HomeCrop ManagementAgri Hacksಮನೆಯಲ್ಲಿಯೇ ತಯಾರಿಸಿ - ಹಣ್ಣು ಕೊಯ್ಲು ಮಾಡುವ ಯಂತ್ರ

ಮನೆಯಲ್ಲಿಯೇ ತಯಾರಿಸಿ – ಹಣ್ಣು ಕೊಯ್ಲು ಮಾಡುವ ಯಂತ್ರ

ಕೊಯ್ಲು ಎಂದರೆ ಕಾಂಡಗಳಿಂದ  ಧಾನ್ಯಗಳನ್ನು ಅಥವಾ ಹಣ್ಣುಗಳನ್ನು ಬೇರ್ಪಡಿಸುವುದು ಅಥವಾ ಕತ್ತರಿಸಿ ಮತ್ತು ಅವುಗಳನ್ನು  ಸಂಗ್ರಹಣೆ ಮಾಡುವುದು.ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಕೊಯ್ಲು ಮಾಡುವುದು ಬೆಳೆಯ  ಇಳುವರಿಯನ್ನು ಹೆಚ್ಚಿಸುತ್ತದೆ ಮತ್ತು ಬೆಳೆಯ  ಗುಣಮಟ್ಟವನ್ನು ಕಾಪಾಡುತ್ತದೆ.

ಬೆಳೆಗಳು  ಪೂರ್ಣ ಬೆಳವಣಿಗೆಯ ಹಂತವನ್ನು  ತಲುಪಿದ ನಂತರ (ನಾಟಿ ಮಾಡಿದ ಸರಿಸುಮಾರು ಮೂರು ತಿಂಗಳ ನಂತರ)  ಕಾಯಿಗಳು  ಹಣ್ಣಾಗಲು ಪ್ರಾರಂಭಿಸುತ್ತವೆ – ಹಣ್ಣಿನ ಮೇಲ್ಭಾಗಗಳ ಬಣ್ಣ ಬದಲಾಗುತ್ತದೆ  ಮತ್ತು ಕಾಂಡವು ಹಳದಿ ಬಣ್ಣಕ್ಕೆ ತಿರುಗುತ್ತದೆ. ಹೊಲಗಳು ಒಣಗಿದಂತೆ, ಧಾನ್ಯಗಳು ಅಥವಾ ಕಾಯಿಗಳು ಮತ್ತಷ್ಟು ಹಣ್ಣಾಗುತ್ತವೆ ಮತ್ತು ಕೊಯ್ಲು ಮಾಡಲು ಸಿದ್ಧವಾಗಿರುತ್ತವೆ.

ನಾವೀಗ ಮುಖ್ಯವಾಗಿ ಹಣ್ಣನ್ನು ಕೊಯ್ಲು ಮಾಡುವ ಯಂತ್ರವನ್ನು  ಬೇಕಿರುವ ಸಾಮಗ್ರಿಗಳ ಬಗ್ಗೆ ತಿಳಿಯೋಣ : 

  • ಪ್ಲಾಸ್ಟಿಕ್ ಬಾಟಲಿ 
  • ಕತ್ತರಿ 
  • ಪೆನ್ ಅಥವಾ ಮಾರ್ಕರ್ 
  • ಉದ್ದ ಕೋಲು 
  • ಅಂಟುವ ಟೇಪ್ (ಸೆಲ್ಲೋ ಟೇಪ್)

ಹಣ್ಣು  ಕೊಯ್ಲು ಮಾಡುವ ಯಂತ್ರವನ್ನು ತಯಾರಿಸುವ ವಿಧಾನ : 

