ಹವಾಮಾನ ಬದಲಾವಣೆ ಮತ್ತು ಪರಿಸರ ಮಾಲಿನ್ಯದಿಂದ ಪ್ರತಿ ವರ್ಷ ರೈತರು ತಮ್ಮ ಬೆಳೆಗಳಿಗೆ ಕೀಟಗಳ ಮತ್ತು ರೋಗಗಳ ಸಂಖ್ಯೆ ಹೆಚ್ಚುತ್ತಿದ್ದು, ಪರಿಣಾಮವಾಗಿ, ಬೆಳೆಗಳ ಉತ್ಪಾದನೆಯು ಸಹ ಕಡಿಮೆಯಾಗುತ್ತಿದೆ. ಮೆಣಸಿನಕಾಯಿ ಬೆಳೆಯಲ್ಲೂ ಇದೇ ರೀತಿಯ ಕೀಟಗಳು ಕಾಣಿಸಿಕೊಳ್ಳುತ್ತಿದ್ದು. ರೈತರು ಇದನ್ನು ನಿರ್ವಹಿಸಲು ಮತ್ತು ನಿಯಂತ್ರಿಸಲು ಪ್ರಯತ್ನ ಪಡುತ್ತಿದ್ದು,
ಹಲವಾರು ರೀತಿಯ ಕೀಟನಾಶಕಗಳನ್ನು ಬಳಸುತ್ತಿದ್ದಾರೆ, ಆದರೆ ಕೀಟನಾಶಕಗಳ ಹೆಚ್ಚಿನ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆಗೆ ಬೀರುವ ಪರಿಣಾಮ ಮತ್ತು ಇವುಗಳ ನಿಯಂತ್ರಣದ ಬಗ್ಗೆ ತಿಳಿಯಿರಿ.
ಕೀಟ ದಾಳಿಯ ಲಕ್ಷಣಗಳು
- ಕತ್ತರಿ ಹುಳುಗಳು ಹೆಚ್ಚಾಗಿ ಮಣ್ಣಿನೊಳಗೆ ಪ್ರತ್ಯೇಕವಾಗಿ ಕಂಡುಬರುತ್ತವೆ ಆದರೆ ಕೆಲವು ಹುಳುಗಳು ಸಾಂದರ್ಭಿಕವಾಗಿ ಎಲೆಗಳ ಮತ್ತು ಹಣ್ಣುಗಳ ಮೇಲೆ ದಾಳಿ ಮಾಡುತ್ತವೆ.
- ಕತ್ತರಿ ಹುಳುವಿನ ಮರಿಹುಳುಗಳು ಎಳೆಯ ಸಸಿಗಳನ್ನು ಅಥವಾ ಆಗಲೇ ನಾಟಿ ಮಾಡಿರುವ ಸಸಿಗಳನ್ನು ದಾಳಿಮಾಡುತ್ತವೆ
- ಅವು ಪ್ರಾಥಮಿಕವಾಗಿ ಎಳೆಯ ಸಸ್ಯಗಳ ಬೇರುಗಳು ಮತ್ತು ಎಲೆಗಳನ್ನು ತಿನ್ನುತ್ತವೆ.
- ಬೇಸಿಗೆಯಲ್ಲಿ ಮತ್ತು ಸಸಿಗಳು ದೊಡ್ಡದಾಗಿದ್ದಾಗ, ಕತ್ತರಿ ಹುಳುಗಳು ಕೆಲವೊಮ್ಮೆ ಸಸಿಗಳ ಮೇಲ್ಭಾಗಕ್ಕೆ ತೆವಳುತ್ತವೆ ಮತ್ತು ನಾಶಮಾಡುತ್ತವೆ. ಮುಖ್ಯವಾಗಿ ಎಲೆಗಳನ್ನು ತಿನ್ನುತ್ತವೆ.
- ಈ ಹುಳುಗಳು ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ ದಾಳಿ ಮಾಡುತ್ತವೆ ಹಾಗಾಗಿ ಹಗಲಲ್ಲಿ ಸಸಿಗಳ ಮೇಲೆ ಕಾಣಿಸುವುದಿಲ್ಲ.
ನಿಯಂತ್ರಣ ಕ್ರಮಗಳು
- ಮುಖ್ಯ ಬೆಳೆಯನ್ನು ಹಾಕುವ ಮುನ್ನ ಉಳುಮೆ ಮಾಡುವ ಮೂಲಕ ಪೀಡಿತ ಸಸಿಗಳ ಅವಶೇಷಗಳನ್ನು ನಾಶಮಾಡಿ
- ವಸಂತ ಕಾಲದಲ್ಲಿ ಅಥವಾ ಕತ್ತರಿ ಹುಳುಗಳು ಮೊಟ್ಟೆಯಿಡುವ ಸಮಯದಲ್ಲಿ ಒಂದೆರಡು ವಾರಗಳ ಕಾಲ ತಡವಾಗಿ ಸಸಿಗಳನ್ನು ನಾಟಿ ಮಾಡಿದ್ದಲ್ಲಿ, ಕತ್ತರಿ ಹುಳುಗಳ ಆಹಾರ ಪೂರೈಕೆಯನ್ನು ಕಡಿತಗೊಳಿಸಬಹುದು.
- ಗಿಡದ ಸುತ್ತ ಬ್ಲಡ್ ಮೀಲ್ ಹಾಕುವುದರಿಂದ ಕತ್ತರಿ ಹುಳುಗಳನ್ನು ಕಡಿಮೆ ತಾಪಮಾನಕ್ಕೆ ಒಡ್ಡಿ, ಹಸಿವಿನಿಂದ ಸಾಯುವಂತೆ ಮಾಡಿ
- ರಾತ್ರಿಯ ಸಮಯ್ದಲ್ಲಿ ಹುಳುಗಳನ್ನು ಕೈಯಿಂದ ಆರಿಸಿ ಮತ್ತು ಫ್ಲಾಶ್ ಲೈಟ್ಗಳನ್ನು ಬಳಸಿ ಕೊಲ್ಲಿ ಅಥವಾ ಸಾಬೂನು ನೀರಿನಲ್ಲಿ ಹುಳುಗಳನ್ನು ಬಿಟ್ಟು ಕೊಲ್ಲಬಹುದು
- ಕತ್ತರಿ ಹುಳುಗಳ ನೈಸರ್ಗಿಕ ಪರಭಕ್ಷಕಗಳಾದ ಮಿಂಚುಹುಳುಗಳನ್ನು ಪ್ರೋತ್ಸಾಹಿಸಿ
- ಫೆರೊಮೋನ್ ಬಳೆಗಳು ಅಥವಾ ಕಪ್ಪು ಲೈಟ್ ಟ್ರಾಪ್ಸ್ಗಳನ್ನು ಬಳಸಿಕೊಂಡು ಹಲವು ಹುಳುಗಳನ್ನು ನಿಯಂತ್ರಿಸಬಹುದು
ಮೆಣಸಿನಕಾಯಿ ಬೆಳೆಯಲ್ಲಿ ಕತ್ತರಿ ಹುಳುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ರಾಸಾಯನಿಕಗಳು
ಈ ಎಂ – 1 :
- ಅವೆರ್ಮೆಕ್ಟಿನ್ ಗುಂಪಿನ ಆಧುನಿಕ ಕೀಟನಾಶಕವಾಗಿದೆ
- ನೀರಿನಲ್ಲಿ ಕರಗುವ ಹರಳಿನ ರೂಪದಲ್ಲಿರುವ ಕೀಟನಾಶಕ
- ಎಮಾಮೆಕ್ಟಿನ್ ಬೆಂಜೊಯೇಟ್ 5% SG
- ಬಳಕೆಯ ಪ್ರಮಾಣ 60-80gm/ಎಕರೆ
ಕೊರಾಜೆನ್:
- ಒಂದು ಆಂಥ್ರಾನಿಲಿಕ್ ಡೈಅಮೈಡ್ ಬ್ರಾಡ್-ಸ್ಪೆಕ್ಟ್ರಮ್ ಕೀಟನಾಶಕವಾಗಿದೆ
- ವಿಶೇಷವಾಗಿ ಚಿಟ್ಟೆ ಜಾತಿಯ ಕೀಟಗಳ ಮೇಲೆ , ಪ್ರಮುಖವಾಗಿ ಲಾರ್ವಿಸೈಡ್ ಆಗಿ ಕೆಲಸಮಾಡುತ್ತದೆ . ಕ್ಲೋರಂಟ್ರಾನಿಲಿಪ್ರೋಲ್ ಅನ್ನು ಹೊಂದಿದೆ
- ಬಳಕೆಯ ಪ್ರಮಾಣ: 60 ಮಿಲಿ/ಎಕರೆ
ಅಲಿಕಾ ಕೀಟನಾಶಕ :
- ಥಯೋಮೆಥಾಕ್ಸಮ್ (12.6%) + ಲ್ಯಾಂಬ್ಡಾಸೈಹಲೋಥ್ರಿನ್ (9.5%) ZC ಅನ್ನು ಹೊಂದಿದೆ
- ಬ್ರಾಡ್ -ಸ್ಪೆಕ್ಟ್ರಮ್ ಕೀಟನಾಶಕವಾಗಿದ್ದು, ವ್ಯವಸ್ಥಿತ ಮತ್ತು ಸ್ಪರ್ಶ ಕ್ರಿಯೆಯನ್ನು ಹೊಂದಿದೆ
- ಉತ್ತಮ ಬೆಳೆ ಅಭಿವೃದ್ಧಿಗೆ ಸಹಾಯ ಮಾಡುತ್ತದೆ .
- ಬಳಕೆಯ ಪ್ರಮಾಣ – 80 ಮಿಲಿ / ಎಕರೆ ಅಥವಾ 0.5 ಮಿಲಿ / ಲೀಟರ್ ನೀರು
ಆಲ್ ಬಾಟಾ ರಾಯಲ್ ಲಾರ್ವೆಂಡ್ :
- ಇದು 100% ಗಿಡಮೂಲಿಕೆಗಳ ಆಧಾರಿತ ಕೀಟನಾಶಕ.
- ಅಪಾಯಕಾರಿಯಲ್ಲದ, ಜೈವಿಕ ವಿಘಟನೀಯ ಉತ್ಪನ್ನವೂ ಸಹ ಆಗಿದೆ .
- ಇದು ಎಂಟೊಮೊಪಾಥೋಜೆನಿಕ್ ಜಂತು ಹುಳುಗಳು ಮತ್ತು ಪರಾವಲಂಬಿ ಸೂಕ್ಷ್ಮ ಜೀವಿಗಳ ಸಂಯೋಜನೆಯಾಗಿದೆ
- ಕೀಟಗಳ ಲಾರ್ವಾ ಹಂತದಲ್ಲೇ ಈ ಕೀಟನಾಶಕವು ಪರಿಣಾಮಕಾರಿ
- ಬಳಸುವ ಪ್ರಮಾಣ : 2 ಮಿಲಿ / ಲೀಟರ್ ನೀರು.
ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗ್ಗ್ ನೀಡಲಾದ ಲಿಂಕ್ಗಳನ್ನು ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ.