ಕೀಟನಾಶಕಗಳು ಕೀಟಗಳನ್ನು ನಿಯಂತ್ರಿಸುವ ರಾಸಾಯನಿಕ ಅಥವಾ ಜೈವಿಕ ಮೂಲದವಾಗಿರುತ್ತವೆ. ಇವುಗಳು ಬೆಳೆಗಳಿಗೆ ಹಾನಿ ಮಾಡುವ ಕೀಟಗಳನ್ನು ನಿಯಂತ್ರಣ ಮಾಡುತ್ತವೆ ಅಥವಾ ತಡೆಯುತ್ತವೆ. ಕೀಟನಾಶಕಗಳು ನೈಸರ್ಗಿಕ ಅಥವಾ ಮಾನವ ನಿರ್ಮಿತವಾಗಿರಬಹುದು ಮತ್ತು ಅಸಂಖ್ಯಾತ ಸೂತ್ರೀಕರಣಗಳು ಮತ್ತು ವಿತರಣಾ ವ್ಯವಸ್ಥೆಗಳಲ್ಲಿ (ಸ್ಪ್ರೇಗಳು, ಬೈಟ್ಗಳು, ನಿಧಾನ-ಬಿಡುಗಡೆ ಪ್ರಸರಣ, ಇತ್ಯಾದಿ) ಗುರಿಪಡಿಸಿದ ಕೀಟಗಳಿಗೆ ಇವುಗಳನ್ನು ಅನ್ವಯಿಸಲಾಗುತ್ತದೆ.
ಮನೆಯಲ್ಲಿ ತಯಾರಿಸುವ ಕೀಟನಾಶಕಗಳಿಂದ ಆಗುವ ಉಪಯೋಗಗಳು :
- ಕೃಷಿ, ತೋಟಗಾರಿಕೆ ಬೆಳೆಗಳಿಗೆ, ಕೈ ತೋಟ ಉಪಯೋಗಕ್ಕೆ ಮತ್ತು ಕೀಟ ನಿಯಂತ್ರಣದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
- ಮನೆಯಲ್ಲಿ ತಯಾರಿಸಿದ ಕೀಟನಾಶಕಗಳು ನೈಸರ್ಗಿಕವಾಗಿ ಕೀಟಗಳನ್ನು ನಿಯಂತ್ರಿಸುತ್ತವೆ.
- ಈ ಕೀಟನಾಶಕಗಳು ಸಾವಯವ ಕೀಟನಾಶಕವು ಪರಿಸರ ಸ್ನೇಹಿಯಾಗಿದೆ.
- ಸೊಳ್ಳೆಗಳು, ಉಣ್ಣಿ, ತಿಗಣೆ, ರಸ ಹೀರುವ ಕೀಟಗಳು, ಜಿಗಿ ಹುಳುಗಳು, ಇಲಿಗಳು ಮತ್ತು ಇಥ್ಯಾದಿ ವಿವಿಧ ಕೀಟಗಳು ಮತ್ತು ರೋಗ ವಾಹಕಗಳನ್ನು ನಿಯಂತ್ರಿಸಲು ಕೀಟನಾಶಕಗಳನ್ನು ಬಳಸಲಾಗುತ್ತದೆ.
- ಕೀಟನಾಶಕಗಳನ್ನು ಕೃಷಿಯಲ್ಲಿ ಕಳೆಗಳು, ಕೀಟಗಳ ಬಾಧೆ ಮತ್ತು ರೋಗಗಳನ್ನು ನಿಯಂತ್ರಿಸಲು ಬಳಸಲಾಗುತ್ತದೆ.
- ಹಲವಾರು ವಿಧದ ಕೀಟನಾಶಕಗಳಿವೆ; ಪ್ರತಿಯೊಂದೂ ನಿರ್ದಿಷ್ಟ ಕೀಟಗಳ ವಿರುದ್ಧ ಪರಿಣಾಮಕಾರಿಯಾಗಿರುತ್ತದೆ.
ಮನೆಯಲ್ಲಿ ಕೀಟನಾಶಕವನ್ನು ತಯಾರಿಸಲು ಬೇಕಿರುವ ಸಾಮಗ್ರಿಗಳು
- ಒಂದು ಲೀಟರ್ ನೀರು
- ಬೇಕಿಂಗ್ ಸೋಡಾ
- ಬೇವಿನ ಎಣ್ಣೆ ಅಥವಾ ಯಾವುದಾದರು ಬೀಜದ ಎಣ್ಣೆ
- ಸೋಪಿನ ದ್ರಾವಣ
ಮಾಡುವ ವಿಧಾನ
1 ಲೀಟರ್ ನೀರಿನಲ್ಲಿ + 2 ಚಮಚದಷ್ಟು ಬೇಕಿಂಗ್ ಸೋಡಾವನ್ನು ಮತ್ತು 1 ಚಮಚದಷ್ಟು ಬೇವಿನ ಎಣ್ಣೆಯನ್ನು ಹಾಗೂ 10 ರಿಂದ 12 ಹನಿಗಳಷ್ಟು ಸೋಪಿನ ದ್ರಾವಣವನ್ನು ಬೆರೆಸಿ ಚೆನ್ನಾಗಿ ಕದಡಬೇಕು.
ಚೆನ್ನಾಗಿ ಕದಡಿದ ನಂತರ ಅದನ್ನು ಕೀಟಗಳಿಂದ ದಾಳಿಗೊಳಗಾಗಿರುವ ಬೆಳೆಗಳಿಗೆ ಅಥವಾ ಸಸ್ಯಗಳಿಗೆ ಸಿಂಪಡಿಸಬಹುದು.
ಇದನ್ನು ಸಿಂಪಡಿಸುವುದರಿಂದ ಕೀಟಗಳನ್ನು ವೇಗವಾಗಿ ನಿಯಂತ್ರಿಸಬಹುದು. ಈ ಕೀಟನಾಶಕದಿಂದ ಯಾವುದೇ ಹಾನಿಯುಂಟಾಗುವ ಸಂಭವವಿಲ್ಲ, ಇದು ಪರಿಸರ ಸ್ನೇಹಿ ಕೀಟನಾಶಕವಾಗಿದೆ, ಇದು ರಸಹೀರುವ ಕೀಟಗಳನ್ನು ಉತ್ತಮವಾಗಿ ನಿಯಂತ್ರಿಸುತ್ತದೆ ಮತ್ತು ಕೈ ತೋಟಕ್ಕೆ ಈ ಕೀಟನಾಶಕವನ್ನು ವ್ಯಾಪಕವಾಗಿ ಬಳಸಲಾಗುತ್ತದೆ.