HomeGovt for Farmersಭಾರತ ಸರ್ಕಾರದಿಂದ ಸಾವಯವ ಕೃಷಿ ರೈತರಿಗಾಗಿ ಹೆಚ್ಚಿನ ಸಹಾಯಧನ : ಇಲ್ಲಿದೆ ಪೂರ್ಣ ಮಾಹಿತಿ 

ಭಾರತ ಸರ್ಕಾರದಿಂದ ಸಾವಯವ ಕೃಷಿ ರೈತರಿಗಾಗಿ ಹೆಚ್ಚಿನ ಸಹಾಯಧನ : ಇಲ್ಲಿದೆ ಪೂರ್ಣ ಮಾಹಿತಿ 

ಪರಿಸರ ಮತ್ತು ಮಣ್ಣಿನ ಆರೋಗ್ಯದ ಮೇಲೆ ರಾಸಾಯನಿಕ ಗೊಬ್ಬರಗಳಿಂದಾಗುವ  ದುಷ್ಪರಿಣಾಮಗಳ ಬಗ್ಗೆ ರೈತರು ಗಮನದಲ್ಲಿಟ್ಟುಕೊಂಡು ಹೆಚ್ಚಿನ ರೈತರನ್ನು  ಸಾವಯವ ಕೃಷಿ ಪದ್ದತಿಗಳನ್ನು   ಉತ್ತೇಜಿಸಲು  ಭಾರತ ಸರ್ಕಾರವು ವಿವಿಧ ಯೋಜನೆಗಳ ಅಡಿಯಲ್ಲಿ ಸಾವಯವ ಕೃಷಿ ಅನುದಾನಗಳನ್ನು ನೀಡುತ್ತಿದೆ.   ಈ ಲೇಖನದಲ್ಲಿ, ಸಾವಯವ ಕೃಷಿಗೆ ಸರ್ಕಾರದಿಂದ ಲಭ್ಯವಿರುವ ಅನುದಾನದಗಳನ್ನು ಕುರಿತು ಹೆಚ್ಚಿನ ವಿವರಗಳನ್ನು ನೀವು ಓದಬಹುದು. 

ಸಾವಯವ ಕೃಷಿ ಯೋಜನೆಯಡಿ ಸರ್ಕಾರದ ಪ್ರಯತ್ನದಿಂದ, 2014 ರಲ್ಲಿ 11.83 ಲಕ್ಷ ಹೆಕ್ಟೇರ್‌ ಭೂಮಿಯ ಪ್ರದೇಶದಿಂದ, 2020 ರಲ್ಲಿ 29.17 ಲಕ್ಷ ಹೆಕ್ಟೇರ್‌ಗೆ ಏರಿದೆ. ಸಾವಯವ ಕೃಷಿಯ ಜಾಗೃತಿ ಕಾರ್ಯಕ್ರಮಗಳು, ಕೊಯ್ಲಿನ ನಂತರದ ಸಾಕಷ್ಟು ಸೌಕರ್ಯಗಳು, ಮಾರುಕಟ್ಟೆ ಸೌಲಭ್ಯಗಳು, ಸಾವಯವ ಉತ್ಪನ್ನಗಳಿಗೆ ಹೆಚ್ಚಿನ  ಅನುದಾನ  ನೀಡಿ  ಸಾವಯವ ಕೃಷಿಯತ್ತ ರೈತರನ್ನು ಪ್ರೇರೇಪಿಸುತ್ತದೆ. 

ದೇಶದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸಲು ಸರ್ಕಾರದಿಂದ ವಿವಿಧ ಯೋಜನೆಗಳ ಅಡಿಯಲ್ಲಿ ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಹಾಗೂ ಸಾವಯವ ಕೃಷಿಯನ್ನು ಉತ್ತೇಜಿಸಲಾಗುತ್ತಿದೆ. 

