HomeCropಹೀರೆಕಾಯಿಯನ್ನು ಬೆಳೆಯಿರಿ ಹಾಗೂ ಅಧಿಕ ಇಳುವರಿ ಪಡೆಯಿರಿ 

ಹೀರೆಕಾಯಿಯನ್ನು ಬೆಳೆಯಿರಿ ಹಾಗೂ ಅಧಿಕ ಇಳುವರಿ ಪಡೆಯಿರಿ 

ಹೀರೆಕಾಯಿ  (ಲುಫಾ ಅಕುಟಾಂಗುಲಾ)  ಕುಕುರ್ಬಿಟೇಸಿಯೇ ಕುಟುಂಬಕ್ಕೆ ಸೇರಿದೆ.  ವರ್ಷವಿಡೀ ಬೆಳೆಯುವ ಇದನ್ನು ತರಕಾರಿಯಾಗಿ ಬಳಸಲಾಗುತ್ತದೆ. ಇದು ಬಳ್ಳಿ ಜಾತಿಯ ತರಕಾರಿಯಾಗಿರುವುದರಿಂದ ಇದಕ್ಕೆ ಚಪ್ಪರದ ಅಗತ್ಯ ಇದೆ ಅಥವಾ ಒಂದು ಊರುಕೋಲು ಕೊಟ್ಟು  ಕೋಲಿಗೆ ಹೀರೆಬಳ್ಳಿಯನ್ನು ಸುತ್ತಿ ದಾರದಿಂದ ಕಟ್ಟಬೇಕು. ಹಣ್ಣುಗಳ ಆಕಾರದಲ್ಲಿ  ಮತ್ತು ಉದ್ದದಲ್ಲಿ  ಬಹಳ  ವ್ಯತ್ಯಾಸವಿರುತ್ತದೆ.  

ಹೀರೆಕಾಯಿಗೆ  ಅನುಸರಿಸಬೇಕಿರುವ ಪದ್ದತಿಗಳು : 

ಸೂಕ್ತ ಹವಾಮಾನ ಮತ್ತು ಮಣ್ಣು

ಬೆಚ್ಚಗಿನ ಮತ್ತು ಆರ್ದ್ರ ವಾತಾವರಣವು ಇದರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅನುಕೂಲಕರವಾಗಿರುತ್ತದೆ.  ಸರಿಯಾದ  ತಾಪಮಾನ 25-30 ಡಿಗ್ರಿ ಇರಬೇಕು.  

ಹೀರೆಕಾಯಿಯನ್ನು  ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಯಬಹುದು ಆದರೆ ಜೇಡಿಮಣ್ಣು ಮತ್ತು ಸವಳು  ಮಣ್ಣು ಈ ಬೆಳೆಗೆ  ಸೂಕ್ತವಾಗಿರುತ್ತದೆ. 

6.5 ರಿಂದ 7.5 ವರೆಗಿನ ಮಣ್ಣಿನ pH ನಲ್ಲಿ ಉತ್ತಮವಾಗಿ ಬೆಳೆಯುತ್ತದೆ.  ಸರಿಯಾದ ಮಣ್ಣಿನ ಒಳಚರಂಡಿ ಹೆಚ್ಚು ಇಳುವರಿ ಪಡೆಯುವಲ್ಲಿ ಪ್ರಯೋಜನಕಾರಿಯಾಗಿರುತ್ತದೆ. 

ಬೀಜಗಳ  ಪ್ರಮಾಣ :

3.5 ರಿಂದ 5 ಕೆಜಿ/ಹೆಕ್ಟೇರ್ ಗೆ. 

ಬಿತ್ತನೆಯ ಸಮಯ

ಹೀರೆಕಾಯಿಯನ್ನು ಬೇಸಿಗೆ ಮತ್ತು ಮಳೆಗಾಲದ ಬೆಳೆಯಾಗಿ ಬೆಳೆಯಲಾಗುತ್ತದೆ.

ಬೇಸಿಗೆ ಬೆಳೆ:           ಜನವರಿ ಯಿಂದ ಏಪ್ರಿಲ್.

ಮಳೆಗಾಲದ ಬೆಳೆ:     ಜೂನ್ ನಿಂದ ಜುಲೈ. 

ಅಂತರ

1.5 ರಿಂದ 2.5 ಮೀ (ಸಾಲಿನಿಂದ ಸಾಲಿಗೆ) x 60 ರಿಂದ 120 ಸೆಂಮೀ (ಗಿಡ ದಿಂದ ಗಿಡಕ್ಕೆ) ಅಂತರವನ್ನು ನೀಡಬೇಕು. 

ಗೊಬ್ಬರ ಮತ್ತು ರಸಗೊಬ್ಬರಗಳು: 

ಭೂಮಿಯನ್ನು ಸಿದ್ಧಪಡಿಸುವ ಸಮಯದಲ್ಲಿ ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರವನ್ನು  @ 10-15 ಟನ್/ಹೆಕ್ಟೇರ್ ಗೆ  ಹಾಕಬೇಕು. 

ಬಿತ್ತನೆ ಮಾಡುವ ಮೊದಲು ರಸಗೊಬ್ಬರವನ್ನು @ 25:30:30 ಕೆಜಿ/ಹೆಕ್ಟೇರ್ ಗೆ ಹಾಕಬೇಕು. ಮೂವತ್ತು ದಿನಗಳ ನಂತರ 15-25 ಕೆಜಿ ಸಾರಜನಕ/ ಹೆಕ್ಟೇರ್ ಗೆ  ಹಾಕಬೇಕು. 

ಪ್ರತಿ ಎಕರೆಗೆ ಮೇಲುಗೊಬ್ಬರ/ ರಸಗೊಬ್ಬರಗಳು

  • 65:40:50 ಸಾರಜನಕ : ರಂಜಕ : ಪೊಟಾಷ್ (ಕೆಜಿ/ಎಕರೆ/ ಬೆಳೆ)
  • ಡೈಅಮೋನಿಯಂ ಫಾಸ್ಫೇಟ್ (DAP) 50 ಕೆ.ಜಿ.
  • ಮ್ಯೂರಿಯೇಟ್ ಆಫ್ ಪೊಟ್ಯಾಷ್ (MOP) 25 ಕೆ.ಜಿ.

ಪೋಷಕಾಂಶಗಳ ಎರಡನೇ ಡೋಸ್ ಅಪ್ಲಿಕೇಶನ್ – ಕ್ಯಾಲ್ಸಿಯಂ ನೈಟ್ರೇಟ್ 15 ಕೆಜಿ + 20: 20: 00 : 13 – 100 ಕೆಜಿ; ಮಲ್ಟಿಪ್ಲೆಕ್ಸ್ ಮಹಾಫಲ್ 1 L + ಯೂರಿಯಾ 45 ಕೆಜಿ + 25 ಕೆಜಿ MOP ಯೊಂದಿಗೆ ಬಲವರ್ಧಿತ 45 ಕೆಜಿ + 25 ಕೆಜಿ MOP ಅನ್ನು ಮಣ್ಣಿಗೆ ಹಾಕಬಹುದು ಮತ್ತು ಮಣ್ಣಿನಿಂದ ಮುಚ್ಚಬೇಕು. 

ನೀರಿನ ಸಂರಕ್ಷಣೆ ಮತ್ತು ನಿರ್ವಹಣೆ ತಂತ್ರಜ್ಞಾನಗಳು: 

ಒಣ ಪ್ರದೇಶದಲ್ಲಿ ಈ ಬೆಳೆಗೆ, ನೀರನ್ನು ಸಂರಕ್ಷಿಸಲು ಸಮಗ್ರ  ನೀರಾವರಿ ಕೃಷಿ  ತಂತ್ರಜ್ಞಾನ ಪದ್ದತಿಯನ್ನುಮಾಡಬೇಕು. ಸಾಮಾನ್ಯವಾಗಿ ಹನಿ ನೀರಾವರಿ ತಂತ್ರಜ್ಞಾನವನ್ನು ರೈತರು ಅಳವಡಿಸಿಕೊಳ್ಳುತ್ತಾರೆ.

ಮಲ್ಚಿಂಗ್ ಶೀಟ್‌(ಹೊದಿಕೆಗಳಿಂದ)ಗಳಿಂದ ಮಣ್ಣಿನ ಮೇಲ್ಮೈಯನ್ನು ಮುಚ್ಚುವ ಮೂಲಕ ಹೆಚ್ಚಿನ ಮಣ್ಣಿನ ತೇವಾಂಶವನ್ನು ಕಾಯ್ದಿರಿಸಬಹುದು ಮತ್ತು ಕಳೆಗಳ ಬೆಳವಣಿಗೆಯನ್ನು ತಡೆಯಬಹುದು.  25-30 ಮೈಕ್ರಾನ್‌ನ ಕಪ್ಪು ಅಥವಾ ಬಿಳಿ ಮಲ್ಚ್ ಪೇಪರ್ ಅನ್ನು ಬೆಳೆ ಹೊದಿಕೆಯನ್ನಾಗಿ ಬಳಸಬಹುದು.

  • ಬೇಸಿಗೆ ಬೆಳೆಗೆ ಬಿತ್ತನೆ ಮಾಡಿದ ನಂತರ ೨-೩ ದಿನಗಳೊಳಗೆ ನೀರು ಕೊಡಬೇಕು. 
  • 4-5 ದಿನಗಳ ಮಧ್ಯಂತರದಲ್ಲಿ ನೀರನ್ನು ನೀಡಲಾಗುತ್ತದೆ. ಮಳೆಗಾಲದ ಬೆಳೆಗೆ ನೀರು ಕೊಡುವುದಿಲ್ಲ.

ಬಿತ್ತನೆ ವಿಧಾನ :

ಬೀಜಗಳನ್ನು ಸುಮಾರು 1 ರಿಂದ 2 ಗಂಟೆಗಳ ಕಾಲ ಬಿತ್ತನೆ ಮಾಡುವ ಮೊದಲು ನೀರಿನಲ್ಲಿ ನೆನೆಸಿಡಬಹುದು. ಬಿತ್ತನೆ ಮಾಡುವ ಮೊದಲು ಬೀಜಗಳನ್ನು 100 ಗ್ರಾಂ ಮೆಟಲಾಕ್ಸಿಲ್ 35% 1 ಗ್ರಾಂ ನೊಂದಿಗೆ ಸಂಸ್ಕರಿಸಿ ½ ಇಂಚು ಆಳದಲ್ಲಿ ಬಿತ್ತಿ ನಂತರ ಮೇಲ್ಮಣ್ಣಿನಿಂದ ಮುಚ್ಚಲಾಗುತ್ತದೆ. 

ಬೆಳೆ ರಕ್ಷಣೆ

ಶಿಲೀಂಧ್ರ ರೋಗಗಳು ಮತ್ತು ಕೀಟಗಳ ಯಾವುದೇ ದಾಳಿಯನ್ನು ತಡೆಗಟ್ಟಲು ಸಸಿಗಳ ಬೇರುಗಳನ್ನು ಕೀಟನಾಶಕ ಮತ್ತು ಶಿಲೀಂಧ್ರನಾಶಕ ಮಿಶ್ರಣದಲ್ಲಿ (ಮೆಟಲಾಕ್ಸಿಲ್ 35 % 0.5 gm/L+ ಕ್ಲೋರೋಪೈರಿಫೋಸ್ 50 Ec 2 mL/L) ಅದ್ದಬೇಕು. 

ಕಳೆ  ನಿರ್ವಹಣೆ:

ಅಗತ್ಯವಿದ್ದರೆ ಕೈ ಕಳೆಯನ್ನು ಮಾಡಬೇಕು ಅಥವಾ  ಸಣ್ಣ ಉಪಕರಣಗಳೊಂದಿಗೆ ಕೈ ಕಳೆ ಮಾಡಬಹುದು. 

ಕಳೆ ಬಂದ ನಂತರದ ಕಳೆನಾಶಕಗಳನ್ನು  (ಅಜಿಲ್ @ 2 ಮಿಲಿ/ಲೀ) ನೀರಿಗೆ ಬೆರೆಸಿ  ಸಿಂಪಡಿಸಬಹುದು. 

ಅಂತರ ಬೇಸಾಯ  ಕಾರ್ಯಗಳು 

ಸ್ಟಾಕಿಂಗ್ :

ಬಳ್ಳಿಗೆ ತೆಳುವಾದ ಬಿದಿರಿನ ಕಂಬದ ಸಹಾಯದಿಂದ ಬಳ್ಳಿಗೆ ಬೆಂಬಲ ನೀಡಬೇಕು, ಇದನ್ನು ಬೆಂಬಲಿಸುವುದಕ್ಕಾಗಿ ಬಳಸಲಾಗುತ್ತದೆ.

ಸಸ್ಯ ಸಂರಕ್ಷಣೆ:

ಕೀಟಗಳು ಹಾಗೂ ಅವುಗಳ ನಿರ್ವಹಣೆ: 

ಗಿಡಹೇನುಗಳು: ಸಾಮಾನ್ಯವಾಗಿ ಎಳೆಯ,  ಬೆಳೆಯುವ ಮತ್ತು ರಸವತ್ತಾದ ಸಸ್ಯ ಭಾಗಗಳ ರಸವನ್ನು ಹೀರುತ್ತವೆ. ಎಳೆಯ ಎಲೆಗಳು, ಕಾಂಡಗಳು, ಮೊಗ್ಗುಗಳು, ಹೂವುಗಳು, ಹಣ್ಣುಗಳ ಮೇಲೆ ಹೆಚ್ಚಾಗಿ  ಪರಿಣಾಮ ಬೀರುತ್ತವೆ. 

ಗಿಡಹೇನುಗಳಿಂದ ದಾಳಿಗೊಳಗಾದ ಸಸಿ ಭಾಗಗಳ ಮೇಲೆ  ತಿರುಚಿದ, ಸುರುಳಿಯಾಕಾರದ ಅಥವಾ ಊದಿಕೊಂಡ ಮಚ್ಚೆಗಳನ್ನು ಕಾಣಬಹುದು.  ಹಳದಿ ಮಚ್ಚೆಯುಳ್ಳ ಎಲೆಗಳು, ಸೋಂಕಿತ ಸಸ್ಯದ ಭಾಗಗಳು ಕಂದು ಬಣ್ಣಕ್ಕೆ ಕಾರಣವಾಗಬಹುದು.

ನಿಯಂತ್ರಣ : ಮೊನೊಕ್ರೊಟೊಫಾಸ್ @0.05-0.01% ಅಥವಾ ಡೆಮೆಟಾನ್ ಮೀಥೈಲ್ @0.05-0.02% ಗಿಡಹೇನುಗಳಿಂದ ಸಸ್ಯವನ್ನು ರಕ್ಷಿಸಲು  ಸಹಾಯ ಮಾಡುತ್ತದೆ.

ಹಸಿರು ಜಿಗಿ ಹುಳುಗಳು:ಬೇಸಿಗೆಯ ತಿಂಗಳುಗಳಲ್ಲಿ, ಜಿಗಿ ಹುಳುಗಳು  ಈ ಬೆಳೆಗೆ  ಭಾರೀ ನಷ್ಟವನ್ನು ಉಂಟುಮಾಡುತ್ತವೆ. ಹಸಿರು ಜಿಗಿ ಹುಳು,  ಎಲೆಗಳ ಮೇಲೆ  ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ ಹಾಗೂ  ರಸವನ್ನು ಹೀರುತ್ತವೆ. 

ನಿಯಂತ್ರಣ : ಆರಂಭದಲ್ಲಿ ಹದಿನೈದು ದಿನಗಳ ಮಧ್ಯಂತರದಲ್ಲಿ ಬೇವಿನ ಎಣ್ಣೆ ಬೆಳ್ಳುಳ್ಳಿ ಮಿಶ್ರಣಮಾಡಿ ಬೆರೆಸಿ ಸಿಂಪಡಿಸುವುದರಿಂದ ಜಿಗಿ ಹುಳುಗಳ  ನಿಯಂತ್ರಣವನ್ನು ಮಾಡಬಹುದು. ಅಸಿಟಾಫ್, ಇಮಿಡಾಕ್ಲೋಪ್ರಿಡ್ @ 0.05-0.01% ಇತ್ಯಾದಿ ಕೀಟನಾಶಕಗಳ ಸಿಂಪಡಣೆಯು ಜಿಗಿ ಹುಳುಗಳನ್ನು  ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.

ರೋಗಗಳು ಹಾಗೂ ಅವುಗಳ ನಿಯಂತ್ರಣ : 

ಎಲೆ ಚುಕ್ಕೆರೋಗ : ಎಲೆಗಳ ಮೇಲೆ ಹಳದಿ, ಬೂದು ಅಥವಾ ಕಂದು ಬಣ್ಣದ ಚುಕ್ಕೆಗಳು ಕಾಣುತ್ತದೆ ಹಾಗೂ ದೊಡ್ಡದಾಗಿ,  ವೃತ್ತಾಕಾರದ ಕೇಂದ್ರೀಕೃತ ಉಂಗುರ  ತರಹದ ಮಚ್ಚೆಗಳು ಕಾಣುತ್ತದೆ  ಕ್ರಮೇಣವಾಗಿ  ಕಪ್ಪು ಕಲೆಗಳು ಒಗ್ಗೂಡಿ ಎಲೆಗಳ ರೋಗಕ್ಕೆ ಕಾರಣವಾಗುತ್ತವೆ.

ಇದರ  ತೀವ್ರತೆ ಹೆಚ್ಚಾದಾಗ,  ತೊಟ್ಟುಗಳು, ಕಾಂಡದ ಭಾಗಗಳ  ಮೇಲೂ ಕಲೆಗಳು ಕಾಣಿಸಿಕೊಳ್ಳುತ್ತವೆ.

ನಿಯಂತ್ರಣ ಕ್ರಮಗಳು:

  • ಹೊಲದಿಂದ ಎಲ್ಲಾ ಕಳೆಗಳನ್ನು ತೆಗೆದುಹಾಕಿ. 
  • 300-400 ಲೀ ನೀರಿನಲ್ಲಿ ಝೈನೇಬ್ 75% WP @ 600-800 ಗ್ರಾಂ ಅಥವಾ 300 ಲೀ ನೀರಿನಲ್ಲಿ / ಎಕರೆಗೆ ಮ್ಯಾಂಕೋಜೆಬ್ 75% WP @ 600-800 ಗ್ರಾಂ ಅನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 

ಕಾಂಡ  ಕೊಳೆತ: ಮಣ್ಣಿನ ಮಟ್ಟದಲ್ಲಿರುವ  ಕಾಂಡದ ಬುಡಗಳು ಕೊಳೆತು, ಸಸ್ಯಗಳು ಸಾಯುತ್ತವೆ. ಈ ರೋಗದ ಹೆಚ್ಚು ಪರಿಣಾಮವನ್ನು  ನೀರಾವರಿ  ಪ್ರದೇಶಗಳಲ್ಲಿ  ಮತ್ತು ಮಳೆಗಾಲದಲ್ಲಿ ಕಾಣಬಹುದು. 

ನಿಯಂತ್ರಣ ಕ್ರಮಗಳು:

  • ಇದನ್ನು ನಿಯಂತ್ರಿಸಲು  ಥೈರಮ್ @ 3 ಗ್ರಾಂ/ಕೆಜಿಗೆ  ಬೀಜಗಳನ್ನು ಸಂಸ್ಕರಿಸಬೇಕು. 
  • ರೆಡೋಮಿಲ್ (0.2%) ದ್ರಾವಣದ ಒಳಗೆ ಬಳ್ಳಿಗಳನ್ನು ಅದ್ಧಬೇಕು.  
  • ರೋಗದ ನಿಯಂತ್ರಣಕ್ಕೆ ಕಾರ್ಬೆಂಡಜಿಮ್ (0.1%) @ 2ಗ್ರಾಂ/ಕೆಜಿಗೆ  ಶಿಫಾರಸು ಮಾಡಲಾಗುತ್ತದೆ.

ಕೊಯ್ಲು : 

ಬಿತ್ತನೆ ಮಾಡಿದ 45-60 ದಿನಗಳಲ್ಲಿ ಹೀರೆಕಾಯಿಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ಕಾಯಿಗಳು ಇನ್ನೂ ಎಳೆಯ ಮತ್ತು ಮೃದುವಾಗಿರುವಾಗಲೇ  ಕೊಯ್ಯಬೇಕು. ತಡವಾದ ಕೊಯ್ಲು ಕಾಯಿಗಳ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಕಡಿಮೆ ಬೆಲೆಯನ್ನು ಪಡೆಯಬಹುದು ಹಾಗೂ ರುಚಿಯನ್ನು ಕಳೆದುಕೊಳ್ಳುತ್ತದೆ.

 

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು