HomeCropಕಲ್ಲಂಗಡಿ   ಬೆಳೆಗೆ ಭೂಮಿ  ಸಿದ್ಧತೆ

ಕಲ್ಲಂಗಡಿ   ಬೆಳೆಗೆ ಭೂಮಿ  ಸಿದ್ಧತೆ

ಕಲ್ಲಂಗಡಿಯು  ಕುಕುರ್ಬಿಟೇಸಿ ಕುಟುಂಬಕ್ಕೆ ಸೇರಿದ ಒಂದು ಬೆಳೆಯಾಗಿದೆ. .ಕಳೆದ ಶತಮಾನದಿಂದ ಈಚೆಗೆ ಬಿಳಿ ಸಿಪ್ಪೆಗಿಂತ, ಹೆಚ್ಚು ರಸಭರಿತವಾದ ಕೆಂಪು ಕಲ್ಲಂಗಡಿ ಪಡೆಯಲು ಬೆಳೆಸಲಾಗುತ್ತದೆ.  2020 – 2021 ರ ಸಾಲಿನಲ್ಲಿ  ಭಾರತವು ಸುಮಾರು 31 ಮಿಲಿಯನ್ ಟನ್ ಕಲ್ಲಂಗಡಿ ಉತ್ಪಾದಿಸಿದೆ. ಭಾರತದಲ್ಲಿ ಅತಿ ಹೆಚ್ಚು ಕಲ್ಲಂಗಡಿ ಬೆಳೆಯುವ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಹರಿಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳು ಅಗ್ರ ಸ್ಥಾನದಲ್ಲಿವೆ. 

ಕಷ್ಟದ ಮಟ್ಟ: ಮಧ್ಯಮ 

ಬಿತ್ತನೆ ಬೀಜಗಳ ಆಯ್ಕೆ

ಕಲ್ಲಂಗಡಿಯಲ್ಲಿ ಹಲವು ವಿಧದ ತಳಿಗಳಿವೆ. ಅವುಗಳಲ್ಲಿ  ವಿವಿಧ ಬಣ್ಣದ , ಬೀಜಗಳನ್ನು ಹೊಂದಿರುವ ತಳಿಗಳು, ಬೀಜಗಳಿಲ್ಲದ ತಳಿಗಳು  ಹಾಗು ವಿವಿಧ ಗಾತ್ರ ಮತ್ತು ಆಕಾರದ ಆಧಾರದ ಮೇಲೆ  ಕಲ್ಲಂಗಡಿ ತಳಿಗಳಿವೆ . ಇವುಗಳಲ್ಲಿ ಮುಖ್ಯವಾಗಿ ಅರ್ಕಾ ಮಾಣಿಕ್, ದುರ್ಗಾಪುರ್ ಕೇಸರ್, ಅರ್ಕಾ ಜ್ಯೋತಿ, ಸ್ಪೆಷಲ್ ನಂಬರ್  1, ಅಸಾಹಿ ಯಮಟೊ, ಶುಗರ್ ಬೇಬಿ, ಮಾಧುರಿ 64, ಬ್ಲ್ಯಾಕ್ ಮ್ಯಾಜಿಕ್, ಸುಧಾರಿತ ಶಿಪ್ಪರ್, ಪೂಸಾ ಬೆದನಾ, ದುರ್ಗಾಪುರ ಮೀಠಾ, ವರುಣ್, ವಿಮಲ್, ಲೇಖಾ, ಬ್ಲ್ಯಾಕ್ ಥಂಡರ್, ಅರ್ಕಾ ಆಕಾಶ್, ಸುವರ್ಣಿಮಾ ಮತ್ತು ಅರ್ಕ ಮುತ್ತು ಪ್ರಮುಖ ತಳಿಗಳು.  

ಕಲ್ಲಂಗಡಿ ಬೀಜಗಳ ಬೀಜೋಪಚಾರ :

ಕಲ್ಲಂಗಡಿ ಬೀಜಗಳನ್ನು ಟ್ರೈಕೋಡರ್ಮಾ ವಿರಿಡೇ 4 ಗ್ರಾಂ / ಕೆಜಿ ಬೀಜಗಳಿಗೆ  ಅಥವಾ ಸ್ಯೂಡೋಮೊನಾಸ್ ಫ್ಲೋರೊಸೆನ್ಸ್ 10 ಗ್ರಾಂ / ಕೆಜಿ ಬೀಜಗಳಿಗೆ ಅಥವಾ ಕಾರ್ಬೆಂಡೆಜಿಮ್ 2 ಗ್ರಾಂ / ಕೆಜಿ ಬೀಜಗಳಿಗೆ  ಬೆರೆಸುವುದರ ಮೂಲಕ ಬೀಜೋಪಚಾರ ಮಾಡಬೇಕು. ಈ ರೀತಿ  ಬೀಜೋಪಚಾರ  ಮಾಡುವುದರಿಂದ ಮಣ್ಣಿನಿಂದ ಹರಡುವ ಶಿಲೀಂಧ್ರ ರೋಗಗಳನ್ನು ತಡೆಗಟ್ಟಬಹುದು. 

ಕಲ್ಲಂಗಡಿ  ಬೆಳೆಗೆ  ಸಸಿಮಡಿ    ತಯಾರಿ

ಕಲ್ಲಂಗಡಿ ಸಸಿ ಮಡಿಯನ್ನು  200 ಗೇಜ್, 10 ಸೆಂ.ಮೀ ವ್ಯಾಸ ಮತ್ತು 15 ಸೆಂ.ಮೀ ಎತ್ತರವನ್ನು ಹೊಂದಿರುವ ಪಾಲಿಥಿನ್ ಚೀಲಗಳೊಂದಿಗೆ ಅಥವಾ ಸಂರಕ್ಷಿತ ನರ್ಸರಿಯಲ್ಲಿ ಪ್ರೋಟ್ರೇಗಳ ಮೂಲಕ  ತಯಾರಿಸಬಹುದು. ಪಾಲಿಬ್ಯಾಗ್ ನರ್ಸರಿಯಲ್ಲಿ, ಚೀಲಗಳಿಗೆ 1:1:1 ಅನುಪಾತದಲ್ಲಿ ಕೆಂಪು ಮಣ್ಣು, ಮರಳು ಮತ್ತು ಕೊಟ್ಟಿಗೆ ಗೊಬ್ಬರದ ಮಿಶ್ರಣವನ್ನು ತುಂಬಿಸಿ. ಸುಮಾರು 15 ದಿನಗಳ ಸಸಿಗಳನ್ನು  ಮುಖ್ಯ ಭೂಮಿಗೆ ಸ್ಥಳಾಂತರಿಸಬೇಕು. 

ಕಲ್ಲಂಗಡಿ  ಬೆಳೆಗೆ ಭೂಮಿಯ ಸಿದ್ಧತೆ:

ಉತ್ತಮ ಬೇಸಾಯಕ್ಕಾಗಿ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಬೇಕು. ಭೂಮಿಯನ್ನು ಉಳುಮೆ ಮಾಡಿದ ನಂತರ 20 ಟನ್‌ಗಳಷ್ಟು ಕೊಟ್ಟಿಗೆ ಗೊಬ್ಬರ , ಅಜೋಸ್ಪಿರಿಲಮ್- 5 ಕೆಜಿ , ಫಾಸ್ಫೋಬ್ಯಾಕ್ಟೀರಿಯಾ – 5 ಕೆಜಿ ಮತ್ತು ಸ್ಯೂಡೋಮೊನಾಸ್- 5 ಕೆಜಿ ಅಷ್ಟು ಹೆಕ್ಟೇರ್ ಭೂಮಿಗೆ ಹಾಕಬೇಕು. ಕೊನೆಯ ಉಳುಮೆಗಿಂತ  ಮೊದಲು 100 ಕೆಜಿ ಯಷ್ಟು ಬೇವಿನ ಹಿಂಡಿಯನ್ನು ಜಮೀನಿಗೆ ಹಾಕಬೇಕು. ನಂತರ ಬಿತ್ತನೆಗಾಗಿ ಎತ್ತರ ಮಡಿಯನ್ನು 1.2 ಮೀ ಅಗಲ ಮತ್ತು 30 ಸೆಂ.ಮೀ ಎತ್ತರದಲ್ಲಿ ತಯಾರಿಸಲಾಗುತ್ತದೆ.ಈ ರೀತಿ ತಯಾರು ಮಾಡಿದ ಸಾಲುಗಳಲ್ಲಿ   ಸಸಿಗಳನ್ನು ಕನಿಷ್ಠ 6 ಇಂಚುಗಳ ಅಂತರದಲ್ಲಿ ಬಿತ್ತಬೇಕು ಮತ್ತು ಪ್ರತಿ ಸಾಲುಗಳು  ಕನಿಷ್ಠ 2.5 ಮೀ ಅಂತರದಲ್ಲಿರಬೇಕು. ಈ ರೀತಿ ತಯಾರು ಮಾಡಿದ ಎತ್ತರ ಮಡಿಯ ಸಾಲುಗಳಿಗೆ  ಹನಿ ನೀರಾವರಿ ಮೂಲಕ ನೀರನ್ನು ಒದಗಿಸಬೇಕು 

ಕಲ್ಲಂಗಡಿ ಬೆಳೆಗೆ  ಮಣ್ಣಿನ ಅವಶ್ಯಕತೆ

ಚೆನ್ನಾಗಿ ನೀರು ಬಸಿದು ಹೋಗುವ, ಮರಳು ಮಿಶ್ರಿತ ಜೇಡಿ ಮಣ್ಣಿನಲ್ಲಿ ಕಲ್ಲಂಗಡಿ ಬೆಳೆಯು ಉತ್ತಮವಾಗಿ  ಬೆಳೆಯುತ್ತದೆ.  ರಸಸಾರ pH 6.5-7.5 ಇರುವ ಮಣ್ಣು ಕಲ್ಲಂಗಡಿ ಬೆಳೆಗೆ ಸೂಕ್ತ.

ಹಿನ್ನುಡಿ 

ಕಲ್ಲಂಗಡಿ ಇತರ ಕುಕುರ್ಬಿಟ್ಗಳಿಗಿಂತ( ಕುಂಬಳ ಜಾತಿಗೆ ಸೇರಿದ ) ವಿಬಿನ್ನ ಬೆಳೆಯಾಗಿದ್ದು, ಅಲ್ಪಾವಧಿಯ ಬೆಳೆಯಾಗಿದೆ .  ಕಲ್ಲಂಗಡಿ ಬಿತ್ತನೆಯನ್ನು ಜನವರಿ-ಫೆಬ್ರವರಿ  ಬೇಸಿಗೆಯ ತಿಂಗಳುಗಳಲ್ಲಿ ಬೆಳೆಯುವುದರ ಮೂಲಕ ಅಧಿಕ ಆದಾಯ ಗಳಿಸಬಹುದು. 

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು