HomeGovt for Farmersಸಾವಯವ ಹಾಗೂ ಸಿರಿಧಾನ್ಯಗಳ ಕೃಷಿಯ ಬಗ್ಗೆ ಅನ್ವೇಷಣೆ : ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ...

ಸಾವಯವ ಹಾಗೂ ಸಿರಿಧಾನ್ಯಗಳ ಕೃಷಿಯ ಬಗ್ಗೆ ಅನ್ವೇಷಣೆ : ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳ – 2023

ಪರಿಚಯ

         ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳ – 2023, ರೈತರಿಗೆ, ರೈತ ಸಂಘಗಳಿಗೆ, ದೇಶೀಯ ಹಾಗೂ ವಿದೇಶೀಯ ಕಂಪನಿಗಳಿಗೆ ಜೊತೆಗೆ  ಸಾವಯವ ಮತ್ತು ಸಿರಿಧಾನ್ಯ ವಲಯದಡಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಹಾಗೂ ಕೇಂದ್ರ ಸಂಸ್ಥೆಗಳಿಗೆ ಸಂಪರ್ಕ ಸೃಷ್ಟಿಸಲು ಮತ್ತು ಕೃಷಿ ಕ್ಷೇತ್ರದಲ್ಲಿ, ತೋಟಗಾರಿಕಾ ಕ್ಷೇತ್ರದಲ್ಲಿ, ಸಂಸ್ಕರಣೆ ಕ್ಷೇತ್ರದಲ್ಲಿ,  ಕೃಷಿ ಯಾಂತ್ರೀಕೃತ ಉಪಕರಣ ಮತ್ತು ಹೊಸ ತಂತ್ರಜ್ಞಾನದಲ್ಲಿ  ದೊರೆಯುವ ಅವಕಾಶಗಳ ಅನ್ವೇಷಣೆಗೆ ವೇದಿಕೆಯಾಗಿದೆ . ಸದರಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರ ಆಯೋಜಿಸಿದ್ದು, ಬೆಂಗಳೂರಿನಲ್ಲಿ ಜನವರಿ 20 ರಿಂದ ಪ್ರಾರಂಭವಾಗಿದ್ದು 3 ದಿನಗಳ ಕಾಲ ನಡೆದಿತ್ತು.

ಅವಲೋಕನ

         ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳವು ರೈತರನ್ನು, ಉದ್ಯಮೆದಾರರನ್ನು ಹಾಗೂ ಸರ್ಕಾರಿ ಪ್ರತಿನಿಧಿಗಳನ್ನು ಒಗ್ಗೂಡಿಸುವ ಮೂಲಕ ಸಿರಿಧಾನ್ಯ ಮತ್ತು ಸಾವಯವ ಕೃಷಿಯಲ್ಲಿ ಇತ್ತೀಚೆಗಿನ ಪ್ರವೃತ್ತಿಗಳ ಕುರಿತು ಹಾಗೂ ಬೆಳವಣಿಗೆಯ ಕುರಿತು ಚರ್ಚೆಗೆ ವೇದಿಕೆಯಾಗಿ ಹೊರಹೊಮ್ಮಿದೆ. ಸದರಿ ಮೇಳವನ್ನು ರಾಜ್ಯ ಸರ್ಕಾರ, 3  ದಿನಗಳ ಕಾಲ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಪ್ರದರ್ಶನ, B2B ನೆಟ್‌ವರ್ಕಿಂಗ್ ಹಾಗೂ ಮತ್ತಷ್ಟು ವಿಭಾಗಗಳನ್ನು ಒಳಗೊಂಡಿತ್ತು. ಈ ಮೇಳವು ರೈತರಿಗೆ, ರೈತ ಸಂಘಗಳಿಗೆ, ದೇಶೀಯ ಹಾಗೂ ವಿದೇಶೀಯ ಕಂಪನಿಗಳಿಗೆ ಜೊತೆಗೆ  ಸಾವಯವ ಮತ್ತು ಸಿರಿಧಾನ್ಯ ವಲಯದಡಿ ಕಾರ್ಯ ನಿರ್ವಹಿಸುತ್ತಿರುವ  ರಾಜ್ಯ ಹಾಗೂ ಕೇಂದ್ರ ಸಂಸ್ಥೆಗಳಿಗೆ ಸಂಪರ್ಕ ಸೃಷ್ಟಿಸಲು ಮತ್ತು ಕೃಷಿ ಕ್ಷೇತ್ರದಲ್ಲಿ, ತೋಟಗಾರಿಕಾ ಕ್ಷೇತ್ರದಲ್ಲಿ, ಸಂಸ್ಕರಣೆ ಕ್ಷೇತ್ರದಲ್ಲಿ,  ಕೃಷಿ ಯಾಂತ್ರೀಕೃತ ಉಪಕರಣ ಮತ್ತು ಹೊಸ ತಂತ್ರಜ್ಞಾನದಲ್ಲಿ  ದೊರೆಯುವ ಅವಕಾಶಗಳ ಅನ್ವೇಷಣೆಗೆ ವೇದಿಕೆಯಾಗಿದೆ. ಮೇಳದಲ್ಲಿ ಸುಮಾರು 250 ಕ್ಕೂ ಹೆಚ್ಚಿನ ಮಳಿಗೆಗಳಿದ್ದು, ಅದರಲ್ಲಿ ಸಿರಿಧಾನ್ಯ ಮತ್ತು ಸಾವಯವ ತಿಂಡಿ ತಿನಸುಗಳ ಕೌಂಟರ್, ಖರೀದಿ ಹಾಗೂ ಮಾರಾಟಗಾರರ ಭೇಟಿ, ಅಂತರರಾಷ್ಟ್ರೀಯ ಎಕ್ಸ್‌ಪೋ ಮತ್ತು ಸಮ್ಮೇಳನ, ಗ್ರಾಹಕರ ಸಂಪರ್ಕ, ರೈತರ ಕಾರ್ಯಾಗಾರ ಅದಲ್ಲದೇ ಅಡುಗೆ, ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳು, ಸಿರಿಧಾನ್ಯ ಪಾಕ ವಿಧಾನಗಳ ಪ್ರದರ್ಶನ ಮತ್ತು ಹಲವಾರು ಚಟುವಟಿಕೆಗಳನ್ನು ಒಳಗೊಂಡಿತ್ತು. ಸದರಿ ಮೇಳದಲ್ಲಿ ಪ್ರಮುಖವಾಗಿ ಸಿರಿಧಾನ್ಯ, ಸಾವಯವ, ನೈಸರ್ಗಿಕ ಹಾಗೂ ಪ್ರಾಮಾಣೀಕೃತ ಕಾಡು ಉತ್ಪನ್ನಗಳು,  ಸಿರಿಧಾನ್ಯ ಸಂಸ್ಕರಣಾ ಯಂತ್ರಗಳು,  ಸಾವಯವ ಸಿರಿಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು, ಜೈವಿಕ-ವಿಘಟನೀಯ ಪ್ಯಾಕಿಂಗ್, ಪರಿಸರ ಸ್ನೇಹಿ ಉತ್ಪನ್ನಗಳು ಇತ್ಯಾದಿಗಳನ್ನು ಪ್ರದರ್ಶಿಸಲಾಯಿತು. ಈ ಮೇಳದಲ್ಲಿ ಭಾಗವಹಿಸಿದವರಿಗೆ ಸಿರಿಧಾನ್ಯ ಹಾಗೂ ಸಾವಯವ ಕೃಷಿ ಕುರಿತು ಮಾಹಿತಿ ಹಾಗು ಹೊಸ ಹೊಸ ಅವಕಾಶಗಳ ಬಗ್ಗೆ ಮಾಹಿತಿ ಸಂದಿದೆ. 

        ಇದರಿಂದ ರೈತರಿಗೆ, ಆದಾಯ ಹೆಚ್ಚಿಸಿಕೊಳ್ಳಲು ಹಾಗೂ ತಮ್ಮ ಜೀವನವನ್ನು ಸಾಗಿಸಲು, ಅದಕ್ಕೂ ಹೆಚ್ಚಾಗಿ ಇದರಿಂದ ಸಾವಯವ ಹಾಗೂ ಸಿರಿಧಾನ್ಯ ಕ್ಷೇತ್ರದ ಪ್ರಚಾರ ಹೆಚ್ಚಾಗಲು ಸಾಧ್ಯತೆಯನ್ನು ಕಲ್ಪಿಸಿದೆ. ಸಾವಯವ ಮತ್ತು ಸಿರಿಧಾನ್ಯ ಕೃಷಿಯನ್ನು ಅಳವಡಿಸಿಕೊಂಡಿರುವ ರೈತರಿಗೆ ಸರ್ಕಾರದ ಬೆಂಬಲ  ದೊರಯುವುದರಿಂದ ಸದರಿ ಮೇಳವು ಜನಸಾಮಾನ್ಯರಲ್ಲಿ ಅರಿವು ಮೂಡಿಸಿದೆ.

ಪ್ರಮುಖ ಮಾಹಿತಿ

  • 2023ನೇ ಸಾಲಿನ ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳವು ವಾರ್ಷಿಕ ಕಾರ್ಯಕ್ರಮವಾಗಿದ್ದು ರೈತರನ್ನು, ಉದ್ಯಮೆದಾರರನ್ನು ಹಾಗೂ ಸರ್ಕಾರಿ ಪ್ರತಿನಿಧಿಗಳನ್ನು ಒಗ್ಗೂಡಿಸುವ ಮೂಲಕ ಸದರಿ ಕೃಷಿಯಲ್ಲಿ ಇತ್ತೀಚೆಗಿನ ಪ್ರವೃತ್ತಿಗಳ ಕುರಿತು ಹಾಗೂ ಬೆಳವಣಿಗೆಯ ಕುರಿತು ಚರ್ಚೆಮಾಡಲು ವೇದಿಕೆಯಾಗಿದೆ
  • ಸದರಿ ಮೇಳವನ್ನು ಕರ್ನಾಟಕ ರಾಜ್ಯ ಸರ್ಕಾರ ಆಯೋಜಿಸಿದೆ.
  • ಪ್ರಸ್ತುತ ಮೇಳವು ಬಹುಮುಖಿ ಮೇಳವಾಗಿದ್ದು,ಪ್ರದರ್ಶನಗಳು, ನೆಟ್‌ವರ್ಕಿಂಗ್ ಹಾಗೂ ಶೈಕ್ಷಣಿಕ ಕಾರ್ಯಾಗಾರಗಳನ್ನು ಒಳಗೊಂಡಿದೆ.
  • ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಸಂಪರ್ಕ ಬೆಳೆಸಿಕೊಳ್ಳಲು, ಕಲಿಯಲು ಮತ್ತು ವ್ಯವಹಾರ ಬೆಳೆಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ.
  • ಕೇಂದ್ರದ ರಾಜ್ಯ ಸಚಿವರು, ಶ್ರೀ ಕೈಲಾಶ್ ಚೌಧರಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಇವರು ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರಕ್ಕೆ ಬದ್ದರಾಗಿರುತ್ತಾರೆ ಎಂದು ಆಸ್ವಾಷನೆ ನೀಡಿದರು. ಸದರಿ ಮೇಳದ ಕೊನೆಯ ದಿನವಾದ ಜನವರಿ 22, 2023ರಂದು ಕೇಂದ್ರ ಸಚಿವರಾದ ಮಾನ್ಯ ಶ್ರೀ ನರೇಂದ್ರ ಸಿಂಗ್ ತೋಮರ್ ರವರು ಪ್ರಶಸ್ತಿಗಳನ್ನು ವಿತರಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. 
  • ಸದರಿ ಕಾರ್ಯಕ್ರಮವು ಸಿರಿಧಾನ್ಯ ಮತ್ತು ಸಾವಯವ  ಕೃಷಿಯಲ್ಲಿ ಅಭಿವೃದ್ದಿ ಸಾಧಿಸುವ ಗುರಿಯನ್ನು ಹೊಂದಿದೆ.
  • ಮೇಳದ ಭಾಗೀದಾರರಿಗೆ ಸಿರಿಧಾನ್ಯ ಹಾಗೂ ಸಾವಯವದ ಕುರಿತು ಮಾಹಿತಿ ಹಾಗು ಸದರಿಯಲ್ಲಿ ಹೊಸ ಅವಕಾಶಗಳ ಬಗ್ಗೆ ಜ್ಞಾನ ದೊರಕಿದೆ.

ತೀರ್ಮಾನ

         2023ನೇ ಸಾಲಿನ ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳವು ಸದರಿ ಕ್ಷೇತ್ರದ ಉದ್ಯಮೆದಾರರನ್ನು ಒಟ್ಟುಗೂಡಿಸಿ, ಪ್ರವೃತ್ತಿ ಸಾಧಿಸಲು ಉತ್ತಮವಾದ ಕಾರ್ಯಕ್ರಮವಾಗಿದೆ. ಸದರಿ ಮೇಳವನ್ನು ಕರ್ನಾಟಕ ರಾಜ್ಯ ಸರ್ಕಾರವು 3 ದಿನಗಳ  ಕಾಲ ಬೆಂಗಳೂರಿನಲ್ಲಿ ಆಯೋಜಿಸಿದೆ. ಈ ಮೇಳದಲ್ಲಿ ಪ್ರದರ್ಶನ,B2B ನೆಟ್‌ವರ್ಕಿಂಗ್ ಹಾಗೂ ಮತ್ತಷ್ಟು ವಿಭಾಗಗಳನ್ನು ಒಳಗೊಂಡಿದ್ದು ರೈತರಿಗೆ, ರೈತ ಸಂಘಗಳಿಗೆ, ದೇಶೀಯ ಹಾಗೂ ವಿದೇಶೀಯ ಕಂಪನಿಗಳಿಗೆ ಜೊತೆಗೆ  ಸಾವಯವ ಮತ್ತು ಸಿರಿಧಾನ್ಯ ವಲಯದಡಿ ಕಾರ್ಯ ನಿರ್ವಹಿಸುತ್ತಿರುವ  ರಾಜ್ಯ ಹಾಗೂ ಕೇಂದ್ರ ಸಂಸ್ಥೆಗಳಿಗೆ ಲಾಭದಾಯಕವಾಗಿದೆ. ಸದರಿ ಕಾರ್ಯಕ್ರಮವು ಶೈಕ್ಷಣಿಕ ಕಾರ್ಯಾಗಾರ, ಸ್ಪರ್ಧೆಗಳು, ಮತ್ತು ಹಲವಾರು ಚಟುವಟಿಕೆಗಳನ್ನು ಒಳಗೊಂಡಿತ್ತು. ಕೇಂದ್ರ ಸಚಿವರು ಸಿರಿಧಾನ್ಯ ಮತ್ತು ಸಾವಯವ  ಕೃಷಿಯಲ್ಲಿ ಅಭಿವೃದ್ದಿ ಸಾಧಿಸುವ ಗುರಿಯನ್ನು, ಜೊತೆಗೆ ಸದರಿ ಕಾರ್ಯಕ್ರಮದ ಭಾಗೀದಾರರಿಗೆ ಜ್ಞಾನ ಬೆಳಸಿಕೊಳ್ಳಲು  ಹಾಗೂ ಅವಕಾಶಗಳನ್ನು ಅನ್ವೇಷಣೆ ಮಾಡುವ ನಿಟ್ಟಿನಲ್ಲಿ ನಡೆಸಲಾಗಿದೆ ಎಂದು  ಮನವರಸಿ, ಕಾರ್ಯಕ್ರಮವನ್ನು ಪ್ರಶಸ್ತಿ ವಿತರಿಸುವ ಮೂಲಕ ಮುಕ್ತಾಯಗೊಳಿಸಿದರು.

 

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು