HomeGovt for Farmersಅಣಬೆ ಬೇಸಾಯಕ್ಕೆ  ಸರ್ಕಾರದಿಂದ ಅನುದಾನ

ಅಣಬೆ ಬೇಸಾಯಕ್ಕೆ  ಸರ್ಕಾರದಿಂದ ಅನುದಾನ

ಅಣಬೆ ಬೇಸಾಯವು ಅತ್ಯಂತ ಲಾಭದಾಯಕ ಕೃಷಿ-ವ್ಯಾಪಾರವಾಗಿದ್ದು, ಕಡಿಮೆ ಹೂಡಿಕೆ ಮತ್ತು ಸ್ಥಳಾವಕಾಶದೊಂದಿಗೆ ಇದನ್ನು ಪ್ರಾರಂಭಿಸಬಹುದು. ಪ್ರಪಂಚದಾದ್ಯಂತ, ಚೀನಾ, ಅಮೇರಿಕಾ, ಇಟಲಿ ಮತ್ತು ನೆದರ್ಲ್ಯಾಂಡ್ಸ್ ದೇಶಗಳು ಅಣಬೆಯ ಪ್ರಮುಖ ಉತ್ಪಾದನಾ ದೇಶಗಳಾಗಿವೆ . ಭಾರತದಲ್ಲಿ, ಉತ್ತರ ಪ್ರದೇಶವು ಅಣಬೆ ಬೇಸಾಯದಲ್ಲಿ ಅಗ್ರ ಸ್ಥಾನದಲ್ಲಿದ್ದು, ನಂತರದಲ್ಲಿ  ತ್ರಿಪುರ ಮತ್ತು ಕೇರಳ ಅಣಬೆ ಉತ್ಪಾದನೆ ಮಾಡುತ್ತವೆ. ದಕ್ಷಿಣ ಕನ್ನಡ ಜಿಲ್ಲೆಗಳು  ಸೇರಿದಂತೆ ರಾಜ್ಯಾದ್ಯಂತ, ಅಣಬೆಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೂಲ ಉತ್ಪನ್ನದ  ಕೊರತೆ ಹೆಚ್ಚಾಗುತ್ತಿದೆ. ಇದರಿಂದ ಬೇಡಿಕೆಯಷ್ಟು ಅಣಬೆ ಪೂರೈಕೆ ಮಾಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಈ ಬಾರಿ ಸರ್ಕಾರದಿಂದ ಅನುದಾನ  ಪಡೆದು  ಅಣಬೆ ಕೃಷಿ ಬೆಳೆಸಲು ರೈತರಿಗೆ ಪ್ರೋತ್ಸಾಹ ನೀಡುತ್ತಿದೆ.

ಅಣಬೆ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ರೈತರ  ಪ್ರಯತ್ನಗಳಿಗೆ ಸಹಾಯ ಮಾಡಲು ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ಅಡಿ 2011 ರಲ್ಲಿ ಅಣಬೆ ಕೃಷಿಗೆ ಸರ್ಕಾರದಿಂದ  ಅನುದಾನ ನೀಡಲಾಗುತ್ತಿದೆ. ಈ ಅಣಬೆ ಅನುದಾನ ಯೋಜನೆಯು ರೈತರಿಗೆ ತಮ್ಮ ಅಣಬೆ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಆರ್ಥಿಕ ನೆರವು ನೀಡುತ್ತದೆ.  

ಫಲಾನುಭವಿಗಳ ಜಾಗದಲ್ಲಿ ಹಾಲಿ ಇರುವ ಕಟ್ಟಡಗಳಲ್ಲಿ, ಬಳಸದೆ ಬಾಕಿಯಿರುವ ಗೋಡೌನ್ , ಫಾರಂ ಹೌಸ್‌, ಶೆಡ್‌, ಪಡಸಾಲೆ, ರೇಷ್ಮೆ ಮನೆ, ಬಳಸದೆ ಇರುವ ಕೊಟ್ಟಿಗೆ, ಹಳೆ ಮನೆ ಇತ್ಯಾದಿ ಸ್ಥಳಗಳನ್ನು ಸ್ವಚ್ಛವಾಗಿಸಿಕೊಂಡು ಅಣಬೆ ಘಟಕಕ್ಕೆ ಅಗತ್ಯ ಮೂಲಭೂತ ಸೌಕರ್ಯ ಅಭಿವೃದ್ದಿ ಪಡಿಸಲು ಅನುದಾನವು ಸಹಕಾರಿಯಾಗಿದೆ. 

ಅನುದಾನ ಯೋಜನೆಯ  ಅವಲೋಕನ

  • ಯೋಜನೆಯ ಹೆಸರು: ಅಣಬೆ ಕೃಷಿಗೆ ಸಹಾಯಧನ/ ಅನುದಾನ 
  • ಯೋಜನೆಯ ಮಂಜೂರಾತಿ : 01.07.2011
  • ಯೋಜನೆಯ ಮೊತ್ತ ಹಂಚಿಕೆ: 10 ಲಕ್ಷದವರೆಗೆ
  • ಯಾವ ಸರ್ಕಾರದ  ಯೋಜನೆ: ಕೇಂದ್ರ ಸರ್ಕಾರದ ಅಡಿಯಲ್ಲಿ NHB ಕೃಷಿ ಅನುದಾನ   ಯೋಜನೆಗಳು
  • ಪ್ರಾಯೋಜಿತ / ವಲಯ ಯೋಜನೆ: ತೋಟಗಾರಿಕೆಯ ಸಮಗ್ರ ಅಭಿವೃದ್ಧಿ ಮಿಷನ್ (MIDH)
  • ಅರ್ಜಿ ಸಲ್ಲಿಸಲು  ಆನ್ ಲೈನ್ ವೆಬ್‌ಸೈಟ್: https://nhb.gov.in
  • ಸಹಾಯವಾಣಿ ಸಂಖ್ಯೆ :  ಪ್ರತಿ ರಾಜ್ಯಕ್ಕೂ ಫೋನ್ ಲೈನ್‌ಗಳು ವಿಭಿನ್ನವಾಗಿವೆ. ಮಾಹಿತಿ ಬೇಕಿದ್ದಲ್ಲಿ ಹತ್ತಿರದ ಕೃಷಿ ವಿಜ್ನ್ಯಾನ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರವನ್ನು ಭೇಟಿ ನೀಡಬಹುದು.  

ಅಣಬೆ ಅನುದಾನದ  ವಿಶಿಷ್ಟತೆಗಳು 

  • ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ನಿರ್ದೇಶನದ ಅಡಿಯಲ್ಲಿ, ಅಣಬೆ ಕೃಷಿಗೆ ಸಹಾಯಧನವನ್ನು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ (MIDH)  ಮೂಲಕ  ಒದಗಿಸಲಾಗಿದೆ. 
  •  ಅಣಬೆ ಬೇಸಾಯಕ್ಕೆ ಈ ಅನುದಾನವನ್ನು ರಾಜ್ಯ ಸರ್ಕಾರವೇ ಸಾಲ ನೀಡಲಿದೆ.
  • ಅಣಬೆ ಕೃಷಿಗೆ ಗರಿಷ್ಠ ಬೆಲೆ 20 ಲಕ್ಷಕ್ಕೆ ನಿಗದಿಯಾಗಿದೆ. ಒಟ್ಟು ವೆಚ್ಚದ 50%, ಅಂದರೆ, 10 ಲಕ್ಷದವರೆಗೆ ಸಾಲವನ್ನು ಒದಗಿಸಲಾಗುತ್ತದೆ.
  • ಇದಕ್ಕೆ ಬೇಕಿರುವ  ಮಿಶ್ರಗೊಬ್ಬರದ ಮೇಲೆ 50% ರಿಯಾಯತಿ ರೂಪದಲ್ಲಿ ಅಣಬೆ ಕೃಷಿಗೆ ಸರ್ಕಾರದ ಇತರ ಅನುದಾನಗಳ  ಜೊತೆಗೆ ಸಿಗುತ್ತದೆ. 

ನಂ. 

ವರ್ಗ

ಟೀಕೆಗಳು

1. ಅನುದಾನದ ವೆಚ್ಚ  

10 ಲಕ್ಷದವರೆಗೆ

2. ಯಾರು ಅರ್ಹರು ವೈಯಕ್ತಿಕ ರೈತರು
3 ಈ ಯೋಜನೆಯಡಿ ಏನನ್ನು ಸೇರಿಸಲಾಗಿದೆ? ಅಣಬೆ  ಘಟಕ  ಸ್ಥಾಪನೆ, ಗೊಬ್ಬರ ತಯಾರಿಕಾ  ಘಟಕಗಳು ಮತ್ತುಅಣಬೆ  ಉತ್ಪಾದನೆ.

ಅಣಬೆ ಕೃಷಿ ಅನುದಾನದ ಪ್ರಯೋಜನಗಳು

  • ಅಣಬೆ ಕೃಷಿ ಅನುದಾನವು, ರೈತರಿಗೆ  ಅಥವಾ ಜಂಟಿ ಉದ್ಯಮಕ್ಕೆ ಲಭ್ಯವಿದೆ.
  • ಅಣಬೆ  ಘಟಕ  ಮತ್ತು ಎರೆ ಹುಳು ಗೊಬ್ಬರ ಘಟಕ  ಎರಡಕ್ಕೂ  ಗಣನೀಯ ಅನುದಾನ ಸಿಗಲಿದೆ. 
  • ಇದು ಸಮಗ್ರ ಯೋಜನೆಯಾಗಿದ್ದು, ಇದನ್ನು ರಾಜ್ಯ ಸರ್ಕಾರ ದಿಂದ ಪಡೆಯಬಹುದು. 
  • ಪ್ರತಿ ಘಟಕಕ್ಕೆ ಅನುದಾನ ನೀಡಲಾಗುತ್ತದೆ, ಆದ್ದರಿಂದ ಅಗತ್ಯವಿರುವಷ್ಟು ಘಟಕಗಳನ್ನು ನೀವು ನಿರ್ಮಿಸಬಹುದು. 

ಅಣಬೆ ಕೃಷಿ ಅನುದಾನದ ಕೊರತೆಗಳು 

  • ಅನುದಾನವು  ಪ್ರತಿ ಅಣಬೆ ಘಟಕಕ್ಕೆ ದೊರೆಯುತ್ತದೆ ಮತ್ತು ಪ್ರತಿ ಅರ್ಜಿದಾರರಿಗೆ 10 ಲಕ್ಷಗಳ ಮಿತಿಯೊಂದಿಗೆ, ರೈತರು  100 ಘಟಕಗಳಿಗೆ  ಮಾತ್ರ ಸಹಾಯಧನವನ್ನು ಪಡೆಯಬಹುದು.  ದೊಡ್ಡ ರೈತರಾಗಿದ್ದರೆ  ನಿಮ್ಮ ಎಲ್ಲಾ ಘಟಕಗಳಿಗೆ ಒಂದೇ ರೀತಿಯ ಪ್ರಯೋಜನಗಳು  ನಿಮಗೆ ಸಿಗದಿರಬಹುದು. .
  • ಅನುದಾನದ ಮೊತ್ತವು ಇತರ ಪ್ರದೇಶಗಳಿಗಿಂತ ಗುಡ್ಡಗಾಡು ಮತ್ತು ಶೀತ ಪ್ರದೇಶಗಳಲ್ಲಿರುವವರಿಗೆ ಹೆಚ್ಚಾಗಿರುತ್ತದೆ. 
  • ಅಣಬೆ ಅನುದಾನಕ್ಕೆ  ರೈತರು ಮಾತ್ರ ಅರ್ಹರಾಗಿರುತ್ತಾರೆ, ಆದ್ದರಿಂದ ಕಂಪನಿಗಳು ಅದಕ್ಕೆ ಅರ್ಜಿ ಸಲ್ಲಿಸುವಂತಿಲ್ಲ.

ಅಣಬೆ ಅನುದಾನ ಪಡೆಯಲು ನೀಡಬೇಕಿರುವ ದಾಖಲೆಗಳು

  • ಘಟಕ ಪೂರ್ಣಗೊಂಡ ಪ್ರಮಾಣಪತ್ರ
  • ಬ್ಯಾಂಕಿನಿಂದ ಹಣಕಾಸಿನ ಮೌಲ್ಯಮಾಪನ
  • ಬ್ಯಾಂಕ್‌ನಿಂದ ಸಾಲ ಮಂಜೂರಾತಿ ಪತ್ರ
  • ಸಾಲ ವಿತರಣೆಯ ನಿಯಮಗಳು
  • ಫಲಾನುಭವಿಯ  ಹೆಸರಿನಲ್ಲಿ ಹಕ್ಕು ದಾಖಲೆಗಳ  ಪ್ರತಿ
  • ಇತ್ತೀಚಿನ ಪಾಸ್‌ಪೋರ್ಟ್ ಭಾವಚಿತ್ರ
  • ಯೋಜನೆಯ ಎಲ್ಲಾ ಪ್ರಮುಖ ಅಂಶಗಳನ್ನು ಒಳಗೊಂಡಿರುವ ಛಾಯಾಚಿತ್ರಗಳು
  • ಖರ್ಚು ಪ್ರಮಾಣ ಪತ್ರದಲ್ಲಿ ಸರಿಯಾಗಿ ಸಹಿ ಮಾಡಬೇಕು. 
  •  ಬ್ಯಾಂಕ್ ಅನುದಾನ ನೀಡಬೇಕಾದರೆ, ನೀವು ಹೆಚ್ಚುವರಿ ಅರ್ಜಿಯನ್ನು ಸಲ್ಲಿಸಬೇಕು.
  • ಆಧಾರ್ ಕಾರ್ಡ್
  • ವಿಳಾಸ ಪುರಾವೆ
  • ಪಡಿತರ ಚೀಟಿ

 ನಿರ್ಣಯ : 

ತೋಟಗಾರಿಕೆ ಇಲಾಖೆಯಿಂದ  ಅಣಬೆ  ಅನುದಾನವು  ಅಣಬೆ ಘಟಕಗಳ ಜೊತೆಗೆ ಎರೆಹುಳು ಗೊಬ್ಬರದ ಘಟಕಕ್ಕೆ ಸಹ ನೆರವು ಪಡೆಯಲು, ಸಣ್ಣ ಮತ್ತು ಮಧ್ಯಮ ಹಿಡುವಳಿ  ರೈತರಿಗೆ ಒಂದು ಕೊಡುಗೆಯಾಗಿದೆ.  ಹೆಚ್ಚಿನ ಮಾಹಿತಿಗಾಗಿ ನೀವು ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ಅಣಬೆ ಕೃಷಿ ಘಟಕವನ್ನು ಪ್ರಾರಂಭಿಸುವ ವಿಧಾನವನ್ನು ತಿಳಿದುಕೊಳ್ಳಬಹುದು .

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು