ಕ್ಯಾಲ್ಸಿಯಂ ಪ್ಲಸ್, ಇದು ಅಮೈನೊ ಆಮ್ಲ ಚೀಲೇಟ್ ಆಗಿದ್ದು, ಮಣ್ಣಿನಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ಸರಿಪಡಿಸಲು ವಿನ್ಯಾಸಗೊಳಿಸಲಾಗಿದೆ, ಇದು ಸಸ್ಯಗಳ ಬೆಳವಣಿಗೆಗೆ ನಿರ್ಣಾಯಕವಾಗಿದೆ. ಇದು ಸೂಕ್ಷ್ಮ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ, ಪರಾಗಗಳ ವೃದ್ಧಿಯನ್ನು ಹೆಚ್ಚಿಸುತ್ತದೆ, ಕಿಣ್ವಗಳನ್ನು ನಿಯಂತ್ರಿಸುತ್ತದೆ. ಜೀವಕೋಶ ಮತ್ತು ಅಂಗಾಂಶಗಳ ಆರೋಗ್ಯವನ್ನು ಬೆಂಬಲಿಸುತ್ತದೆ. ಅತ್ಯುತ್ತಮ ಫಲಿತಾಂಶಗಳಿಗಾಗಿ, ಕ್ಯಾಲ್ಸಿಯಂ ಪ್ಲಸ್ ಅನ್ನು ಮಣ್ಣು ಮತ್ತು ಎಲೆಗಳ ಮೇಲೆ ಸಿಂಪಡಣೆ ಮಾಡಲು ಬಳಸಿ. ಆಲೂಗಡ್ಡೆ ಮತ್ತು ಟೊಮ್ಯಾಟೊ ಬೆಳೆಗಳ ಗುಣಮಟ್ಟವನ್ನು ಸುಧಾರಿಸುವಲ್ಲಿ ಇದು ವಿಶೇಷವಾಗಿ ಪರಿಣಾಮಕಾರಿಯಾಗಿದೆ.ತುದಿ ಕೊಳೆತ ರೋಗವನ್ನು ತಡೆಯುತ್ತದೆ.
ಟೊಮ್ಯಾಟೊ ಬೆಳೆ
ಟೊಮ್ಯಾಟೊ ಬೆಳೆಗೆ ಪರಿಸರ ಪರಿಸ್ಥಿತಿಗಳ ಎಚ್ಚರಿಕೆಯ ನಿರ್ವಹಣೆ ಮತ್ತು ಸೂಕ್ತವಾದ ಬೆಳವಣಿಗೆಗೆ ಪೋಷಕಾಂಶಗಳ ಅಗತ್ಯವಿರುತ್ತದೆ. ಜೀವಕೋಶದ ಬೆಳವಣಿಗೆ, ಪೋಷಕಾಂಶಗಳ ಸಾಗಣೆ ಮತ್ತು ರೋಗ ನಿರೋಧಕತೆ ಹೆಚ್ಚಿಸುವಲ್ಲಿ ಕ್ಯಾಲ್ಸಿಯಂ ನಿರ್ಣಾಯಕ ಪಾತ್ರ ವಹಿಸುತ್ತದೆ. ವಿಶೇಷವಾಗಿ ತುದಿ ಕೊಳೆತ ರೋಗವನ್ನು ತಡೆಗಟ್ಟುವಲ್ಲಿ ನಿರ್ಣಾಯಕವಾಗಿದೆ. ಕ್ಯಾಲ್ಸಿಯಂ ಪ್ಲಸ್ ಅನ್ನು ಬಳಸುವುದರಿಂದ ಮಣ್ಣಿನಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ಪರಿಹರಿಸುತ್ತದೆ, ಬಲವಾದ ಬೇರುಗಳ ಅಭಿವೃದ್ಧಿ ಮತ್ತು ಆರೋಗ್ಯಕರ ಹಣ್ಣುಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಸಸ್ಯ ಬೆಳವಣಿಗೆಯ ಹಂತದ ಉದ್ದಕ್ಕೂ ಇದರ ನಿರಂತರ ಬಳಕೆಯು ಒಟ್ಟಾರೆ ಸಸ್ಯ ಆರೋಗ್ಯ ಮತ್ತು ಇಳುವರಿಯನ್ನು ಹೆಚ್ಚಿಸುತ್ತದೆ. ಉತ್ತಮ ಫಲಿತಾಂಶಗಳಿಗಾಗಿ, ಕ್ಯಾಲ್ಸಿಯಂ ಪ್ಲಸ್ ಅನ್ನು ಮಣ್ಣು ಮತ್ತು ಎಲೆಗಳ ಮೇಲೆ ಸಿಂಪಡಣೆ ಮಾಡಬೇಕು.
ಟೊಮ್ಯಾಟೊ ಬೆಳೆಯ ಪ್ರಮುಖ ಹಂತಗಳು
- ಸಸ್ಯ ಬೆಳವಣಿಗೆಯ ಹಂತ
- ಹೂಬಿಡುವ ಹಂತ
- ಕಾಯಿ ಪಕ್ವಕ್ಕೆ ಬರುವ ಹಂತ
ವಿವಿಧ ಬೆಳೆ ಹಂತಗಳಲ್ಲಿ ಕ್ಯಾಲ್ಸಿಯಂ ಪ್ಲಸ್ನೊಂದಿಗೆ ಬೆಳೆ ನಿರ್ವಹಣೆ
- ಸಸ್ಯ ಬೆಳವಣಿಗೆಯ ಹಂತ
ಸಸ್ಯ ಬೆಳವಣಿಗೆಯ ಹಂತವು ಸುಮಾರು 20-25 ದಿನಗಳವರೆಗೆ ಇರುತ್ತದೆ,ಈ ಹಂತವು ಟೊಮ್ಯಾಟೊ ಸಸ್ಯಗಳು ಹೂವುಗಳು ಮತ್ತು ಹಣ್ಣುಗಳ ನಂತರದ ಬೆಳವಣಿಗೆಯನ್ನು ಬೆಂಬಲಿಸಲು ಹೆಚ್ಚು ಎಲೆಗಳು ಮತ್ತು ಕಾಂಡಗಳನ್ನು ವೃದ್ಧಿಸುವುದರ ಮೇಲೆ ಕೇಂದ್ರೀಕೃತವಾಗಿರುತ್ತದೆ. ಈ ಹಂತದಲ್ಲಿ ಕ್ಯಾಲ್ಸಿಯಂ ನ ಹೆಚ್ಚಿನ ಬೇಡಿಕೆಯಿರುವ ಕಾರಣ ಹಂತದ ಉದ್ದಕ್ಕೂ ಕ್ಯಾಲ್ಸಿಯಂನ ಸ್ಥಿರ ಪೂರೈಕೆಯ ಅಗತ್ಯವಿರುತ್ತದೆ. ಹಂತದಲ್ಲಿ ಎಲೆ ಮತ್ತು ಕಾಂಡದ ಬೆಳವಣಿಗೆಯನ್ನು ಉತ್ತೇಜಿಸಲು, ಟೊಮ್ಯಾಟೊ ಸಸ್ಯಗಳು ಸಮತೋಲಿತ ರಸಗೊಬ್ಬರದಿಂದ ಪ್ರಯೋಜನ ಪಡೆಯುತ್ತವೆ. ಹೆಚ್ಚುವರಿಯಾಗಿ, ಟೊಮ್ಯಾಟೊ ಸಸ್ಯಗಳು ಬಲವಾದ ಬೇರಿನ ವ್ಯವಸ್ಥೆಯನ್ನು ಮತ್ತು ಎಲೆಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕೃತವಾಗಿರುತ್ತವೆ.ಕೊಂಬೆಗಳು ಮತ್ತು ಸೊಂಪಾದ ಎಲೆಗಳು ಮುಂದಿನ 20 ರಿಂದ 25 ದಿನಗಳಲ್ಲಿ ವೇಗವಾಗಿ ಬೆಳೆಯುತ್ತವೆ.
ಉತ್ಪನ್ನ ಬಳಕೆ
- ಕ್ಯಾಲ್ಸಿಯಂ ಪ್ಲಸ್ ಉತ್ಪನ್ನವು, ಮಣ್ಣಿನಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಲು ರೂಪಿಸಲಾದ ಅಮೈನೊ ಆಮ್ಲ ಚೀಲೇಟ್ ಆಗಿದ್ದು, ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
- ಇದರ ವಿಶಿಷ್ಟ ಸಂಯೋಜನೆ ಮತ್ತು ಸುಲಭ ಲಭ್ಯತೆಯು ಸಸ್ಯಗಳಲ್ಲಿ ಸೂಕ್ಷ್ಮ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.
- ಕ್ಯಾಲ್ಸಿಯಂ ಪ್ಲಸ್ ಏಕರೂಪದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಸಸ್ಯ ಬೆಳೆವಣಿಗೆಯ ಹಂತದಲ್ಲಿ ಸಮರ್ಥ ಪೋಷಕಾಂಶಗಳ ಸಾಗಣೆಯನ್ನು ಸುಗಮಗೊಳಿಸುವ ಮೂಲಕ ಬೇರುಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
- ಪ್ರತಿ ಲೀಟರ್ ನೀರಿಗೆ 1 ಗ್ರಾಂ ಪ್ರಮಾಣದಲ್ಲಿ ಅಥವಾ ಎಕೆರೆಗೆ 200 ಗ್ರಾಂ ಪ್ರಮಾಣದಲ್ಲಿ ಎಲೆಗಳ ಮೇಲೆ ಸಿಂಪಡಣೆ ಮಾಡಲು ಬಳಸಿ. ಹನಿ ನೀರಾವರಿಯಲ್ಲಿ ಬಳಸಲು, ಸಸ್ಯದ ಬೇರುಗಳಡಿ ಪರಿಣಾಮಕಾರಿಯಾಗಿ ತಲುಪುವಂತೆ ಖಚಿತಪಡಿಸಿಕೊಳ್ಳಲು ಎಕೆರೆಗೆ 500 ಗ್ರಾಂ ಪ್ರಮಾಣದಲ್ಲಿ ನೀರಿನಲ್ಲಿ ಕರಗಿಸಿ, ಬಳಸಿ.
- ಹೂಬಿಡುವ ಹಂತ
ಹೂಬಿಡುವ ಹಂತವು ಟೊಮ್ಯಾಟೊ ಬೆಳೆಯಲ್ಲಿ ಕಾಯಿ ಬಿಡುವ ಹಂತಕ್ಕೆ ಪ್ರಾರಂಭವನ್ನು ಸೂಚಿಸುತ್ತದೆ. ಈ ಹಂತದಲ್ಲಿ ಹೂವುಗಳ ಬೆಳವಣಿಗೆಯು ಹಣ್ಣಿನ ಉತ್ಪಾದನೆಗೆ ಪ್ರಮುಖವಾಗಿದೆ. ಕೋಶ ಭಿತ್ತಿಯ ರಚನೆ, ಸ್ಥಿರತೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಕ್ಯಾಲ್ಸಿಯಂ ಈ ಹಂತದಲ್ಲಿ ಅವಶ್ಯಕವಾಗಿದೆ. ಇದು ಆರೋಗ್ಯಕರವಾದ ಹೂವುಗಳು ಮತ್ತು ಹಣ್ಣುಗಳ ರಚನೆಯನ್ನು ಬೆಂಬಲಿಸುತ್ತದೆ. ಪರಾಗಗಳ ಬೆಳೆವಣಿಗೆಯಲ್ಲಿ ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸಾಕಷ್ಟು ಕ್ಯಾಲ್ಸಿಯಂ ಮಟ್ಟವನ್ನು ಖಚಿತಪಡಿಸಿಕೊಳ್ಳುವುದರಿಂದ ಕ್ಯಾಲ್ಸಿಯಂ ಕೊರತೆಯಿಂದ ಉಂಟಾಗುವ ಹಣ್ಣು ತುದಿ ಕೊಳೆತ ರೋಗವನ್ನು ತಡೆಯಲು ಸಹಾಯ ಮಾಡುತ್ತದೆ. ಆದ್ದರಿಂದ ಹೂಬಿಡುವ ಹಂತದಲ್ಲಿ ಕ್ಯಾಲ್ಸಿಯಂ ಅನ್ನು ಬಳಸುವುದು ಟೊಮ್ಯಾಟೊ ಬೆಳೆಗಳಲ್ಲಿ ಆರೋಗ್ಯಕರ ಹೂವು ಮತ್ತು ಹಣ್ಣಿನ ಬೆಳವಣಿಗೆಗೆ ನಿರ್ಣಾಯಕವಾಗಿದೆ.
ಉತ್ಪನ್ನದ ಬಳಕೆ
- ಹೂಬಿಡುವ ಹಂತದಲ್ಲಿ ಕ್ಯಾಲ್ಸಿಯಂ ಪ್ಲಸ್ ಅನ್ನು ಬಳಸುವುದರಿಂದ ಹೂವಿನ ಉತ್ಪಾದನೆ ಮತ್ತು ಒಟ್ಟಾರೆ ಸಸ್ಯದ ಆರೋಗ್ಯವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು ಮತ್ತು ತುದಿ ಕೊಳೆತ ರೋಗವನ್ನು ಸಹ ತಡೆಯಬಹುದು .
- ಪ್ರತಿ ಲೀಟರ್ ನೀರಿಗೆ 1 ಗ್ರಾಂ ಪ್ರಮಾಣದಲ್ಲಿ ಅಥವಾ ಎಕೆರೆಗೆ 200 ಗ್ರಾಂ ಪ್ರಮಾಣದಲ್ಲಿ ಎಲೆಗಳ ಮೇಲೆ ಸಿಂಪಡಣೆ ಮಾಡಲು ಬಳಸಿ. ಹನಿ ನೀರಾವರಿಯಲ್ಲಿ ಬಳಸಲು, ಸಸ್ಯದ ಬೇರುಗಳಡಿ ಪರಿಣಾಮಕಾರಿಯಾಗಿ ತಲುಪುವಂತೆ ಖಚಿತಪಡಿಸಿಕೊಳ್ಳಲು ಎಕೆರೆಗೆ 500 ಗ್ರಾಂ ಪ್ರಮಾಣದಲ್ಲಿ ನೀರಿನಲ್ಲಿ ಕರಗಿಸಿ, ಬಳಸಿ.
- ಕಾಯಿಗಳು ಪಕ್ವಕ್ಕೆ ಬರುವ ಹಂತ
ಟೊಮ್ಯಾಟೊ ಕಾಯಿಗಳು ಪಕ್ವಕ್ಕೆ ಬರುವ ಹಂತದಲ್ಲಿ ಕ್ಯಾಲ್ಸಿಯಂ ಅನ್ನು ಬಳಸುವುದರಿಂದ ಹಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಅವುಗಳ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಣಾಯಕವಾಗಿದೆ. ಕೋಶ ಭಿತ್ತಿಯ ರಚನೆ ಮತ್ತು ಸ್ಥಿರತೆಗೆ ಕ್ಯಾಲ್ಸಿಯಂ ಅತ್ಯಗತ್ಯ, ಹಣ್ಣಿನ ದೃಢತೆಯನ್ನು ಕಾಪಾಡಿಕೊಳ್ಳಲು ಮತ್ತು ಹಣ್ಣಿನ ತುದಿ ಕೊಳೆತವನ್ನು ತಡೆಯಲು ಸಹಾಯ ಮಾಡುತ್ತದೆ. ಇದನ್ನು ಕಾಯಿಗಳ ಬೆಳವಣಿಗೆಯ ಹಂತದ ಉದ್ದಕ್ಕೂ ಸತತವಾಗಿ ಅನ್ವಯಿಸಬೇಕು. ಕಾಯಿಗಳು ಪಕ್ವತೆಗೆ ಬರುವ ಸಮಯದಲ್ಲಿ ನಿರ್ದಿಷ್ಟ ಗಮನವನ್ನು ಹೊಂದಿದ್ದು, ಅತ್ಯುತ್ತಮ ಹಣ್ಣಿನ ಗುಣಮಟ್ಟ ಮತ್ತು ಶೇಖರಣೆ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ಕ್ಯಾಲ್ಸಿಯಂ ಅವಶ್ಯವಾಗಿದೆ. ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಇತರ ಪೋಷಕಾಂಶಗಳೊಂದಿಗೆ ಕ್ಯಾಲ್ಸಿಯಂ ಅನ್ನು ಸಮತೋಲನಗೊಳಿಸುವುದು ಪೋಷಕಾಂಶಗಳ ಕೊರತೆಗಳನ್ನು ನೀಗಿಸಲು ಸಹಾಯ ಮಾಡುತ್ತದೆ, ಇದರಿಂದ ನಿಮ್ಮ ಟೊಮ್ಯಾಟೊ ಬೆಳೆ ಉತ್ತಮ ಗುಣಮಟ್ಟದ, ಹೆಚ್ಚು ಶೇಖರಣಾ ಸಾಮರ್ಥ್ಯವನ್ನು ಹೊಂದಿರುವ ದೃಢವಾದ ಹಣ್ಣುಗಳ ಉತ್ಪಾದನೆಗೆ ನೆರವಾಗುತ್ತದೆ.
ಉತ್ಪನ್ನದ ಬಳಕೆ
-
- ಕ್ಯಾಲ್ಸಿಯಂ ಪ್ಲಸ್, ಹಣ್ಣುಗಳನ್ನು ಅಭಿವೃದ್ಧಿಪಡಿಸಲು ಪೋಷಕಾಂಶಗಳ ಸಮರ್ಥ ಸಾಗಣೆಯನ್ನು ಸುಗಮಗೊಳಿಸುತ್ತದೆ, ಏಕರೂಪದ ಹಣ್ಣು ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಬೇರುಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
- ಹಣ್ಣುಗಳ ವಿನ್ಯಾಸ, ದೃಢತೆ ಮತ್ತು ರಚನಾತ್ಮಕ ಸಮಗ್ರತೆಯನ್ನು ಹೆಚ್ಚಿಸುತ್ತದೆ, ಉತ್ತಮ ಗುಣಮಟ್ಟ ಮತ್ತು ಹೆಚ್ಚು ಸ್ಥಿರವಾದ ಇಳುವರಿಗೆ ಕಾರಣವಾಗುತ್ತದೆ.
- ಇದು ಹಣ್ಣುಗಳಲ್ಲಿ ಕೋಶ ಭಿತ್ತಿಗಳನ್ನು ಬಲಪಡಿಸುತ್ತದೆ, ಹಣ್ಣುಗಳು ಹಾನಿಗೆ ಒಳಗಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
- ಪ್ರತಿ ಲೀಟರ್ ನೀರಿಗೆ 1 ಗ್ರಾಂ ಪ್ರಮಾಣದಲ್ಲಿ ಅಥವಾ ಎಕೆರೆಗೆ 200 ಗ್ರಾಂ ಪ್ರಮಾಣದಲ್ಲಿ ಎಲೆಗಳ ಮೇಲೆ ಸಿಂಪಡಣೆ ಮಾಡಲು ಬಳಸಿ. ಹನಿ ನೀರಾವರಿಯಲ್ಲಿ ಬಳಸಲು, ಸಸ್ಯದ ಬೇರುಗಳಡಿ ಪರಿಣಾಮಕಾರಿಯಾಗಿ ತಲುಪುವಂತೆ ಖಚಿತಪಡಿಸಿಕೊಳ್ಳಲು ಎಕೆರೆಗೆ 500 ಗ್ರಾಂ ಪ್ರಮಾಣದಲ್ಲಿ ನೀರಿನಲ್ಲಿ ಕರಗಿಸಿ, ಬಳಸಿ.
ಆಲೂಗಡ್ಡೆ ಬೆಳೆ
ಆಲೂಗಡ್ಡೆ ಬೆಳೆಯ ಗುಣಮಟ್ಟ ಮತ್ತು ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಕ್ಯಾಲ್ಸಿಯಂ ಪ್ರಮುಖ ಪಾತ್ರ ವಹಿಸುತ್ತದೆ. ಇದು ಕೋಶ ಭಿತ್ತಿಯ ರಚನೆಯನ್ನು ಬಲಪಡಿಸುತ್ತದೆ, ಬೇರಿನ ಬೆಳವಣಿಗೆಯನ್ನು ಬೆಂಬಲಿಸುತ್ತದೆ ಮತ್ತು ಸಸ್ಯಗಳಲ್ಲಿ ಒತ್ತಡ ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಗೆಡ್ಡೆಯ ಗುಣಮಟ್ಟ ಕಡಿಮೆಯಾಗದಂತೆ ತಡೆಯಲು ಕ್ಯಾಲ್ಸಿಯಂ ಸಹಾಯ ಮಾಡುತ್ತದೆ ಮತ್ತು ಶೇಖರಣಾ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಆಲೂಗಡ್ಡೆಗಳು ಕಡಿಮೆ ಪ್ರಮಾಣದಲ್ಲಿ ತಮ್ಮಲ್ಲಿ ಇರುವ ನೀರನ್ನು ಆವಿಯ ರೂಪದಲ್ಲಿ ಬಿಡುವುದರಿಂದ ಕ್ಯಾಲ್ಸಿಯಂ ಕೊರತೆಯನ್ನು ಎದುರಿಸುತ್ತವೆ. ಸಾಕಷ್ಟು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು, ಕ್ಯಾಲ್ಸಿಯಂ ಅನ್ನು ಸಸ್ಯ ಬೆಳವಣಿಗೆಯ ಹಂತದಿಂದ ಹಿಡಿದು ಗೆಡ್ಡೆ ರಚನೆಯ ಹಂತದವರೆಗೆ ಬಳಸಬೇಕು. ಇದು ಗೆಡ್ಡೆಗಳು ಮತ್ತು ಬೇರುಗಳನ್ನು ಕ್ಯಾಲ್ಸಿಯಂನೊಂದಿಗೆ ಸಮರ್ಪಕವಾಗಿ ಪೂರೈಸುವಂತೆ ಖಚಿತಪಡಿಸುತ್ತದೆ, ಅದಲ್ಲದೆ ಸುಧಾರಿತ ಇಳುವರಿ ಮತ್ತು ಗುಣಮಟ್ಟಕ್ಕೆ ಕಾರಣವಾಗುತ್ತದೆ.
ಆಲೂಗಡ್ಡೆ ಬೆಳೆಯ ಪ್ರಮುಖ ಹಂತಗಳು
- ಸಸ್ಯ ಬೆಳವಣಿಗೆಯ ಹಂತ
- ಗೆಡ್ಡೆ ರಚನೆಯ ಹಂತ
- ಪಕ್ವಕ್ಕೆ ಬರುವ ಹಂತ
ವಿವಿಧ ಬೆಳೆ ಹಂತಗಳಲ್ಲಿ ಕ್ಯಾಲ್ಸಿಯಂ ಪ್ಲಸ್ನೊಂದಿಗೆ ಬೆಳೆ ನಿರ್ವಹಣೆ
- ಸಸ್ಯ ಬೆಳವಣಿಗೆಯ ಹಂತ
ಆಲೂಗೆಡ್ಡೆ ಬೆಳೆಯಲ್ಲಿ ಸಸ್ಯ ಬೆಳವಣಿಗೆಯ ಹಂತವು 30 ರಿಂದ 70 ದಿನಗಳವರೆಗೆ ಇರುತ್ತದೆ, ಈ ಹಂತ ಅಧಿಕ ಇಳುವರಿಯ ಸಾಮರ್ಥ್ಯಕ್ಕಾಗಿ ದೃಢವಾದ ಸಸ್ಯಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕೃತವಾಗಿರುತ್ತದೆ. ಈ ಹಂತದಲ್ಲಿ, ಗೆಡ್ಡೆ ಬೆಳವಣಿಗೆಯನ್ನು ಪ್ರಾರಂಭಿಸಲು ಬಲವಾದ ಎಲೆಗಳು ಮತ್ತು ಚೆನ್ನಾಗಿ ಅಭಿವೃದ್ಧಿ ಹೊಂದಿದ ಬೇರುಗಳು ಅವಶ್ಯಕ. ಎಲೆಗಳು ಮತ್ತು ರೆಂಬೆಗಳು ನೆಲದ ಮೇಲೆ ಬೆಳೆಯುತ್ತವೆ, ಆದರೆ ಬೇರುಗಳು ಮತ್ತು ಗೆಡ್ಡೆಗಳು ನೆಲದಡಿಯಲ್ಲಿ ರೂಪುಗೊಳ್ಳುತ್ತವೆ.ಸೂರ್ಯನ ಬೆಳಕನ್ನು ಶಕ್ತಿಯನ್ನಾಗಿ ಪರಿವರ್ತಿಸಿ, ದ್ಯುತಿಸಂಶ್ಲೇಷಣೆ ಪ್ರಾರಂಭವಾಗುತ್ತದೆ. ಈ ಹಂತದಲ್ಲಿ ಕ್ಯಾಲ್ಸಿಯಂನಂತಹ ಅಗತ್ಯ ಪೋಷಕಾಂಶಗಳನ್ನು ಒದಗಿಸುವುದು ಸಸ್ಯದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.
ಉತ್ಪನ್ನದ ಬಳಕೆ
- ಸಸ್ಯ ಬೆಳವಣಿಗೆಯ ಹಂತದಲ್ಲಿ ಕ್ಯಾಲ್ಸಿಯಂ ಪ್ಲಸ್ ಅನ್ನು ಬಳಸುವುದರಿಂದ, ಸಸ್ಯಗಳು ತಮ್ಮ ಬೆಳವಣಿಗೆಯ ಹಂತದ ಉದ್ದಕ್ಕೂ ಅಗತ್ಯವಾದ ಪೋಷಕಾಂಶಗಳನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.
- ಕ್ಯಾಲ್ಸಿಯಂ ಪ್ಲಸ್ ಮಣ್ಣಿನಲ್ಲಿರುವ ಕ್ಯಾಲ್ಸಿಯಂ ಕೊರತೆಯನ್ನು ಸರಿಪಡಿಸಲು ಮತ್ತು ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರ ವಿಶಿಷ್ಟ ಸೂತ್ರ ಮತ್ತು ಸುಲಭ ಲಭ್ಯತೆಯು ಸಸ್ಯಗಳಲ್ಲಿ ಸೂಕ್ಷ್ಮ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.
- ಪ್ರತಿ ಲೀಟರ್ ನೀರಿಗೆ 1 ಗ್ರಾಂ ಪ್ರಮಾಣದಲ್ಲಿ ಅಥವಾ ಎಕೆರೆಗೆ 200 ಗ್ರಾಂ ಪ್ರಮಾಣದಲ್ಲಿ ಎಲೆಗಳ ಮೇಲೆ ಸಿಂಪಡಣೆ ಮಾಡಲು ಬಳಸಿ. ಹನಿ ನೀರಾವರಿಯಲ್ಲಿ ಬಳಸಲು, ಸಸ್ಯದ ಬೇರುಗಳಡಿ ಪರಿಣಾಮಕಾರಿಯಾಗಿ ತಲುಪುವಂತೆ ಖಚಿತಪಡಿಸಿಕೊಳ್ಳಲು ಎಕೆರೆಗೆ 500 ಗ್ರಾಂ ಪ್ರಮಾಣದಲ್ಲಿ ನೀರಿನಲ್ಲಿ ಕರಗಿಸಿ, ಬಳಸಿ.
- ಗೆಡ್ಡೆಗಳ ರಚನೆಯ ಹಂತ
ಗೆಡ್ಡೆಗಳ ರಚನೆಯ ಹಂತದಲ್ಲಿ ಸಸ್ಯವು ನಾವು ಸೇವಿಸುವ ಗೆಡ್ಡೆಗಳು ಅಥವಾ ಆಲೂಗಡ್ಡೆಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಸಣ್ಣ ಬಿಳಿ ಗೆಡ್ಡೆಗಳನ್ನು ನೆಲದಡಿಯಲ್ಲಿ ಅಭಿವೃದ್ಧಿಪಡಿಸುತ್ತದೆ, ಇದು ಸಸ್ಯವು ಬೆಳೆದಂತೆ ಗಾತ್ರ ಮತ್ತು ಸಂಖ್ಯೆಯಲ್ಲಿ ಹೆಚ್ಚಾಗುತ್ತದೆ. ಗೆಡ್ಡೆಗಳ ಬೆಳವಣಿಗೆ ಮತ್ತು ಅಭಿವೃದ್ಧಿ ಹೊಂದುವ ಈ ಹಂತದಲ್ಲಿ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದು ಅತ್ಯಗತ್ಯ.
ಕಾಂಡದ ತುದಿ ಉಬ್ಬಿದಾಗ, ಗೆಡ್ಡೆಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ.ಸಸ್ಯ ಪೋಷಕಾಂಶದ ಪ್ರಕ್ರಿಯೆಗಳು ಸಂಪೂರ್ಣವಾಗಿ ಸಕ್ರಿಯವಾಗಿಯೇ ಎಂದು ಖಚಿತಪಡಿಸಿಕೊಳ್ಳಲು ಈ ಹಂತವು ನಿರ್ಣಾಯಕವಾಗಿದೆ, ಇದು ಗೆಡ್ಡೆಗಳ ಯಶಸ್ವಿ ಬೆಳವಣಿಗೆಗೆ ಕಾರಣವಾಗುತ್ತದೆ.
ಉತ್ಪನ್ನದ ಬಳಕೆ
- ಕ್ಯಾಲ್ಸಿಯಂ ಪ್ಲಸ್, ಅಮೈನೊ ಆಮ್ಲ ಚೀಲೇಟ್ ಆಗಿದ್ದು ಇದು ಮಣ್ಣಿನಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ಸರಿಪಡಿಸುತ್ತದೆ, ಸೂಕ್ಷ್ಮ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುವ ಮೂಲಕ ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
- ಗೆಡ್ಡೆಗಳ ಅಭಿವೃದ್ಧಿ ಹಂತದಲ್ಲಿ ಕ್ಯಾಲ್ಸಿಯಂ ಪ್ಲಸ್ ಅನ್ನು ಬಳಸಿ, ಮಣ್ಣಿನಲ್ಲಿ ಅತ್ಯುತ್ತಮ ತೇವಾಂಶದ ಮಟ್ಟವನ್ನು ಕಾಪಾಡಿಕೊಳ್ಳಿ, ವಿಶೇಷವಾಗಿ ಆರಂಭಿಕ ಗೆಡ್ಡೆ ಬೆಳವಣಿಗೆಯ ಸಮಯದಲ್ಲಿ (ಕೋಶ ವಿಭಜನೆ) ಮತ್ತು ಬೆಳವಣಿಗೆಯ ಋತುವಿನ ಉದ್ದಕ್ಕೂ ಬಳಸುವುದು ಸೂಕ್ತ.
- ಎಲೆಗಳ ಮೇಲೆ ಸಿಂಪಡಣೆಗಾಗಿ: ಪ್ರತಿ ಲೀಟರ್ ನೀರಿಗೆ 1 ಗ್ರಾಂ ಪ್ರಮಾಣದಲ್ಲಿ ಅಥವಾ ಎಕರೆಗೆ 200 ಗ್ರಾಂ ಪ್ರಮಾಣದಲ್ಲಿ ಎಲೆಗಳ ಮೇಲೆ ಸಿಂಪಡಣೆಯಾಗಿ ಬಳಸಿ.
- ಹನಿ ನೀರಾವರಿಗಾಗಿ: ಸಸ್ಯದ ಬೇರುಗಳ ಬಳಿ ಪರಿಣಾಮಕಾರಿಯಾಗಿ ತಲುಪಲು ಹನಿ ನೀರಾವರಿಗಾಗಿ ಎಕರೆಗೆ 500 ಗ್ರಾಂ ಪ್ರಮಾಣದಲ್ಲಿ ನೀರಿನಲ್ಲಿ ಕರಗಿಸಿ, ಬಳಸಿ.
- ಪಕ್ವತೆ ಬರುವ ಹಂತ
ಆಲೂಗೆಡ್ಡೆ ಬೆಳವಣಿಗೆಯ ಅಂತಿಮ ಹಂತವನ್ನು ಪಕ್ವತೆ ಬರುವ ಹಂತ ಎಂದು ಕರೆಯಲಾಗುತ್ತದೆ, ಇದು ಆಲೂಗಡ್ಡೆಯು ಸಂಪೂರ್ಣವಾಗಿ ಕೊಯ್ಲಿಗೆ ಸಿದ್ಧವಾಗಿಯೇ ನೆಡು ಖಚಿತಪಡಿಸುತ್ತದೆ. ಈ ಹಂತದಲ್ಲಿ, ಗಡ್ಡೆಗಳಲ್ಲಿ ಪಿಷ್ಟವು ಸಂಗ್ರಹಗೊಳ್ಳುತ್ತದೆ, ಇದು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ದಪ್ಪ, ದೃಢವಾದ ಹೊರ ಪದರವನ್ನು ವಿಸ್ತರಿಸಲು ಮತ್ತು ಅಭಿವೃದ್ಧಿಪಡಿಸಲು ಕಾರಣವಾಗುತ್ತದೆ. ಗೆಡ್ಡೆಯ ಹೊರ ಪದರವು ಗಟ್ಟಿಯಾಗುತ್ತಿದ್ದಂತೆ, ನೆಲದ ಮೇಲಿನ ಎಲೆಗಳು ಮತ್ತು ಕಾಂಡಗಳು ಒಣಗುತ್ತವೆ ಮತ್ತು ಸಾಯುತ್ತವೆ, ಕೊನೆಯ ಶಕ್ತಿಯನ್ನು ಗೆಡ್ಡೆಗಳಿಗೆ ವರ್ಗಾಯಿಸುತ್ತವೆ. ಮೇಲ್ಭಾಗಗಳು ಸತ್ತ ನಂತರ ಆಲೂಗಡ್ಡೆ ಸ್ವಲ್ಪ ಸಮಯದವರೆಗೆ ನೆಲದಡಿಯಲ್ಲಿ ಉಳಿಯಬಹುದು ಮತ್ತು ಸಸ್ಯದ ಮೇಲ್ಭಾಗಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಅವು ಕೊಯ್ಲಿಗೆ ಸಿದ್ಧವಾಗುತ್ತವೆ. ಕೋಶ ಭಿತ್ತಿಯ ಗೋಡೆಗಳನ್ನು ಬಲಪಡಿಸುವ ಮೂಲಕ, ಹೊರ ಪದರದ ಗಟ್ಟಿತನವನ್ನು ಹೆಚ್ಚಿಸುವ ಮೂಲಕ, ಪೋಷಕಾಂಶಗಳ ಸಾಗಣೆಗೆ ಸಹಾಯ ಮಾಡುವ ಮೂಲಕ, ಒತ್ತಡ ಸಹಿಷ್ಣುತೆಯನ್ನು ಸುಧಾರಿಸುವ ಮತ್ತು ಒಟ್ಟಾರೆ ಗುಣಮಟ್ಟ ಮತ್ತು ಇಳುವರಿಯನ್ನು ಹೆಚ್ಚಿಸುವ ಮೂಲಕ ಕ್ಯಾಲ್ಸಿಯಂ ಈ ಹಂತದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಸಾಕಷ್ಟು ಕ್ಯಾಲ್ಸಿಯಂ ಮಟ್ಟವನ್ನು ಖಚಿತಪಡಿಸಿಕೊಳ್ಳುವುದರಿಂದ ಉತ್ತಮ ಗುಣಮಟ್ಟದ, ದೀರ್ಘಾವಧಿಯವರೆಗೆ ಶೇಖರಣಾ ಸಾಮರ್ಥ್ಯವುಳ್ಳ ಆಲೂಗಡ್ಡೆಗಳನ್ನು ಬೆಳೆಯಬಹುದು.
ಉತ್ಪನ್ನದ ಬಳಕೆ
- ಕ್ಯಾಲ್ಸಿಯಂ ಪ್ಲಸ್ ಗೆಡ್ಡೆಗಳನ್ನು ಅಭಿವೃದ್ಧಿಪಡಿಸಲು ಪೋಷಕಾಂಶಗಳ ಸಮರ್ಥ ಸಾಗಣೆಯನ್ನು ಸುಗಮಗೊಳಿಸುತ್ತದೆ, ಏಕರೂಪದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಬೇರಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
- ಗೆಡ್ಡೆಗಳ ವಿನ್ಯಾಸ, ದೃಢತೆ ಮತ್ತು ರಚನಾತ್ಮಕ ಸಮಗ್ರತೆಯನ್ನು ಹೆಚ್ಚಿಸುತ್ತದೆ, ಉತ್ತಮ ಗುಣಮಟ್ಟದ ಮತ್ತು ಹೆಚ್ಚು ಸ್ಥಿರವಾದ ಇಳುವರಿಗೆ ಕಾರಣವಾಗುತ್ತದೆ.
- ಇದು ಗೆಡ್ಡೆಗಳಲ್ಲಿ ಕೋಶ ಭಿತ್ತಿಗಳನ್ನು ಬಲಪಡಿಸುತ್ತದೆ, ಹಾನಿಗೆ ಒಳಗಾಗುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಅವುಗಳ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ .
- ಎಲೆಗಳ ಮೇಲೆ ಸಿಂಪಡಣೆಗಾಗಿ: ಪ್ರತಿ ಲೀಟರ್ ನೀರಿಗೆ 1 ಗ್ರಾಂ ಪ್ರಮಾಣದಲ್ಲಿ ಅಥವಾ ಎಕರೆಗೆ 200 ಗ್ರಾಂ ಪ್ರಮಾಣದಲ್ಲಿ ಎಲೆಗಳ ಮೇಲೆ ಸಿಂಪಡಣೆಯಾಗಿ ಬಳಸಿ.
- ಹನಿ ನೀರಾವರಿಗಾಗಿ: ಸಸ್ಯದ ಬೇರುಗಳ ಬಳಿ ಪರಿಣಾಮಕಾರಿಯಾಗಿ ತಲುಪಲು ಹನಿ ನೀರಾವರಿಗಾಗಿ ಎಕರೆಗೆ 500 ಗ್ರಾಂ ಪ್ರಮಾಣದಲ್ಲಿ ನೀರಿನಲ್ಲಿ ಕರಗಿಸಿ, ಬಳಸಿ.
ಹಿನ್ನುಡಿ
ಟೊಮ್ಯಾಟೊ ಮತ್ತು ಆಲೂಗೆಡ್ಡೆ ಬೆಳೆಗಳ ಬೆಳವಣಿಗೆಯ ಪ್ರತಿಯೊಂದು ಹಂತವು ಪರಿಸರ ಪರಿಸ್ಥಿತಿಗಳು ಮತ್ತು ನಿಯಮಿತ ನಿರ್ವಹಣೆ ಬಗ್ಗೆ ಎಚ್ಚರಿಕೆಯಿಂದ ಗಮನ ಹರಿಸಬೇಕು. ಕ್ಯಾಲ್ಸಿಯಂ ಕೋಶ ಭಿತ್ತಿಗಳ ಬೆಳವಣಿಗೆ, ಪೋಷಕಾಂಶಗಳ ಸಾಗಣೆ ಮತ್ತು ರೋಗ ನಿರೋಧಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಹಣ್ಣಿನ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಮತ್ತು ಹಣ್ಣು ತುದಿ ಕೊಳೆತವನ್ನು ಕಡಿಮೆ ಮಾಡುತ್ತದೆ. ಕ್ಯಾಲ್ಸಿಯಂ ಪ್ಲಸ್ ಮಣ್ಣಿನ ಕ್ಯಾಲ್ಸಿಯಂ ಕೊರತೆಯನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತದೆ, ದೃಢವಾದ ಸಸ್ಯ ಬೆಳವಣಿಗೆ ಮತ್ತು ಅಧಿಕ ಇಳುವರಿಯನ್ನು ಉತ್ತೇಜಿಸುತ್ತದೆ. ಇದರ ಸ್ಥಿರವಾದ ಬಳಕೆ ಫಸಲಿನ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಆರೋಗ್ಯಕರ, ಹೆಚ್ಚು ಉತ್ಪಾದಕ ಬೆಳೆಯನ್ನು ಖಾತ್ರಿಗೊಳಿಸುತ್ತದೆ. ಅತ್ಯುತ್ತಮ ಫಲಿತಾಂಶಗಳಿಗಾಗಿ, ಬೆಳವಣಿಗೆಯ ಹಂತದ ಉದ್ದಕ್ಕೂ ಕ್ಯಾಲ್ಸಿಯಂ ಪ್ಲಸ್ ಅನ್ನು ಮಣ್ಣಿಗೆ ಮತ್ತು ಎಲೆಗಳ ಮೇಲೆ ಸಿಂಪಡಣೆ ಮಾಡಲು ಬಳಸಿ.