ಈ ಯೋಜನೆಯ  ಅವಲೋಕನ

  • ಯೋಜನೆಯ ಹೆಸರು: ಸಾವಯವ ಕೃಷಿಗೆ ಸರ್ಕಾರದಿಂದ  ಸಿಗುವ ಅನುದಾನ 
  • ಯೋಜನೆ ತಿದ್ದುಪಡಿ  : 2014
  • ಯೋಜನೆಯ ಮೊತ್ತದ  ಹಂಚಿಕೆ: 40 ಲಕ್ಷದವರೆಗೆ
  • ಯಾವ ಸರ್ಕಾರದ ಯೋಜನೆ  : ಭಾರತ  ಸರ್ಕಾರ (ಕೇಂದ್ರ ಸರ್ಕಾರ)
  • ಪ್ರಾಯೋಜಿತ / ವಲಯ ಯೋಜನೆ: NABARD, NMSA, MIDH, NFSM ಮತ್ತು RKVY.
  • ಅರ್ಜಿ ಸಲ್ಲಿಸಲು ಆನ್ ಲೈನ್ ವೆಬ್‌ಸೈಟ್: https://www.nabard.org/
  • ಸಹಾಯವಾಣಿ ಸಂಖ್ಯೆ: 1800229009

ಸಾವಯವ ಕೃಷಿ ಯೋಜನೆಗಳ ವೈಶಿಷ್ಟ್ಯಗಳು

ಸಾವಯವ ಕೃಷಿಗೆ ಅನುದಾನವನ್ನು  ನಬಾರ್ಡ್ ಮೂಲಕ ನ್ಯಾಷನಲ್ ಸೆಂಟರ್ ಆಫ್ ಆರ್ಗಾನಿಕ್ ಫಾರ್ಮಿಂಗ್ (NCOF) ಸಹಯೋಗದೊಂದಿಗೆ ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ 5 ಯೋಜನೆಗಳನುಸಾರ ರೈತರಿಗೆ ಅನುದಾನ ನೀಡಲಾಗುತ್ತದೆ.  ಈ ಯೋಜನೆಯು ಮಣ್ಣಿನ ಆರೋಗ್ಯವನ್ನು ಕಾಪಾಡುವ ಮತ್ತು ಪರಿಸರ ಸ್ನೇಹಿ  ಸಾವಯವ ಉತ್ಪನ್ನಗಳ ಮತ್ತು ವಾಣಿಜ್ಯ ಬೆಳೆ ಉತ್ಪಾದನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. 

5 ಯೋಜನೆಗಳು: 

  • ಪರಂಪರಾಗತ್ ಕೃಷಿ ವಿಕಾಸ ಯೋಜನೆ (PKVY)
  • ಈಶಾನ್ಯ ಪ್ರದೇಶಕ್ಕಾಗಿ ಮಿಷನ್ ಸಾವಯವ ಮೌಲ್ಯ ಸರಪಳಿ ಅಭಿವೃದ್ಧಿ (MOVCDNER)
  • ಮಣ್ಣಿನ ಆರೋಗ್ಯ ನಿರ್ವಹಣೆ ಯೋಜನೆಯಡಿ – ಬಂಡವಾಳ ಹೂಡಿಕೆ ಅನುದಾನ  ಯೋಜನೆ (CISS)
  • ಎಣ್ಣೆಬೀಜಗಳು ಮತ್ತು ಎಣ್ಣೆ ಮರಗಳ  ರಾಷ್ಟ್ರೀಯ ಮಿಷನ್ (NMOOP)
  • ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ (NFSM)

ವರ್ಗ

ಟೀಕೆಗಳು

ಯಾರು ಅರ್ಹರು? ರೈತರು, ರೈತ ಸಂಸ್ಥೆಗಳು, ಸಹಕಾರ ಸಂಘಗಳು, ಕಂಪನಿಗಳು ಇತ್ಯಾದಿಗಳು.
ಈ ಯೋಜನೆಯು ಏನನ್ನು  ಒಳಗೊಂಡಿದೆ? ರಾಜ್ಯ ಏಜೆನ್ಸಿಗಳು, ಪ್ರಾಥಮಿಕ ಕೃಷಿ ಸಾಲ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ಉದ್ಯಮಿಗಳು
ಇದರ ವೆಚ್ಚ 1.00 ಲಕ್ಷ ಕೋಟಿ (ಕೃಷಿ ಮೂಲ ಸೌಕರ್ಯ ನಿಧಿ) 
ಅನುದಾನದ  ಮೊತ್ತ 50% ರಷ್ಟು (ಯೋಜನೆಗಳ ಪ್ರಕಾರ)
ಸಹಾಯಧನ ಬಿಡುಗಡೆ ಮಾಡಿದ್ದು  ಬ್ಯಾಂಕುಗಳ ಮೂಲಕ ನಬಾರ್ಡ್ ಬಿಡುಗಡೆ ಮಾಡುತ್ತದೆ.  
ಸಾಲದ ಅವಧಿ ಮೂರು ವರ್ಷಗಳು 
ಸಾಲ ಮರಪಾವತಿ 10 ವರ್ಷ+ 2 ವರ್ಷ

 

ಸಾವಯವ ಕೃಷಿಗಾಗಿ ನಬಾರ್ಡ್ ಯೋಜನೆಯ ಪ್ರಯೋಜನಗಳು

  • ಸಣ್ಣ ಅಥವಾ ದೊಡ್ಡ ಕೃಷಿ ಭೂಮಿ ಹೊಂದಿರುವ ರೈತರು ಈ ಸಾವಯವ ಕೃಷಿ ಅನುದಾನದ  ಪ್ರಯೋಜನ ಪಡೆಯಬಹುದು.
  • ರೈತರು ತಮ್ಮ ಭೂಮಿಯಲ್ಲಿ ಎರೆ ಹುಳು ಗೊಬ್ಬರದ  ಘಟಕವನ್ನು ಸ್ಥಾಪಿಸಬಹುದು ಮತ್ತು ಹುಳುಗಳನ್ನು ಕೃಷಿಗೆ ಬಳಸಬಹುದು, ಒಟ್ಟಾರೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬಹುದು.
  • ಸಣ್ಣ ರೈತರಿಗೆ, ಅವರು ಮಾಡಿದ ಎರೆ ಹುಳು  ಗೊಬ್ಬರವನ್ನು ಮಾರಾಟ ಮಾಡಲು ಅವಕಾಶಗಳಿವೆ.

ಸಾವಯವ ಕೃಷಿ ಅನುದಾನದ ಕೊರತೆಗಳು : 

  • ಸಾವಯವ ಕೃಷಿ ಅನುದಾನವು  ಹೆಚ್ಚು ಸಾವಯವ   ಕೃಷಿಕರಿಗೆ  ಮಾತ್ರ ಅನುಕೂಲಕರವಾಗಿದೆ. ಆದರೆ ನಿರೀಕ್ಷಿತ ರೈತನಿಗೆ ಪ್ರಸ್ತುತ  ಭೂಮಿಯನ್ನು ಪ್ರಮಾಣೀಕರಿಸಬೇಕಾಗುತ್ತದೆ. ಈ ಪ್ರಮಾಣೀಕರಣಕ್ಕೆ ರಾಸಾಯನಿಕ ಕೃಷಿಯಿಂದ ಸಾವಯವ ಕೃಷಿಗೆ ಬದಲಾದ ಸಮಯದಿಂದ ೪- ೫ ವರ್ಷ ಬೇಕಾಗುತ್ತದೆ 
  • ಅನುದಾನ ಕೊಡುವ ಬ್ಯಾಂಕ್‌ನಿಂದ ಅನುಮತಿ ಪಡೆದ ನಂತರವೇ ನಬಾರ್ಡ್‌ನ ನೆರವು ಸಿಗುತ್ತದೆ.  
  • ರಾಸಾಯನಿಕ ಗೊಬ್ಬರಗಳ ದುರುಪಯೋಗ ಹಾಗೂ ಸಾವಯವ ಉತ್ಪನ್ನಗಳಿಂದಾಗುವ  ಲಾಭದ ಬಗ್ಗೆ ರೈತರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಬೇಕಿದೆ. 
  • ಸಾವಯವ ಗೊಬ್ಬರದ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಸ್ಥಳೀಯ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ  ನಿರ್ದಿಷ್ಟ ಪ್ರದೇಶಗಳಲ್ಲಿ ಜಾಗೃತಿ ಮತ್ತು ತರಬೇತಿಯ ಮೂಲಕ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಸಾವಯವ ಕೃಷಿ ಅನುದಾನಕ್ಕೆ  ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ಕೃಷಿ  ವಿವರಗಳನ್ನು ಸಿದ್ಧಪಡಿಸಿ ಮತ್ತು ಯೋಜನೆಯನ್ನು ಬ್ಯಾಂಕ್‌ಗೆ ಸಲ್ಲಿಸಬೇಕು.

ಹಂತ 2: ಬ್ಯಾಂಕ್ ಯೋಜನೆಯನ್ನು ಪರಿಶೀಲಿಸುತ್ತದೆ, ಮೌಲ್ಯಮಾಪನ ಮಾಡುತ್ತದೆ ಮತ್ತು ಅನುಮೋದಿಸುತ್ತದೆ.

ಹಂತ 3: ನಬಾರ್ಡ್‌ಗೆ ಅರ್ಜಿ ಸಲ್ಲಿಕೆ ಮತ್ತು  ಬ್ಯಾಂಕ್‌ನ ಅನುಮೋದನೆ.

ಹಂತ 4: ನಬಾರ್ಡ್‌ನಿಂದ ಮೌಲ್ಯಮಾಪನವನ್ನು ಮಾಡಲಾಗುತ್ತದೆ ಮತ್ತು ಸಾಲವನ್ನು ಅನುಮೋದಿಸಲಾಗುತ್ತದೆ.

ಹಂತ 5: ಅನುಮೋದಿತ ಸಾಲದ 50% ಅನ್ನು ಬ್ಯಾಂಕ್‌ಗೆ ನೀಡಲಾಗುತ್ತದೆ ಮತ್ತು ಅಲ್ಲಿಂದ ರೈತರಿಗೆ ಬಿಡುಗಡೆ ಮಾಡಲಾಗುತ್ತದೆ.

ಹಂತ 6: ಉಳಿದ 50% ಸಬ್ಸಿಡಿಯನ್ನು ಬ್ಯಾಂಕಿನ ಮೌಲ್ಯಮಾಪನದ ನಂತರ ಬಿಡುಗಡೆ ಮಾಡಲಾಗುತ್ತದೆ.

ನೀಡಬೇಕಾದ ದಾಖಲೆಗಳು

  • ಬೆಳೆ ವಿವರ 
  • ಬ್ಯಾಂಕ್ ಅನುಮೋದನೆ ಪ್ರತಿ 
  • ಆಧಾರ್ ಕಾರ್ಡ್
  • ವಿಳಾಸ ಪುರಾವೆ
  • ಪಡಿತರ ಚೀಟಿ
  • ಭೂಮಿ  ವಿವರಗಳು
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ

ನಿರ್ಣಯ : 

ಸಾವಯವ ಕೃಷಿ ಅನುದಾನ ಪಡೆಯಲು  ನಬಾರ್ಡ್ ಆನ್‌ಲೈನ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು. ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಸಾವಯವ ಕೃಷಿ ಅನುದಾನದ ಸಹಾಯವಾಣಿ ಸಂಖ್ಯೆ 1800229009  ಅಥವಾ  ಬಿಗ್ ಹಾಟ್  ಟೋಲ್ ಫ್ರೀ ಸಂಖ್ಯೆಯಾಗಿರುವ 1800-3000-2434 ಗೆ ಕರೆ ಮಾಡಿ, ಮಾಹಿತಿ ಪಡೆಯಬಹುದು. 

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು