ಕೋಸು ಬೆಳೆಗಳಲ್ಲಿ ಸುರುಳಿ ಪೂಚಿ ಅಥವಾ ಎಲೆ ಕೊರಕವು ಗಂಭೀರ ಕೀಟವಾಗಿದೆ, ಆದರೆ ಇದು ಇತರ ಪ್ರಮುಖ ಬೆಳೆಗಳಾದ ಟೊಮೆಟೊ, ಲೆಟ್ಟ್ಯೂಸ್ , ಆಲೂಗಡ್ಡೆ, ಸಿಹಿ ಗೆಣಸು, ಹತ್ತಿ, ಸೌತೆಕಾಯಿಗಳು, ಇತ್ಯಾದಿಗಳ ಮೇಲೂ ದಾಳಿ ಮಾಡುತ್ತದೆ. ಕೋಸು ಬೆಳೆಗಳಲ್ಲಿ ಎಲೆ ಕೊರಕವು, ಸಾಮಾನ್ಯವಾಗಿ ಒಂದು ವರ್ಷ ಹೇರಳವಾಗಿ, ಮತ್ತು ನಂತರ ಎರಡು ಮೂರು ವರ್ಷಗಳ ವಿರಳವಾಗಿರುತ್ತದೆ.
ಕೋಸು ಬೆಳೆಗಳಲ್ಲಿ ಸುರುಳಿ ಪೂಚಿ ಹುಳುಗಳ ಲಕ್ಷಣಗಳು
- ಆರಂಭಿಕ ಹಂತಗಳಲ್ಲಿ, ಮರಿಹುಳುಗಳು ಗುಂಪು ಗುಂಪಾಗಿರುತ್ತವೆ ಮತ್ತು ಎಲೆ ಕೆಳ ಭಾಗದಲ್ಲಿ ಕ್ಲೋರೊಫಿಲ್ ಅಂಶವನ್ನು ಕೊರೆದು ತಿಂದು, ಎಲೆಯ ಪದರವನ್ನು ತೆಳುವಾಗಿ ಮಾಡುತ್ತವೆ.
- ನಂತರ ಮರಿಹುಳುಗಳು ಹೆಚ್ಚು ತಿನ್ನಲು ಪ್ರಾರಂಭಿಸುತ್ತವೆ ಹಾಗಾಗಿ ಎಲೆಗಳ ಮೇಲೆ ರಂಧ್ರಗಳನ್ನು ಮಾಡುತ್ತವೆ. ನಂತರ ಎಲೆಗಳು ಹರಿದಂತೆ ಕಾಣಿಸುತ್ತವೆ.
- ಅವು ಪೂರ್ತಿ ಎಲೆಯನ್ನು ತಿಂದು ಎಲೆಯ ನಾಳಗಳು ಮತ್ತು ತೊಟ್ಟುಗಳನ್ನು ಮಾತ್ರ ಹಾಗೆಯೇ ಬಿಡುತ್ತವೆ.
- ಸಸಿಯ ಬೆಳವಣಿಗೆ ಕುಂಠಿತವಾಗಬಹುದು.
- ಹೂವು ಮತ್ತು ಹಣ್ಣುಗಳ ಮೇಲೆ ರಂಧ್ರಗಳನ್ನು ಕಾಣಬಹುದು .
ಕೋಸು ಬೆಳೆಗಳಲ್ಲಿ ಸುರುಳಿ ಪೂಚಿ ಹುಳುಗಳ ನಿವಾರಣಾ ಕ್ರಮಗಳು
- ಹುಳುವಿನ ಹಾವಳಿಯನ್ನು ತಡೆಯಲು ಮಣ್ಣಿನಲ್ಲಿರುವ ಹುಳುವಿನ ಮೊಟ್ಟೆಗಳನ್ನು ಕೊಲ್ಲಬೇಕು ಸಸಿ ನಾಟಿ ಮಾಡುವ ಮೊದಲೇ ಬೇಸಿಗೆಯಲ್ಲಿ ಆಳವಾದ ಭೂಮಿ ಉಳುಮೆ ಮಾಡಬೇಕು.
- ನೈರ್ಮಲ್ಯ ಮತ್ತು ಕಳೆ ಮುಕ್ತ ಬೆಳೆಯನ್ನು ಬೆಳೆಯಿರಿ .
- ನೀರು ನಿಲ್ಲುವುದನ್ನು ತಪ್ಪಿಸಿ ಅಥವಾ ಹೂಬಿಡುವ ಹಂತದಲ್ಲಿ ನೀರಿನ ಒತ್ತಡವನ್ನು ತಪ್ಪಿಸಿ.
- ಗಂಡು ಪತಂಗಗಳನ್ನು ಆಕರ್ಷಿಸಲು ಆಕರ್ಷಕ ಬಲೆಗಳನ್ನು @ 9 – 10/ ಎಕರೆಗೆ ಅಳವಡಿಸಿ.
- ತಡೆ ಬೆಳೆಯಾಗಿ ಗಡಿಯುದ್ದಕ್ಕೂ ಔಡಲವನ್ನು ಬೆಳೆಯಿರಿ. ತುಳಸಿ ಸಸಿಗಳು ಸಹ ಮರಿಹುಳುಗಳನ್ನು ಹಿಮ್ಮೆಟ್ಟಿಸುತ್ತವೆ.
- ಕ್ರೈಸೊಪರ್ಲಾ ಎಂಬ ಪರಭಕ್ಷಕ, ಕೊಕ್ಸಿನೆಲ್ಲಿಡ್ ಜೀರುಂಡೆಗಳು, ಡ್ರ್ಯಾಗನ್ ಫ್ಲೈ, ರಾಬರ್ ಫ್ಲೈ, ಇತ್ಯಾದಿಗಳನ್ನು ಜಮೀನಿನಲ್ಲಿ ಬಿಡಿ. ಇವು ಎಲೆ ತಿನ್ನುವ ಹುಳುಗಳನ್ನು ನಾಶಮಾಡುತ್ತವೆ .
- ಗೋವಿನಜೋಳ, ಈರುಳ್ಳಿ, ಕೊತ್ತಂಬರಿಯನ್ನು ಅಂತರ ಬೆಳೆಗಳಾಗಿ ಬೆಳೆಯಿರಿ.
ಕೋಸು ಬೆಳೆಗಳಲ್ಲಿ ಸುರುಳಿ ಪೂಚಿ ಹುಳುಗಳ ರಾಸಾಯನಿಕ ನಿವಾರಣಾ ಕ್ರಮಗಳು:
ಜಶ್ನ್ ಸೂಪರ್ ಕೀಟನಾಶಕ –
- ಇದು ಪ್ರೊಫೆನೊಫಾಸ್ 40% + ಸೈಪರ್ಮೆಥ್ರಿನ್ 4% ಇ.ಸಿ ಅನ್ನು ಹೊಂದಿದೆ
- ಇದು ಮೊಟ್ಟೆ ಮತ್ತು ಮರಿಹುಳುಗಳ ಹಂತದಲ್ಲೇ ಕೀಟ ನಿಯಂತ್ರಣ ಮಾಡುತ್ತದೆ .
- ಸ್ಪರ್ಶ ಕ್ರಿಯೆಯಿಂದ ಕೀಟಗಳನ್ನು ಕೊಲ್ಲುತ್ತದೆ .
- ಬಳಕೆಯ ಪ್ರಮಾಣ: 2 ಮಿಲಿ / ಲೀಟರ್ ನೀರಿಗೆ
ಪ್ರೋಕ್ಲೈಮ್ ಕೀಟನಾಶಕ –
- ಎಮಾಮೆಕ್ಟಿನ್ ಬೆಂಜೊಯೇಟ್ 5% SG ಅನ್ನು ಹೊಂದಿದೆ
- ನೀರಿನಲ್ಲಿ ಕರಗುವ ಹರಳಿನ ರೂಪದಲ್ಲಿರುವ ಕೀಟನಾಶಕ.
- ಪ್ರೋಕ್ಲೈಮ್ ಕೀಟನಾಶಕವು ಅವೆರ್ಮೆಕ್ಟಿನ್ ಗುಂಪಿಗೆ ಸೇರಿದ ಆಧುನಿಕ ಕೀಟನಾಶಕವಾಗಿದೆ.
- ಬಳಕೆಯ ಪ್ರಮಾಣ – 0.5 ರಿಂದ 0.8 ಗ್ರಾಂ / ಲೀಟರ್ ನೀರಿಗೆ.
ಟಫಾಬಾನ್ ಕೀಟನಾಶಕ –
- ಕ್ಲೋರೊಫೈರಿಫಾಸ್ 20% ಇಸಿ ಅನ್ನು ಹೊಂದಿದೆ
- ಇದನ್ನು ಸಾಮಾನ್ಯವಾಗಿ ಕಾಂಡ ಕೊರಕ, ಕಾಯಿ ಕೊರಕ ಮತ್ತು ಎಲೆ ತಿನ್ನುವ ಹುಳುಗಳ ನಿಯಂತ್ರಣಕ್ಕೆ ಬಳಸಲಾಗುತ್ತದೆ
- ಇದು ವ್ಯವಸ್ಥಿತ ಮತ್ತು ಸ್ಪರ್ಶ ಕ್ರಿಯೆಯ ಕೀಟನಾಶಕ
- ಬಳಕೆಯ ಪ್ರಮಾಣ : 2 ಮಿಲಿ/ಲೀಟರ್ ನೀರಿಗೆ
ರೀಲಾನ್ ಕೀಟನಾಶಕ –
- ಎಮಾಮೆಕ್ಟಿನ್ ಬೆಂಜೊನೇಟ್ 5% SG
- ಚಿಟ್ಟೆ ಜಾತಿಯ ಕೀಟಗಳ ಅತ್ಯುತ್ತಮ ನಿಯಂತ್ರಣ ಮಾಡುತ್ತದೆ
- ನೀರಿನಲ್ಲಿ ಕರಗುವ ಹರಳಿನ ರೂಪದಲ್ಲಿರುವ ಕೀಟನಾಶಕ.
- ಬಳಕೆಯ ಪ್ರಮಾಣ – 0.5gm/ಲೀಟರ್ ನೀರಿಗೆ.
ನಿರ್ಣಯ :
ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗ್ಗ್ ನೀಡಲಾದ ಲಿಂಕ್ಗಳನ್ನು ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ.