ಭಾರತವು 2020 – 21 ಸಾಲಿನಲ್ಲಿ 11.02 ಲಕ್ಷ ಟನ್ ಅರಿಶಿನವನ್ನು ರಫ್ತು ಮಾಡಿದೆ. ಭಾರತದ ಅರಿಶಿನ ಬೆಳೆಯು ಅತಿ ಹೆಚ್ಚಿನ ಕುರ್ಕ್ಯುಮಿನ್(ನೋವು ನಿವಾರಕ ಗುಣ) ಮಟ್ಟವನ್ನು ಹೊಂದಿದೆ. ಹಾಗಾಗಿ, ಭಾರತದ ಅರಿಶಿನ ಬೆಳೆಗೆ ಹೆಚ್ಚಿನ ಬೇಡಿಕೆಯಿದೆ. ಆಯುರ್ವೇದದ ಪ್ರಕಾರ, ಅರಿಶಿನ ದಲ್ಲಿ ಇರುವಂತಹ ಕುರ್ಕ್ಯುಮಿನ್ ಅಂಶವು ನೈಸರ್ಗಿಕವಾಗಿ ಕ್ಯಾನ್ಸರ್ ತಡೆಯುವ ಗುಣವನ್ನು ಹೊಂದಿದೆ. ವೆಬ್ಮೆಡ್ ಪ್ರಕಾರ “ಅರಿಶಿನವನ್ನು ಸಂಧಿವಾತ, ಎದೆಯುರಿ (ಡಿಸ್ಪೆಪ್ಸಿಯಾ), ಹೊಟ್ಟೆ ನೋವು, ಅತಿಸಾರ, ಕರುಳಿನ ಅನಿಲ, ಹೊಟ್ಟೆ ಉಬ್ಬುವುದು, ಕಾಮಾಲೆ, ಯಕೃತ್ತಿನ ಸಮಸ್ಯೆಗಳು ಮತ್ತು ಪಿತ್ತಕೋಶದ ಕಾಯಿಲೆಗೆ ಬಳಸಲಾಗುತ್ತದೆ.”
ಕಷ್ಟದ ಮಟ್ಟ : ಮಧ್ಯಮ
ತಳಿಗಳ ಆಯ್ಕೆ
ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಅರಿಶಿನ ತಳಿಗಳು ಲಭ್ಯವಿದೆ. ಅವುಗಳಲ್ಲಿ ಅತಿ ಜನಪ್ರಿಯ ತಳಿಗಳು ಯಾವುವೆಂದರೆ ಅಮೃತಪಾಣಿ, ಆರ್ಮೂರ್, ದುಗ್ಗಿರಾಳ, ಟೇಕೂರ್ಪೇಟ, ಪಟ್ಟಾಂತ್, ದೇಶಿ, ಮೂವಾಟ್ಟುಪುಳ, ವೈನಾಡ್, ರಾಜಪೋರ್, ಕರ್ಹಾಡಿ, ವೈಗಾನ್, ಚಿನ್ನನಾದನ್, ಪೆರಿಯಾನಾಡ, ಕೋ 1, ಬಿಎಸ್ಆರ್ 1, ರೋಮಾ, ಸ್ವರ್ಣ, ಸುದರ್ಶನ, ಸುಗುಣ, ಸುಗಂಧಂ, ಬಿಎಸ್ಆರ್2 ,ರಂಗ, ರಶ್ಮಿ, ರಾಜೇಂದ್ರ ಸೋನಿಯಾ, ಕೃಷ್ಣ, ಸುರೋಮಾ, ಅಲ್ಲೆಪಿ ಫಿಂಗರ್ ಅರಿಶಿನ (AFT), IISR ಪ್ರಭಾ, IISR ಪ್ರತಿಭಾ, IISR ಅಲೆಪ್ಪಿ ಸುಪ್ರೀಂ ಮತ್ತು IISR ಕೇದಾರಂ.
ಅರಿಶಿನ ಗೆಡ್ಡೆಗಳ ಸಂಸ್ಕರಣೆ:
ಅರಿಶಿನವನ್ನು ರೈಜೋಮ್/ ಗೆಡ್ಡೆಗಳ ಮೂಲಕ ಪ್ರಸರಣ ಮಾಡಲಾಗುತ್ತದೆ . ಗೆಡ್ಡೆಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ನಂತರ ಡೈಮಿಥೋಯೇಟ್ 30% EC – 2 ಮಿಲೀ /ಲೀಟರ್ ಅಥವಾ ಮೊನೊಕ್ರೊಟೊಫಾಸ್ 36 WSC – 1.5 ಮಿಲೀ /ಲೀಟರ್ ಮತ್ತು 0.3% ಕಾಪರ್ ಆಕ್ಸಿಕ್ಲೋರೈಡ್ (3 ಗ್ರಾಂ/ಲೀಟರ್) ದ್ರಾವಣದಲ್ಲಿ, 30 ನಿಮಿಷಗಳ ಕಾಲ ನೆನೆಸಿಡಬೇಕು. ಇನ್ನೊಂದು ಪರ್ಯಾಯ ವಿಧಾನವೆಂದರೆ ಸ್ಯೂಡೋಮೊನಾಸ್ ಫ್ಲೋರೊಸೆನ್ಸ್ 10 ಗ್ರಾಂ/ಕೆಜಿ ಮತ್ತು ಟ್ರೈಕೋಡರ್ಮಾ ವಿರಿಡೆ 4 ಗ್ರಾಂ/ಕೆಜಿ ಮೂಲಕ ಗೆಡ್ಡೆಗಳ ಸಂಸ್ಕರಣೆ ಮಾಡುವುದು.
ಅರಿಶಿನ ಬೆಳೆಗೆ ಭೂಮಿ ಸಿದ್ಧತೆ
ಬಿತ್ತನೆ ಮಾಡುವ ಮೊದಲು ಭೂಮಿಯನ್ನು ನಾಲ್ಕು ಬಾರಿ ಉಳುಮೆ ಮಾಡಬೇಕು . ಪ್ರತಿ ಬಾರಿ ಉಳಿ ಮತ್ತು ಡಿಸ್ಕ್ ನೇಗಿಲಿನಿಂದ ಹಾಗು ಎರಡು ಬಾರಿ ಏರುಮಡಿ ಮಾಡುವ ಉಪಕರಣದಿಂದ ಉಳುಮೆ ಮಾಡಬೇಕು . ಏರುಮಡಿ ರೂಪಿಸುವ ಮೂಲಕ ಸಾಲುಗಳ ನಡುವೆ 45 ಸೆಂ.ಮೀ (ಅಥವಾ) ಎತ್ತರದ ಸಾಲುಗಳನ್ನು 120 ಸೆಂ.ಮೀ ಅಗಲ ಹಾಗು ಸಸ್ಯಗಳ ನಡುವೆ 30 ಸೆಂ.ಮೀ ಜಾಗದಲ್ಲಿ ರಚನೆ ಮಾಡಲಾಗುತ್ತದೆ ಮತ್ತು ಲ್ಯಾಟರಲ್ಸ್ ಅನ್ನು ಪ್ರತಿ ಸಾಲಿನ ಮಧ್ಯದಲ್ಲಿ ಇರಿಸಲಾಗುತ್ತದೆ.
ಮಣ್ಣಿನ ತೇವಾಂಶದ ಮಟ್ಟವನ್ನು ಅವಲಂಬಿಸಿ, ಸಾಲುಗಳನ್ನು ಹನಿ ನೀರಾವರಿ ಮೂಲಕ 8-12 ಗಂಟೆಗಳ ಕಾಲ ತೇವಗೊಳಿಸಲಾಗುತ್ತದೆ.
ಕೊನೆಯ ಉಳುಮೆಯ ಸಮಯದಲ್ಲಿ 25 ಟನ್/ಹೆ ಕೊಟ್ಟಿಗೆ ಗೊಬ್ಬರ ,ಬೇವಿನ ಅಥವಾ ಶೇಂಗಾ ಹಿಂಡಿಯನ್ನು -200ಕೆಜಿ/ ಹೆ ,25:60:108 ಕೆಜಿ ಸಾರಜನಕ :ರಂಜಕ:ಪೊಟ್ಯಾಷ್ /ಹೆ; 30 ಕೆಜಿ ಅಷ್ಟು ಫೆರಸ್ ಸಲ್ಫೆಟ್ ಮತ್ತು 15 ಕೆಜಿ ಜಿಂಕ್ ಸಲ್ಫೇಟ್ .
ಪ್ರತಿ ಹೆಕ್ಟೇರ್ಗೆ ಅಜೋಸ್ಪಿರಿಲಮ್- 10 ಕೆಜಿ ಮತ್ತು ಫಾಸ್ಫೋಬ್ಯಾಕ್ಟೀರಿಯ- 10 ಕೆಜಿಯನ್ನು ನಾಟಿ ಮಾಡುವ ಸಮಯದಲ್ಲಿ ಭೂಮಿಗೆ ನೀಡಬೇಕು.
ಅರಿಶಿನ ಬೆಳೆಗೆ ಮಣ್ಣಿನ ಅವಶ್ಯಕತೆಗಳು
ಉಷ್ಣಭರಿತ ವಾತಾವರಣ, ನೀರು ಬಸಿದು ಹೋಗುವಂಥಹ ಮರಳು ಮಿಶ್ರಿತ ಕೆಂಪು ಗೋಡು, ಮಧ್ಯಮ ಕಪ್ಪು ಭೂಮಿ ಮತ್ತು ಜಂಬಿಟ್ಟಿಗೆ ಮಣ್ಣುಗಳು ಅರಿಶಿನ ಬೆಳೆಗೆ ಸೂಕ್ತ. ವಾರ್ಷಿಕ 1500 ಮಿಮೀ ಮಳೆ ಬೀಳುವ ಪ್ರದೇಶಗಳಲ್ಲಿ ಅರಶಿನ ಕೃಷಿಯನ್ನು ಉತ್ತಮವಾಗಿ ಮಾಡಬಹುದು
ಹಿನ್ನುಡಿ
ಅರಿಶಿನ ಬೆಳೆಯು ಒಂದು ಕಠಿಣ ಬೆಳೆಯಾಗಿದೆ. ಈ ಬೆಳೆಯನ್ನು ಬೆಳೆಯಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಅರಿಶಿನ ಬೆಳೆಯು ಹೆಚ್ಚಿನ ಬೇಡಿಕೆಯ ಬೆಳೆಯಾಗಿದ್ದು, ಇದು ಹೆಚ್ಚು ರಫ್ತು ಮಾಡುವ ಬೆಳೆಯಾಗಿದೆ.ಅರಿಶಿನವು ದೀರ್ಘಾವಧಿ ಶೇಖರಣಾ ಸಾಮರ್ಥ್ಯವನ್ನು ಸಹ ಹೊಂದಿದೆ.