HomeGovt for Farmersಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿ (ಡಿಐಡಿಎಫ್) 

ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿ (ಡಿಐಡಿಎಫ್) 

ಹೈನುಗಾರಿಕೆಯು  ಗ್ರಾಮೀಣ ಪ್ರದೇಶದ ಹಲವು  ಜನರಿಗೆ ಜೀವನೋಪಾಯದ ಪ್ರಮುಖ ಮೂಲವಾಗಿದೆ. ಭಾರತವು 2021-22 ಸಾಲಿನಲ್ಲಿ  ಜಾಗತಿಕ ಹಾಲು ಉತ್ಪಾದನೆಯ 24 ಪ್ರತಿಶತದಷ್ಟು ಕೊಡುಗೆ ನೀಡುವ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರ ವಾಗಿದೆ ಮತ್ತು ವಿಶ್ವದಲ್ಲಿ  ಹಾಲು ಉತ್ಪಾದನೆಯಲ್ಲಿ  ಮೊದಲ ಸ್ಥಾನದಲ್ಲಿದೆ. ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿ (ಡಿಐಡಿಎಫ್) ಭಾರತದಲ್ಲಿ ಡೈರಿ ವಲಯವನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ಸರ್ಕಾರದ  ಉಪಕ್ರಮವಾಗಿದೆ. ಉತ್ತಮ ಗುಣಮಟ್ಟದ ಡೈರಿ ಉತ್ಪನ್ನಗಳನ್ನು ಉತ್ಪಾದಿಸುವ ಹೆಚ್ಚು ಪರಿಣಾಮಕಾರಿ ಮತ್ತು ಆಧುನಿಕ ಸಂಸ್ಕರಣಾ ಘಟಕಗಳ ಸ್ಥಾಪನೆಯನ್ನು ಉತ್ತೇಜಿಸುವ ಮೂಲಕ ರೈತರು ಉತ್ಪಾದಿಸುವ ಹಾಲಿನ ಮೌಲ್ಯವನ್ನು ಹೆಚ್ಚಿಸುವುದು ಈ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ. 

ಯೋಜನೆಯ ಅವಲೋಕನ

  • ಯೋಜನೆಯ ಹೆಸರು: ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿ (DIDF) 
  • ಯೋಜನೆ ಜಾರಿಗೊಳಿಸಲಾದ ವರ್ಷ: 2017-18 
  • ಯೋಜನೆಯ ಅನುದಾನದ ಹಂಚಿಕೆ : 11,184 ಕೋಟಿಗಳು • 
  • ಯೋಜನೆಯ ಪ್ರಕಾರ:: ಕೇಂದ್ರ ವಲಯದ ಯೋಜನೆ/ಕೇಂದ್ರ ಸರ್ಕಾರದ ಯೋಜನೆ 
  • ಪ್ರಾಯೋಜಿತ ಇಲಾಖೆ:  ಮೀನುಗಾರಿಕೆ ಸಚಿವಾಲಯ ಪಾಲನೆ ಮತ್ತು ಹೈನುಗಾರಿಕೆ 
  • ಅರ್ಜಿ ಸಲ್ಲಿಸಲು ವೆಬ್‌ಸೈಟ್: NA 
  • ಸಹಾಯವಾಣಿ ಸಂಖ್ಯೆ: NA 

ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿಯ ಪ್ರಮುಖ ಲಕ್ಷಣಗಳು

ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿ (DIDF) ಯೋಜನೆಯನ್ನು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (NDDB) ಮೂಲಕ ನಿರ್ವಹಿಸಿಲಾಗುತ್ತದೆ, ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯು , ಭಾರತ ಸರ್ಕಾರದ ಒಂದು ಸ್ವಾಯತ ಸಂಸ್ಥೆಯಾಗಿದ್ದು, 

ದೇಶಾದ್ಯಂತ ಹೈನುಗಾರಿಕೆ ಕ್ಷೇತ್ರವನ್ನು ಉತ್ತೇಜಿಸಲು, ಹಣಕಾಸಿನ ನೆರವನ್ನು  ಒದಗಿಸಲು ಮತ್ತು ಬೆಂಬಲಿಸಲು ಸ್ಥಾಪಿಸಲಾಗಿದೆ. 

ವರ್ಗ  ಟಿಪ್ಪಣಿಗಳು
ಗುರಿ  ಹೈನುಗಾರಿಕೆ ಕ್ಷೇತ್ರವನ್ನು ಉತ್ತೇಜಿಸಲು
ಅನುಷ್ಠಾನ ಸಂಸ್ಥೆಗಳು 
  • ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (NDDB) 
  • ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC)
ಪ್ರಮುಖ ಭಾಗೀದಾರರು  ಹಾಲು ಒಕ್ಕೂಟಗಳು, ರಾಜ್ಯ ಡೈರಿ ಒಕ್ಕೂಟಗಳು, ಬಹು ರಾಜ್ಯ ಹಾಲು ಸಹಕಾರ ಸಂಘಗಳು, ಹಾಲು ಉತ್ಪಾದಕ ಕಂಪನಿಗಳು, ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಅಂಗಸಂಸ್ಥೆಗಳು
ಹಣಕಾಸಿನ ವೆಚ್ಚ
  • ಬಡ್ಡಿ ಸಹಾಯಧನ  – ರೂ 1167 ಕೋಟಿ 
  • ನಬಾರ್ಡ್ – ರೂ. 8004 ಕೋಟಿಗಳು
  •  ಅರ್ಹ ಅಂತಿಮ ಸಾಲಗಾರರು – ರೂ. 2001 ಕೋಟಿ 
  • ರಾಷ್ಟ್ರೀಯ ಡೈರಿ  ಅಭಿವೃದ್ಧಿ ಮಂಡಳಿ ಮತ್ತು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ : ರೂ. 12 ಕೋಟಿ
ಅನುದಾನದ ಮಾದರಿ ಸಾಲದ ಭಾಗ  – 80% • ಪ್ರಮುಖ ಭಾಗೀದಾರರ ಕೊಡುಗೆ  – 20%
ಮರುಪಾವತಿಯ ಅವಧಿ 10 ವರ್ಷಗಳು (ಮೊರಟೋರಿಯಂ ಅವಧಿ – 2 ವರ್ಷಗಳು)
ಬಡ್ಡಿ ದರ ವಾರ್ಷಿಕ 6.5% ನಿಗದಿಪಡಿಸಲಾಗಿದೆ
ಘಟಕಗಳು
  • ಹೊಸ ಹಾಲು ಸಂಸ್ಕರಣಾ ಸೌಲಭ್ಯಗಳ ರಚನೆ ಮತ್ತು ಆಧುನೀಕರಣ 
  • ಮೌಲ್ಯವರ್ಧಿತ ಉತ್ಪನ್ನಗಳಿಗೆ ಉತ್ಪಾದನಾ ಸೌಲಭ್ಯಗಳು 
  • ಎಲೆಕ್ಟ್ರಾನಿಕ್ ಹಾಲು ಪರೀಕ್ಷಾ ಸಾಧನಗಳನ್ನು ಹೊಂದಿಸುವುದು 
  •  ಪ್ರಾಜೆಕ್ಟ್ ನಿರ್ವಹಣೆ ಮತ್ತು ಕಲಿಕೆ
  • DIDF ನ ಉದ್ದೇಶಗಳಿಗೆ ಕೊಡುಗೆ ನೀಡುವ ಇತರ ಕ್ರಮಗಳಿಗೆ 

ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿಯ ಉದ್ದೇಶಗಳು: 

  • ಹಾಲು ಸಂಸ್ಕರಣಾ ಘಟಕಗಳು ಮತ್ತು ಯಂತ್ರೋಪಕರಣಗಳ ಆಧುನೀಕರಣ
  •  ಹೆಚ್ಚು ಹಾಲನ್ನು ಸಂಸ್ಕರಿಸಲು ಹೆಚ್ಚುವರಿ ಮೂಲಸೌಕರ್ಯಗಳ ರಚನೆ 
  • ಡೈರಿ ಸಂಸ್ಕರಣಾ ಘಟಕಗಳು ಮತ್ತು ನಿಯಂತ್ರಿತ ಡೈರಿ ಸಂಸ್ಥೆಗಳಲ್ಲಿ ಹೆಚ್ಚಿನ ದಕ್ಷತೆಯನ್ನು ತರುವುದು 

ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿಯ ಪ್ರಯೋಜನಗಳು: 

  • ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿಯು  ಡೈರಿ ಸಹಕಾರಿಗಳು ಮತ್ತು ಖಾಸಗಿ ಡೈರಿ ಪ್ರೊಸೆಸರ್‌ಗಳಿಗೆ ತಮ್ಮ ಸಂಸ್ಕರಣಾ ಸೌಲಭ್ಯಗಳನ್ನು ನವೀಕರಿಸಲು ಹಣಕಾಸಿನ ನೆರವನ್ನು ನೀಡುತ್ತದೆ. ಇದು ಭಾರತದಲ್ಲಿ ಡೈರಿ ಉದ್ಯಮವನ್ನು ಆಧುನೀಕರಿಸಲು ಸಹಾಯ ಮಾಡುತ್ತದೆ, ಸುಧಾರಿತ ಉತ್ಪಾದಕತೆ ಮತ್ತು ಡೈರಿ ಉತ್ಪನ್ನಗಳ ಗುಣಮಟ್ಟಕ್ಕೆ ಕಾರಣವಾಗುತ್ತದೆ 
  • DIDF ಯೋಜನೆಯು ದೇಶದ ಹಾಲಿನ ಸಂಸ್ಕರಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗು ಈ ಯೋಜನೆಯ ಮೂಲಕ ಹೆಚ್ಚಿನ ಹಾಲು ಉತ್ಪಾದನೆಗೆ ಕಾರಣವಾಗುತ್ತದೆ. ಆದ್ದರಿಂದ, ಈ ಯೋಜನೆಯು ರೈತರಿಗೆ ಹೆಚ್ಚುವರಿ ಆದಾಯವನ್ನು ಒದಗಿಸುವ ಮೂಲಕ  ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುತ್ತದೆ
  •  ಈ ಯೋಜನೆಯು ಹೊಸ ಸಂಸ್ಕರಣಾ ಸೌಲಭ್ಯಗಳ ಅಭಿವೃದ್ಧಿಯನ್ನು ಬೆಂಬಲಿಸುವ ಮೂಲಕ ಡೈರಿ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ 

ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿಯ ಸವಾಲುಗಳು:

• ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ವಿದ್ಯುಚ್ಛಕ್ತಿ ಮತ್ತು ಇತರ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಡೈರಿ ಸಂಸ್ಕರಣೆಯು ಸ್ಥಾಪನೆಯು  ಸವಾಲಾಗಿದೆ  ಹಾಗು ಈ  ಪ್ರದೇಶಗಳಲ್ಲಿ ಆಧುನಿಕ ಸಂಸ್ಕರಣಾ ಸೌಲಭ್ಯಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಕಷ್ಟಕರವಾಗುತ್ತದೆ. 

ಅಗತ್ಯವಿರುವ ದಾಖಲೆಗಳು: 

ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ (DIDF) ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಅರ್ಜಿದಾರರ ಯೋಜನಾ ವರದಿಗೆ  ಸಂಬಂಧಿಸಿದಂತೆ ಬದಲಾಗಬಹುದು ಬದಲಾಗಬಹುದು (ಡೈರಿ ಸಹಕಾರಿ ಅಥವಾ ಖಾಸಗಿ ಡೈರಿ ಪ್ರೊಸೆಸರ್). DIDF ಗೆ ಅಗತ್ಯವಿರುವ ಕೆಲವು ಸಾಮಾನ್ಯ ದಾಖಲೆಗಳು, •

  • ಯೋಜನೆಯ ಪ್ರಸ್ತಾವನೆ 
  • ವ್ಯಾಪಾರ ಯೋಜನೆ 
  • ಯೋಜನಾ ವೆಚ್ಚದ ಅಂದಾಜು 
  • ಮಾಲೀಕತ್ವದ ಪುರಾವೆ 
  • ಇತರ ಸಂಬಂಧಿತ ವ್ಯವಹಾರಿಕ  ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ 

ಡಿಐಡಿಎಫ್‌ನಿಂದ ಹಣಕ್ಕಾಗಿ ಅರ್ಜಿ ಸಲ್ಲಿಸಲು ನೀವು ನಿಜವಾಗಿಯೂ ಆಸಕ್ತಿ ಹೊಂದಿದ್ದರೆ, ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಿ, 

  1. ಅರ್ಜಿ ಸಲ್ಲಿಸುವ ಮೊದಲು ಅರ್ಹತಾ ಮಾನದಂಡಗಳನ್ನು/ವಿವರಗಳನ್ನು  ಅರ್ಥಮಾಡಿಕೊಳ್ಳಿ
  2. ಅರ್ಹತಾ ಮಾನದಂಡವನ್ನು ಪೂರೈಸುವ ಸಾಲಗಾರನು ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಬೇಕು 
  3. ಈ ಯೋಜನಾ ವರದಿಯನ್ನುರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಪ್ರಾದೇಶಿಕ ಕಚೇರಿಗೆ ಸಲ್ಲಿಸಬೇಕು 
  4. ಒಮ್ಮೆ ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ ಆ ಅರ್ಜಿಯನ್ನು  DIDF ಮಂಡಳಿಯು ಪರಿಶೀಲಿಸುತ್ತದೆ.
  5. ನಿಮ್ಮ ಅರ್ಜಿಯನ್ನು ಅನುಮೋದಿಸಿದರೆ, ಡಿಐಡಿಎಫ್ ಯೋಜನೆಯ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ನೀವು ಹಣವನ್ನು ಸ್ವೀಕರಿಸುತ್ತೀರಿ 

ಹಿನ್ನುಡಿ 

ಒಟ್ಟಿನಲ್ಲಿ , ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿಯು ಭಾರತದಲ್ಲಿ ಡೈರಿ ಕ್ಷೇತ್ರದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಪ್ರಮುಖ ಕ್ರಮವಾಗಿದೆ, ಈ ಯೋಜನೆಯು  ದೇಶದ ಕೃಷಿ ಆರ್ಥಿಕತೆಗೆ ಗಮನಾರ್ಹ ಕೊಡುಗೆಯಾಗಿದೆ.

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು