ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು ಮಾತ್ರವಲ್ಲದೆ ಬೆಳೆಗಳ ಇಳುವರಿಯನ್ನು ಹೆಚ್ಚಿಸುತ್ತದೆ ಮತ್ತು ಕೂಲಿ ವೆಚ್ಚವನ್ನು ಸಹ ಕಡಿಮೆ ಮಾಡುತ್ತದೆ. ಆದಾಗ್ಯೂ, ಹನಿ ನೀರಾವರಿ ವ್ಯವಸ್ಥೆಯನ್ನು ಬಳಸುವ ರೈತರು ಎದುರಿಸುತ್ತಿರುವ ಗಮನಾರ್ಹ ಸವಾಲುಗಳಲ್ಲಿ ಹನಿ ನೀರಾವರಿ ಪೈಪ್ ಗಳಲ್ಲಿ ಸ್ಕೇಲ್ ಗಳು ರಚನೆಯಾಗಿ, ಬೀರವರಿ ವ್ಯವಸ್ಥೆಗೆ ಅಡಚಣೆಯಾಗುವುದು ಸಹ ಒಂದು ಸವಾಲಾಗಿದೆ. ಇಂತಹ ಸಮಸ್ಯೆ ಎದುರಾದಾಗ ಎಕ್ಸೆಲ್ ಇಂಡಸ್ಟ್ರೀಸ್ನ ಉತ್ಪನ್ನವಾದ ಎಕ್ಸ್ಸ್ಕೇಲೆಂಟ್ ಕಾರ್ಯರೂಪಕ್ಕೆ ಬರುತ್ತದೆ. ಎಕ್ಸ್ಸ್ಕೇಲೆಂಟ್ ಅನ್ನು ನಿರ್ದಿಷ್ಟವಾಗಿ ಸ್ಕೇಲ್ ಗಳಿಂದ ಕೂಡಿರುವ ಹನಿ ನೀರಾವರಿ ವ್ಯವಸ್ಥೆಗಳನ್ನು ಸ್ವಚ್ಛಗೊಳಿಸಲು ವಿನ್ಯಾಸಗೊಳಿಸಲಾಗಿದೆ, ಇದು ಸಮರ್ಥ ನೀರಿನ ಹರಿವನ್ನು ಖಚಿತಪಡಿಸುತ್ತದೆ ಮತ್ತು ಬೆಳೆಗಳ ಆರೋಗ್ಯವನ್ನು ಕಾಪಾಡುತ್ತದೆ.
ಹನಿ ನೀರಾವರಿ ವ್ಯವಸ್ಥೆಗಳ ಪ್ರಾಮುಖ್ಯತೆ
ಹನಿ ನೀರಾವರಿ ವ್ಯವಸ್ಥೆಗಳು ನೀರಿನ ನಿರ್ವಹಣೆಯಲ್ಲಿ ಅವುಗಳ ದಕ್ಷತೆ ಮತ್ತು ಪರಿಣಾಮಕಾರಿತ್ವಕ್ಕಾಗಿ ವ್ಯಾಪಕವಾಗಿ ಹೆಸರುವಾಸಿಯಾಗಿವೆ. ಸಾಂಪ್ರದಾಯಿಕ ನೀರಾವರಿ ವಿಧಾನಗಳಿಗೆ ಹೋಲಿಸಿದರೆ ಭಿನ್ನವಾಗಿ, ಹನಿ ನೀರಾವರಿಯು ನೀರನ್ನು ನೇರವಾಗಿ ಸಸ್ಯದ ಬೇರುಗಳ ವಲಯಕ್ಕೆ ತಲುಪಿಸುತ್ತದೆ, ನೀರಿನ ವ್ಯರ್ಥ ಮತ್ತು ಆವಿಯಾಗುವಿಕೆಯನ್ನು ಕಡಿಮೆ ಮಾಡುತ್ತದೆ. ಈ ನಿರ್ದಿಷ್ಟ ವಿಧಾನವು ನೀರನ್ನು ಸಂರಕ್ಷಿಸುವುದು ಮಾತ್ರವಲ್ಲದೆ ಸಸ್ಯಗಳು ಸರಿಯಾದ ಪ್ರಮಾಣದ ತೇವಾಂಶವನ್ನು ಪಡೆಯುತ್ತವೆಯೇ ಎಂದು ಖಚಿತಪಡಿಸುತ್ತದೆ. ಆರೋಗ್ಯಕರ ಸಸ್ಯ ಬೆಳವಣಿಗೆ ಮತ್ತು ಅಧಿಕ ಇಳುವರಿಯನ್ನು ಉತ್ತೇಜಿಸುತ್ತದೆ.
ಎಕ್ಸ್ಸ್ಕೇಲೆಂಟ್ ಎಂದರೇನು?
- ಎಕ್ಸ್ಸ್ಕೇಲೆಂಟ್, ಹನಿ ನೀರಾವರಿ ವ್ಯವಸ್ಥೆಗಳಲ್ಲಿ ಸ್ಕೇಲ್ ಗಳ ರಚನೆಯ ಸಮಸ್ಯೆಯನ್ನು ಪರಿಹರಿಸಲು ವಿನ್ಯಾಸಗೊಳಿಸಲಾದ ಹೆಚ್ಚು ಪರಿಣಾಮಕಾರಿಯಾದ ಡ್ರಿಪ್ ಸಿಸ್ಟಮ್ ಕ್ಲೀನರ್ ಆಗಿದೆ. ರೈತರು, ಬಳಕೆದಾರರು, ಮಣ್ಣು ಮತ್ತು ಹನಿ ನೀರಾವರಿ ವ್ಯವಸ್ಥೆಗಳಿಗೆ ಇದು ಸುರಕ್ಷಿತವಾಗಿದೆ. ಎಕ್ಸ್ಸ್ಕೇಲೆಂಟ್ ಗಡುಸು ನೀರು-ಪ್ರೇರಿತ ಸ್ಕೇಲ್ ಗಳನ್ನು ಕರಗಿಸುತ್ತದೆ, ಸಮರ್ಥ ನೀರಿನ ಹರಿವನ್ನು ಖಚಿತಪಡಿಸುತ್ತದೆ ಮತ್ತು ಅಡಚಣೆಯನ್ನು ತಡೆಯುತ್ತದೆ.
- ಇದರ ತಾಂತ್ರಿಕ ಸೂತ್ರೀಕರಣವು ಚೀಲೇಟಿಂಗ್ ಏಜೆಂಟ್ಗಳ ಮಿಶ್ರಣವನ್ನು ಒಳಗೊಂಡಿರುತ್ತದೆ, ಅದು ಕ್ರಮೇಣ ಸ್ಕೇಲ್ ಗಳನ್ನು ಕರಗಿಸುತ್ತದೆ, ನಂತರ ಅದನ್ನು ಬೆಳೆಗಳಿಗೆ ಹಾನಿಯಾಗದಂತೆ ಸ್ವಚ್ಛ ಮಾಡುತ್ತದೆ. ಎಕ್ಸ್ಸ್ಕೇಲೆಂಟ್ ಅನ್ನು ಪ್ರಸ್ತುತದಲ್ಲಿ ಬೆಳೆಯುತ್ತಿರುವ ಬೆಳೆಗಳಲ್ಲಿಯೂ ಬಳಸಬಹುದು.ಲ್ಯಾಟರಲ್ಗಳಿಗೆ ಟ್ಯಾಪಿಂಗ್ಗಳ ಅಗತ್ಯವನ್ನು ತೆಗೆದುಹಾಕುವ ಮೂಲಕ ಕಾರ್ಮಿಕ ವೆಚ್ಚ ಮತ್ತು ಶ್ರಮವನ್ನು ಉಳಿಸುತ್ತದೆ. ಇದರ ನಿಯಮಿತ ಬಳಕೆಯು ಡ್ರಿಪ್ಪರ್ ಗಳು ಮುಚ್ಚಿಹೋಗುವುದನ್ನು ತಡೆಯುತ್ತದೆ. ಪ್ರತಿ 4 ರಿಂದ 6 ತಿಂಗಳಿಗೊಮ್ಮೆ ಎಕರೆಗೆ 1 ಕೆಜಿ ಪ್ರಮಾಣದಲ್ಲಿ ಎಲ್ಲಾ ಬೆಳೆಗಳಿಗೆ ಬಳಸಲು ಸೂಕ್ತವಾಗಿದೆ. ಈ ಉತ್ಪನ್ನವು ನೀರಾವರಿ ದಕ್ಷತೆಯನ್ನು ಹೆಚ್ಚಿಸುವುದಲ್ಲದೆ ಕಾರ್ಮಿಕ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಮತ್ತು ಹನಿ ನೀರಾವರಿ ವ್ಯವಸ್ಥೆಯ ಉತ್ತಮ ಸ್ಥಿತಿಯನ್ನು ಕಾಪಾಡಿಕೊಳ್ಳುವ ಮೂಲಕ ಹೂಡಿಕೆಯ ಮೇಲೆ ಗಮನಾರ್ಹ ಲಾಭವನ್ನು ನೀಡುತ್ತದೆ.
- ಎಕ್ಸ್ಸ್ಕೇಲೆಂಟ್ನ ಅತ್ಯಂತ ಗಮನಾರ್ಹ ಅಂಶವೆಂದರೆ ಪೈಪ ಗಳನ್ನು ಸ್ವಚ್ಛಗೊಳಿಸುವ ಸಮಯದಲ್ಲಿ ಪೈಪ್ಗಳು ಮತ್ತು ಎಮಿಟರ್ಗಳನ್ನು ತೆಗೆದುಹಾಕುವ ಅಗತ್ಯವಿಲ್ಲದೇ ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಈ ಪ್ರಕ್ರಿಯೆಯನ್ನು ಗಮನಾರ್ಹವಾಗಿ ಹೆಚ್ಚು ಪರಿಣಾಮಕಾರಿ ಮತ್ತು ವೆಚ್ಚ-ಪರಿಣಾಮಕಾರಿಯಾಗಿ ಮಾಡುತ್ತದೆ, ರೈತರಿಗೆ ಸಮಯ ಮತ್ತು ಶ್ರಮ ಎರಡನ್ನೂ ಉಳಿಸುತ್ತದೆ.
ಸುಸ್ಥಿರ ಕೃಷಿಯಲ್ಲಿ ಎಕ್ಸ್ಸ್ಕೇಲೆಂಟ್ನ ಪ್ರಮುಖ ಪಾತ್ರ
ಎಕ್ಸ್ಸ್ಕೇಲೆಂಟ್ ಎನ್ನುವುದು ಹನಿ ನೀರಾವರಿ ವ್ಯವಸ್ಥೆಯ ಪೈಪ್ ಗಳಲ್ಲಿ ನೀರಾವರಿ ಔಟ್ಲೆಟ್ಗಳಿಗೆ ಅಡ್ಡಿಪಡಿಸುವ ಸ್ಕೇಲ್ ಗಳ ರಚನೆಯನ್ನು ನಿಭಾಯಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಡ್ರಿಪ್ ಸಿಸ್ಟ ಮ್ ಆಂಟಿಸ್ಕೇಲೆಂಟ್ ಆಗಿದೆ.ಎಮಿಟರ್ ಪ್ಲಗಿಂಗ್ ಎಂದು ಕರೆಯಲ್ಪಡುವ ಈ ಸಮಸ್ಯೆಯು ಹನಿ ನೀರಾವರಿಯಲ್ಲಿ ಗಮನಾರ್ಹ ಸಮಸ್ಯೆಯಾಗಿದೆ ಏಕೆಂದರೆ ಇದು ನೀರಿನ ಹರಿಯುವಿಕೆಗೆ ತೀವ್ರವಾಗಿ ಅಡ್ಡಿಯಾಗಬಹುದು. ಎಕ್ಸ್ಸ್ಕೇಲೆಂಟ್ ವ್ಯಾಪಕ ಶ್ರೇಣಿಯ ಸ್ಕೇಲ್ ಗಳನ್ನು ತಡೆಗಟ್ಟುವ ಮತ್ತು ಕರಗಿಸುವ ಮೂಲಕ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತದೆ, ಇದರಿಂದಾಗಿ ಶುದ್ಧೀಕರಣದ ಆವರ್ತನವನ್ನು ಕಡಿಮೆ ಮಾಡುತ್ತದೆ ಮತ್ತು ಸಮರ್ಥ ನೀರಿನ ಹರಿವನ್ನು ಖಾತ್ರಿಗೊಳಿಸುತ್ತದೆ. ಎಕ್ಸ್ಸ್ಕೇಲೆಂಟ್ ಹಲವಾರು ಪ್ರಯೋಜನಗಳನ್ನು ನೀಡುತ್ತದೆ, ಹಾಗಾಜಿ ಇದು ರೈತರಿಗೆ ಮತ್ತು ಕೃಷಿಗೆ ಅನಿವಾರ್ಯ ಸಾಧನವಾಗಿದೆ
- ಬೆಳೆಗಳು ಮತ್ತು ಪರಿಸರಕ್ಕೆ ಸುರಕ್ಷಿತ: ಸಾಂಪ್ರದಾಯಿಕ ಆಮ್ಲಗಳ-ಆಧಾರಿತ ಉತ್ಪನ್ನಗಳಿಗೆ ಹೋಲಿಸಿದರೆ ಇದು ಭಿನ್ನವಾಗಿದೆ, ಎಕ್ಸ್ಸ್ಕೇಲೆಂಟ್ ವಿಷಕಾರಿಯಲ್ಲ ಮತ್ತು ಪರಿಸರ ಸ್ನೇಹಿಯಾಗಿದೆ. ಇದು ಬೆಳೆಗಳು, ಮಣ್ಣು ಅಥವಾ ಸುತ್ತಮುತ್ತಲಿನ ಪರಿಸರಕ್ಕೆ ಹಾನಿ ಮಾಡುವುದಿಲ್ಲ. ರೈತರು ಪ್ರಸ್ತುತದಲ್ಲಿ ಬೆಳೆಯುತ್ತಿರುವ ಬೆಳೆಗಳು ಇದ್ದರೂ ಸಹ ತಮ್ಮ ಹೊಲಗಳಲ್ಲಿ ಸುರಕ್ಷಿತವಾಗಿ ಎಕ್ಸ್ಸ್ಕೇಲೆಂಟ್ ಅನ್ನು ಬಳಸಬಹುದು. ಸಸ್ಯಗಳ ಆರೋಗ್ಯ ಅಥವಾ ಮಣ್ಣಿನ ಗುಣಮಟ್ಟಕ್ಕೆ ಅಪಾಯವನ್ನು ಉಂಟುಮಾಡದೆ, ನೀರಾವರಿ ವ್ಯವಸ್ಥೆಗಳನ್ನು ಸ್ವಚ್ಛಗೊಳಿಸುವಂತೆ
ಎಕ್ಸ್ಸ್ಕೇಲೆಂಟ್ ಖಚಿತಪಡಿಸುತ್ತದೆ. ಇದಲ್ಲದೆ, ಎಕ್ಸ್ಸ್ಕೇಲೆಂಟ್ ಎಲ್ಲಾ ಬೆಳೆಗಳಿಗೆ ಸೂಕ್ತವಾಗಿದೆ, ಇದು ಬಹುಮುಖ ಮತ್ತು ವಿವಿಧ ಕೃಷಿ ವ್ಯವಸ್ಥೆಗಳಿಗೆ ಹೊಂದಿಕೊಳ್ಳುತ್ತದೆ. ತೋಟಗಾರಿಕೆ, ಹೂವು ಬೆಳೆಗಳ ಕೃಷಿ, ಅಥವಾ ದೊಡ್ಡ ಪ್ರಮಾಣದ ಕ್ಷೇತ್ರ ಬೆಳೆಗಳು ಹೀಗೆ ನೀವು ಯಾವುದೇ ಬೆಳೆಯಲ್ಲಿ ಎಕ್ಸ್ಸ್ಕೇಲೆಂಟ್ ಅನ್ನು ಬಳಸಿದರೂ, ಬೆಳೆಯ ಸುರಕ್ಷತೆಗೆ ಧಕ್ಕೆಯಾಗದಂತೆ ಸೂಕ್ತವಾದ ನೀರಾವರಿ ಕಾರ್ಯಕ್ಷಮತೆಯನ್ನು ಖಾತ್ರಿಗೊಳಿಸುತ್ತದೆ.
- ಕಾರ್ಮಿಕ ವೆಚ್ಚ ಮತ್ತು ಸಮಯ ಉಳಿತಾಯ: ಸಾಂಪ್ರದಾಯಿಕ ಪದ್ದತಿಯಲ್ಲಿ ಹನಿ ನೀರಾವರಿ ವ್ಯವಸ್ಥೆಯನ್ನು ಶುಚಿಗೊಳಿಸಲು ಅತ್ಯಂತ ಕಷ್ಟಕರವಾದ ಕೆಲಸವೆಂದರೆ ನೀರಾವರಿ ಪೈಪ್ ಗಳನ್ನು ತೆಗೆದು, ಮರುಜೋಡಿಸುವುದು. ನೀರಾವರಿ ವ್ಯವಸ್ಥೆಗೆ ನೇರವಾದ ಬಳಕೆಯನ್ನು ಅವಕಾಶ ನೀಡುವ ಮೂಲಕ ಎಕ್ಸ್ಸ್ಕೇಲೆಂಟ್ ಈ ಅಗತ್ಯವನ್ನು ನಿವಾರಿಸುತ್ತದೆ. ಇದು ನಿರ್ವಹಣೆಗೆ ಅಗತ್ಯವಾದ ಸಮಯ ಮತ್ತು ಶ್ರಮವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ, ಇತರ ಕೃಷಿ ಕಾರ್ಯಾಚರಣೆಗಳಿಗೆ ಅಮೂಲ್ಯವಾದ ಸಂಪನ್ಮೂಲಗಳನ್ನು ಅನುವು ಮಾಡಿಕೊಡುತ್ತದೆ .
- ವೆಚ್ಚ-ಪರಿಣಾಮಕಾರಿತ್ವ: ಸ್ಕೇಲ್ ಗಳ ರಚನೆಯನ್ನು ತಡೆಗಟ್ಟುವ ಮೂಲಕ ಮತ್ತು ಹಲವು ಬಾರಿ ನೀರಾವರಿ ಪೈಪ್ ಗಳನ್ನು ಸ್ವಚ್ಛಗೊಳಿಸುವುದನ್ನು ಕಡಿಮೆ ಮಾಡುವ ಮೂಲಕ, ಎಕ್ಸ್ಸ್ಕೇಲೆಂಟ್ ಕಡಿಮೆ ನಿರ್ವಹಣಾ ವೆಚ್ಚಕ್ಕೆ ಸಹಾಯ ಮಾಡುತ್ತದೆ. ಇದರ ದೀರ್ಘಕಾಲೀನ ಪರಿಣಾಮಗಳು ನೀರಾವರಿ ವ್ಯವಸ್ಥೆಗಳು ದೀರ್ಘಾವಧಿಯವರೆಗೆ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸುತ್ತದೆ, ಪುನರಾವರ್ತಿತ ಬಳಕೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ.
- ಸ್ಕೇಲ್ ಗಳ ರಚನೆಯ ತಡೆಗಟ್ಟುವಿಕೆ: ಎಕ್ಸ್ಸ್ಕೇಲೆಂಟ್ ಪೂರ್ವಭಾವಿ ಬಳಕೆಯು ಹೊಸ ಸ್ಕೇಲ್ ಗಳ ರಚನೆಯನ್ನು ತಡೆಯುತ್ತದೆ. ಇದು ಎಮಿಟರ್ ಗಳ ಮೂಲಕ ಸ್ಥಿರವಾದ ನೀರಿನ ಹರಿವನ್ನು ಖಚಿತಪಡಿಸುತ್ತದೆ, ನೀರಾವರಿ ದಕ್ಷತೆ ಮತ್ತು ಬೆಳೆ ಇಳುವರಿಯನ್ನು ಸುಧಾರಿಸುತ್ತದೆ.
ಎಕ್ಸ್ಸ್ಕೇಲೆಂಟ್ ನ ಬಳಕೆಯಾ ಪ್ರಮಾಣ, ವಿಧಾನ ಮತ್ತು ಶಿಫಾರಿತ ಬೆಳೆಗಳು
- ಬೆಳೆಗಳು: ಎಲ್ಲಾ ಬೆಳೆಗಳಿಗೆ ಬಳಸಲು ಸೂಕ್ತವಾಗಿದೆ.
- ಬಳಕೆಯ ಪ್ರಮಾಣ: ಬೆಳೆ ಪ್ರಕಾರ ಮತ್ತು ಸಾಗುವಳಿ ಸಾಂದ್ರತೆಯನ್ನು ಲೆಕ್ಕಿಸದೆ ಪ್ರತಿ ಎಕರೆಗೆ 1 ಕೆ.ಜಿ ಪ್ರಮಾಣದಲ್ಲಿ ಬಳಸಬೇಕು. ಇದನ್ನು ಪ್ರತಿ 4 ರಿಂದ 6 ತಿಂಗಳಿಗೊಮ್ಮೆ ಮರುಬಳಕೆ ಮಾಡಬಹುದು.
- ಬಳಕೆಯ ವಿಧಾನ
- ನೀರಾವರಿ: ನಿಮ್ಮ ನಿಯಮಿತ ನೀರಾವರಿ ವೇಳಾಪಟ್ಟಿಯಂತೆ ಕ್ಷೇತ್ರಕ್ಕೆ ನೀರುಣಿಸುವ ಮೂಲಕ ಇದನ್ನು ಬಳಸುವುದನ್ನು ಪ್ರಾರಂಭಿಸಿ.
- ಎಕ್ಸ್ಸ್ಕೇಲೆಂಟ್ ಅನ್ನು ಸೇರಿಸುವುದು: ಪಂಪ್ ಅನ್ನು ನಿಲ್ಲಿಸುವ ಮುನ್ನ, 1 ಎಕರೆ ಭೂಮಿಗೆ ವಿನ್ಯಾಸಗೊಳಿಸಲಾದ ಹನಿ ನೀರಾವರಿ ವ್ಯವಸ್ಥೆಯಲ್ಲಿ 100 ಲೀಟರ್ ನೀರಿನಲ್ಲಿ 1 ಕೆ.ಜಿ ಎಕ್ಸ್ಸ್ಕೇಲೆಂಟ್ ಅನ್ನು ಮಿಶ್ರಣ ಮಾಡಿ. ಎಕ್ಸ್ಸ್ಕೇಲೆಂಟ್ ಸಂಪೂರ್ಣ ಪೈಪ್ ವ್ಯವಸ್ಥೆಯಾದ್ಯಂತ ತಲುಪುವುದನ್ನು ಇದು ಖಚಿತಪಡಿಸುತ್ತದೆ.
- ವಿಶ್ರಾಂತಿ ಅವಧಿ: ಮುಂದಿನ ನೀರಾವರಿ ಚಕ್ರದವರೆಗೆ ಎಕ್ಸ್ಸ್ಕೇಲೆಂಟ್ ಅನ್ನು ಪೈಪ್ ಗಳಲ್ಲಿಯೇ ಉಳಿಯಲು ಬಿಡಿ, ಇದು ಸಾಮಾನ್ಯವಾಗಿ 3 ರಿಂದ 4 ದಿನಗಳವರೆಗೆ ಇರುತ್ತದೆ.
- ಮರುಬಳಕೆ: ನೀರಿನ ಒಟ್ಟು ಕರಗಿದ ಘನವಸ್ತುಗಳು (TDS) ಮತ್ತು ಸ್ಕೇಲ್ ಗಳ ರಚನೆಯ ಪ್ರಮಾಣವನ್ನು ಅವಲಂಬಿಸಿ ಈ ಪ್ರಕ್ರಿಯೆಯನ್ನು 3 ರಿಂದ 4 ಬಾರಿ ಅನುಸರಿಸಿ.
ಇದರ ಹೊಂದಾಣಿಕೆ ಮತ್ತು ಸುರಕ್ಷತೆ
ಎಕ್ಸ್ಸ್ಕೇಲೆಂಟ್, ರಸಗೊಬ್ಬರಗಳು ಮತ್ತು ಕೀಟನಾಶಕಗಳು ಸೇರಿದಂತೆ ಎಲ್ಲಾ ಕೃಷಿ ಉತ್ಪನ್ನಗಳೊಂದಿಗೆ ಹೊಂದಿಕೊಳ್ಳುವುದರಿಂದ ,ಇದು ರೈತರಿಗೆ ಗಮನಾರ್ಹ ಪ್ರಯೋಜನವನ್ನು ತರುತ್ತದೆ. ಯಾವುದೇ ಅಡ್ಡ ಪರಿಣಾಮಗಳನ್ನು ಉಂಟುಮಾಡದೆ ಇತರ ರಾಸಾಯನಿಕಗಳು ಮತ್ತು ಕೃಷಿ ಪದ್ದತಿಗಳೊಂದಿಗೆ ಇದನ್ನು ಬಳಸಬಹುದು. ರೈತರು ತಮ್ಮ ನಿಯಮಿತ ಕೃಷಿ ಪದ್ಧತಿಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಸಬಹುದು ಎಂದು ಖಚಿತಪಡಿಸಿಕೊಳ್ಳಬಹುದು.
ಸುರಕ್ಷತೆಯು ಎಕ್ಸ್ಸ್ಕೇಲೆಂಟ್ನ ಪ್ರಾಥಮಿಕ ಲಕ್ಷಣಗಳಲ್ಲಿ ಒಂದಾಗಿದೆ. ಉತ್ಪನ್ನವು ವಿನಾಶಕಾರಿಯಲ್ಲದ ಮತ್ತು ವಿಷಕಾರಿಯಲ್ಲ. ಇದು ಸಾಂಪ್ರದಾಯಿಕ ಆಮ್ಲ-ಆಧಾರಿತ ಕ್ಲೀನರ್ಗಳಿಗಿಂತ ಸುರಕ್ಷಿತವಾಗಿ ಕೆಲಸ ಮಾಡುತ್ತದೆ. ಖನಿಜ ಆಮ್ಲಗಳು ಮಾನವರಿಗೆ ಮತ್ತು ಪರಿಸರಕ್ಕೆ ಅಪಾಯಕಾರಿಯಾಗಿವೆ. ಆದರೆ ಎಕ್ಸ್ಸ್ಕೇಲೆಂಟ್ ಅನ್ನು ಬಳಸುವಾಗ ಇತಂಹ ಚಿಂತೆಬೇಡ . ಇದನ್ನು ಭಾರೀ ರಕ್ಷಣಾ ಸಾಧನಗಳ ಅಗತ್ಯವಿಲ್ಲದೆ ಬಳಸಬಹುದು, ಇದು ಕಾರ್ಮಿಕರಿಗೆ ಹೆಚ್ಚು ಸುಲಭವಾದ ಮತ್ತು ಸುರಕ್ಷಿತ ಆಯ್ಕೆಯಾಗಿದೆ.
ಹಿನ್ನುಡಿ
ಎಕ್ಸ್ಸ್ಕೇಲೆಂಟ್ ಒಂದು ಕ್ರಾಂತಿಕಾರಿ ಉತ್ಪನ್ನವಾಗಿದ್ದು, ಹನಿ ನೀರಾವರಿ ವ್ಯವಸ್ಥೆಗಳಲ್ಲಿ ಸ್ಕೇಲ್ ಗಳ ರಚನೆಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತದೆ. ಗಡುಸು ನೀರು-ಪ್ರೇರಿತ ಸ್ಕೇಲ್ ಗಳನ್ನು ಕರಗಿಸುವ ಇದರ ಸಾಮರ್ಥ್ಯವು ,ಸಮರ್ಥ ನೀರಿನ ಹರಿವನ್ನು ಖಾತ್ರಿಗೊಳಿಸುತ್ತದೆ, ಆರೋಗ್ಯಕರ ಸಸ್ಯ ಬೆಳವಣಿಗೆ ಮತ್ತು ಅಧಿಕ ಇಳುವರಿಯನ್ನು ಉತ್ತೇಜಿಸುತ್ತದೆ. ಅಡಚಣೆಯನ್ನು ತಡೆಗಟ್ಟುವ ಮೂಲಕ ಮತ್ತು ನಿರ್ವಹಣೆ ಪ್ರಯತ್ನಗಳನ್ನು ಕಡಿಮೆ ಮಾಡುವ ಮೂಲಕ, ಎಕ್ಸ್ಸ್ಕೇಲೆಂಟ್ ರೈತರಿಗೆ ಸಮಯ ಮತ್ತು ಶ್ರಮ ಎರಡನ್ನೂ ಉಳಿಸುತ್ತದೆ. ಇದರ ವಿಷಕಾರಿಯಲ್ಲದ ಮತ್ತು ಪರಿಸರ ಸ್ನೇಹಿ ಸೂತ್ರೀಕರಣವು ಬೆಳೆಗಳು, ಮಣ್ಣು ಮತ್ತು ಪರಿಸರಕ್ಕೆ ಸುರಕ್ಷಿತವಾಗಿದೆ. ಹೆಚ್ಚುವರಿಯಾಗಿ, ಇತರ ಕೃಷಿ ಉತ್ಪನ್ನಗಳೊಂದಿಗೆ ಎಕ್ಸ್ಸ್ಕೇಲೆಂಟ್ ನ ಹೊಂದಾಣಿಕೆ ಮತ್ತು ಇದರ ಸುಲಭ ರೀತಿಯ ಬಳಕೆಯ ಪ್ರಕ್ರಿಯೆಯು ಆಧುನಿಕ ಕೃಷಿಗೆ ಬಹುಮುಖ ಮತ್ತು ಅನಿವಾರ್ಯ ಸಾಧನವಾಗಿದೆ. ಒಟ್ಟಾರೆಯಾಗಿ, ಎಕ್ಸ್ಸ್ಕೇಲೆಂಟ್ ನೀರಾವರಿ ದಕ್ಷತೆಯನ್ನು ಹೆಚ್ಚಿಸುತ್ತದೆ, ಸುಸ್ಥಿರ ಕೃಷಿ ಪದ್ಧತಿಗಳನ್ನು ಬೆಂಬಲಿಸುತ್ತದೆ ಮತ್ತು ರೈತರಿಗೆ ಹೂಡಿಕೆಯ ಮೇಲೆ ಗಮನಾರ್ಹ ಲಾಭವನ್ನು ನೀಡುತ್ತದೆ.