  • ಒಂದು ಪ್ಲಾಸ್ಟಿಕ್ ಬಾಟಲಿಯನ್ನು ತೆಗೆದುಕೊಂಡು ಅದನ್ನು ತೊಳೆದುಕೊಳ್ಳಬೇಕು. 
  •  ಆ ಬಾಟಲಿಯನ್ನು ತೊಳೆದ ನಂತರ ಒಂದು ಮಾರ್ಕರ್ ನಲ್ಲಿ ಬಾಟಲಿಯ ಮೇಲೆ ಒಂದು ಹುಕ್ಕಿನ ರೀತಿ ಅಥವಾ ಅಥವಾ ಈ ರೀತಿ  ಬರೆದು ಅದನ್ನು ಕತ್ತರಿಸಿಕೊಳ್ಳಬೇಕು. 
  • ಕತ್ತರಿಸಿದ ನಂತರ ಬಾಟಲಿಯ ಮುಚ್ಚಳ ತೆಗೆದು ಅದಕ್ಕೆ ಉದ್ದನೆಯ ಕೋಲನ್ನು ಬಾಟಲಿಗೆ ಹಾಕಿ ಟೇಪನ್ನು ಗಟ್ಟಿಯಾಗಿ ಸುತ್ತಿ ಅಂಟಿಸಬೇಕು. 
  • ಈಗ  ನಿಮ್ಮ ಹಣ್ಣುಗಳನ್ನ ಕೊಯ್ಲು ಮಾಡಲು ನೀವು ತಯಾರಿಸಿರುವ  ಹಣ್ಣು ಕೊಯ್ಲು ಯಂತ್ರ ಸಿದ್ದ. 

ಹಣ್ಣು  ಕೊಯ್ಲು ಮಾಡುವ ಯಂತ್ರದ ಉಪಯೋಗಗಳು  : 

  •  ಮನೆಯಲ್ಲಿಯೇ ಇರುವ ವಸ್ತುಗಳಿಂದ ತಯಾರಿಸಬಹುದಾದ ಹಣ್ಣು ಕೊಯ್ಲು ಮಾಡುವಂತ ಯಂತ್ರ. 
  • ಅತ್ಯಂತ ಸುಲಭವಾಗಿ ತಯಾರಿಸಬಹುದಾದ ಹಣ್ಣು ಕೊಯ್ಲು ಮಾಡುವಂತ ಯಂತ್ರ. 
  • ಇದರಿಂದ ಕೊಯ್ಲು ಮಾಡುವ ಖರ್ಚನ್ನು ಕಡಿಮೆ ಮಾಡಬಹುದು ಅಥವಾ ತಡೆಯಬಹುದು 
  • ಇದನ್ನು ಉಪಯೋಗಿಸುವುದರಿಂದ ಕೊಯ್ಲಿನ ನಷ್ಟವನ್ನು ತಡೆಯಬಹುದು 
  • ಇದನ್ನು ಉಪಯೋಗಿಸುವುದರಿಂದ ಕೊಯ್ಲು ಕಾರ್ಮಿಕ ಶುಲ್ಕಗಳನ್ನು ತಡೆಯಬಹುದು.

ನಿರ್ಣಯ :   

ಹಣ್ಣು ಕೊಯ್ಲು ಮಾಡಿದ ಯಂತ್ರವನ್ನು ತಯಾರಿಸುವುದು ಹೇಗೆಂದು ತಿಳಿದಿದೆ ಎಂದುಕೊಂಡಿದ್ದೇವೆ, ಈ ರೀತಿ ಯಂತ್ರವನ್ನು ತಯಾರಿಸುವ ಮೂಲಕ ನಿಮ್ಮ ಹಣ್ಣುಗಳನ್ನು ಕೂಯ್ಲು ಮಾಡಿ, ಈ ಯಂತ್ರವನ್ನು  ಎಲ್ಲ ಹಣ್ಣುಗಳನ್ನು ಕೊಯ್ಲು ಮಾಡುವುದಕ್ಕೆ ಉಪಯೋಗಿಸಬಹುದು. 

ನೀವು ನಿಮ್ಮ ಮನೆಯಲ್ಲಿ ಈ ಯಂತ್ರವನ್ನು ತಯಾರಿಸಿ ನಿಮ್ಮ ಹಣ್ಣುಗಳನ್ನು ನೀವೇ ಕೂಯ್ಲು ಮಾಡಿಕೊಂಡು   ಹಣ್ಣುಗಳನ್ನು ಸವಿಯಿರಿ.

Categories:
spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು