ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು, 2022-23ನೇ ಸಾಲಿನ ಪ್ರಮುಖ ಕೃಷಿ ಬೆಳೆಗಳ ಉತ್ಪಾದನೆಯ ಎರಡನೇ ಮುಂಗಡ ಅಂದಾಜನ್ನು ಬಿಡುಗಡೆ ಮಾಡಿದೆ. ಪ್ರಸಕ್ತ ಸಾಲಿನ ಒಟ್ಟು ಆಹಾರ ಧಾನ್ಯಗಳ ಉತ್ಪಾದನೆ 3235.54 ಲಕ್ಷ ಟನ್ಗಳು ಎಂದು ಅಂದಾಜಿಸಲಾಗಿದ್ದು, ಇದು ಕಳೆದ ಸಾಲಿನ ಉತ್ಪಾದನೆಗಿಂತ ಅಧಿಕವಾಗಿದೆ. ಜೊತೆಗೆ ಇತರ ಬೆಳೆಗಳಾದ ಭತ್ತ, ಗೋಧಿ, ಜೋಳ, ಪೌಷ್ಠಿಕ/ಒರಟಾದ ಧಾನ್ಯಗಳು, ಮೂಂಗ್, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಹತ್ತಿ ಮತ್ತು ಸೆಣಬು & ಮೇಸ್ತ ಬೆಳೆಗಳ ಅಂದಾಜು ಉತ್ಪಾದನೆಯು ಕಳೆದ ಸಾಲಿಗಿಂತ ಹೆಚ್ಚಾಗಿದೆ.
ರಾಜ್ಯಗಳು ಮತ್ತು ಇತರ ಮೂಲಗಳಿಂದ ಉತ್ಪಾದನೆ ಕುರಿತು ದೊರೆತ ಮಾಹಿತಿಯನ್ನು ಆಧರಿಸಿ ತದನಂತರ ಇದಕ್ಕೆ ಸಂಬಂಧಿಸಿದಂತೆ ಇತರೆ ಆಧಾರಗಳ ಮೇಲೆ ಸದರಿ ಮಾಹಿತಿಯನ್ನು ಪರಷ್ಕರಿಸಲಾಗುತ್ತದೆ. ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಮಾನ್ಯಶ್ರೀ ನರೇಂದ್ರ ಸಿಂಗ್ ತೋಮರ್ ರವರು ಉತ್ಪಾದನೆಯ ಹೆಚ್ಚಳವನ್ನು ಪ್ರೇರೇಪಿಸಿ, ಮುಂದಿನ ಸಾಲಿನಲ್ಲಿ ಇನ್ನಷ್ಟು ಅಧಿಕ ಉತ್ಪಾದನೆಯನ್ನು ಸಾಧಿಸುವ ಭರವಸೆಯನ್ನು ವ್ಯಕ್ತಪಡಿಸಿದರು.
ಮುಖ್ಯಾಂಶಗಳು
- 2022-23ನೇ ಸಾಲಿನ ಆಹಾರ ಧಾನ್ಯದ ಅಂದಾಜು ಉತ್ಪಾದನೆಯು 3235.54 ಲಕ್ಷ ಟನ್ಗಳ ದಾಖಲೆಯಾಗಿದೆ.
- ಭತ್ತ, ಗೋಧಿ, ಜೋಳ, ಪೌಷ್ಠಿಕ/ಒರಟಾದ ಧಾನ್ಯಗಳು, ಮೂಂಗ್, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಹತ್ತಿ ಮತ್ತು ಸೆಣಬು ಮತ್ತು ಮೇಸ್ತ ಬೆಳೆಗಳ ಅಂದಾಜು ಉತ್ಪಾದನೆಯು ಕಳೆದ ಸಾಲಿಗಿಂತ ಹೆಚ್ಚಾಗಿದೆ.
- ಉತ್ಪಾದನೆಯ ಮೌಲ್ಯಮಾಪನವು ರಾಜ್ಯ ಮತ್ತು ಇತರ ಮೂಲಗಳಿಂದ ಆಧರಿಸಿದ್ದು, ಮುಂದಿನ ಪರಿಷ್ಕರಣೆಗೆ ಕೂಡ ಸದರಿ ಮೂಲಗಳನ್ನು ಅವಲಂಬಿಸಿರುತ್ತದೆ.
- 2023ನೇ ಸಾಲನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ವಿಶ್ವಸಂಸ್ಥೆಯು ಘೋಷಿಸಿದೆ.
- ಇತ್ತೀಚೆಗೆ, ಮಾನ್ಯಶ್ರೀ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಸಿರಿ ಧಾನ್ಯಗಳು/ಪೌಷ್ಟಿಕ ಧಾನ್ಯಗಳಿಗೆ ‘ಶ್ರೀ ಅನ್ನ‘ ಎಂಬ ಹೆಸರನ್ನು ನೀಡಿರುತ್ತಾರೆ.
2022-23ನೇ ಸಾಲಿನ ಎರಡನೇ ಮುಂಗಡ ಅಂದಾಜು ಬೆಳೆ ಉತ್ಪಾದನೆಯ ಬೆಳೆ-ವಾರು ವರದಿ :
ಬೆಳೆ | ಅಂದಾಜು ಉತ್ಪಾದನೆ (2022-23) | ಹಿಂದಿನ
ವರ್ಷಕ್ಕಿಂತ (2021-22) ಅಧಿಕ |
ಆಹಾರ ಧಾನ್ಯಗಳು | 3235.54 ಲಕ್ಷ ಟನ್ಗಳು (ದಾಖಲೆ) | 79.38 ಲಕ್ಷ ಟನ್ಗಳು |
ಭತ್ತ | 1308.37 ಲಕ್ಷ ಟನ್ಗಳು (ದಾಖಲೆ) | 13.65 ಲಕ್ಷ ಟನ್ಗಳು |
ಗೋಧಿ | 1121.82 ಲಕ್ಷ ಟನ್ಗಳು (ದಾಖಲೆ) | 44.40 ಲಕ್ಷ ಟನ್ಗಳು |
ಪೌಷ್ಠಿಕ/ ಸಿರಿ ಧಾನ್ಯಗಳು | 527.26 ಲಕ್ಷ ಟನ್ಗಳು | 16.25 ಲಕ್ಷ ಟನ್ಗಳು |
ಮೆಕ್ಕೆಜೋಳ | 346.13 ಲಕ್ಷ ಟನ್ಗಳು (ದಾಖಲೆ) | 8.83 ಲಕ್ಷ ಟನ್ಗಳು |
ಬಾರ್ಲಿ | 22.04 ಲಕ್ಷ ಟನ್ಗಳು (ದಾಖಲೆ) | 8.33 ಲಕ್ಷ ಟನ್ಗಳು |
ಒಟ್ಟು ಬೇಳೆಕಾಳುಗಳು | 278.10 ಲಕ್ಷ ಟನ್ಗಳು (ದಾಖಲೆ) | 5.08 ಲಕ್ಷ ಟನ್ಗಳು |
ಬೇಳೆಗಳು | 136.32 ಲಕ್ಷ ಟನ್ಗಳು (ದಾಖಲೆ) | 0.88 ಲಕ್ಷ ಟನ್ಗಳು |
ಮೂಂಗ್ | 35.45 ಲಕ್ಷ ಟನ್ಗಳು (ದಾಖಲೆ) | 3.80 ಲಕ್ಷ ಟನ್ಗಳು |
ಎಣ್ಣೆಬೀಜಗಳು | 400.01 ಲಕ್ಷ ಟನ್ಗಳು (ದಾಖಲೆ) | 20.38 ಲಕ್ಷ ಟನ್ಗಳು |
ನೆಲಗಡಲೆ | 100.56 ಲಕ್ಷ ಟನ್ | |
ಸೋಯಾಬೀನ್ | 139.75 ಲಕ್ಷ ಟನ್ | 9.89 ಲಕ್ಷ ಟನ್ |
ರೇಪ್ಸೀಡ್ ಮತ್ತು ಸಾಸಿವೆ | 128.18 ಲಕ್ಷ ಟನ್ಗಳು (ದಾಖಲೆ) | 8.55 ಲಕ್ಷ ಟನ್ಗಳು |
ಹತ್ತಿ | 337.23 ಲಕ್ಷ ಬೇಲ್ಗಳು (ತಲಾ 170 ಕೆಜಿ) | 2 6.05 ಲಕ್ಷ ಬೇಲ್ಗಳು |
ಕಬ್ಬು | 4687.89 ಲಕ್ಷ ಟನ್ಗಳು (ದಾಖಲೆ) | 2 93.64 ಲಕ್ಷ ಟನ್ಗಳು |
ಸೆಣಬು ಮತ್ತು ಮೇಸ್ತಾ | 100.49 ಲಕ್ಷ ಬೇಲ್ಗಳು (ತಲಾ 180 ಕೆಜಿ) |