ವೈಜ್ಞಾನಿಕ ಹೆಸರು: ಒರಿಜಾ ಸಟಿವ
ಭತ್ತವು ಭಾರತದ ಪ್ರಮುಖ ಆಹಾರ ಬೆಳೆಗಳಲ್ಲಿ ಒಂದಾಗಿದೆ, ಭತ್ತದ ಬೆಳೆಯ ಒಟ್ಟು ಬೆಳೆ ಪ್ರದೇಶದ 1/4 ನೇ ಭಾಗವನ್ನು ಒಳಗೊಂಡಿದೆ. ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರ ಬಹು ಮುಖ್ಯ ಆಹಾರ ಅಕ್ಕಿಯಾಗಿದೆ. ಜಾಗತಿಕವಾಗಿ ಅಕ್ಕಿ ಉತ್ಪಾದನೆಯಲ್ಲಿ ಚೀನಾದ ನಂತರ ಭಾರತ ಎರಡನೇ ಸ್ಥಾನದಲ್ಲಿದೆ. 2022-23 ರಲ್ಲಿ ಒಟ್ಟು ಅಕ್ಕಿ ಉತ್ಪಾದನೆ 125 ಮಿಲಿಯನ್ ಟನ್ಗಳು. 2022-23ರಲ್ಲಿ ಭತ್ತದ ಕೃಷಿಯ ಒಟ್ಟು ಪ್ರದೇಶವು 45.5 ಮಿಲಿಯನ್ ಹೆಕ್ಟೇರ್ಗಳಾಗಿದ್ದು, ಸರಾಸರಿ ಉತ್ಪಾದಕತೆ ಸುಮಾರು 4.1 ಟನ್/ಹೆ. ಭಾರತದಲ್ಲಿ, ಮುಂಗಾರಿನಲ್ಲಿ ಹೆಚ್ಚಾಗಿ ಭತ್ತವನ್ನು ಬೆಳೆಯಲಾಗುತ್ತದೆ. ಇದು ಉಷ್ಣವಲಯದ ಮತ್ತು ಉಪೋಷ್ಣವಲಯದ ಬಿಸಿ ಮತ್ತು ಆರ್ದ್ರತೆ ಯ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತದೆ.
ಪ್ರಮುಖ ರೋಗಗಳು:
-
ಬೆಂಕಿ ರೋಗ :
-
ಕಾರಣವಾದ ಜೀವಿ : ಪೈರಿಕ್ಯುಲೇರಿಯಾ ಒರಿಜೆ (ಲೈಂಗಿಕ ಹಂತ: ಮ್ಯಾಗ್ನಾಪೋರ್ತೆ ಗ್ರೀಸಿಯೆ )
ರೋಗ ಬಾಧಿಸುವ ಹಂತಗಳು:
ಇದು ಭತ್ತದ ಅತ್ಯಂತ ವಿನಾಶಕಾರಿ ರೋಗಗಳಲ್ಲಿ ಒಂದಾಗಿದೆ. ಈ ರೋಗವು ಭತ್ತದ ಸಸ್ಯಗಳ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ, ಮುಖ್ಯವಾಗಿ ಎಲೆಗಳು,ಹೂಗೊಂಚಲು , ಬೀಜಗಳು ಮತ್ತು ಕಾಂಡ, ಈ ರೋಗಾವು 70 – 80%ನಷ್ಟು ಧಾನ್ಯ ನಷ್ಟವನ್ನು ಉಂಟುಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಲಕ್ಷಣಗಳು:
- ಲೀಫ್ ಬ್ಲಾಸ್ಟ್/ ಎಲೆ ಬೆಂಕಿ ರೋಗ : ಬೂದು ಮಧ್ಯ ಮತ್ತು ಕಂದು ಅಂಚಿನೊಂದಿಗೆ ಸ್ಪಿಂಡಲ್ ಆಕಾರದ ಚುಕ್ಕೆಗಳು, ನಂತರ ‘ಬ್ಲಾಸ್ಟ್’ ಅಥವಾ ‘ಬರ್ನ್ಟ್’ ಕಾಣಿಸಿಕೊಳ್ಳುವಿಕೆಗೆ ಕಾರಣವಾಗುತ್ತವೆ
- ಕುತ್ತಿಗೆ ಬೆಂಕಿ ರೋಗ/ ನೆಕ್ ಬ್ಲಾಸ್ಟ್ – ತೆನೆಯ ಕೆಳಭಾಗದಲ್ಲಿ ಕತ್ತಿನ ಮೇಲೆ ಕಪ್ಪು ಅಥವಾ ಕಂಡು ಬಣ್ಣದ ಮಚ್ಛೆ ಕಾಣಿಸಿಕೊಂಡು ತೆನೆ ಜೊಳ್ಳಾಗುತ್ತದೆ ಮತ್ತು ಕತ್ತಿನ ಭಾಗ ಮುರಿದು ತೆನೆ ಜೋತು ಬೀಳುತ್ತದೆ .
- ನೋಡ್ ಬ್ಲಾಸ್ಟ್/ ಗಿಣ್ಣಿನ ಬೆಂಕಿ ರೋಗ – ಬಾಧಿತ ಸಸ್ಯದ ಗಿಣ್ಣುಗಳು ಕಪ್ಪು ಮಚ್ಚೆಯನ್ನು ಉಂಟುಮಾಡುತ್ತವೆ ಇದು ನಂತರ ಒಡೆಯುತ್ತದೆ
ಭತ್ತದ ಬೆಂಕಿ ರೋಗಕ್ಕೆ ಅನುಕೂಲಕರವಾದ ಪರಿಸ್ಥಿತಿಗಳು:
ದೀರ್ಘಕಾಲದ ಅಥವಾ ಆಗಾಗ್ಗೆ ಮಳೆ ಬೀಳುವ ಪ್ರದೇಶಗಳು, ಕಡಿಮೆ ಮಣ್ಣಿನ ತೇವಾಂಶ, ತಂಪಾದ ತಾಪಮಾನ ಮತ್ತು ಸುಮಾರು 93-99% ನಷ್ಟು ಹೆಚ್ಚಿನ ಸಾಪೇಕ್ಷ ಆರ್ದ್ರತೆ ಹೊಂದಿರುವ ವಾತಾವರಣದಲ್ಲಿ ಬೆಳೆಯುವ ಭತ್ತದ ಬೆಳೆಯು ಈ ರೋಗಕ್ಕೆ ಹೆಚ್ಚು ಒಳಗಾಗುತ್ತದೆ.
ರಾಸಾಯನಿಕ ನಿರ್ವಹಣೆ:
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
---|---|
ಕಾಂಟಾಫ್ ಶಿಲೀಂಧ್ರನಾಶಕ | ಹೆಕ್ಸಾಕೊನಜೋಲ್ 5 % EC |
ನೇಟಿವೋ ಶಿಲೀಂಧ್ರನಾಶಕ | ಟೆಬುಕೋನಜೋಲ್ 50% +ಟ್ರೈಫ್ಲೋಕ್ಸಿಸ್ಟ್ರೋಬಿನ್ 25% WG |
ಧನುಕಾ ಕಾಸು-ಬಿ ಶಿಲೀಂಧ್ರನಾಶಕ | ಕಸುಗಮಸಿನ್ 3% SL |
ಫಾಲಿಕರ್ ಶಿಲೀಂಧ್ರನಾಶಕ | ಟೆಬುಕೊನಜೋಲ್ 250 EC |
2 . ಬ್ಯಾಕ್ಟೀರಿಯಲ್ ಲೀಫ್ ಬ್ಲೈಟ್/ ದುಂಡಾಣು ಮಚ್ಚೆ ರೋಗ
ಕಾರಣವಾದ ಜೀವಿ: ಕ್ಸಾಂಥೋಮೊನಾಸ್ ಒರಿಝೆ
ದುಂಡಾಣು ಮಚ್ಚೆ ರೋಗದ ಹಂತಗಳು: ತೆಂಡೆ ಹೊಡೆಯುವ ಹಂತದಿಂದ ಕಾಳು ಕಟ್ಟುವ ಹಂತದವರೆಗೆ
ಲಕ್ಷಣಗಳು:
- ನೀರಿನಲ್ಲಿ ನೆನೆಸಿದ ಚುಕ್ಕೆಗಳ ಕಲೆಗಳು ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ, ಈ ಕಲೆಗೆಳ ಕ್ರಮೇಣ ಕಲೆಗಳು , ಬಿಳಿ ಗೆರೆಗಳ ಹಾಗೆ ಎಲೆಯ ತುದಿಯಿಂದ ಬುಡಕ್ಕೆ ರೂಪುಗೊಳ್ಳುತ್ತವೆ
- ಎಲೆಗಳ ವಿಲ್ಟಿಂಗ್ ಮತ್ತು ಹಳದಿ
- ಸಾಮಾನ್ಯವಾಗಿ ‘ಸೀಡ್ಲಿಂಗ್ ವಿಲ್ಟ್’ ಅಥವಾ ‘ಕ್ರೆಸೆಕ್’ ಎಂದು ಕರೆಯಲಾಗುತ್ತದೆ
ಭತ್ತದ ಬೆಳೆಯಲ್ಲಿ ಬ್ಯಾಕ್ಟೀರಿಯಾ ಎಲೆ ಕೊಳೆತ / ಎಲೆಯ ದುಂಡಾಣು ರೋಗಕ್ಕೆ ಅನುಕೂಲಕರ ಪರಿಸ್ಥಿತಿಗಳು
ನೀರಾವರಿ ಮತ್ತು ಮಳೆಯಾಶ್ರಿತ ತಗ್ಗು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 25 – 34 ° C ತಾಪಮಾನ, 70% ಕ್ಕಿಂತ ಹೆಚ್ಚಿನ ಸಾಪೇಕ್ಷ ಆರ್ದ್ರತೆ, ಹೆಚ್ಚಿನ ಸಾರಜನಕ ಫಲೀಕರಣ, ಬಲವಾದ ಗಾಳಿ ಮತ್ತು ನಿರಂತರ ಮಳೆಯು ರೋಗದ ಸೋಂಕಿಗೆ ಅನುಕೂಲಕರ ಪರಿಸ್ಥಿತಿಗಳಾಗಿವೆ.
ರಾಸಾಯನಿಕ ನಿರ್ವಹಣೆ:
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಬ್ಲೂ ಕಾಪರ್ | ಕಾಪರ್ ಆಕ್ಸಿಕ್ಲೋರೈಡ್ 50% WP |
ಕ್ರಿಸ್ಟೋಸೈಕ್ಲಿನ್ | ಸ್ಟ್ರೆಪ್ಟೊಮೈಸಿನ್ ಸಲ್ಫೇಟ್ 90% + ಟೆಟ್ರಾಸಿಲಿನ್ ಹೈಡ್ರೋಕ್ಲೋರೈಡ್ 10% SP |
ಜಿಯೋಲೈಫ್ ಜಿಯೋಮೈಸಿನ್ | ಕನ್ಸೋರ್ಟಿಯಂ ಆಫ್ ಪ್ಲಾಂಟ್ ಎಕ್ಸ್ಟ್ರಾಕ್ಟ್ಸ್ |
ಕೊನಿಕಾ | ಕಾಸುಗಮೈಸಿನ್ 5% + ಕಾಪರ್ ಆಕ್ಸಿ ಕ್ಲೋರೈಡ್ 45% WP |
3 . ಭತ್ತದ ಎಲೆ ಕವಚದ ಕೊಳೆ ರೋಗ:
ಕಾರಣವಾದ ಜೀವಿ: ಸರೋಕ್ಲಾಡಿಯಮ್ ಒರಿಝೆ
ರೋಗ ಬಾಧಿಸುವ ಹಂತಗಳು: ತೆಂಡೆ ಬರುವ ಹಂತ
ಲಕ್ಷಣಗಳು:
- ಅನಿಯಮಿತ ಕಂದು ಬಣ್ಣದ ನೀರು ತುಂಬಿದ ಗಾಯಗಳು ಭತ್ತದ ಬಾವುಟದ ಗರಿಯ ಕವಚದ ಮೇಲೆ ಕಾಣಿಸಿಕೊಳ್ಳುತ್ತದೆ
- ಪೀಡಿತ ತೆನೆಯ ಎಲೆಗಳ ಕವಚದೊಳಗೆ ಬಿಳಿ ಪುಡಿಯ ಶಿಲೀಂಧ್ರ
ರೋಗದ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳು:
ಇದು ಶುಷ್ಕ ಋತುಗಳಿಗೆ ಹೋಲಿಸಿದರೆ ಆರ್ದ್ರ ಋತುಗಳಲ್ಲಿ ಹೆಚ್ಚು ಕಂಡುಬರುತ್ತದೆ . ಹೆಚ್ಚಿನ ಸಾರಜನಕ ಫಲೀಕರಣ, ರೋಗ ಮತ್ತು ಗಾಯಗೊಂಡ ಗಿಡಗಳು, ಹೆಚ್ಚಿನ ಸಾಪೇಕ್ಷ ಆರ್ದ್ರತೆ ಮತ್ತು 20 – 28 ° C ತಾಪಮಾನ ಹೊಂದಿರುವ ವಾತಾವರಣ ಹಾಗು ಕಡಿಮೆ ಅಂತರದಲ್ಲಿ ನಾಟಿ ಮಾಡಿದ ಭತ್ತದ ಬೆಳೆಗಳಲ್ಲಿ ಈ ರೋಗದ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳಾಗಿವೆ.
ರಾಸಾಯನಿಕ ನಿರ್ವಹಣೆ:
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಧನುಸ್ಟಿನ್ ಶಿಲೀಂಧ್ರನಾಶಕ | ಕಾರ್ಬೆಂಡಜಿಮ್ 50% WP |
ಕವಚ್ ಶಿಲೀಂಧ್ರನಾಶಕ | ಕ್ಲೋರೋಥಲೋನಿಲ್ 75% WP |
ಟಾಟಾ ಮಾಸ್ಟರ್ ಶಿಲೀಂಧ್ರನಾಶಕ | ಮೆಟಾಲಾಕ್ಸಿಲ್ 8% + ಮ್ಯಾಂಕೋಜೆಬ್ 64% WP |
ಕೊನಿಕಾ | ಕಾಸುಗಮೈಸಿನ್ 5% + ಕಾಪರ್ ಆಕ್ಸಿಕ್ಲೋರೈಡ್ 45% |
-
ಕಂದು ಚುಕ್ಕೆ ರೋಗ / ರೈಸ್ ಬ್ರೌನ್ ಸ್ಪಾಟ್:
ಕಾರಣವಾದ ಜೀವಿ : ಹೆಲ್ಮಿಂಥೋಸ್ಪೋರಿಯಮ್ ಒರಿಜೆ
ರೋಗ ಬಾಧಿಸುವ ಹಂತಗಳು: ಮೊಳಕೆಯೊಡೆಯುವ ಹಂತದಿಂದ ಕಾಳು ತುಂಬುವ ಹಂತದವರೆಗೆ
ಲಕ್ಷಣಗಳು:
- ಹಳದಿ ಬಣ್ಣದ ವರ್ತುಲ ಇರುವ ಅಂಡಾಕಾರದ ಅಥವಾ ವೃತ್ತಾಕಾರದ ಗಾಢ ಕಂದು ಬಣ್ಣದ ಚುಕ್ಕೆಗಳು ಅತ್ಯಂತ ಗೋಚರ ಸಂಕೇತವಾಗಿದೆ.
- ತೆನೆಗಳಲ್ಲಿ ಕಂಡುಬರುವ ಸೋಂಕು ಅಸ್ತವ್ಯಸ್ತವಾದ ಧಾನ್ಯದ ತುಂಬುವಿಕೆಗೆ ಕಾರಣವಾಗಬಹುದು ಮತ್ತು ಧಾನ್ಯದ ಗುಣಮಟ್ಟ ಕಡಿಮೆಯಾಗಬಹುದು .
ರೋಗದ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳು:
ಸಾಪೇಕ್ಷ ಆರ್ದ್ರತೆ 86 – 100% ಕ್ಕಿಂತ ಹೆಚ್ಚು, 16 – 36 ° ತಾಪಮಾನ, ಸೋಂಕಿತ ಬೀಜಗಳು, ಹೆಚ್ಚು ಕಳೆಗಳು ಇರುವ ಜಾಮೀನು, ಸೋಂಕಿತ ಬತ್ತದ ಗಿಡಗಳು ಈ ರೋಗದ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳಾಗಿವೆ.
ರಾಸಾಯನಿಕ ನಿರ್ವಹಣೆ:
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಟಿಲ್ಟ್ ಶಿಲೀಂಧ್ರನಾಶಕ | ಟಿಲ್ಟ್ ಶಿಲೀಂಧ್ರನಾಶಕ ಪ್ರೊಪಿಕೊನಜೋಲ್ 25% EC |
ಕಾಂಟಾಫ್ ಪ್ಲಸ್ ಶಿಲೀಂಧ್ರನಾಶಕ | ಹೆಕ್ಸಾಕೊನಜೋಲ್ 5 % SC |
ಮರ್ಜೆರ್ ಶಿಲೀಂಧ್ರನಾಶಕ | ಟ್ರೈಸೈಕ್ಲಾಜೋಲ್ 18 % + ಮ್ಯಾಂಕೋಜೆಬ್ 62 % WP |
ಗೋಡಿವಾ ಸೂಪರ್ ಶಿಲೀಂಧ್ರನಾಶಕ | ಅಜೋಕ್ಸಿಸ್ಟ್ರೋಬಿನ್ 18.2% + ಡೈಫೆನೊಕೊನಜೋಲ್ 11.4%SC |
-
ಕಾಡಿಗೆ ರೋಗ / ಫಾಲ್ಸ್ ಸ್ಮಟ್
ಕಾರಣವಾದ ಜೀವಿ: ಉಸ್ಟಿಲಜಿನೊಯಿಡಿಯಾ ವೈರೆನ್ಸ್
ರೋಗ ಬಾಧಿಸುವ ಹಂತಗಳು: ತೆನೆಯಲ್ಲಿ ಹೂಬಿಡುವ ಹಂತದಿಂದ ತೆನೆ ಕಟ್ಟುವ ಹಂತದವರೆಗೆ
ಲಕ್ಷಣಗಳು:
- ಸ್ಪೈಕ್ಲೆಟ್ಗಳು/ ಹೂಗೊಂಚಲು ಕಿತ್ತಳೆ ಅಥವಾ ಹಸಿರು ಮಿಶ್ರಿತ ಕಪ್ಪು ಬಣ್ಣದ ವೆಲ್ವೆಟ್ನಂತಹ ಸ್ಮಟ್ ಬಾಲ್ಗಳನ್ನು ಹೊಂದಿರುತ್ತವೆ ಅಥವಾ ಕಾಳುಗಳು ಹಳದಿ ಅಥವಾ ದಟ್ಟ ಹಸಿರು ಬಣ್ಣದ ಮಣಿಗಳಾಗಿ ಮಾರ್ಪಾಡಾಗುತ್ತೆ.
- ದಟ್ಟವಾದ ಧಾನ್ಯಗಳಿಗೆ ಕಾರಣವಾಗುತ್ತದೆ
ರೋಗದ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳು:
25 – 35 ° C ಹೊಂದಿರುವ ತಾಪಮಾನ, 90% ಕ್ಕಿಂತ ಹೆಚ್ಚಿನ ಸಾಪೇಕ್ಷ ಆರ್ದ್ರತೆ, ಹೆಚ್ಚಿನ ಸಾರಜನಕ ಫಲೀಕರಣ, ಭಾರೀ ಮಳೆ ಮತ್ತು ಗಾಳಿಗಳು ಕಾಡಿಗೆ ರೋಗದ ಸೋಂಕಿಗೆ ಅನುಕೂಲಕರವಾದ ಪರಿಸ್ಥಿತಿಗಳಾಗಿವೆ.
ರಾಸಾಯನಿಕ ನಿರ್ವಹಣೆ:
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಅಮಿಸ್ಟಾರ್ ಟಾಪ್ ಶಿಲೀಂಧ್ರನಾಶಕ | ಅಜೋಕ್ಸಿಸ್ಟ್ರೋಬಿನ್ 18.2% + ಡೈಫೆನೊಕೊನಜೋಲ್ 11.4% SC |
ರೋಕೊ ಶಿಲೀಂಧ್ರನಾಶಕ | ಥಿಯೋಫನೇಟ್ ಮೀಥೈಲ್ 70% WP |
ಕಸ್ಟೋಡಿಯಾ ಶಿಲೀಂಧ್ರನಾಶಕ | ಅಜೋಕ್ಸಿಸ್ಟ್ರೋಬಿನ್ 11% + ಟೆಬುಕೊನಜೋಲ್ 18.3% SC |
ಬಿ ಕಂಟ್ರೋಲ್ ಶಿಲೀಂಧ್ರನಾಶಕ | ವಾಲಿಡಾಮೈಸಿನ್ 3% L |
-
ಎಲೆ ಕವಚದ ಮಚ್ಚೆ ರೋಗ
ಕಾರಣವಾದ ಜೀವಿ : ರೈಜೋಕ್ಟೋನಿಯಾ ಸೋಲಾನಿ
ರೋಗ ಬಾಧಿಸುವ ಹಂತಗಳು: : ತೆಂಡೆಬರುವ ಹಂತದಿಂದ ಗರ್ಭಅಂಕುರದ ಹಂತದವರೆಗೆ
ಲಕ್ಷಣಗಳು:
- ಆರಂಭದಲ್ಲಿ, ಹಸಿರು ಮಿಶ್ರಿತ ಬೂದು ಅಂಡಾಕಾರದ ಅಥವಾ ದೊಡ್ಡ ವೃತದ ಗಾಯಗಳು ನೀರಿನ ಮಟ್ಟದ ಬಳಿ ಎಲೆಗಳ ಕವಚದ ಮೇಲೆ ಕಾಣಿಸಿಕೊಳ್ಳುತ್ತವೆ
- ನಂತರ, ಇದು ಬೂದು ಮಿಶ್ರಿತ ಬಿಳಿ ಮಧ್ಯಭಾಗ ಮತ್ತು ಕಂದು ಅಂಚಿನೊಂದಿಗೆ ತೀವ್ರತರದಲ್ಲಿ ಬೆಳೆಗಳಲ್ಲಿ ಗಾಯಗಳನ್ನು ರೂಪಿಸುತ್ತದೆ
ರೋಗದ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳು:
ಮಳೆಗಾಲದಲ್ಲಿ ರೋಗ ಹರಡುವಿಕೆ ಹೆಚ್ಚಾಗಿ ಕಂಡುಬರುತ್ತದೆ. ಹೆಚ್ಚಿನ ತಾಪಮಾನ, ಹೆಚ್ಚಿನ ಸಾಪೇಕ್ಷ ಆರ್ದ್ರತೆ, ಹೆಚ್ಚಿನ ಸಾರಜನಕ ಫಲೀಕರಣ, ಕಡಿಮೆ ಅಂತರದಲ್ಲಿ ನೆಟ್ಟ ಬತ್ತದ ಬೆಳೆಗಳು, ಎಲೆ ಕವಚದ ಮಚ್ಚೆ ರೋಗದ ಸೋಂಕಿಗೆ ಅನುಕೂಲಕರವಾದ ಪರಿಸ್ಥಿತಿಗಳಾಗಿವೆ.
ರಾಸಾಯನಿಕ ನಿರ್ವಹಣೆ:
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಫೋಲಿಕರ್ ಶಿಲೀಂಧ್ರನಾಶಕ | ಟೆಬುಕೊನಜೋಲ್ 250 EC |
ಕಸ್ಟೋಡಿಯಾ ಶಿಲೀಂಧ್ರನಾಶಕ | ಅಜೋಕ್ಸಿಸ್ಟ್ರೋಬಿನ್ 11% + ಟೆಬುಕೊನಜೋಲ್ 18.3% SC |
ಬಾವಿಸ್ಟಿನ್ ಶಿಲೀಂಧ್ರನಾಶಕ | ಕಾರ್ಬೆಂಡಜಿಮ್ 50% WP |
ಟಾಟಾ ಅಯಾನ್ ಶಿಲೀಂಧ್ರನಾಶಕ | ಕ್ರೆಸೋಕ್ಸಿಮ್-ಮೆಥೈಲ್ 40%WG |
-
ರೈಸ್ ಟಂಗ್ರೋ ರೋಗ
ರೈಸ್ ಟಂಗ್ರೋ ರೋಗಕ್ಕೆ ಕಾರಣವಾದ ಜೀವಿ: ರೈಸ್ ಟಂಗ್ರೋ ವೈರಸ್ (ಆರ್ಟಿಎಸ್ವಿ ಮತ್ತು ಆರ್ಟಿಬಿವಿ )
ಬಾಧಿಸುವ ಹಂತಗಳು: ಎಲ್ಲಾ ಬೆಳವಣಿಗೆಯ ಹಂತಗಳು ವಿಶೇಷವಾಗಿ ಸಸ್ಯಕ ಹಂತ
ವೆಕ್ಟರ್/ ರೋಗವಾಹಕ : ಲೀಫ್ಹಾಪರ್ಸ್/ ಜಿಗಿ ಹುಳಗಳು
ಲಕ್ಷಣಗಳು
- ಕುಂಠಿತಗೊಂಡ ಸಸ್ಯಗಳು, ಎಲೆಗಳು ಹಳದಿ ಬಣ್ಣ ಅಥವಾ ಕಿತ್ತಳೆ-ಹಳದಿ ಬಣ್ಣಕ್ಕೆ ತಿರುಗುತ್ತದೆ .
ಅನುಕೂಲಕರ ಪರಿಸ್ಥಿತಿಗಳು:
ವೆಕ್ಟರ್ /ರೋಗವಾಹಕ ಇರುವುದರಿಂದ , ಸೋಂಕಿತ ಸ್ಟಬಲ್ಸ್ಗಳು ಮತ್ತು ಹೊಲದಲ್ಲಿರುವ ಕಳೆಗಳ ಮೂಲಕ ವೈರಸ್ ಮೂಲಗಳು RTV ಸೋಂಕಿಗೆ ಅನುಕೂಲಕರ ಪರಿಸ್ಥಿತಿಗಳಾಗಿವೆ.
ರಾಸಾಯನಿಕ ನಿರ್ವಹಣೆ:
(ಗಮನಿಸಿ: ರೈಸ್ ಟಂಗ್ರೋ ವೈರಸ್ನಿಂದ ಬೆಳೆ ಸೋಂಕಿತವಾಗಿದ್ದರೆ, ಅದನ್ನು ನಿರ್ವಹಿಸಲು ಅಥವಾ ಗುಣಪಡಿಸಲು ಸಾಧ್ಯವಿಲ್ಲ. ಕೆಳಗಿನ ಉತ್ಪನ್ನಗಳು ರೋಗವಾಹಕವನ್ನು ನಿಯಂತ್ರಿಸಲು ಮತ್ತು ಭತ್ತದ ಗದ್ದೆಯಲ್ಲಿ ವೈರಸ್ ಹರಡುವುದನ್ನು ತಡೆಯಲು ಬಳಸಬಹುದು)
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಚೆಸ್ ಕೀಟನಾಶಕ | ಪೈಮೆಟ್ರೋಜಿನ್ 50% ವಾಟರ್ ಡಿಸ್ಪರ್ಸಿಬಲ್ ಗ್ರ್ಯಾನ್ಯೂಲ್ಗಳಲಲಿ([WDG] |
ಲಾರಾ 909 ಕೀಟನಾಶಕ | ಕ್ಲೋರೊಪಿರಿಫಾಸ್ 50%+ ಸೈಪರ್ಮೆಥ್ರಿನ್5% EC |
ಅಂಶುಲ್ ಲಕ್ಷ ಕೀಟನಾಶಕ | ಲ್ಯಾಂಬ್ಡಾ ಸೈಲೋಥ್ರಿನ್ 5% EC |
ಅನಂತ್ ಕೀಟನಾಶಕ | ಥಿಯಾಮೆಥಾಕ್ಸಮ್ 25 % WG |
-
ಫುಟ್ ರಾಟ್ / ಬಕಾನೆ / ಫೂಲಿಷ್ ಸೀಡಲಿಂಗ್ ರೋಗ
: ಗಿಬ್ಬರೆಲ್ಲಾ ಫ್ಯೂಜಿಕುರೊಯಿ
ಬಾಧಿಸುವ ಹಂತಕ್ಕೆ ಕಾರಣವಾದ ಜೀವಿಗಳು: ಮೊಳಕೆಯೊಡೆಯುವ ಹಂತದಿಂದ ಕಾಳು ತುಂಬುವವರೆಗೆ
ಲಕ್ಷಣಗಳು
- ಇದು ನರ್ಸರಿಯಲ್ಲಿನ ಮೊಳಕೆ ಬೀಜಗಳು ಮತ್ತು ಮುಖ್ಯ ಜಮೀನಿನ ಸಸ್ಯಗಳ ಮೇಲೆ ಪರಿಣಾಮ ಬೀರುತ್ತದೆ
- ಸೋಂಕಿತ ಸಸ್ಯಗಳು ಹಳದಿ ಹಸಿರು ಮತ್ತು ತೆಳು ಎಲೆಗಳೊಂದಿಗೆ ಎತ್ತರದ ಮತ್ತು ತೆಳ್ಳಗಿನ ತೆನೆಗಳನ್ನು ಗಳನ್ನು ಉತ್ಪಾದಿಸುತ್ತವೆ.
ಅನುಕೂಲಕರ ಪರಿಸ್ಥಿತಿಗಳು:
ಸೋಂಕಿತ ಬೀಜಗಳು, ಬಲವಾದ ಗಾಳಿ ಮತ್ತು ನೀರು ರೋಗದ ಸೋಂಕಿಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ರಾಸಾಯನಿಕ ನಿರ್ವಹಣೆ:
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ರೋಕೋ ಶಿಲೀಂಧ್ರನಾಶಕ (ಬೀಜೋಪಚಾರಕ್ಕೆ) | ಥಿಯೋಫನೇಟ್ ಮೀಥೈಲ್ 70% WP |
ಕಂಪ್ಯಾನಿಯನ್ ಶಿಲೀಂಧ್ರನಾಶಕ | ಮ್ಯಾಂಕೋಜೆಬ್ 63%+ಕಾರ್ಬೆಂಡಜಿಮ್ 12% WP |
ನೇಟಿವೋ ಶಿಲೀಂಧ್ರನಾಶಕ | ಟೆಬುಕೊನಜೋಲ್50% + ಟ್ರೈಫ್ಲೋಕ್ಸಿಸ್ಟ್ರೋಬಿ ನ್ 25%WG |
ಟಾಟಾ ಅಯಾನ್ ಶಿಲೀಂಧ್ರನಾಶಕ | ಕ್ರೆಸೊಕ್ಸಿಮ್-ಮೀಥೈಲ್40% +ಹೆಕ್ಸಾಕೊನಜೋಲ್ 8% WG |
-
ಭತ್ತದ ಕಾಂಡ ಕೊಳೆತ:
ಕಾರಣವಾದ ಜೀವಿ: ಸ್ಕ್ಲೆರೋಟಿಯಮ್ ಒರಿಝೆ
ಬಾಧಿಸುವ ಹಂತಗಳು: ಕಾಳು ತುಂಬುವ / ಕಟ್ಟುವ ಆರಂಭಿಕ ಹಂತ
ಲಕ್ಷಣಗಳು:
- ಪ್ರಾರಂಭದಲ್ಲಿ , ಹೊರಗಿನ ಎಲೆಗಳ ಪೊರೆಗಳ ಕೆಳಭಾಗದಲ್ಲಿ ಸಣ್ಣ ಕಪ್ಪು ಗಾಯಗಳು ಕಂಡುಬರುತ್ತವೆ
- ಸೋಂಕಿತ ಗೆಣ್ಣುಗಳು ಅಥವಾ ಸಸ್ಯಗಳು ಬಾಗುತ್ತವೆ ಮತ್ತು ಸೀಮೆ ಸುಣ್ಣದಂತಹ ಧಾನ್ಯಗಳನ್ನು ಉತ್ಪಾದಿಸುತ್ತದೆ
ಅನುಕೂಲಕರ ಪರಿಸ್ಥಿತಿಗಳು:
ಹೆಚ್ಚಿನ ಸಾರಜನಕ ರಸಗೊಬ್ಬರಗಳ ಬಳಕೆ. ಕೋರೆಗಳು, ಕೀಟಗಳ ದಾಳಿಯಿಂದ ಉಂಟಾದ ಗಾಯಗಳನ್ನು ಹೊಂದಿರುವ ಸಸ್ಯಗಳು ರೋಗದ ಸೋಂಕಿಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸಬಹುದು.
ರಾಸಾಯನಿಕ ನಿರ್ವಹಣೆ:
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಬಾವಿಸ್ತೀನ್ ಶಿಲೀಂಧ್ರನಾಶಕ | ಕಾರ್ಬೆಂಡಜಿಮ್ 50% WP |
ಅವನ್ಸರ್ ಗ್ಲೋ ಶಿಲೀಂಧ್ರನಾಶಕ | 8.3% ಅಜೋಕ್ಸಿಸ್ಟ್ರೋಬಿನ್+66.7% WG ಮ್ಯಾಂಕೋಜೆಬ್ |
ಅವ್ತಾರ್ ಶಿಲೀಂಧ್ರನಾಶಕ | ಜಿನೆಬ್ 68%+ಹೆಕ್ಸಾಕೊನಜೋಲ್4% |
ಬಿ ಕಂಟ್ರೋಲ್ ಶಿಲೀಂಧ್ರನಾಶಕ | ವ್ಯಾಲಿಡಾಮೈಸಿನ್3% L |
-
ರೈಸ್ ಗ್ರಾಸಿ ಸ್ಟಂಟ್ ರೋಗ
ಕಾರಣವಾದ ಜೀವಿ : ರೈಸ್ ಗ್ರಾಸಿ ಸ್ಟಂಟ್ ಟೆನ್ಯುವೈರಸ್
ಬಾಧಿಸುವ ಹಂತಗಳು: ಎಲ್ಲಾ ಬೆಳವಣಿಗೆಯ ಹಂತಗಳು ಆದರೆ ಕಾಳು ತುಂಬುವ ಹಂತದಲ್ಲಿ ದಾಳಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ
ವೆಕ್ಟರ್/ ರೋಗವಾಹಕ: ಕಂದು ಜಿಗಿ ಹುಳ /ಬ್ರೌನ್ ಪ್ಲಾಂಟ್ ಹಾಪರ್ (BPH)
ಲಕ್ಷಣಗಳು:
- ಕುಂಠಿತ ಬೆಳವಣಿಗೆ, ಅತಿಯಾಗಿ ಭತ್ತದ ತೆನೆಯಲ್ಲಿ ಕಾಳು ಕಟ್ಟುವುದು
- ಅತಿ ಹೆಚ್ಚಿನ ತೆನೆಯ/ಟಿಲ್ಲರ್ ಗಳ ಕಾರಣದಿಂದ ಹುಲ್ಲಿನಂತ ನೋಟ ಮತ್ತು ಸೋಂಕಿತ ಸಸ್ಯಗಳಲ್ಲಿ ಅತ್ಯಂತ ನೇರ ಸಸ್ಯ ಬೆಳವಣಿಗೆ ಕಾಣಬಹುದು
ಅನುಕೂಲಕರ ಪರಿಸ್ಥಿತಿಗಳು:
ಭತ್ತವನ್ನು ನಿರಂತರವಾಗಿ ಮತ್ತು ವರ್ಷವಿಡೀ ಬೆಳೆಯುವ ಸ್ಥಳಗಳು ರೋಗವನ್ನು ಹರಡಲು ರೋಗವಾಹಕ/ವೆಕ್ಟರ್ಗೆ ಅನುಕೂಲಕರ ಪರಿಸ್ಥಿತಿ ಆಗಿರುತ್ತದೆ .
ರಾಸಾಯನಿಕ ನಿರ್ವಹಣೆ:
(ಗಮನಿಸಿ: ಭತ್ತದ ಹುಲ್ಲಿನ ಸ್ಟಂಟ್ ರೋಗದಿಂದ ಬೆಳೆ ಸೋಂಕಿಗೆ ಒಳಗಾಗಿದ್ದರೆ, ಅದನ್ನು ನಿರ್ವಹಿಸಲಾಗುವುದಿಲ್ಲ ಅಥವಾ ಗುಣಪಡಿಸಲಾಗುವುದಿಲ್ಲ. ರೋಗವಾಹಕವಾದ ಕಂದು ಜಿಗಿ ಹುಳ/ ಬ್ರೌನ್ ಪ್ಲಾಂಟ್ ಹಾಪರ್ (BPH) ಅನ್ನು ನಿಯಂತ್ರಿಸಲು ಮತ್ತು ಭತ್ತದ ಗದ್ದೆಯಲ್ಲಿ ವೈರಸ್ ಹರಡುವುದನ್ನು ತಡೆಯಲು ಕೆಳಗಿನ ಉತ್ಪನ್ನಗಳನ್ನು ಬಳಸಬಹುದು)
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಲ್ಯಾನ್ಸರ್ ಗೋಲ್ಡ್ ಕೀಟನಾಶಕ | ಅಸಿಫೇಟ್ 50%+ ಇಮಿಡಾಕ್ಲೋಪ್ರಿಡ್ 1.8% SP |
ಪ್ರಿಡೇಟರ್ ಕೀಟನಾಶಕ | ಕ್ಲೋರೋಪಿರಿಫಾಸ್ 50% EC |
ಕಾತ್ಯಾಯಿನಿ ಬಿ ಪಿ ಹೆಚ್ ಸೂಪರ್ ಕೀಟನಾಶಕ | ಪೈಮೆಟ್ರೋಜಿನ್ 50% WG |
ಓಡಿಸ್ ಕೀಟನಾಶಕ | ಬುಪ್ರೊಫೆಜಿನ್ 20%+ ಅಸಿಫೇಟ್ 50% |
-
ಟಂಗ್ರೋ ರೋಗ/ರೈಸ್ ರೆಗ್ಗೇಡ್ ಸ್ಟಂಟ್ ರೋಗ
ಕಾರಣವಾದ ಜೀವಿ: ರೈಸ್ ರೆಗ್ಗೇಡ್ ಸ್ಟಂಟ್ ವೈರಸ್
ಬಾಧಿಸುವ ಹಂತಗಳು: ಎಲ್ಲಾ ಬೆಳವಣಿಗೆಯ ಹಂತಗಳು ಆದರೆ ಕಾಳು ತುಂಬುವ ಹಂತದಲ್ಲಿ ದಾಳಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ
ವೆಕ್ಟರ್/ ರೋಗವಾಹಕ: ಕಂದು ಜಿಗಿ ಹುಳ /ಬ್ರೌನ್ ಪ್ಲಾಂಟ್ ಹಾಪರ್ (BPH)
ಲಕ್ಷಣಗಳು:
- ಅಸಮ ಅಂಚುಗಳನ್ನು ಹೊಂದಿರುವ ಎಲೆಗಳು, ಎಲೆಯ ಬ್ಲೇಡ್ ಅನ್ನು ಸುರುಳಿಯಾಕಾರದ ಆಕಾರಕ್ಕೆ ತಿರುಚಿದ ಹಾಗೆ “ ರೆಗ್ಗೇಡ್ ನೋಟ”
- ಕುಂಠಿತ ಬೆಳವಣಿಗೆ, ಅಪೂರ್ಣ ಹೂಗೊಂಚಲು ಹೊರಹೊಮ್ಮುವಿಕೆ
ಅನುಕೂಲಕರ ಪರಿಸ್ಥಿತಿಗಳು:
ಭತ್ತವನ್ನು ನಿರಂತರವಾಗಿ ಮತ್ತು ವರ್ಷಪೂರ್ತಿ ಬೆಳೆಯುವ ಪ್ರದೇಶಗಳು ರೋಗಕಾರಕಕ್ಕೆ ನಿರಂತರ ಆತಿಥ್ಯವನ್ನು ಒದಗಿಸುವ ರೋಗ ಹರಡುವಿಕೆಗೆ ಅನುಕೂಲಕರವಾದ ಪರಿಸ್ಥಿತಿಗಳನ್ನು ಸೃಷ್ಟಿಸಬಹುದು.
ರಾಸಾಯನಿಕ ನಿರ್ವಹಣೆ:
(ಗಮನಿಸಿ: ಟಂಗ್ರೋ ರೋಗ/ರೈಸ್ ರೆಗ್ಗೇಡ್ ಸ್ಟಂಟ್ ರೋಗದಿಂದ ಬೆಳೆ ಸೋಂಕಿತವಾಗಿದ್ದರೆ, ಅದನ್ನು ನಿರ್ವಹಿಸಲು ಅಥವಾ ಗುಣಪಡಿಸಲು ಸಾಧ್ಯವಿಲ್ಲ. ಕೆಳಗಿನ ಉತ್ಪನ್ನಗಳನ್ನು ವೆಕ್ಟರ್/ ರೋಗವಾಹಕ: ಕಂದು ಜಿಗಿ ಹುಳ /ಬ್ರೌನ್ ಪ್ಲಾಂಟ್ ಹಾಪರ್ (BPH) ಅನ್ನು ನಿಯಂತ್ರಿಸಲು ಮತ್ತು ಭತ್ತದ ಗದ್ದೆಯಲ್ಲಿ ವೈರಸ್ ಹರಡುವುದನ್ನು ತಡೆಯಲು ಬಳಸಬಹುದು).
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಲ್ಯಾನ್ಸರ್ ಗೋಲ್ಡ್ ಕೀಟನಾಶಕ | ಅಸಿಫೇಟ್ 50%+ ಇಮಿಡಾಕ್ಲೋಪ್ರಿಡ್ 1.8% SP |
ಪ್ರಿಡೇಟರ್ ಕೀಟನಾಶಕ | ಕ್ಲೋರೋಪಿರಿಫಾಸ್ 50% EC |
ಕಾತ್ಯಾಯಿನಿ ಬಿ ಪಿ ಹೆಚ್ ಸೂಪರ್ ಕೀಟನಾಶಕ | ಪೈಮೆಟ್ರೋಜಿನ್ 50% WG |
ಓಡಿಸ್ ಕೀಟನಾಶಕ | ಬುಪ್ರೊಫೆಜಿನ್ 20%+ ಅಸಿಫೇಟ್ 50% |