HomeGovt for Farmersಪಿಎಂ-ಕಿಸಾನ್ ಯೋಜನೆ: ಪ್ರಧಾನ ಮಂತ್ರಿ ಮಾನ್ಯಶ್ರೀ ಮೋದಿಯವರು ರೈತರಿಗೆ ಹಣ ವರ್ಗಾವಣೆಯ  ದಾಖಲೆಯನ್ನು ಘೋಷಿಸಿದರು

ಪಿಎಂ-ಕಿಸಾನ್ ಯೋಜನೆ: ಪ್ರಧಾನ ಮಂತ್ರಿ ಮಾನ್ಯಶ್ರೀ ಮೋದಿಯವರು ರೈತರಿಗೆ ಹಣ ವರ್ಗಾವಣೆಯ  ದಾಖಲೆಯನ್ನು ಘೋಷಿಸಿದರು

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು ಕೇಂದ್ರ ಸರ್ಕಾರವು ಫೆಬ್ರವರಿ 2019 ರಲ್ಲಿ ಜಾರಿಗೆ ತಂದಿದ್ದು, ಸದರಿಯು ದೇಶಾದ್ಯಂತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಣಕಾಸಿನ ನೆರವು ನೀಡುವ ನಿಟ್ಟಿನಲ್ಲಿ ಜಾರಿಗೆ ತರಲಾಯಿತು. ಸದರಿ ಯೋಜನೆಯಡಿ  ಅರ್ಹ ರೈತರಿಗೆ ವಾರ್ಷಿಕವಾಗಿ ಒಟ್ಟು ರೂ.6,000 ದಂತೆ ಮೂರು ಕಂತುಗಳಲ್ಲಿ ತಲಾ ರೂ.2,000, ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಪ್ರಸ್ತುತ ಯೋಜನೆಯು ರೈತರ ಆದಾಯವನ್ನು ಬೆಂಬಲಿಸುವ ನಿಟ್ಟಿನಲ್ಲಿ ಮತ್ತು ಅವರ ಕೃಷಿ ವೆಚ್ಚಗಳನ್ನು ಪೂರೈಸಲು ಅನುಕೂಲದಾಯಕವಾಗುವ ಗುರಿಯಲ್ಲಿ ಜಾರಿಗೆ ತರಲಾಯಿತು.

ಅವಲೋಕನ

         ಫೆಬ್ರವರಿ 27, 2023 ರಂದು,ದೇಶಾದ್ಯಂತ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ 13ನೇ ಕಂತಿನ ಮೊತ್ತವನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (PM-KISAN) ಡೈರೆಕ್ಟ್ ಬೆನಿಫಿಟ್ ಟ್ರಾಂಸ್ವರ್ (DBT) ಮೂಲಕ 80 ದಶ ಲಕ್ಷಕ್ಕೂ ಹೆಚ್ಚು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪ್ರಧಾನ ಮಂತ್ರಿ ಮಾನ್ಯಶ್ರೀ ನರೇಂದ್ರ ಮೋದಿಯವರು ವರ್ಗಾಯಿಸಿರುತ್ತಾರೆ. ಇದರಲ್ಲಿ 2.5 ಲಕ್ಷ ಕೋಟಿ ಸಣ್ಣ ರೈತರು ಸೇರಿದ್ದು, ಇವರಲ್ಲಿ ರೂ.50,000 ಕೋಟಿ ಸಹೋದರಿಯರ ಮತ್ತು ತಾಯಂದಿರ ಖಾತೆಗಳಿಗೆ ಜಮಾ ಮಾಡಲಾಗಿದೆ. 2014ನೇ ಸಾಲಿನಲ್ಲಿ ಕೃಷಿ ಕ್ಷೇತ್ರಕ್ಕೆ ಮೀಸಲಾದ ಅನುದಾನ ರೂ.25000 ಕೋಟಿಯಿಂದ ಪ್ರಸಕ್ತ ಸಾಲಿನಲ್ಲಿ ರೂ. 1.25 ಲಕ್ಷ ಕೋಟಿಗೆ ಏರಿಕೆ ಮಾಡಲಾಗಿದೆ. ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಕೇಂದ್ರದಿಂದ  ರಾಜ್ಯಗಳಿಗೆ ಸಹಾಯವನ್ನು ಒದಗಿಸಲು ಸರ್ಕಾರವು ಪ್ರಧಾನ ಮಂತ್ರಿ ಪ್ರಣಾಮ್ ಯೋಜನೆಯನ್ನು ಪ್ರಾರಂಭಿಸಿದೆ.

         ಕೇಂದ್ರ ಕೃಷಿ ಸಚಿವರಾದ ಮಾನ್ಯಶ್ರೀ ನರೇಂದ್ರ ಸಿಂಗ್ ತೋಮರ್ ರವರು ಪ್ರಸ್ತುತ ಸಂದರ್ಭದಲ್ಲಿ ಮಾತನಾಡಿ, ರೈತರ ಜೀವನ ಸುಧಾರಣೆಯಲ್ಲಿ ಪ್ರಧಾನ ಮಂತ್ರಿಯವರ ಪ್ರಯತ್ನವನ್ನು ಶ್ಲಾಘಿಸಿ, ರೈತರಿಗೆ ಅನುಕೂಲವಾಗುವಂತಹ ಯೋಜನೆಗಳು ವಿಶ್ವದ ಯಾವುದೇ ದೇಶಗಳಲ್ಲಿಲ್ಲ ,ಕಂಡು ಬರುವುದಿಲ್ಲ ಎಂದು ಸಾರಿದರು. ಮುಂದೂವರಿದು ಮಾತನಾಡುತ್ತಾ ಪಿಎಂಕಿಸಾನ್ ಯೋಜನೆಯು ರೈತರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುವುದರ ಜೊತೆಗೆ ಅವರ ಜೀವನ ಸಾಗಿಸುವಲ್ಲಿ ಕೊಡುಗೆ ನೀಡಿದೆ ಎಂದು ಹೇಳಿದರು. ಜೊತೆಗೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಹಾಗೂ ಮುಂಬರುವ ದಿನಗಳಲ್ಲಿ  ರೈತರ ನೆರವಿಗೆ ಇನ್ನೂ ಹೆಚ್ಚಿನ ಸಹಾಯಮಾಡಲಾಗುತ್ತದೆ ಎಂದರು.

ಪ್ರಧಾನ ಮಂತ್ರಿ ಮತ್ತು ಕೇಂದ್ರ ಕೃಷಿ ಸಚಿವರು ಈ ಕೆಳಗೆ ನಮೂದಿಸಿರುವ ಪ್ರಮುಖ ಅಂಶಗಳನ್ನು ಒತ್ತಿ ಹೇಳಿರುತ್ತಾರೆ:

  •     ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ವಿಶ್ವದಲ್ಲೇ ವಿನೂತನವಾಗಿದ್ದು, ಸದರಿಯು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ.
  •     ಕೃಷಿ ಕ್ಷೇತ್ರದಲ್ಲಿ ಅಂತರಗಳನ್ನು ಮಿರುವ ನಿಟ್ಟಿನಲ್ಲಿ ಹಾಗೂ ಕೃಷಿಯನ್ನು ಲಾಭದಾಯಕಗೊಳಿಸಲು 1 ಲಕ್ಷ ಕೋಟಿ ಮೊತ್ತವನ್ನು ಕೃಷಿ ಮೂಲಸೌಕರ್ಯ ನಿಧಿಗೆ ಹಾಗೂ ರೂ. 50,000 ಕೋಟಿಯನ್ನು ಕೃಷಿ ಮತ್ತು ಇತರೆ ಸಂಬಂಧಿತ ವಲಯಗಳಿಗೆ ಮೀಸಲಾಗಿದೆ.
  •     ನೈಸರ್ಗಿಕ ಕೃಷಿ, ಸಿರಿಧಾನ್ಯ, ತೋಟಗಾರಿಕಾ ಬೆಳೆಗಳನ್ನು ಉತ್ತೇಜಿಸಲು ಜೊತೆಗೆ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಅನುದಾನ ಮಿಸಲಾಗಿರುತ್ತದೆ.
  •     ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಕೇಂದ್ರದಿಂದ  ರಾಜ್ಯಗಳಿಗೆ ಸಹಾಯವನ್ನು ಒದಗಿಸಲು ಸರ್ಕಾರವು ಪ್ರಧಾನ ಮಂತ್ರಿ ಪ್ರಣಾಮ್ ಯೋಜನೆಯನ್ನು ಪ್ರಾರಂಭಿಸಲಾಗಿದೆ.
  •     ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಅನುದಾನ ಮೀಸಲಿಡುವುದರಿಂದ ದೇಶದಾದ್ಯಂತ ರೈತರಿಗೆ ಪ್ರಯೋಜನವನ್ನು ನೀಡುತ್ತಿದೆ.

ತೀರ್ಮಾನ

         ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಕೃಷಿ ಸಚಿವರು ಯೋಜನೆಗಳ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡ ಸಲುವಾಗಿ ರೈತರಿಗೆ ಧನ್ಯವಾದ ಅರ್ಪಿಸಿದರು, ಜೊತೆಗ ರೈತರ ಆದಾಯವು ಹಂತ ಹಂತವಾಗಿ ಹೆಚ್ಚಾಗುತ್ತಿರುವುದನ್ನು ಗಮನಿಸಿ ಸಂತೋಷವನ್ನು ವ್ಯಕ್ತಪಡಿಸಿದರು. ಇತ್ತೀಚಿನ ಕೃಷಿ ಕ್ಷೇತ್ರದಲ್ಲಿ ಭಾರತ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದ್ದು, ರೂ.4 ಲಕ್ಷ ಕೋಟಿಗಳ ಕೃಷಿ ರಫ್ತಿನ ದಾಖಲೆಯಿದೆ. ಭಾರತವು ಆಹಾರ ಧಾನ್ಯಗಳಲ್ಲಿ ಸ್ವಾವಲಂಬಿಯಾಗುವುದರೊಂದಿಗೆ ಜಾಗತಿಕ ಕೃಷಿ ಉತ್ಪಾದನೆಯಲ್ಲಿ ಮೊದಲನೇಯ ಅಥವಾ ಎರಡನೇಯ ಸ್ಥಾನದ ಪೈಪೋಟಿಯಲ್ಲಿ ನಿಲ್ಲುತ್ತಾ, ಸರ್ಕಾರದ ಪ್ರಯತ್ನಗಳ ಫಲಿತಾಂಶವನ್ನು ದೇಶವು ಮೆಚ್ಚಿಗೆ ವ್ಯಕ್ತಪಡಿಸಿದೆ. ಒಟ್ಟಿನಲ್ಲಿ ಸಣ್ಣ ರೈತರಿಗೆ ಹೆಚ್ಚಿನ ಪ್ರಾಮುಖ್ಯತೆ  ನೀಡುವ ಮತ್ತು ದೇಶಾದ್ಯಂತ ಕೃಷಿಯನ್ನು ಪರಿವರ್ತಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತದೆ.

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು