HomeCropಕೋಸು ಬೆಳೆಗಳಲ್ಲಿ ಸುರುಳಿ ಪೂಚಿ ಅಥವಾ ಎಲೆ ಕೊರಕ ಹುಳುಗಳ ನಿರ್ವಹಣೆ

ಕೋಸು ಬೆಳೆಗಳಲ್ಲಿ ಸುರುಳಿ ಪೂಚಿ ಅಥವಾ ಎಲೆ ಕೊರಕ ಹುಳುಗಳ ನಿರ್ವಹಣೆ

ಕೋಸು ಬೆಳೆಗಳಲ್ಲಿ ಸುರುಳಿ ಪೂಚಿ ಅಥವಾ ಎಲೆ ಕೊರಕವು ಗಂಭೀರ ಕೀಟವಾಗಿದೆ, ಆದರೆ ಇದು ಇತರ ಪ್ರಮುಖ ಬೆಳೆಗಳಾದ ಟೊಮೆಟೊ, ಲೆಟ್ಟ್ಯೂಸ್ , ಆಲೂಗಡ್ಡೆ, ಸಿಹಿ ಗೆಣಸು, ಹತ್ತಿ, ಸೌತೆಕಾಯಿಗಳು, ಇತ್ಯಾದಿಗಳ ಮೇಲೂ  ದಾಳಿ ಮಾಡುತ್ತದೆ. ಕೋಸು ಬೆಳೆಗಳಲ್ಲಿ ಎಲೆ ಕೊರಕವು,   ಸಾಮಾನ್ಯವಾಗಿ ಒಂದು ವರ್ಷ ಹೇರಳವಾಗಿ, ಮತ್ತು ನಂತರ ಎರಡು ಮೂರು ವರ್ಷಗಳ ವಿರಳವಾಗಿರುತ್ತದೆ. 

ಕೋಸು ಬೆಳೆಗಳಲ್ಲಿ ಸುರುಳಿ ಪೂಚಿ ಹುಳುಗಳ ಲಕ್ಷಣಗಳು 

  • ಆರಂಭಿಕ ಹಂತಗಳಲ್ಲಿ, ಮರಿಹುಳುಗಳು ಗುಂಪು ಗುಂಪಾಗಿರುತ್ತವೆ ಮತ್ತು ಎಲೆ ಕೆಳ ಭಾಗದಲ್ಲಿ ಕ್ಲೋರೊಫಿಲ್ ಅಂಶವನ್ನು ಕೊರೆದು ತಿಂದು, ಎಲೆಯ ಪದರವನ್ನು ತೆಳುವಾಗಿ ಮಾಡುತ್ತವೆ. 
  • ನಂತರ ಮರಿಹುಳುಗಳು ಹೆಚ್ಚು ತಿನ್ನಲು ಪ್ರಾರಂಭಿಸುತ್ತವೆ ಹಾಗಾಗಿ ಎಲೆಗಳ ಮೇಲೆ  ರಂಧ್ರಗಳನ್ನು ಮಾಡುತ್ತವೆ. ನಂತರ ಎಲೆಗಳು ಹರಿದಂತೆ ಕಾಣಿಸುತ್ತವೆ. ​ ​
  • ಅವು ಪೂರ್ತಿ ಎಲೆಯನ್ನು ತಿಂದು ಎಲೆಯ ನಾಳಗಳು ಮತ್ತು ತೊಟ್ಟುಗಳನ್ನು ಮಾತ್ರ ಹಾಗೆಯೇ ಬಿಡುತ್ತವೆ​. 
  • ಸಸಿಯ ಬೆಳವಣಿಗೆ ಕುಂಠಿತವಾಗಬಹುದು. 
  • ಹೂವು ಮತ್ತು ಹಣ್ಣುಗಳ ಮೇಲೆ ರಂಧ್ರಗಳನ್ನು ಕಾಣಬಹುದು . 

ಕೋಸು ಬೆಳೆಗಳಲ್ಲಿ ಸುರುಳಿ ಪೂಚಿ ಹುಳುಗಳ ನಿವಾರಣಾ ಕ್ರಮಗಳು​  

  • ಹುಳುವಿನ ಹಾವಳಿಯನ್ನು ತಡೆಯಲು ಮಣ್ಣಿನಲ್ಲಿರುವ ಹುಳುವಿನ  ಮೊಟ್ಟೆಗಳನ್ನು ಕೊಲ್ಲಬೇಕು ಸಸಿ ನಾಟಿ ಮಾಡುವ ಮೊದಲೇ ಬೇಸಿಗೆಯಲ್ಲಿ ಆಳವಾದ ಭೂಮಿ ಉಳುಮೆ ಮಾಡಬೇಕು.
  • ನೈರ್ಮಲ್ಯ ಮತ್ತು ಕಳೆ ಮುಕ್ತ ಬೆಳೆಯನ್ನು ಬೆಳೆಯಿರಿ
  • ನೀರು ನಿಲ್ಲುವುದನ್ನು ತಪ್ಪಿಸಿ ಅಥವಾ ಹೂಬಿಡುವ ಹಂತದಲ್ಲಿ ನೀರಿನ ಒತ್ತಡವನ್ನು ತಪ್ಪಿಸಿ. 
  • ಗಂಡು ಪತಂಗಗಳನ್ನು ಆಕರ್ಷಿಸಲು ಆಕರ್ಷಕ ಬಲೆಗಳನ್ನು  @ 9 – 10/ ಎಕರೆಗೆ ಅಳವಡಿಸಿ.
  • ತಡೆ ಬೆಳೆಯಾಗಿ ಗಡಿಯುದ್ದಕ್ಕೂ ಔಡಲವನ್ನು ಬೆಳೆಯಿರಿ. ತುಳಸಿ ಸಸಿಗಳು ಸಹ  ಮರಿಹುಳುಗಳನ್ನು ಹಿಮ್ಮೆಟ್ಟಿಸುತ್ತವೆ. ​
  • ಕ್ರೈಸೊಪರ್ಲಾ ಎಂಬ ಪರಭಕ್ಷಕ, ಕೊಕ್ಸಿನೆಲ್ಲಿಡ್ ಜೀರುಂಡೆಗಳು, ಡ್ರ್ಯಾಗನ್ ಫ್ಲೈ, ರಾಬರ್ ಫ್ಲೈ, ಇತ್ಯಾದಿಗಳನ್ನು ಜಮೀನಿನಲ್ಲಿ ಬಿಡಿ. ಇವು ಎಲೆ ತಿನ್ನುವ ಹುಳುಗಳನ್ನು ನಾಶಮಾಡುತ್ತವೆ
  • ಗೋವಿನಜೋಳ, ಈರುಳ್ಳಿ, ಕೊತ್ತಂಬರಿಯನ್ನು ಅಂತರ ಬೆಳೆಗಳಾಗಿ ಬೆಳೆಯಿರಿ. 

ಕೋಸು ಬೆಳೆಗಳಲ್ಲಿ ಸುರುಳಿ ಪೂಚಿ ಹುಳುಗಳ ರಾಸಾಯನಿಕ ನಿವಾರಣಾ ಕ್ರಮಗಳು:

 ಜಶ್ನ್ ಸೂಪರ್ ಕೀಟನಾಶಕ – 

  •  ಇದು ಪ್ರೊಫೆನೊಫಾಸ್ 40% + ಸೈಪರ್‌ಮೆಥ್ರಿನ್ 4% ಇ.ಸಿ ಅನ್ನು ಹೊಂದಿದೆ 
  • ಇದು  ಮೊಟ್ಟೆ ಮತ್ತು ಮರಿಹುಳುಗಳ ಹಂತದಲ್ಲೇ ಕೀಟ ನಿಯಂತ್ರಣ ಮಾಡುತ್ತದೆ . 
  • ಸ್ಪರ್ಶ ಕ್ರಿಯೆಯಿಂದ ಕೀಟಗಳನ್ನು ಕೊಲ್ಲುತ್ತದೆ . 
  • ಬಳಕೆಯ ಪ್ರಮಾಣ: 2 ಮಿಲಿ / ಲೀಟರ್ ನೀರಿಗೆ ​

ಪ್ರೋಕ್ಲೈಮ್ ಕೀಟನಾಶಕ – 

  • ಎಮಾಮೆಕ್ಟಿನ್ ಬೆಂಜೊಯೇಟ್ 5% SG ಅನ್ನು ಹೊಂದಿದೆ  
  • ನೀರಿನಲ್ಲಿ ಕರಗುವ ಹರಳಿನ ರೂಪದಲ್ಲಿರುವ ಕೀಟನಾಶಕ. 
  • ಪ್ರೋಕ್ಲೈಮ್ ಕೀಟನಾಶಕವು ಅವೆರ್ಮೆಕ್ಟಿನ್ ಗುಂಪಿಗೆ ಸೇರಿದ ಆಧುನಿಕ ಕೀಟನಾಶಕವಾಗಿದೆ. 
  • ಬಳಕೆಯ ಪ್ರಮಾಣ – 0.5 ರಿಂದ 0.8 ಗ್ರಾಂ / ಲೀಟರ್ ನೀರಿಗೆ​. 

ಟಫಾಬಾನ್ ಕೀಟನಾಶಕ – 

  • ಕ್ಲೋರೊಫೈರಿಫಾಸ್‌ 20% ಇಸಿ ಅನ್ನು ಹೊಂದಿದೆ
  • ಇದನ್ನು ಸಾಮಾನ್ಯವಾಗಿ ಕಾಂಡ ಕೊರಕ, ಕಾಯಿ ಕೊರಕ ಮತ್ತು ಎಲೆ ತಿನ್ನುವ ಹುಳುಗಳ ನಿಯಂತ್ರಣಕ್ಕೆ ಬಳಸಲಾಗುತ್ತದೆ
  • ಇದು ವ್ಯವಸ್ಥಿತ ಮತ್ತು ಸ್ಪರ್ಶ ಕ್ರಿಯೆಯ ಕೀಟನಾಶಕ 
  • ಬಳಕೆಯ ಪ್ರಮಾಣ : 2 ಮಿಲಿ/ಲೀಟರ್ ನೀರಿಗೆ ​

ರೀಲಾನ್ ಕೀಟನಾಶಕ – 

  • ಎಮಾಮೆಕ್ಟಿನ್ ಬೆಂಜೊನೇಟ್ 5% SG 
  • ಚಿಟ್ಟೆ ಜಾತಿಯ ಕೀಟಗಳ ಅತ್ಯುತ್ತಮ ನಿಯಂತ್ರಣ ಮಾಡುತ್ತದೆ 
  • ನೀರಿನಲ್ಲಿ ಕರಗುವ ಹರಳಿನ ರೂಪದಲ್ಲಿರುವ ಕೀಟನಾಶಕ.  
  • ಬಳಕೆಯ ಪ್ರಮಾಣ – 0.5gm/ಲೀಟರ್ ನೀರಿಗೆ​. 

ನಿರ್ಣಯ : 

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗ್ಗ್ ನೀಡಲಾದ ಲಿಂಕ್ಗಳನ್ನು ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ. 

spot_img

Read More

Stay in Touch

Subscribe to receive latest updates from us.

Related Articles