HomeGovt for Farmersಸರ್ಕಾರದಿಂದ ಕಿಸಾನ್ ಡ್ರೋನ್ ಯೋಜನೆ -  ಯೋಜನೆಯಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ 

ಸರ್ಕಾರದಿಂದ ಕಿಸಾನ್ ಡ್ರೋನ್ ಯೋಜನೆ –  ಯೋಜನೆಯಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ 

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಿಸಾನ್ ಡ್ರೋನ್ ಯೋಜನೆಯು ಭಾರತದಾದ್ಯಂತ ರಾಸಾಯನಿಕ ಮುಕ್ತ ಕೃಷಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.ಡ್ರೋನ್‌ಗಳನ್ನು ಬಳಸಿಕೊಂಡು ಬೆಳೆಗೆ ಕೀಟನಾಶಕಗಳನ್ನು ಸಿಂಪಡಿಸುವಲ್ಲಿ ರೈತರಿಗೆ ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಇದು 2022 ರ ವೇಳೆಗೆ ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈಗಾಗಲೇ 100 ಕಿಸಾನ್ ಡ್ರೋನ್‌ಗಳನ್ನು ಪ್ರಾರಂಭ ಮಾಡಲಾಗಿದೆ  ಮತ್ತು ದೇಶದಲ್ಲಿ ಡ್ರೋನ್ ಸ್ಟಾರ್ಟ್-ಅಪ್‌ಗಳನ್ನು ಉತ್ತೇಜಿಸುವ ಯೋಜನೆಯನ ಹಮ್ಮಿಕೊಂಡಿದೆ. ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಸರ್ಕಾರ – ರೈತರಿಗೆ ನೆರವು ನೀಡುತ್ತದೆ.

ಕಿಸಾನ್ ಡ್ರೋನ್ ಯೋಜನೆ – ಇದರ ಬಗ್ಗೆ  ಅವಲೋಕನ

  • ಯೋಜನೆಯ ಹೆಸರು – ಕಿಸಾನ್ ಡ್ರೋನ್ ಯೋಜನೆ
  • ಯೋಜನೆಯ  ತಿದ್ದುಪಡಿ ದಿನಾಂಕ – ಜನವರಿ 2022 ರಂದು ನೀಡಲಾದ ಪರಿಷ್ಕೃತ ಮಾರ್ಗಸೂಚಿಗಳು
  • ಯೋಜನೆಯ ಮೊತ್ತದ  ಹಂಚಿಕೆ – ರೂ. 200 ಕೋಟಿ
  • ಪ್ರಾಯೋಜಿತ ಸರ್ಕಾರ – ಕೇಂದ್ರ ಸರ್ಕಾರ
  • ಸಹಾಯವಾಣಿ ಸಂಖ್ಯೆ – 011-23381092.

ಕಿಸಾನ್ ಡ್ರೋನ್ ಯೋಜನೆಯ ವೈಶಿಷ್ಟ್ಯಗಳು       

ನ೦. 

ಕಿಸಾನ್ ಡ್ರೋನ್ ಯೋಜನೆ ಬಗ್ಗೆ ವಿವರಗಳು

1. ಡ್ರೋನ್‌ಗಳನ್ನು ತಯಾರಿಸುವವರು ಯಾರು? ಗರುಡ ಏರೋಸ್ಪೇಸ್, ಚೆನ್ನೈ ಮೂಲದ ಸ್ವದೇಶಿ ಸ್ಟಾರ್ಟ್‌ಅಪ್.
2. ಡ್ರೋನ್ ಸಾಮರ್ಥ್ಯ ಎಷ್ಟು? 10 ರಿಂದ 15 ಕೆಜಿ ಗು ಅಧಿಕ ಸಾಮರ್ಥ್ಯ.
3. ಸಿಂಪಡಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಒಂದು ಎಕರೆ ಜಮೀನಿನಲ್ಲಿ ಕೀಟನಾಶಕವನ್ನು  ಸಿಂಪಡಿಸಲು 15 ನಿಮಿಷ ಬೇಕು.
4. ರೈತರ ಗುಂಪು ಅಥವಾ ಸಂಸ್ಥೆಗೆ ಸಬ್ಸಿಡಿ ಎಷ್ಟು ಸಿಗುತ್ತದೆ ? ಒಟ್ಟಾರೆ ಬೆಲೆಯ 75% ವರೆಗೆ.
5. ರೈತರು ಅದನ್ನು ವೈಯಕ್ತಿಕ ಕಾರ್ಯಕಾಗಾಗಿ ಖರೀದಿಸಿದಾಗ ಎಷ್ಟು ವೆಚ್ಳವಾಗುತ್ತದೆ ? ಅನುದಾನವು 40% ರಿಂದ 50% ವರೆಗೆ ಇರುತ್ತದೆ.
6. ಸಣ್ಣ, ಅತಿ ಸಣ್ಣ ರೈತರು ಮತ್ತು ಮಹಿಳೆಯರಿಗೆ  ಅನುದಾನದ ಮೊತ್ತವೇನು? ಸುಮಾರು ರೂ 50,000 ದಷ್ಟು.
7. ಡ್ರೋನ್‌ಗಳು ಪಡೆಯಲು ಎಲ್ಲಿ ಸಂಪರ್ಕಿಸಬೇಕು ? ಕೃಷಿ ವಿಜ್ಞಾನ ಕೇಂದ್ರಗಳಲ್ಲಿ.

 

ಕಿಸಾನ್ ಡ್ರೋನ್ ಯೋಜನೆಯ ಪ್ರಯೋಜನಗಳು ?

ಯೋಜನೆಯ ಪ್ರಯೋಜನಗಳೆಂದರೆ:

  • ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವುದು, ಬೆಳೆ ಮೌಲ್ಯಮಾಪನ ಮಾಡುವುದು, ಪೋಷಕಾಂಶಗಳು ಮತ್ತು ಕೀಟನಾಶಕಗಳನ್ನು ಡ್ರೋನ್ ಗಳನ್ನ  ಬಳಸಿ ಸಿಂಪಡಿಸಬಹುದು. 
  • ಕೃಷಿ ಕಾರ್ಯಗಳಿಗೆ ಉಪಯೋಗವಾಗಲು ಡ್ರೋನ್ಅನ್ನು ಖರೀದಿಸಲು ರೈತರಿಗೆ ಅನುದಾನ ಸಿಗಲಿದೆ.
  • ಇದು ರೈತರಿಗೆ ಡ್ರೋನ್‌ ಬಳಸಿಕೊಂಡು ಸಸ್ಯ ರೋಗ ಹಾಗೂ ಕೀಟಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಅದು ಅವರ ಶ್ರಮ ಮತ್ತು ಸಮಯವನ್ನು ಉಳಿಸುತ್ತದೆ, ಅವರು ಆ ಸಮಯವನ್ನು ತಮ್ಮ ಗಳಿಕೆಯನ್ನು ಹೆಚ್ಚಿಸಲು ಬೇರೆಡೆ ಬಳಸಬಹುದು.
  • ಇದು 7 ರಿಂದ 10 ನಿಮಿಷಗಳಲ್ಲಿ ಒಂದು ಎಕರೆ ಭೂಮಿಯಲ್ಲಿ ಔಷಧಿಗಳು , ಯೂರಿಯಾ ಮತ್ತು ಕೀಟನಾಶಕಗಳನ್ನು ಸುಲಭವಾಗಿ ಸಿಂಪಡಿಸಲು, ರೈತರಿಗೆ ಸಹಾಯ ಮಾಡುತ್ತದೆ 

ಕಿಸಾನ್ ಡ್ರೋನ್ ಯೋಜನೆಯ ಕೊರತೆಗಳೇನು ?

ಇಲ್ಲಿಯವರೆಗೆ, 2022 ರ ವೇಳೆಗೆ ರೈತರ ಆದಾಯವನ್ನು ಹೆಚ್ಚಿಸುವ ಆರಂಭಿಕ ಭರವಸೆಯ ಮೇಲೆ ಕಾರ್ಯನಿರ್ವಹಿಸಲು ಸರ್ಕಾರದಿಂದ ಯಾವುದೇ ಗಮನಾರ್ಹ ಪ್ರಯತ್ನಗಳಾಗಿಲ್ಲ. ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಉತ್ಪಾದನೆಗೆ ಸಹಾಯವಾಗುತ್ತದೆ. ಆದರೆ , ಇದು ಹೆಚ್ಚಾಗಿ ಉದ್ಯಮಗಳಿಗೆ ಲಾಭವನ್ನು ನೀಡುತ್ತದೆ.

ಕಿಸಾನ್ ಡ್ರೋನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನವೆಂದರೆ :ಕೃಷಿಗಾಗಿ ಯಾವುದೇ ಆಧುನಿಕ ಯಂತ್ರಕ್ಕೆ ಅರ್ಜಿ ಸಲ್ಲಿಸುವುದು.

ಹಂತ 1 – https://agrimachinery.nic.in/Farmer/SHGGroups/Registration ಗೆ ಭೇಟಿ ನೀಡಿ.

ಹಂತ 2 – ನೋಂದಣಿ ವಿಭಾಗಕ್ಕೆ ತೆರಳಿ.

ಹಂತ 3 – ಮೂರು ಆಯ್ಕೆಗಳಲ್ಲಿ, ರೈತರನ್ನು  ಆಯ್ಕೆಮಾಡಿ.

ಹಂತ 4 – ವಿವರಗಳನ್ನು ನಿಗಾ ವಹಿಸಿ ಭರ್ತಿ ಮಾಡಿ ಮತ್ತು ಸಲ್ಲಿಸಿ.

ಅಗತ್ಯವಿರುವ ದಾಖಲೆಗಳು ?

  • ಆಧಾರ್ ಕಾರ್ಡ್
  • ಭೂಮಿಯ ವಿವರಗಳನ್ನು  ದಾಖಲಿಸಲು ಭೂಮಿಯ ಹಕ್ಕು (ROR)ಪತ್ರ .
  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  • ಬ್ಯಾಂಕ್ ಪಾಸ್ ಪುಸ್ತಕದ ಮೊದಲ ಪುಟದ ಫೋಟೋ ಪ್ರತಿ
  • ಯಾವುದೇ ಐಡಿ ಪುರಾವೆಯ ಪ್ರತಿ
  • SC / ST / OBC ಜಾತಿ ವರ್ಗ ಪ್ರಮಾಣಪತ್ರದ ಪ್ರತಿ.

ಕಿಸಾನ್ ಡ್ರೋನ್ ಯೋಜನೆಯಲ್ಲಿ, ಡ್ರೋನ್‌ಗಳನ್ನು ಹಾರಿಸಲು ರೈತರಿಗೆ ತರಬೇತಿಯನ್ನು ನೀಡುತ್ತದೆ. ತರಬೇತಿ ಕಾರ್ಯಕ್ರಮಗಳನ್ನು ಕೃಷಿ ಕಾಲೇಜುಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಈ ತರಬೇತಿಗೆ ರೈತರು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಆದಾಗ್ಯೂ, ಮೊಬೈಲ್ ಟವರ್‌ಗಳು ಮತ್ತು ಹೈ-ಟೆನ್ಷನ್ ಲೈನ್‌ಗಳನ್ನು ಹೊಂದಿರುವ ಸ್ಥಳಗಳಲ್ಲಿ ಡ್ರೋನ್‌ಗಳನ್ನು ಅನುಮತಿಯೊಂದಿಗೆ ಬಳಸಬೇಕಾಗುತ್ತದೆ.

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು