HomeMachineryತಪಸ್ ಡಬಲ್ ಮೋಟಾರ್ ಬ್ಯಾಟರಿ ಸ್ಪ್ರೇಯರ್ | ಸ್ಪ್ರೇಯರ್ ಹೊರ ತೆಗೆದು ನೋಡೋಣ ಬನ್ನಿ

ತಪಸ್ ಡಬಲ್ ಮೋಟಾರ್ ಬ್ಯಾಟರಿ ಸ್ಪ್ರೇಯರ್ | ಸ್ಪ್ರೇಯರ್ ಹೊರ ತೆಗೆದು ನೋಡೋಣ ಬನ್ನಿ

ಕೃಷಿಯಲ್ಲಿ, ಸ್ಪ್ರೇಯರ್ ಎನ್ನುವುದು ಕೀಟನಾಶಕಗಳು ಮತ್ತು ರಸಗೊಬ್ಬರಗಳನ್ನು ಕೃಷಿ ಬೆಳೆಗಳಿಗೆ ಸಿಂಪಡಿಸಲು  ಬಳಸುವ ಸಾಧನವಾಗಿದೆ.ಕೀಟನಾಶಕಗಳನ್ನು ನೀರಿನಲ್ಲಿ ಬೆರೆಸಿ ನಂತರ ಸೋಂಕಿತ ಪ್ರದೇಶಗಳಿಗೆ ಸಿಂಪಡಿಸಲಾಗುತ್ತದೆ. ಯಾವುದೇ ಬೆಳೆ ಪ್ರದೇಶದಲ್ಲಿ ಕೀಟಗಳ/ ರೋಗಗಳ ಬಾಧೆ ಹೆಚ್ಚಿದ್ದರೆ, ಔಷದಿ ಸಿಂಪಡಣೆ ಯನ್ನು ಸ್ಪ್ರೇಯರ್ ಮುಖಾಂತರ ಮಾಡಬೇಕಾಗುತ್ತದೆ.

ಈ ಸ್ಪ್ರೇ ಪಂಪ್ ಅನ್ನು ಮೆತ್ತನೆಯ ಭುಜದ ಪಟ್ಟಿ ಮತ್ತು ಬ್ಯಾಕ್‌ರೆಸ್ಟ್‌ನೊಂದಿಗೆ ನಿಮ್ಮ ಸೌಕರ್ಯಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಬ್ಯಾಟರಿ ಒಮ್ಮೆ ಚಾರ್ಜ್ ಮಾಡಿದರೆ 4 ಗಂಟೆಗಳವರೆಗೆ ಕೆಲಸ ಮಾಡುತ್ತದೆ. ಇದು ಹೊಂದಾಣಿಕೆಯ ಒತ್ತಡ(ಪ್ರೆಜರ್) ನಿಯಂತ್ರಣದೊಂದಿಗೆ ಬರುತ್ತದೆ. ಸ್ಪ್ರೇ ನೀರಿನಿಂದ ದೂಳು ಮತ್ತು ಜಲ್ಲಿಕಲ್ಲುಗಳನ್ನು ಫಿಲ್ಟರ್ ಮಾಡಲು, ಟ್ಯಾಂಕ್ ಫಿಲ್ಟರ್ ಅನ್ನು ಸಹ ಹೊಂದಿದೆ . ಸ್ಪ್ರೇಯರ್ ತೂಕ 7.25 ಕೆಜಿ ಮತ್ತು 20 ಲೀಟರ್ ಸಾಮರ್ಥ್ಯವನ್ನು ಹೊಂದಿದೆ. 

ತಪಸ್ ಡಬಲ್ ಮೋಟಾರ್‌ ಬ್ಯಾಟರಿ ಸ್ಪ್ರೇಯರ್ ನ ವಿಶೇಷತೆಗಳು : 

  • ಬಳಕೆದಾರರ ಕೈಪಿಡಿ – ಇದರಲ್ಲಿ ನಾವು ಸ್ಪ್ರೇಯರ್ ಯನ್ನು ಹೇಗೆ ಬಳಸಬೇಕು  ಹಾಗೂ ಸ್ಪ್ರೇಯರ್ ನ  ವಿವಿಧ ಭಾಗಗಳ ಬಗ್ಗೆ ಎಲ್ಲಾ ವಿವರಗಳನ್ನುಓದಿ ತಿಳಿಯಬಹುದು.  
  • ಈ ಸ್ಪ್ರೇಯರ್ 20 ಲೀಟರ್ ಸಾಮರ್ಥ್ಯವನ್ನು ಹೊಂದಿದೆ. 
  • ಈ ಭಾಗವು ಡಬಲ್ ಮೋಟರ್ ಬ್ಯಾಟರಿಯನ್ನು ಹೊಂದಿದೆ. 
  • ಪ್ರೆಜರ್ ರೇಗುಲೇಟರ್- ಇದು ಹೊರಹೋಗುವ ಸ್ಪ್ರೇ ಪರಿಮಾಣವನ್ನು ನಿಯಂತ್ರಿಸುತ್ತದೆ. 
  • ಫಿಲ್ಟರ್ – ಇದು ಸ್ಪ್ರೇ ನೀರಿನಿಂದ ದೂಳು ಮತ್ತು ಜಲ್ಲಿಕಲ್ಲುಗಳನ್ನು ಫಿಲ್ಟರ್ ಮಾಡುತ್ತದೆ. 
  • ಸ್ಪ್ರೇ ಲ್ಯಾನ್ಸ್ ಪೈಪ್ – ಇದು ಎಕ್ಸ್ಟ್ರಾ ಲ್ಯಾನ್ಸ್‌ ಹೊಂದಿರುತ್ತದೆ, ವಿಶೇಷವಾಗಿ ಪವರ್ ಸ್ಪ್ರೇ ಗೆ  ಬಳಸಲಾಗುತ್ತದೆ.
  • ಹೊಸ್ ಪೈಪ್ ಅಥವಾ ಔಟ್ಲೆಟ್ ಪೈಪ್.  
  • ಸ್ಪ್ರೇಯರ್ ಅನ್ನು ಚಾರ್ಜ್ ಮಾಡಲು ಚಾರ್ಜರ್ ಇದೆ. 
  • ಈ ಎಲ್ಲಾ ಭಾಗಗಳು ಅಥವಾ ಪಾರ್ಟ್ಸ್ , ಸ್ಪ್ರೇಯರ್ ಜೊತೆಗೆ ಲಭ್ಯವಿರುತ್ತದೆ. 

ಬನ್ನಿ ಈಗ ಸ್ಪ್ರೇಯರ್ ಅನ್ನು ಜೋಡಿಸೋಣ

  • ಹೊಸ್ ಪೈಪ್ ಅನ್ನು ಸ್ಪ್ರೇಯರ್ ನ  ಔಟ್ಲೆಟ್ಗೆ ಕನೆಕ್ಟ್ ಮಾಡಬೇಕು 
  • ಹೊಸ್ ಪೈಪ್ ನ  ಮತ್ತೊಂದು ತುದಿಯನ್ನು ಟ್ರಿಗರ್ ಗೆ ಕನೆಕ್ಟ್ ಮಾಡಬೇಕು 
  • ಟ್ರಿಗರ್ ಸಹ ಆನ್/ಆಫ್ ಸ್ವಿಚ್ ಹೊಂದಿರುತ್ತದೆ, ಅದನ್ನು ಬಳಸುವುದು ಸಹ ಸುಲಭ. 
  • ಟ್ರಿಗರ್ ನ ಮತ್ತೊಂದು ತುದಿಯನ್ನು ಸ್ಪ್ರೇ ಲ್ಯಾನ್ಸ್ ಪೈಪ್ ಗೆ ಕನೆಕ್ಟ್ ಮಾಡಬೇಕು
  • ನಂತರ ಲ್ಯಾನ್ಸ್ ಅನ್ನು ನಾಝಲ್ ಗೆ ಕನೆಕ್ಟ್ ಮಾಡಬೇಕು.ನಾಝಲ್ ಗಳಲ್ಲಿ ಮತ್ತೆ ಹಲವು ವಿಧಗಳಿವೆ.  ಅವಶ್ಯಕತೆಗೆ ಅನುಗುಣವಾಗಿ ಬಳಸಬಹುದು
  • ಸಾಮಾನ್ಯವಾಗಿ ಬಳಸವುದು ಎಂದರೆ ಫ್ಲವರ್ ಸ್ಪ್ರೇ ನಾಝಲ್
  • ಕೆಲವು ಇತರ ರೀತಿಯ ನಾಝಲ್ ಗಳು ಇವೆ , ಅವುಗಳನ್ನು ಅವಶ್ಯಕತೆಗಳಿಗೆ ಅನುಗುಣವಾಗಿ ಬಳಸಬಹುದು. 

ನಿರ್ಣಯ: 

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗೆ  ನೀಡಲಾದ ಲಿಂಕ್ ಗಳನ್ನು  ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ. 

spot_img

Read More

Stay in Touch

Subscribe to receive latest updates from us.

Related Articles