಾನ್ ಕೀಟನಾಶಕ ಸ್ಪಿರೊಮೆಸಿಫೆನ್ 22.9% ಎಸ್ ಸಿ  0.3 ಮಿಲಿ
ಅಬಾಸಿನ್ ಕೀಟನಾಶಕ ಅಬಾಮೆಕ್ಟಿನ್ 1.9% ಇಸಿ 0.7 ಮಿಲಿ
ಮೇಡನ್ ಕೀಟನಾಶಕ ಹೆಕ್ಸಿಥಿಯಾಜಾಕ್ಸ್ 5.45% ಇಸಿ 1 ಮಿಲಿ
ಇಂಟರ್ಪಿಡ್  ಕೀಟನಾಶಕ  ಕ್ಲೋರ್ಫೆನಾಪೈರ್ 10% ಎಸ್ ಸಿ  2 ಮಿಲಿ
ಡ್ಯಾನಿಟಾಲ್ ಕೀಟನಾಶಕ ಫೆನ್‌ಪ್ರೊಪಾಥ್ರಿನ್ 10% ಇಸಿ 1.5 ಮಿಲಿ
ಎಂಐಟಿ ಪ್ಲಸ್ ಕೀಟನಾಶಕ ಎಥಿಯಾನ್ 40%+ ಸೈಪರ್‌ಮೆಥ್ರಿನ್ 5% ಇಸಿ 2.5 ಮಿಲಿ
  1. ಕೆಂಪು ಹತ್ತಿ ತಿಗಣೆ : 

  • ವೈಜ್ಞಾನಿಕ ಹೆಸರು: ಡಿಸ್ಡರ್ಕಸ್ ಸಿಂಗ್ಯುಲಾಟಸ್
  • ಕೀಟದ ಹಾನಿ ಹಂತ: ಮೊಟ್ಟೆ ಮತ್ತು ವಯಸ್ಕ
  • ಸಂಭವಿಸುವ ಹಂತ: ಹೂಬಿಡುವ ಹಂತ

ಹತ್ತಿಯಲ್ಲಿ ಕೆಂಪು ಹತ್ತಿ  ತಿಗಣೆಯ ಲಕ್ಷಣಗಳು:

  • ಮೊಟ್ಟೆ  ಮತ್ತು ವಯಸ್ಕ ತಿಗಣೆಗಳು ಸಸ್ಯದ ಮತ್ತು ಕಾಯಿಗಳ ರಸವನ್ನು ಹೀರುತ್ತವೆ. 
  • ಇದು ನೂಲುಗಳ  ಮೇಲೆ ಕೆಂಪು ಕಲೆಗಳನ್ನು ಉಂಟುಮಾಡುತ್ತವೆ  ಮತ್ತು ಆದ್ದರಿಂದ ಇದನ್ನು “ಕಾಟನ್ ಬೋಲ್ ಸ್ಟೇನರ್”’ ಎಂದು ಕರೆಯಲಾಗುತ್ತದೆ. 
  • ಒಳಗಿನ ಕಾಯಿಯು ನೀರಿನಿಂದ ನೆನೆಸಿದ ಚುಕ್ಕೆಗಳನ್ನು ಹೊಂದಿರುತ್ತವೆ  ಮತ್ತು ಕಾಯಿಗಳು  ಕೊಳೆಯಲು ಕಾರಣವಾಗುತ್ತದೆ
  • ಬಾಧಿತ ಬೀಜಗಳ ಬೆಳವಣಿಗೆ ಕುಂಠಿತವಾಗುತ್ತದೆ. 

ಹತ್ತಿಯಲ್ಲಿ ಕೆಂಪು ಹತ್ತಿ ತಿಗಣೆಗಳ ಹಾವಳಿಗೆ  ಅನುಕೂಲಕರ ಪರಿಸ್ಥಿತಿಗಳು:

  • ತಡವಾಗಿ ನಾಟಿ ಮಾಡುವುದು, 27°C ಗಿಂತ ಹೆಚ್ಚಿನ ತಾಪಮಾನ, ಬರಗಾಲದ ಒತ್ತಡ, ಕಳೆ ಮೂಲ, ಹಿಂದಿನ ಬೆಳೆಗಳ ಅವಶೇಷಗಳು ಅಥವಾ ಬೆಲೆ ಹೊದಿಕೆಗಳು ಹೊಲದಲ್ಲಿರುವುದು  ಮತ್ತು ಜೇಡಗಳು ಮತ್ತು ಇರುವೆಗಳಂತಹ ನೈಸರ್ಗಿಕ ಶತ್ರುಗಳ ಕೊರತೆಯು ಕೆಂಪು ಹತ್ತಿ ತಿಗಣೆಗಳ ಹಾವಳಿಗೆ ಕಾರಣವಾಗುತ್ತದೆ. 

ಆರ್ಥಿಕ ಗರಿಷ್ಟ ಮಿತಿ :  10 – 15/100 ಸಸ್ಯಗಳು ಅಥವಾ ಪ್ರತಿ m2 ಪ್ರದೇಶಕ್ಕೆ

ಹತ್ತಿಯಲ್ಲಿ ಕೆಂಪು ಹತ್ತಿ ತಿಗಣೆಗಳ  ನಿರ್ವಹಣೆ:

ಉತ್ಪನ್ನದ ಹೆಸರು  ತಾಂತ್ರಿಕ ಅಂಶ  ಬಳಕೆಯ ಪ್ರಮಾಣ (ಪ್ರತೀ ಒಂದು ಲೀಟರ್ ನೀರಿಗೆ)
ಜೈವಿಕ ನಿರ್ವಹಣೆ
ಗ್ರೀನ್ ಪೀಸ್ ನೀಮೋಲ್ (10000

ಪಿಪಿಎಂ) ಬಯೋ ಬೇವಿನ ಎಣ್ಣೆ ಕೀಟನಾಶಕ

ಬೇವಿನ ಎಣ್ಣೆಯ ಸಾರಗಳು (ಅಜರ್ಡಿರಾಕ್ಟಿನ್) 1-2 ಮಿಲಿ
ರಾಸಾಯನಿಕ ನಿರ್ವಹಣೆ
ಬೆನೆವಿಯಾ ಕೀಟನಾಶಕ ಸೈಂಟ್ರಾನಿಲಿಪ್ರೋಲ್ 10.26% ಓಡಿ 1.5 ಮಿಲಿ
ಅಸಟಾಫ್ ಕೀಟನಾಶಕ ಅಸಿಫೇಟ್ 75% ಯಸ್ ಪಿ  1-1.5 ಗ್ರಾಂ 
ಅನಂತ್ ಕೀಟನಾಶಕ ಥಯಾಮೆಥಾಕ್ಸಮ್ 25 % ಡಬ್ಲ್ಯೂ ಜಿ  0.3 – 0.5 ಗ್ರಾಂ
ಅಂಶುಲ್ ಕ್ಲೋಸಿಪ್  ಕೀಟನಾಶಕ ಕ್ಲೋರ್ಪಿರಿಫಾಸ್ 50% + ಸೈಪರ್‌ಮೆಥ್ರಿನ್ 5% ಇಸಿ 2 ಮಿಲಿ

 

ವಿಶೇಷ ಸೂಚನೆ:

  • ಆರ್ಥಿಕ ಗರಿಷ್ಟ ಮಿತಿ  (ETL) – ಇದು ಹೆಚ್ಚುತ್ತಿರುವ ಕೀಟ ಸಂಖ್ಯೆಯನ್ನು ತಡೆಗಟ್ಟಲು ನಿಯಂತ್ರಣ ಕ್ರಮಗಳನ್ನು ನಿರ್ಧರಿಸುವ ಕೀಟಗಳ ಸಂಖ್ಯೆಯ  ಸಾಂದ್ರತೆಯಾಗಿದೆ. 
  • ಜಮೀನಿನಲ್ಲಿಆರ್ಥಿಕ ಗರಿಷ್ಟ ಮಿತಿಯನ್ನು  ಪರಿಶೀಲಿಸುವ ಮೂಲಕ, ಕೀಟವನ್ನು ನಿಯಂತ್ರಿಸಲು, ಹಾವಳಿಯ  ಅಪಾಯವನ್ನು ಕಡಿಮೆ ಮಾಡಲು ಮತ್ತು ಭವಿಷ್ಯದಲ್ಲಿ ಬೆಳೆ ನಷ್ಟವನ್ನು ಕಡಿಮೆ ಮಾಡಲು ಮೇಲೆ ತಿಳಿಸಿದ ಕೀಟ ನಿರ್ವಹಣೆ ವಿಧಾನಗಳನ್ನು ತೆಗೆದುಕೊಳ್ಳಬಹುದು.
spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು