HomeGovt for Farmersಕೃಷಿ ಯಂತ್ರಧಾರೆ ಯೋಜನೆಯ ಅಡಿಯಲ್ಲಿ - ಕೃಷಿ ಯಂತ್ರಗಳನ್ನು ಈಗ ಕಡಿಮೆ ದರದಲ್ಲಿ ಬಾಡಿಗೆಗೆ ಪಡೆಯಬಹುದು

ಕೃಷಿ ಯಂತ್ರಧಾರೆ ಯೋಜನೆಯ ಅಡಿಯಲ್ಲಿ – ಕೃಷಿ ಯಂತ್ರಗಳನ್ನು ಈಗ ಕಡಿಮೆ ದರದಲ್ಲಿ ಬಾಡಿಗೆಗೆ ಪಡೆಯಬಹುದು

ಕೃಷಿ ಯಂತ್ರೋಪಕರಣಗಳು ಈಗಿನ ಸಮಯದಲ್ಲಿ ಸಣ್ಣ ಮತ್ತು ಮಾಧ್ಯಮ ವರ್ಗದ ರೈತರಿಗೆ, ಖರೀದಿಸಲು ಸಾಧ್ಯವಾಗದ ಕಾರಣ, ರೈತರಿಗೆ  ಕೈಗೆಟುಕುವ ಬಾಡಿಗೆ ದರದಲ್ಲಿ ಕೃಷಿ ಯಂತ್ರ ಉಪಕರಣಗಳನ್ನು ಕೃಷಿ ಯಂತ್ರಧಾರೆ ಯೋಜನೆಯಡಿಯಲ್ಲಿ ಒದಗಿಸಲು ನಿರ್ದರಿಸಿದೆ. ಈ ಯೋಜನೆಯಿಂದ ಸಮಯಕ್ಕೆ ಸರಿಯಾಗಿ ಬೇಸಾಯ ಪದ್ದತಿಗಳನ್ನು ಮಾಡಿ ಹೆಚ್ಚಿನ ಅಥವಾ ಒಳ್ಳೆಯ ಇಳುವರಿಯನ್ನು /  ಹೆಚ್ಚು ಉತ್ಪಾದನೆ ಪಡೆಯಬಹುದು.

ಇತ್ತೀಚೀನಾ ದಿನಗಳಲ್ಲಿ  ರೈತರು ಮತ್ತು ಕೂಲಿಕಾರ್ಮಿಕರ ಎದುರಿಸುತ್ತಿರುವ ಸಮಸ್ಯೆಯನ್ನು ಸರ್ಕಾರ ಮನಗಂಡು ರಾಜ್ಯದ  ಜಿಲ್ಲೆಗಳಲ್ಲಿರುವ   ಹೋಬಳಿಗಳಲ್ಲಿ ಕೃಷಿ ಯಂತ್ರಧಾರೆ ಯೋಜನೆಯಡಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರವು 2014-15 ರ ಸಾಲಿನಲ್ಲಿ ಹೋಬಳಿ ಮಟ್ಟದಲ್ಲಿ ರೈತರಿಗೆ ಬೇಕಿರುವ ಸಮಯಕ್ಕೆ ಕಡಿಮೆ ಬಾಡಿಗೆ-ದರದಲ್ಲಿ ಕೃಷಿ ಯಂತ್ರೋಪಕರಣಗಳ (ಬಾಡಿಗೆ ಆಧಾರಿತ) ಸೇವಾ ಕೇಂದ್ರಗಳನ್ನು ಸ್ಥಾಪಿಸಿದೆ. 

ಹಾಗಾದರೆ ಈ ಕೃಷಿ ಯಂತ್ರಧಾರೆ ಸೇವಾ ಕೇಂದ್ರಗಳು ಎಲ್ಲೆಲ್ಲಿವೆ, ನೋಂದಣಿ ಮಾಡಿಸುವುದು ಹೇಗೆ, ಯಾವ ಯಾವ ಕೃಷಿ ಯಂತ್ರೋಪಕರಣಗಳು   ಲಭ್ಯವಿದೆ ಹಾಗೂ ಬಾಡಿಗೆ ದರ ಹೀಗೆ ಹತ್ತುಹಲವಾರು ಪ್ರಶ್ನೆಗಳು ನಿಮ್ಮಲ್ಲಿ ಮೂಡಿದೆ ಅದಕ್ಕೆಲ್ಲ ಉತ್ತರ ಇಲ್ಲಿದೆ.

ಎಲ್ಲೆಲ್ಲಿವೆ ಕೃಷಿ ಯಂತ್ರಧಾರೆ ಕೇಂದ್ರಗಳು?

ಕೃಷಿ ಉಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ ‘ಕೃಷಿ ಯಂತ್ರಧಾರೆ’ ಕೇಂದ್ರಗಳು ಕಾರ್ಯಾರಂಭವಾದದ್ದು 2014-15 ರಿಂದ. ರಾಜ್ಯ ಕೃಷಿ ಇಲಾಖೆ ಅಥವಾ ಕೃಷಿ ಸ್ವಯಂ ಸೇವಾ ಸಂಸ್ಥೆಗಳು ಇಂತಹ ಯೋಜನೆಗಳನ್ನು ನಡೆಸುತ್ತಿವೆ.  ಈಗ ಒಟ್ಟು  ರಾಜ್ಯದ 490 ಹೋಬಳಿಗಳಲ್ಲಿ ಈ ಯೋಜನೆ  ಕಾರ್ಯರೂಪದಲ್ಲಿದೆ.  ಜಿಲ್ಲೆ ಮತ್ತು  ತಾಲೂಕಿನಲ್ಲಿರುವ  ರೈತರಿಗೆ ಬೇಕಾಗುವ ಯಂತ್ರೋಪಕರಣಗಳನ್ನು ದೊರೆಯುವಂತೆ ಮಾಡುವುದು ಈ ಯೋಜನೆಯ ವಿಶೇಷ.

ಯಾವೆಲ್ಲ ಕೃಷಿ ಯಂತ್ರಗಳು ಬಾಡಿಗೆಗೆ ಲಭ್ಯ?

ಎಲ್ಲ ಬಗೆಯ  44 ಯಂತ್ರಗಳಿಗೆ / ಉಪಕರಣಗಳು ಈ ಯೋಜನೆಯ ಉಪಕರಣಗಳು ಲಭ್ಯವಿದೆ. ಆಯಾ ಭಾಗದ ಕೃಷಿ ಅವಶ್ಯಕತೆಗೆ ಅನುಗುಣವಾಗಿ ಉಪಕರಣಗಳು ಆಯಾ ಜಿಲ್ಲೆಯ ಕೇಂದ್ರದಲ್ಲಿರುತ್ತವೆ.

ಬಾಡಿಗೆಗೆ ಪಡೆಯುವುದು ಹೇಗೆ?

ಕೃಷಿ ಯಂತ್ರೋಪಕರಣ ಬಾಡಿಗೆಗೆ ಬೇಕಿದ್ದಲ್ಲಿ  ಹತ್ತಿರದ  ಕೃಷಿ ಕೇಂದ್ರದಲ್ಲಿ ಬೇಕಾದ ಯಂತ್ರಕ್ಕೆ  ಮುಂಚಾಗಿ  ಹಣ ಕಟ್ಟಿ ಯಂತ್ರವನ್ನು  ಕಾಯ್ದಿರಿಸಬಹುದು,  ಏಕಕಾಲದಲ್ಲಿ ಒಂದು ಜಿಲ್ಲೆಯ ಎಲ್ಲಾ ರೈತರಿಗೆ ಒಂದೇ ಯಂತ್ರಗಳು ಬೇಕಾಗುವ ಸಮಯದಲ್ಲಿ  ಯಂತ್ರದ ಲಭ್ಯವನ್ನು  ನೋಡಿಕೊಂಡು ಬಾಡಿಗೆಗೆ ನೀಡಲಾಗುವುದು. ಒಂದು ವಾರ ಮುಂಚಿತವಾಗಿ ಕಾಯ್ದಿರಿಸುವ ಸೌಲಭ್ಯವಿದೆ. ಯಂತ್ರೋಪಕರಣ ಬಾಡಿಗೆ ದರ ಮತ್ತು ಲಭ್ಯವಿರುವ ಯಂತ್ರಗಳ ಪಟ್ಟಿಯನ್ನು ಎಲ್ಲ ಕೃಷಿ ಕೇಂದ್ರದಲ್ಲಿ ಆಯಾ ಕಾಲಕ್ಕೆ ಪ್ರಕಟಿಸಲಾಗುತ್ತದೆ.  ಇದು ಸರ್ಕಾರದ ಯೋಜನೆಯಾದ್ದರಿಂದ ಯಂತ್ರಗಳ ಬಾಡಿಗೆ ಕಡಿಮೆವಿರುತ್ತದೆ. 

ದಿನ ಬದಲಾವಣೆ ಮತ್ತು ಕಾಯ್ದಿರಿಸುವಿಕೆಯನ್ನು ರದ್ದುಗೊಳಿಸುವಿಕೆ ವಿಧಾನ : 

ಕಾಯ್ದಿರಿಸಿದ ದಿನದಿಂದ  ಯಂತ್ರವು  ಬೇಕಿರುವ  ದಿನದವರೆಗಿನ  ಸಮಯದಲ್ಲಿ  ಯಂತ್ರ ಪಡೆಯುವ  ದಿನವನ್ನು ಹಿಂದೂಡಬಹುದು ಅಥವಾ ಉಪಯೋಗಿಸುವ ದಿನದಿಂದ  15 ದಿನಗಳವರೆಗೆ ಮುಂದೂಡಬಹುದು. ಆದರೆ, 15 ದಿನಗಳಿಗಿಂತ ಹೆಚ್ಚಾದಲ್ಲಿ ಕಾದಿರಿಸುವಿಕೆಯನ್ನು ರದ್ದು ಗೊಳಿಸಿ ಹೊಸ ಪ್ರಕ್ರಿಯೆ ಮಾಡಬೇಕು.

ಮುಂಚಿತವಾಗಿ ಕಾಯ್ದಿರಿಸಿದ  ಯಂತ್ರಗಳು ಬೇಡವಾದರೆ ಉಕಾಯ್ದಿರಿಸಿದ ದಿನಕ್ಕೆ 72 ಗಂಟೆಗಳವರೆಗೆ ಯಂತ್ರದ ಕಾಯ್ದಿರಿಸಿವಿಕೆಯನ್ನು  ರದ್ದುಗೊಳಿಸಿದರೆ ಒಟ್ಟು ಕಾಯ್ದಿರಿಸಿದ ಮೊತ್ತವನ್ನು ಪ್ರತಿಶತ ೧೦೦ ರಷ್ಟು ಹಣವನ್ನು ಹಿಂದಿರುಗಿಸಲಾಗುವುದು. ಅದೇ ಯಂತ್ರ ಸೇವೆಯ 48 ಗಂಟೆಗಳವರೆಗೆ ಹೇಳಿದ್ದಲ್ಲಿ  ಕಾಯ್ದಿರಿಸಿದ ಮೊತ್ತದಲ್ಲಿ  ಶೇ.75ರಷ್ಟು, ಮತ್ತು 24 ಗಂಟೆಗಳವರೆಗೆ ರದ್ದುಗೊಳಿಸಿದರೆ ಶೇ.50ರಷ್ಟು ಕಾಯ್ದಿರಿಸಿದ ಮೊತ್ತವನ್ನು ಹಿಂದಿರುಗಿಸಲಾಗುವುದು. ಕಾಯ್ದಿರಿಸಿದ ಸೇವೆಯ ದಿನ ಬಾಡಿಗೆಯನ್ನು ರದ್ದುಗೊಳಿಸಿದ್ದಲ್ಲಿ  ಕಾಯ್ದಿರಿಸಿದ  ಹಣ ಮತ್ತೆ ಮರುಪಾವತಿಸಲಾಗುವುದಿಲ್ಲ.

ಬಾಡಿಗೆ ದರ ನಿಗದಿಪಡಿಸಲು ಜಿಲ್ಲಾ ಚಾಲನಾ ಸಮಿತಿ ರಚನೆ ಮಾಡಲಾಗಿರುತ್ತದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಯಂತ್ರಗಳ ಬಾಡಿಗೆ ದರವನ್ನು ಮಾರುಕಟ್ಟೆ ದರಕ್ಕಿಂತ ಶೇ.20ರಿಂದ 50 ರಷ್ಟು ಕಡಿಮೆ ನಿಗದಿ ಮಾಡಲಾಗುತ್ತದೆ.

ಕೃಷಿ ಯಂತ್ರಧಾರೆಯ ಸಿಬ್ಬಂದಿಯೂ ಬರುತ್ತಾರೆ ?

ಬಾಡಿಗೆ ಕೇಂದ್ರದಿಂದ ಯಂತ್ರ ಕಳಿಸಿಕೊಡುವಾಗ ಜತೆಗೆ ನುರಿತ ಸಿಬ್ಬಂದಿಯೂ ಬಂದಿರುತ್ತಾರೆ. ಗದ್ದೆ ಅಥವಾ ತೋಟಕ್ಕೆ ಯಂತ್ರವನ್ನು ಕೆಲಸಕ್ಕೆ ಕಳಿಸಿದ ನಂತರ ಬಾಡಿಗೆ ನೀಡಬೇಕಾದ ಸಮಯ ಆರಂಭವಾಗುತ್ತದೆ. ಆ ಯಂತ್ರವನ್ನು ಚಾಲನೆ ಅಥವಾ ಬಳಸುವವರೇ ಯಂತ್ರದ ಚಾಲನೆಯ ಅವಧಿಯನ್ನು ನೋಡಿಕೊಳ್ಳುತ್ತಾರೆ. ಪ್ರತ್ಯೇಕವಾಗಿ ಚಾಲಕನಿಗೆ ಸಂಬಳ ನೀಡಬೇಕಾದ ಅಗತ್ಯಲ್ಲ. ಕೆಲವು ಯಂತ್ರಗಳು ಚಾಲಕ ರಹಿತ ಯಂತ್ರೋಪಕರಣಗಳನ್ನು ರೈತರಿಗೆ ನೇರವಾಗಿ ನೆಡಲಾಗುವುದು. 

ಕೃಷಿಕೇಂದ್ರದಲ್ಲಿ ಭೇಟಿ ನೀಡಿ ಎಲ್ಲ  ಉಪಕರಣ ಹಾಗೂ ಅವುಗಳ  ಬಾಡಿಗೆ ವಿಚಾರಿಸಿ ನಿಮಗೆ ಬೇಕಾದ ಯಂತ್ರೋಪಕರಣಗಳನ್ನು ಬಾಡಿಗೆ ಪಡೆಯಬಹುದು. ಇಲ್ಲಿ ಇತರ ಕೃಷಿ ಯಂತ್ರೋಪಕರಣಗಳಿಗಿಂತ ಶೇ. ೧೫ – ೨೦ ಪ್ರತಿಶತದಷ್ಟು ಕಡಿಮೆಗೆ ದೊರೆಯುತ್ತದೆ. 

ನಿಯಮಗಳು: 

  • ಯಂತ್ರಗಳನ್ನು ನೋಂದಾಯಿಸಿದ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು.
  • ದುರುಪಯೋಗಪಡಿಸಿಕೊಂಡರೆ ಸಮಿತಿಯ ನಿರ್ಧಾರದಂತೆ ರೈತರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. 
  • ಅನುಮತಿ ಇಲ್ಲದೇ ಯಂತ್ರವನ್ನು ಇತರರಿಗೆ ವರ್ಗಾಯಿಸುವಂತಿಲ್ಲ.

ಬಾಡಿಗೆ ಪಡೆಯುವ ಸಮಯದಲ್ಲಿ ಬೇಕಿರುವ  ದಾಖಲೆಗಳು: 

  • ಭೂಮಿ ದಾಖಲೆಗಳು 
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು
  • ಆಧಾರ್ ಕಾರ್ಡ್ ಅಥವಾ PAN ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ

ನಿರ್ಣಯ: 

ಈ ಕೃಷಿಯಂತ್ರದಾರೆ ಯೋಜನೆಯಿಂದ ರೈತರು ತಮ್ಮ ಕೃಷಿ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಂಡು ಉತ್ತಮ ಇಳುವರಿ ಪಡೆಯಬಹುದು. ಈ ಯೋಜನೆಯಿಂದ ಸಣ್ಣ ರೈತರು ಮತ್ತು ಅತೀ ಸಣ್ಣ ರೈತರು ಹೆಚ್ಚಾಗಿ ಫಲಾನುಭವಿಗಳಾಗಬಹುದು. ಇದು ಒಂದು ಉತ್ತಮ ರೈತರ ಯೋಜನೆಯಾಗಿದ್ದು ಇದರಿಂದ ಉತ್ತಮ ಇಳುವರಿ ಮತ್ತು ಲಾಭ ಪಡೆಯಬಹುದು. 

 

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು