ಬ್ರೆಜಿಲ್ ನಂತರ, ಭಾರತ ದೇಶವು ಎರಡನೇ ಅತಿದೊಡ್ಡ ಕಬ್ಬು ಬೆಳೆಯುವ ರಾಷ್ಟ್ರವಾಗಿದೆ. 2021 ಸಾಲಿನಲ್ಲಿ, ಉತ್ತರ ಪ್ರದೇಶ ರಾಜ್ಯವು ಸುಮಾರು 177 ಮಿಲಿಯನ್ ಟನ್ಗಳಷ್ಟು ಕಬ್ಬನ್ನು ಉತ್ಪಾದಿಸಿದೆ . ಕಬ್ಬು ಒಂದು ಬಹು ಪ್ರಯೋಜನಗಳುಳ್ಳ ಬೆಳೆಯಾಗಿದ್ದು ಇದನ್ನು ಸಕ್ಕರೆ, ಕಾಕಂಬಿ ಮತ್ತು ಕಾಗದದಂತಹ ವಿವಿಧ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಭಾರತದಲ್ಲಿ ಕಬ್ಬು ಬೆಳೆಯುವ ಪ್ರಮುಖ ರಾಜ್ಯಗಳೆಂದರೆ ಉತ್ತರ ಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಒರಿಸ್ಸಾ.
ಕಷ್ಟದ ಮಟ್ಟ: ಮಧ್ಯಮ
ಬಿತ್ತನೆಗೆ ಕಬ್ಬಿನ ತುಂಡುಗಳ ಆಯ್ಕೆ
ಕಬ್ಬು ಬೆಳೆಯ ನಾಟಿಯು ಸೂಕ್ತ ವಾತಾವರಣ, ನೀರಿನ ಲಭ್ಯತೆ ಮತ್ತು ಸರಿಯಾದ ತಳಿಗಳು ಇವುಗಳ ಮೇಲೆ ಅವಲಂಬಿತವಾಗಿದೆ. ಇಂದಿನ ಮಾರುಕಟ್ಟೆಯಲ್ಲಿ ಆಯ್ಕೆ ಮಾಡಲು ವಿವಿಧ ರೀತಿಯ ಕಬ್ಬಿನ ತಳಿಗಳಿವೆ. ಇವುಗಳಲ್ಲಿ ಜನಪ್ರಿಯ ತಳಿಗಳು ಯಾವುವೆಂದರೆ ಭೀಮಾ, ನಯನಾ, ಪ್ರಬಾ, ಕಲ್ಯಾಣಿ, ಭವಾನಿ, ಉತ್ತರಾ, ಸರಯೂ, ಮೋತಿ, ಕೃಷ್ಣ, ರಸೀಲಿ, ಗಂಡಕ್, ಪ್ರಮೋದ್, ಹರಿಯಾಣ, ರಾಜಭೋಗ್, ರಾಸಭರಿ, ಶ್ಯಾಮಾ ಮತ್ತು ಶ್ವೇತಾ.
ನಯನಾ ಕಬ್ಬಿನ ತಳಿಯು ಮಾರುಕಟ್ಟೆಯಲ್ಲಿ ಲಭ್ಯವಿರುವ ತಳಿಗಳಲ್ಲಿ ಹೆಚ್ಚು ಸಕ್ಕರೆ ಅಂಶ ಹೊಂದಿರುವ ತಳಿಗಳಲ್ಲಿ ಒಂದಾಗಿದೆ. ಇದು 20.1% ಸುಕ್ರೋಸ್ ಅಂಶವನ್ನು ಹೊಂದಿದೆ. ಈ ತಳಿಯೂ ಹೆಕ್ಟೇರ್ಗೆ ಸುಮಾರು 104 ಟನ್ ಇಳುವರಿಯನ್ನು ನೀಡುತ್ತದೆ.ಈ ತಳಿಯೂ ತುಕ್ಕು ರೋಗ, ಕೆಂಪು ಕೊಳೆತ ರೋಗಗಳ ವಿರುದ್ಧ ರೋಗ ನಿರೋಧಕ ಗುಣವನ್ನು ಹೊಂದಿದೆ ಮತ್ತು ನೀರಿನ ಬವಣೆಯನ್ನು ಸಹಿಸಿಕೊಳ್ಳುತ್ತದೆ.ಇದು ಉತ್ತಮ ಕೂಳೆ ಕಬ್ಬಿಣ ತಳಿಯೂ , ಹೌದು.
ಕಲ್ಯಾಣಿ ತಳಿಯೂ, ತುಕ್ಕು ರೋಗ ಮತ್ತು ಕೆಂಪು ಕೊಳೆತ ರೋಗಗಳ ವಿರುದ್ಧ ರೋಗ ನಿರೋಧಕ ಗುಣವನ್ನು ಹೊಂದಿದೆ, ಜೊತೆಗೆ ಬರ ಮತ್ತು ನೀರಿನ ಬವಣೆಯನ್ನು ಸಹಿಸಿಕೊಳ್ಳುತ್ತದೆ.
ಕಬ್ಬು ಬೆಳೆಯ ಬೀಜೋಪಚಾರ :
ಕಬ್ಬಿನ ತುಂಡುಗಳಿಗೆ ಸಂಭವಿಸಬಹುದಾದ ಹಾನಿಯನ್ನು ತಪ್ಪಿಸಲು ಕಬ್ಬಿನ ಮೇಲಿನ ಒಣ ಎಲೆಗಳನ್ನು ತೆಗೆಯುವ ಮೂಲಕ ಕಬ್ಬಿಗೆ ಬೀಜೋಪಚಾರದ ಪ್ರಕಿಯೆಯು ಪ್ರಾರಂಭವಾಗುತ್ತದೆ. 30 ರಿಂದ 40 ಸೆಂ.ಮೀ ಅಳತೆಯ ಉತ್ತಮ ಕಣ್ಣುಗಳುಳ್ಳ ಕಬ್ಬಿನ ತುಂಡುಗಳನ್ನು ತೆಗೆದುಕೊಳ್ಳಬೇಕು . ಈ ಕಬ್ಬಿನ ತುಂಡುಗಳನ್ನು ನಾಟಿ ಮಾಡುವ ಮೊದಲು 0.5% ರಷ್ಟು 0.1% ಕಾರ್ಬೆಂಡೆಜಿಮ್ (1 ಗ್ರಾಂ / ಲೀಟರ್ ನೀರಿಗೆ ) ಅಥವಾ ಅರೆಟಾನ್ ಮತ್ತು ಅಗಾಲೋಲ್ @ 4 ಗ್ರಾಂ / ಲೀಟರ್ ನೀರಿನ ದ್ರಾವಣದಲ್ಲಿ 10 ನಿಮಿಷಗಳ ಕಾಲ ನೆನಸಿ ಬೀಜೋಪಚಾರ ಮಾಡಬೇಕು. ಕಬ್ಬಿನ ತುಂಡುಗಳನ್ನು ಉಷ್ಟೋಪಚಾರದ ಮೂಲಕ ಬೀಜೋಪಚಾರ ಮಾಡಬಹುದು. ಈ ವಿಧಾನವೂ ಕಬ್ಬಿನ ತುಂಡುಗಳಿಂದ ಹರಡುವ ರೋಗಗಳನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ.
ಕಬ್ಬಿನ ಬೆಳೆಗೆ ಭೂಮಿಯ ಸಿದ್ಧತೆಗಳು:
ಕಬ್ಬಿನ ಗದ್ದೆಗಳನ್ನು 2 ರಿಂದ 4 ಬಾರಿ ಟ್ರಾಕ್ಟರ್ ಚಾಲಿತ ಡಿಸ್ಕ್ ಪ್ಲೋ ಅಥವಾ ನೇಗಿಲಲ್ಲಿ 50-60 ಸೆಂ.ಮೀ ಆಳಕ್ಕೆ ಉಳುಮೆ ಮಾಡಬೇಕು .ನಂತರ ಭೂಮಿಯನ್ನು 12-15 ಸೆಂ.ಮೀ ಆಳದಲ್ಲಿ ಹೋಡೆ ಹೊಡೆಯಲಾಗುತ್ತದೆ ಮತ್ತು ಮಣ್ಣಿನ ಹೆಂಟೆಯನ್ನು ಡಿಸ್ಕ್ ಹ್ಯಾರೋ ಅಥವಾ ರೋಟವೆಟೋರ್ ಉಪಯೋಗಿಸಿ ಪುಡಿ ಮಾಡಬೇಕು .ಇದು ಗಟ್ಟಿ ಇರುವ ಮಣ್ಣನು ಪುಡಿ ಮಾಡಿ ಮೃದು ಮಾಡುತ್ತದೆ .
ಏಕರೂಪದ ಬೆಳೆ ಮತ್ತು ನೀರಾವರಿಗೆ ಸುಲಭವಾದ ಚಲನೆಯು ಬಹಳ ಮುಖ್ಯ.ಆದ್ದರಿಂದ ಇದನ್ನು ನೆಲಸಮಗೊಳಿಸುವ ಮೂಲಕ ಅನುಸರಿಸಬೇಕು. ಟ್ರಾಕ್ಟರ್ನಲ್ಲಿ ಲೆವೆಲರ್ ಅನ್ನು ಬಳಸಿಕೊಂಡು ಭೂಮಿಯನ್ನು ಸಮತಟ್ಟು ಮಾಡಬೇಕು
ಕೊಟ್ಟಿಗೆ ಗೊಬ್ಬರ – 12.5 ಟನ್ / ಹೆಕ್ಟೇರ್ ನಂತಹ ತಳ ಗೊಬ್ಬರಗಳನ್ನು ಅಥವಾ 25 ಟನ್ / ಹೆಕ್ಟೇರಿಗೆ ಕಾಂಪೋಸ್ಟ್ ಅಥವಾ 37.5 ಟನ್ / ಹೆಕ್ಟೇರ್ ಗೆ ಫಿಲ್ಟರ್ ಪ್ರೆಸ್ ಮಡ್(ಕಬ್ಬಿನ ರಸವನ್ನು ಶೋಧಿಸುವ ಶೇಷ) ಅನ್ನು ಕೊನೆಯ ಉಳುಮೆಯ ಮೊದಲು ಹಾಕಬೇಕು .
ನಂತರ ಕಬ್ಬಿನ ಕಸವನ್ನು ಮತ್ತು ಪ್ರೆಸ್ ಮಡ್ ಅನ್ನು 1:1 ಅನುಪಾತದಲ್ಲಿ ಮಣ್ಣಿಗೆ ಹಾಕಬೇಕು . ಇದರ ನಂತರ ರಾಕ್ ಫಾಸ್ಫೇಟ್, ಜಿಪ್ಸಮ್ ಮತ್ತು ಯೂರಿಯಾವನ್ನು 2: 2: 1 ಅನುಪಾತದಲ್ಲಿ ನೀಡಬೇಕು. ಈ ಮಿಶ್ರಣವನ್ನು ತೇವಾಂಶಕ್ಕಾಗಿ ಹಸುವಿನ ಸಗಣಿ ಅಥವಾ ನೀರಿನೊಂದಿಗೆ ಸಂಯೋಜಿಸಬಹುದು.
ರಂಜಕ ಕಡಿಮೆ ಇರುವ ಭೂಮಿಯಲ್ಲಿ ನಾಟಿ ಮಾಡುವಾಗ , 37.5ಕೆಜಿ /ಹೆಕ್ಟೇರ್ ಸೂಪರ್ ಫಾಸ್ಫೇಟ್ ಗೊಬ್ಬರವನ್ನು ಕೈಗುದ್ದಲಿಯಲ್ಲಿ ಸಾಲುಗಳನ್ನು ಮಾಡಿ ಹಾಕಬೇಕು. ಸತು(ಜಿಂಕ್) ಮತ್ತು ಕಬ್ಬಿಣ (ಐರನ್ )ಪೋಷಕಾಂಶಗಳ ಕೊರತೆಯಿರುವ ಮಣ್ಣಿನಲ್ಲಿ ನಾಟಿ ಮಾಡುವಾಗ,37.5ಕೆಜಿ ಜಿಂಕ್ ಸಲ್ಫೆಟ್ /ಹೆಕ್ಟೇರ್ ಮತ್ತು 100 ಕೆಜಿ ಫೆರೇಸ್ ಸಲ್ಫೆಟ್ ಅನ್ನು ಹಾಕಬೇಕು .
ಎರಡು ಅಥವಾ ಮೂರು ಕಣ್ಣು ಇರುವ ಕಬ್ಬಿನ ತುಂಡುಗಳನ್ನು 30 – 45ಸೆಂ.ಮೀ ಮಧ್ಯಂತರ ಸಾಲುಗಳಲ್ಲಿ ನಾಟಿಮಾಡಲಾಗುತ್ತದೆ . ನಂತರ, 3 ಅಥವಾ 4 ನೇ ದಿನದಲ್ಲಿ ನೀರಾವರಿ ಮಾಡಬೇಕು.
ಕಬ್ಬು ಬೆಳೆಗೆ ಮಣ್ಣಿನ ಅವಶ್ಯಕತೆ
ನೀರು ಬಸಿದು ಹೋಗುವಂತಹ ಕಪ್ಪು ಮಿಶ್ರಿತ ಮಣ್ಣು , pH 6.5 ರಿಂದ 7.5 ಮೌಲ್ಯ ಹೊಂದಿರುವ ತಟಸ್ಥ ಅಥವಾ ಸ್ವಲ್ಪ ಕ್ಷಾರೀಯ ಮಣ್ಣು ಕಬ್ಬು ಬೆಳೆಗೆ ಸೂಕ್ತ.
ಹಿನ್ನುಡಿ
ದೇಶದ ಎಲ್ಲಾ ನೀರಾವರಿ ಪ್ರದೇಶಗಳಲ್ಲಿ ಕಬ್ಬನ್ನು ಬೆಳೆಯಬಹುದು. ಹೆಚ್ಚಿನ ನೀರಿನ ಅವಶ್ಯಕತೆಯ ಹೊರತಾಗಿ, ಕಬ್ಬು ಬೆಳೆ ಸುಲಭವಾಗಿ ನಿರ್ವಹಿಸಬಹುದಾದ ಬೆಳೆಯಾಗಿದ್ದು, ಹೆಚ್ಚಿನ ನಿರ್ವಹಣೆ ಅಗತ್ಯವಿಲ್ಲ. ಹೆಚ್ಚು ಆದಾಯ ಬರುವ ಬೆಳೆಯಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ.