ಬೂಜು ತುಪ್ಪಟ ರೋಗವು ಬಳ್ಳಿ ಜಾತಿ ತರಕಾರಿ ಬೆಳೆಗಳಾದಂತಹ, ಸೌತೆಕಾಯಿ, ಕಲ್ಲಂಗಡಿ, ಸೋರೆಕಾಯಿ ಹಾಗೂ ಕುಂಬಳಕಾಯಿಯಂತಹ ಸಸ್ಯಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುವ ಸಾಮಾನ್ಯ ಶಿಲೀಂಧ್ರ ರೋಗವಾಗಿದೆ. ಇದು ಸ್ಯೂಡೋಪೆರೋನೋಸ್ಪೊರಾ ಕ್ಯೂಬೆನ್ಸಿಸ್ ಎಂಬ ರೋಗಕಾರಕದಿಂದ ಉಂಟಾಗುತ್ತದೆ. ಈ ರೋಗವು ಹೆಚ್ಚು ವಿನಾಶಕಾರಿಯಾಗಿದ್ದು ಮತ್ತು ಸರಿಯಾಗಿ ನಿರ್ವಹಿಸದಿದ್ದಲ್ಲಿ ಇಳುವರಿಯಲ್ಲಿ ಗಮನಾರ್ಹ ನಷ್ಟವನ್ನು ಉಂಟುಮಾಡಬಹುದು.
ಅಗತ್ಯ ನಿರ್ವಹಣಾ ಕ್ರಮಗಳನ್ನು ತೆಗೆದುಕೊಳ್ಳಲು, ರೋಗವನ್ನು ಗುರುತಿಸಿ, ಅದನ್ನು ತಡೆಯಲು ಮತ್ತು ರೋಗಲಕ್ಷಣಗಳು ಕಂಡುಬಂದರೆ ತ್ವರಿತವಾಗಿ ರೋಗವನ್ನು ನಿರ್ವಹಿಸುವ ಬಗೆಯನ್ನು ತಿಳಿಸಲು ನಾವು ಇಲ್ಲಿದ್ದೇವೆ.
ಬಳ್ಳಿ ಜಾತಿ ತರಕಾರಿ ಬೆಳೆಗಳಲ್ಲಿ ಬೂಜು ತುಪ್ಪಟ ರೋಗದ ಲಕ್ಷಣಗಳು
ಬೂಜು ತುಪ್ಪಟ ರೋಗದ ಲಕ್ಷಣಗಳು :
- ಎಲೆಗಳ ಮೇಲೆ ಸಣ್ಣ, ದುಂಡಾಕಾರದ ಹಳದಿ ಕಲೆಗಳನ್ನು ಅಥವಾ ಚುಕ್ಕೆಗಳನ್ನು ಕಾಣಬಹುದು.
- ರೋಗದ ತೀವ್ರತೆ ಹೆಚ್ಚಾದಾಗ, ಹಳದಿ ಕಲೆಗಳು ದೊಡ್ಡದಾಗುತ್ತವೆ ಮತ್ತು ಕಂದು ಬಣ್ಣಕ್ಕೆ ತಿರುಗುತ್ತವೆ. ಪೀಡಿತ ಎಲೆ ಭಾಗವು ಒಣಗಿದ ಮತ್ತು ಕಾಗದದಂತಾಗಬಹುದು.
- ಆರ್ದ್ರ ವಾತಾವರಣದಲ್ಲಿ ಅಥವಾ ಎಲೆಗಳು ಒದ್ದೆಯಾದಾಗ, ಎಲೆಗಳ ಕೆಳಗೆ ನೀರಿನಲ್ಲಿ ನೆನೆಸಿದಂತ ಗಾಯಗಳನ್ನು ಕಾಣಬಹುದು. ನಂತರ, ಈ ಗಾಯಗಳು ಅಸ್ಪಷ್ಟ ಬೂದು ಬಣ್ಣದಿಂದ ಹಿಡಿದು ನೇರಳೆ ಬಣ್ಣದ ಅಚ್ಚಿನ ರೀತಿಯ ಶಿಲೀಂಧ್ರಗಳ ಬೆಳವಣಿಗೆಗೆ ಬದಲಾಗುತ್ತವೆ ಹಾಗೂ ಸಂಪೂರ್ಣವಾಗಿ ಎಲೆಗಳು ಒಣಗುತ್ತವೆ.
- ಸೋಂಕಿತ ಸಸ್ಯಗಳು ಕಾಯಿ ಅಥವಾ ಹಣ್ಣುಗಳನ್ನು ಉತ್ಪಾದಿಸುವಲ್ಲಿ ಕುಂಠಿತವಾಗುತ್ತವೆ ಮತ್ತು ಬೆಳೆಯುವ ಕಾಯಿಗಳು ಚಿಕ್ಕದಾಗಿರುತ್ತವೆ ಹಾಗೂ ಕಾಯಿಗಳು ಆಕಾರದಲ್ಲಿ ವಿಕಾರಗೊಳ್ಳಬಹುದು ಅಥವಾ ಕಳಪೆ ಪರಿಮಳವನ್ನು ಹೊಂದಿರಬಹುದು.
- ಬೂಜು ತುಪ್ಪಟ ರೋಗದ ತೀವ್ರತೆ ಹೆಚ್ಚಾದಾಗ ಸಸ್ಯಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ.
ಬೂಜು ತುಪ್ಪಟ ರೋಗದ ಅಭಿವೃದ್ಧಿ ಮತ್ತು ಹರಡುವಿಕೆಯ ಬಗ್ಗೆ ತಿಳಿದುಕೊಳ್ಳಿ :
ಬೂಜು ತುಪ್ಪಟ ರೋಗವು ತಂಪಾದ (15-20 ° C) ಮತ್ತು ಆರ್ದ್ರ ಪರಿಸ್ಥಿತಿಗಳಲ್ಲಿ ಬೆಳೆಯುತ್ತದೆ. ಮಳೆಯ ವಾತಾವರಣ ಅಥವಾ ಭಾರೀ ಇಬ್ಬನಿಯಂತಹ ಹೆಚ್ಚಿನ ಆರ್ದ್ರತೆಯ ಅವಧಿಯಲ್ಲಿ ಇದು ವೇಗವಾಗಿ ಹರಡುತ್ತದೆ. ರೋಗಕಾರಕಕ್ಕೆ ಸೋಂಕು ಮತ್ತು ಬೆಳವಣಿಗೆಗೆ ಎಲೆಯ ಮೇಲ್ಮೈಯಲ್ಲಿ ಉತ್ತಮ ತೇವಾಂಶದ ಅಗತ್ಯವಿರುತ್ತದೆ.
ಈ ರೋಗವು ಸೋಂಕಿತ ಸಸ್ಯದ ಅವಶೇಷಗಳು, ಬೀಜಗಳು ಮತ್ತು ಮಣ್ಣಿನಲ್ಲಿ ಇದು ಬದುಕಬಲ್ಲದು, ಆದರೆ ಇದು ಪ್ರಾಥಮಿಕವಾಗಿ ಗಾಳಿಯಿಂದ ಬೀಜಕಗಳ ಮೂಲಕ ಹರಡುತ್ತದೆ. ಈ ಬೀಜಕಗಳು ಗಾಳಿಯಲ್ಲಿ ಬಹು ದೂರದವರೆಗೆ ಪ್ರಯಾಣಿಸಬಹುದು ಮತ್ತು ಆರೋಗ್ಯಕರ ಸಸ್ಯಗಳಿಗೆ ಸೋಂಕನ್ನು ಉಂಟುಮಾಡಬಹುದು. ಸೋಂಕಿತ ಸಸ್ಯಗಳು ಮೊಳಕೆ ಅಥವಾ ಸಸಿಗಳ ಮೂಲಕ ಸಹ ರೋಗವನ್ನು ಹರಡಬಹುದು.
ನಿರ್ವಹಣಾ ಕ್ರಮಗಳು:
- ಆರೋಗ್ಯಕರ ಬೀಜ ಮತ್ತು ಸಸಿಗಳನ್ನು ನೆಡುವುದು ಖಚಿತಪಡಿಸಿಕೊಳ್ಳಬೇಕು.
- ನಾಟಿ ಮಾಡಲು IRIS F1 ಹೈಬ್ರಿಡ್ ಸೌತೆಕಾಯಿ ಜಾಂಕಿ, IRIS ಸೌತೆಕಾಯಿ ದಾವತ್ ಬೀಜಗಳು, ಸೊರೊಟ್ ರಿಡ್ಜ್ ಸೋರೆಕಾಯಿ, MH 38 ಕರಬೂಜ ಬೀಜಗಳಂತಹ ಬೂಜು ತುಪ್ಪಟ ರೋಗಕ್ಕೆ ಪ್ರತಿರೋಧ ಅಥವಾ ಸಹಿಷ್ಣುತೆಯನ್ನು ಹೊಂದಿರುವ ತಳಿಗಳನ್ನು ಆಯ್ಕೆಮಾಡಿ.
- ರೋಗದ ಬೆಳೆವಣಿಗೆಯನ್ನು ನಿಯಂತ್ರಿಸಲು ಮತ್ತು ಮಣ್ಣಿನಲ್ಲಿ ರೋಗಕಾರಕಗಳ ಸಂಖ್ಯೆಯನ್ನು ಕಡಿಮೆ ಮಾಡಲು ಒಂದು ಅಥವಾ ಎರಡು ಬೆಳವಣಿಗೆ ಋತುಗಳವರೆಗೆ ದ್ವಿದಳ ಧಾನ್ಯಗಳು, ಟೊಮೆಟೊ, ಬದನೆ ಮತ್ತು ಬೇರು ಬೆಳೆಗಳಂತಹ ಬೆಳೆಗಳೊಂದಿಗೆ ಬೆಳೆ ಸರದಿಯನ್ನು ಅಭ್ಯಾಸಿಸಬೇಕು.
- ಸಸ್ಯಗಳ ನಡುವೆ ಉತ್ತಮ ಅಂತರವನ್ನು ನೀಡಬೇಕು ಮತ್ತು ದಟ್ಟವಾದ ಎಲೆಗಳನ್ನು ಕತ್ತರಿಸುವ ಮೂಲಕ ಉತ್ತಮ ಗಾಳಿಯನ್ನು ಸಸ್ಯದ ಬೆಳೆವಣಿಗೆಗೆ ಹಾಗೂ ಸಸ್ಯಕ್ಕೆ ಉತ್ತಮ ಸೂರ್ಯನ ಬೆಳಕು ಮತ್ತು ತ್ವರಿತವಾಗಿ ಸೋಂಕಿತ ಎಲೆಗಳನ್ನು ಒಣಗಿಸಲು ಅನುವು ಮಾಡುತ್ತದೆ.
- ತುಂತುರು ನೀರಾವರಿಯನ್ನು ತಪ್ಪಿಸಬೇಕು, ಇದು ರೋಗದ ಬೆಳೆವಣಿಗೆ ಹೆಚ್ಚು ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.
- ಬದಲಾಗಿ, ಸಸ್ಯಗಳ ಬುಡದಲ್ಲಿ ನೀರುಹಾಕಲು ಹನಿ ನೀರಾವರಿ ಅಥವಾ ಹೊಸ್ ಪೈಪ್ ಗಳನ್ನ ಬಳಸಿ, ಇದು ಎಲೆಗಳನ್ನು ಒಣಗಿಸುತ್ತದೆ.
- ಬಿದ್ದ ಎಲೆಗಳು, ಸೋಂಕಿತ ಹಣ್ಣುಗಳು ಮತ್ತು ಯಾವುದೇ ಇತರ ಸಸ್ಯದ ಅವಶೇಷಗಳು ಸೇರಿದಂತೆ ಯಾವುದೇ ಸೋಂಕಿತ ಸಸ್ಯದ ಅವಶೇಷಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ. ರೋಗದ ಹರಡುವಿಕೆಯನ್ನು ತಡೆಗಟ್ಟಲು ಸ್ವಚ್ಛ ಉಪಕರಣಗಳನ್ನು ಉಪಯೋಗಿಸಿ.
- ಬೂಜು ತುಪ್ಪಟ ರೋಗದ ನಿಯಂತ್ರಣಕ್ಕಾಗಿ ಬೇವಿನ ಎಣ್ಣೆಯನ್ನು ಸಿಂಪಡಿಸಿ.
- ರೋಗ ಸಂಭವವನ್ನು ತಡೆಗಟ್ಟಲು ರೋಗನಿರೋಧಕ ಕ್ರಮವಾಗಿ 5-7 ದಿನಗಳ ಮಧ್ಯಂತರದಲ್ಲಿ 1% ಬೋರ್ಡೆಕ್ಸ್ ಮಿಶ್ರಣ ಅಥವಾ ಇತರ ತಾಮ್ರ ಆಧಾರಿತ ಶಿಲೀಂಧ್ರನಾಶಕ ಅಥವಾ ಮ್ಯಾಂಕೋಜೆಬ್ ನಂತಹ ರಕ್ಷಣಾತ್ಮಕ ಶಿಲೀಂಧ್ರನಾಶಕವನ್ನು ಸಿಂಪಡಿಸಿ.
ಬೂಜು ತುಪ್ಪಟ ರೋಗವನ್ನು ನಿಯಂತ್ರಿಸಲು ಪರಿಣಾಮಕಾರಿ ನಿರ್ವಹಣಾ ಕ್ರಮಗಳು:
ರೋಗದ ತೀವ್ರತೆ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ 7-14 ದಿನಗಳ ಮಧ್ಯಂತರದಲ್ಲಿ ರಾಸಾಯನಿಕಗಳನ್ನು ಸಿಂಪಡಿಸಿ. ಜೈವಿಕ-ಶಿಲೀಂಧ್ರನಾಶಕಗಳು ಮತ್ತು ಕೆಲವು ರಾಸಾಯನಿಕ ಶಿಲೀಂಧ್ರನಾಶಕಗಳಾದ ಮ್ಯಾಂಕೋಜೆಬ್ ಮತ್ತು ಕಾಪರ್ ಆಕ್ಸಿಕ್ಲೋರೈಡ್ ಅನ್ನು ಸಹ ರೋಗ ಸಂಭವಿಸುವ ಮೊದಲು ತಡೆಗಟ್ಟುವ ಕ್ರಮವಾಗಿ ಸಿಂಪಡಿಸಬಹುದು.
ಉತ್ಪನ್ನದ ಹೆಸರು | ತಾಂತ್ರಿಕ ಅಂಶ | ಬಳಸುವ ಪ್ರಮಾಣ |
ಜೈವಿಕ ನಿರ್ವಹಣೆ | ||
ಡೌನಿ ರೇಜ್ | ಜೈವಿಕ ಸಾರಗಳು | 2.5 ಮಿಲಿ/ಲೀಟರ್ ನೀರಿಗೆ |
ಆನಂದ್ ಡಾ ಬ್ಯಾಕ್ಟೋ ಅವರ ಫ್ಲೂರೋ ಬಯೋ ಶಿಲೀಂಧ್ರನಾಶಕ | ಸ್ಯೂಡೋಮೊನಾಸ್ ಫ್ಲೋರೊಸೆನ್ಸ್ | 2.5 ಮಿಲಿ/ಲೀಟರ್ ನೀರಿಗೆ |
ರಾಸಾಯನಿಕ ನಿರ್ವಹಣೆ | ||
ಕ್ಯಾಂಬ್ರಿಯೋ ಟಾಪ್ ಶಿಲೀಂಧ್ರನಾಶಕ | ಮೆಟಿರಾಮ್ 55% + ಪೈರಾಕ್ಲೋಸ್ಟ್ರೋಬಿನ್ 5% WG | 3 ಗ್ರಾಂ/ಲೀಟರ್ ನೀರಿಗೆ |
ಬ್ಲಾಯ್ಟೊಕ್ಸ್ | ಕಾಪರ್ ಆಕ್ಸಿ ಕ್ಲೋರೈಡ್ | 2 ಗ್ರಾಂ/ಲೀಟರ್ ನೀರಿಗೆ |
ಜಂಪ್ರೋ ಶಿಲೀಂಧ್ರನಾಶಕ | ಅಮೆಟೊಕ್ಟ್ರಾಡಿನ್ 27% + ಡೈಮೆಥೊಮಾರ್ಫ್ 20.27% ಎಸ್‌ಸಿ | 1.5 ಮಿಲಿ/ಲೀಟರ್ ನೀರಿಗೆ |
ತಾಕತ್ ಶಿಲೀಂಧ್ರನಾಶಕ | ಹೆಕ್ಸಾಕೊನಜೋಲ್ 5% + ಕ್ಯಾಪ್ಟನ್ 70% WP | 2 ಗ್ರಾಂ/ಲೀಟರ್ ನೀರಿಗೆ |
ರಿಡೋಮಿಲ್ ಗೋಲ್ಡ್ | ಮೆಟಾಲಾಕ್ಸಿಲ್ 4% + ಮ್ಯಾಂಕೋಜೆಬ್ 64% WP | 2 ಗ್ರಾಂ/ಲೀಟರ್ ನೀರಿಗೆ |
ಪ್ರೋಪಿ ಶಿಲೀಂಧ್ರನಾಶಕ | ಪ್ರೊಪಿನೆಬ್ 70% WP | 3 ಗ್ರಾಂ/ಲೀಟರ್ ನೀರಿಗೆ |
ಮಾಕ್ಸಿಮೇಟ್ ಶಿಲೀಂಧ್ರನಾಶಕ | ಸೈಮೋಕ್ಸಾನಿಲ್ 8% + ಮ್ಯಾಂಕೋಜೆಬ್ 64% WP | 2 ಗ್ರಾಂ/ಲೀಟರ್ ನೀರಿಗೆ |
ಪ್ರಮುಖ ಸೂಚನೆ:
- ಸಿಂಪಡಣೆಗೆ ಬಳಸುವ ಪ್ರಮಾಣ, ಸಮಯ ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳು ಸೇರಿದಂತೆ ಉತ್ಪನ್ನದ ಲೇಬಲ್‌ನಲ್ಲಿ ನೀಡಲಾದ ಸೂಚನೆಗಳನ್ನು ಯಾವಾಗಲೂ ಓದಿ ಮತ್ತು ಅವುಗಳನ್ನು ಅನುಸರಿಸಿ.
- ಸಿಂಪಡಿಸುವ ಉತ್ಪನ್ನಗಳನ್ನು ಪರ್ಯಾಯವಾಗಿ ಬದಲಾವಣೆ ಮಾಡಿ.
- ಯಾವಾಗಲೂ ಬೋರ್ಡೆಕ್ಸ್ ಮಿಶ್ರಣವನ್ನು ತಾಜಾವಾಗಿ ತಯಾರಿಸಿ ಮತ್ತು ಅದೇ ದಿನ ಉಪಯೋಗಿಸಿ.