ಸಾರ್ವಜನಿಕರ ಹಿತಾಸಕ್ತಿಗಾಗಿ ಬಿಗ್‌ಹಾಟ್ ಆಗ್ರೋ ಪ್ರೈವೇಟ್ ಲಿಮಿಟೆಡ್‌ನಿಂದ ಮಾಹಿತಿ.
ಸಾರ್ವಜನಿಕರ ಗಮನಕ್ಕೆ
ಸೂಚನೆ
ಬಿಗ್‌ಹಾಟ್, ಭಾರತದಾದ್ಯಂತ ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಉತ್ಪನ್ನಗಳು ಒದಗಿಸುವ ಮೂಲಕ ಅತ್ಯುತ್ತಮ ಸೇವೆಯನ್ನು ನೀಡುತ್ತಿರುವ ಆನ್‌ಲೈನ್ ವೇದಿಕೆಯಾಗಿದೆ. ನಾವು ಹೊರಗೆ ಯಾವುದೇ ಅಂಗಡಿಗಳು ಅಥವಾ ಮಳಿಗೆಗಳನ್ನು ಹೊಂದಿಲ್ಲ ಹಾಗೂ ನಾವು ಯಾವುದೇ ಚಿಲ್ಲರೆ ಮಾರಾಟವನ್ನು ಉತ್ತೇಜಿಸುವುದಿಲ್ಲ. ನಾವು ನಮ್ಮ ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್ ನ ಮೂಲಕ ಮಾತ್ರ ಸೇವೆ ಸಲ್ಲಿಸುತ್ತೇವೆ ಹಾಗೂ ಉತ್ಪನ್ನಗಳನ್ನು ನೇರವಾಗಿ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ.
ಕೆಲವು ಅಪ್ಪಣೆಯಿಲ್ಲದ ವ್ಯಕ್ತಿಗಳು ಅಥವಾ ಘಟಕಗಳು ಬಿಗ್‌ಹಾಟ್ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಳ್ಳುತ್ತಿರುವ ಹಾಗೆ ಮತ್ತು ನಮ್ಮ ಉತ್ಪನ್ನಗಳನ್ನು ಚಿಲ್ಲರೆ ಅಂಗಡಿಗಳು ಅಥವಾ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿರುವ ಹಾಗೆ ಕೆಲವು ನಿದರ್ಶನಗಳನ್ನು ನಾವು ನೋಡಿದ್ದೇವೆ. ಇವು ಮೋಸದ ಚಟುವಟಿಕೆಗಳಾಗಿವೆ. ಹಾಗಾಗಿ, ಜಾಗ್ರತೆಯಿಂದ ಇರಿ ಎಂದು ನಿಮಗೆ ಸಲಹೆ ನೀಡುತ್ತಿದ್ದೇವೆ. ಅಂತಹ ವಹಿವಾಟುಗಳಿಂದ ಉಂಟಾಗುವ ಯಾವುದೇ ನಷ್ಟ ಅಥವಾ ಹಾನಿಗೆ ನಾವು ಜವಾಬ್ದಾರರಾಗಿರುವುದಿಲ್ಲ.
ನಮ್ಮ ಬಿಗ್‌ಹಾಟ್ ನಿಂದ ನೀವು ಯಾವುದೇ ಉತ್ಪನ್ನ ಖರೀದಿಸಲು ಅಥವಾ ಸೇವೆಯನ್ನು ಪಡೆಯಲು ಬಯಸಿದ್ದಲ್ಲಿ ದಯವಿಟ್ಟು ನಮ್ಮ ವೆಬ್‌ಸೈಟ್ www.bighaat.com ಗೆ ಭೇಟಿ ನೀಡಿ ಅಥವಾ ಗೂಗಲ್ ಪ್ಲೇಸ್ಟೋರ್ ನಿಂದ ನಮ್ಮ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ.
ನಿಮ್ಮ ನಂಬಿಕೆ ಮತ್ತು ಬೆಂಬಲವನ್ನು ನಾವು ತುಂಬಾ ಗೌರವಿಸುತ್ತೇವೆ. ಕೈಗೆಟುಕುವ ಬೆಲೆಗೆ ಉತ್ತಮ ಗುಣಮಟ್ಟದ ಉತ್ಪನ್ನಗಳು ಮತ್ತು ಉತ್ತಮ ಸೇವೆಗಳನ್ನು ನಿಮಗೆ ಒದಗಿಸಲು ನಾವು ಬದ್ಧರಾಗಿದ್ದೇವೆ. ಕೃಷಿ ಸಂಬಂಧಿತ ಉತ್ಪನ್ನಗಳಿಗೆ ಮತ್ತು ಮಾಹಿತಿಗಾಗಿ ಬಿಗ್‌ಹಾಟ್ ಅನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು.