HomeCrop ManagementAgri Hacksನಿಮ್ಮ ಕೈ ತೋಟದ ಬೆಳೆಗಳಿಗೆ ಕೀಟಗಳ ಹಾವಳಿಯೇ ಹಾಗಿದ್ದಲ್ಲಿ ನಿಮ್ಮ ಬೆಳೆಗಳನ್ನು ಕೀಟಗಳಿಂದ ರಕ್ಷಿಸಲು ...

ನಿಮ್ಮ ಕೈ ತೋಟದ ಬೆಳೆಗಳಿಗೆ ಕೀಟಗಳ ಹಾವಳಿಯೇ ಹಾಗಿದ್ದಲ್ಲಿ ನಿಮ್ಮ ಬೆಳೆಗಳನ್ನು ಕೀಟಗಳಿಂದ ರಕ್ಷಿಸಲು ಇಲ್ಲಿದೆ ಉಪಾಯ !!!

ಕೀಟನಾಶಕಗಳು ಕೀಟಗಳನ್ನು ನಿಯಂತ್ರಿಸುವ ರಾಸಾಯನಿಕ ಅಥವಾ ಜೈವಿಕ ಮೂಲದವಾಗಿರುತ್ತವೆ. ಇವುಗಳು  ಬೆಳೆಗಳಿಗೆ ಹಾನಿ ಮಾಡುವ  ಕೀಟಗಳನ್ನು ನಿಯಂತ್ರಣ ಮಾಡುತ್ತವೆ ಅಥವಾ ತಡೆಯುತ್ತವೆ. ಕೀಟನಾಶಕಗಳು ನೈಸರ್ಗಿಕ ಅಥವಾ ಮಾನವ ನಿರ್ಮಿತವಾಗಿರಬಹುದು ಮತ್ತು ಅಸಂಖ್ಯಾತ ಸೂತ್ರೀಕರಣಗಳು ಮತ್ತು ವಿತರಣಾ ವ್ಯವಸ್ಥೆಗಳಲ್ಲಿ (ಸ್ಪ್ರೇಗಳು, ಬೈಟ್‌ಗಳು, ನಿಧಾನ-ಬಿಡುಗಡೆ ಪ್ರಸರಣ, ಇತ್ಯಾದಿ) ಗುರಿಪಡಿಸಿದ ಕೀಟಗಳಿಗೆ ಇವುಗಳನ್ನು ಅನ್ವಯಿಸಲಾಗುತ್ತದೆ. 

ಮನೆಯಲ್ಲಿ ತಯಾರಿಸುವ ಕೀಟನಾಶಕಗಳಿಂದ ಆಗುವ ಉಪಯೋಗಗಳು : 

  • ಕೃಷಿ, ತೋಟಗಾರಿಕೆ  ಬೆಳೆಗಳಿಗೆ, ಕೈ ತೋಟ ಉಪಯೋಗಕ್ಕೆ ಮತ್ತು ಕೀಟ ನಿಯಂತ್ರಣದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. 
  • ಮನೆಯಲ್ಲಿ ತಯಾರಿಸಿದ ಕೀಟನಾಶಕಗಳು ನೈಸರ್ಗಿಕವಾಗಿ ಕೀಟಗಳನ್ನು ನಿಯಂತ್ರಿಸುತ್ತವೆ.  
  • ಈ ಕೀಟನಾಶಕಗಳು ಸಾವಯವ ಕೀಟನಾಶಕವು ಪರಿಸರ ಸ್ನೇಹಿಯಾಗಿದೆ.
  • ಸೊಳ್ಳೆಗಳು, ಉಣ್ಣಿ, ತಿಗಣೆ, ರಸ ಹೀರುವ ಕೀಟಗಳು, ಜಿಗಿ ಹುಳುಗಳು, ಇಲಿಗಳು ಮತ್ತು ಇಥ್ಯಾದಿ  ವಿವಿಧ ಕೀಟಗಳು ಮತ್ತು ರೋಗ ವಾಹಕಗಳನ್ನು ನಿಯಂತ್ರಿಸಲು ಕೀಟನಾಶಕಗಳನ್ನು ಬಳಸಲಾಗುತ್ತದೆ. 
  • ಕೀಟನಾಶಕಗಳನ್ನು ಕೃಷಿಯಲ್ಲಿ ಕಳೆಗಳು, ಕೀಟಗಳ ಬಾಧೆ ಮತ್ತು ರೋಗಗಳನ್ನು ನಿಯಂತ್ರಿಸಲು ಬಳಸಲಾಗುತ್ತದೆ. 
  • ಹಲವಾರು ವಿಧದ ಕೀಟನಾಶಕಗಳಿವೆ; ಪ್ರತಿಯೊಂದೂ ನಿರ್ದಿಷ್ಟ ಕೀಟಗಳ ವಿರುದ್ಧ ಪರಿಣಾಮಕಾರಿಯಾಗಿರುತ್ತದೆ.

ಮನೆಯಲ್ಲಿ ಕೀಟನಾಶಕವನ್ನು ತಯಾರಿಸಲು ಬೇಕಿರುವ ಸಾಮಗ್ರಿಗಳು 

  • ಒಂದು ಲೀಟರ್ ನೀರು 
  • ಬೇಕಿಂಗ್ ಸೋಡಾ 
  • ಬೇವಿನ ಎಣ್ಣೆ ಅಥವಾ ಯಾವುದಾದರು ಬೀಜದ ಎಣ್ಣೆ 
  • ಸೋಪಿನ ದ್ರಾವಣ 

ಮಾಡುವ ವಿಧಾನ 

1 ಲೀಟರ್ ನೀರಿನಲ್ಲಿ + 2 ಚಮಚದಷ್ಟು ಬೇಕಿಂಗ್ ಸೋಡಾವನ್ನು ಮತ್ತು 1 ಚಮಚದಷ್ಟು ಬೇವಿನ ಎಣ್ಣೆಯನ್ನು ಹಾಗೂ 10 ರಿಂದ 12 ಹನಿಗಳಷ್ಟು ಸೋಪಿನ ದ್ರಾವಣವನ್ನು ಬೆರೆಸಿ ಚೆನ್ನಾಗಿ ಕದಡಬೇಕು. 

ಚೆನ್ನಾಗಿ ಕದಡಿದ ನಂತರ ಅದನ್ನು ಕೀಟಗಳಿಂದ ದಾಳಿಗೊಳಗಾಗಿರುವ ಬೆಳೆಗಳಿಗೆ ಅಥವಾ ಸಸ್ಯಗಳಿಗೆ ಸಿಂಪಡಿಸಬಹುದು. 

ಇದನ್ನು ಸಿಂಪಡಿಸುವುದರಿಂದ ಕೀಟಗಳನ್ನು ವೇಗವಾಗಿ ನಿಯಂತ್ರಿಸಬಹುದು. ಈ ಕೀಟನಾಶಕದಿಂದ ಯಾವುದೇ ಹಾನಿಯುಂಟಾಗುವ ಸಂಭವವಿಲ್ಲ, ಇದು  ಪರಿಸರ ಸ್ನೇಹಿ ಕೀಟನಾಶಕವಾಗಿದೆ, ಇದು ರಸಹೀರುವ ಕೀಟಗಳನ್ನು  ಉತ್ತಮವಾಗಿ ನಿಯಂತ್ರಿಸುತ್ತದೆ ಮತ್ತು ಕೈ ತೋಟಕ್ಕೆ ಈ ಕೀಟನಾಶಕವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. 

Categories:
spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು