HomeMachineryನೆಪ್ಚೂನ್ BS-13 ಬ್ಯಾಟರಿ ಸ್ಪ್ರೇಯರ್ 20 ಲೀ | ಸ್ಪ್ರೇಯರ್ ಹೊರ ತೆಗೆದು ನೋಡೋಣ ಬನ್ನಿ

ನೆಪ್ಚೂನ್ BS-13 ಬ್ಯಾಟರಿ ಸ್ಪ್ರೇಯರ್ 20 ಲೀ | ಸ್ಪ್ರೇಯರ್ ಹೊರ ತೆಗೆದು ನೋಡೋಣ ಬನ್ನಿ

ಸ್ಪ್ರೇಯರ್‌ಗಳು ಕೀಟಗಳನ್ನು ನಿಯಂತ್ರಿಸಲು ಪರಿಣಾಮಕಾರಿ ಯಂತ್ರಗಳಾಗಿವೆ. ಕೀಟನಾಶಕಗಳನ್ನು ನೀರಿನಲ್ಲಿ ಬೆರೆಸಿ ನಂತರ ಸೋಂಕಿತ ಪ್ರದೇಶಗಳಿಗೆ ಸಿಂಪಡಿಸಲಾಗುತ್ತದೆ. ಯಾವುದೇ ಬೆಳೆ ಪ್ರದೇಶದಲ್ಲಿ ಕೀಟಗಳ/ ರೋಗಗಳ ಬಾಧೆ ಹೆಚ್ಚಿದ್ದರೆ, ರೈತರು ಪ್ರತಿ ಎರಡು ವಾರಗಳ ನಂತರ ಔಷದಿ ಸಿಂಪಡಣೆ ಯನ್ನು ಸ್ಪ್ರೇಯರ್ ಮುಖಾಂತರ ಮಾಡಬೇಕಾಗುತ್ತದೆ. 

ಈ ಸ್ಪ್ರೇ ಪಂಪ್, ದೀರ್ಘಾವಧಿ ಮತ್ತು ಹೆಚ್ಚು ಕಾರ್ಯಕ್ಷಮತೆಯ ಬ್ಯಾಟರಿಯನ್ನು ಹೊಂದಿದೆ. ಇದು ಹೆಚ್ಚು ಎಕರೆ ಭೂಮಿ ಹೊಂದಿರುವ ಪ್ರದೇಶದಲ್ಲಿ ಬಳಸಲು ಸೂಕ್ತ. ಬಳೆಕೆದಾರರ ಸೌಕರ್ಯಕ್ಕಾಗಿ ನೆಪ್ಚೂನ್ ಪವರ್ ಸ್ಪ್ರೇಯರ್ ಅನ್ನು ಬ್ಯಾಕ್ ರೆಸ್ಟ್ ಮತ್ತು ಭುಜದ ಪ್ಯಾಡ್‌ಗೆ ಅಳವಡಿಸಲಾಗಿದೆ. ರೇಗುಲೇಟರ್ ನಿಂದ ಒತ್ತಡ(ಪ್ರೆಜರ್)ವನ್ನು ನಿಯಂತ್ರಿಸಬಹುದು. ಸ್ಪ್ರೇ ಮಿಶ್ರಣವನ್ನು ಅಳೆಯಲು ಟ್ಯಾಂಕ್ ನ ಮೇಲೆ ಅಳೆಯುವ ಮಾಪನಾಂಕವನ್ನು ನೋಡಬಹುದು. ದೀರ್ಘಕಾಲ ಬಳಿಕೆಗಾಗಿ ಸ್ಪ್ರೇಯರ್ ಅನ್ನು ಉನ್ನತ ದರ್ಜೆಯ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ.

ನೆಪ್ಚೂನ್ ಬಿ ಎಸ್ – 13 ಬ್ಯಾಟರಿ ಸ್ಪ್ರೇಯರ್ ನ ವಿಶೇಷತೆಗಳು:  

  • ನೆಪ್ಚೂನ್ ಬ್ಯಾಟರಿ ಚಾಲಿತ ನ್ಯಾಪ್‌ಸಾಕ್ ಗಾರ್ಡನ್ ಸ್ಪ್ರೇಯರ್ (BS-13) ನ ಟ್ಯಾಂಕ್ (12 V X 12 A) 16 ಲೀ. ಸಾಮರ್ಥ್ಯವನ್ನು ಹೊಂದಿದೆ. 
  • ಈ ಸ್ಪ್ರೇಯರ್, ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿಯೊಂದಿಗೆ ಬರುತ್ತದೆ. 
  • ಒತ್ತಡ(ಪ್ರೆಜರ್)ವನ್ನು ಅವಶ್ಯಕತೆಗಳಿಗೆ ತಕ್ಕಂತೆ ಸರಿಹೊಂದಿಸಿಕೊಳ್ಳಬಹುದು . 
  • ದೀರ್ಘಕಾಲ ಬಾಳಿಕೆಗಾಗಿ ಟ್ಯಾಂಕ್ ಅನ್ನು ತುಕ್ಕು ನಿರೋಧಕ ವಸ್ತುಗಳಿಂದ ಮಾಡಲ್ಪಟ್ಟಿದೆ.

ಬಳಕೆದಾರರ ಕೈಪಿಡಿ – ನಾವು ಸ್ಪ್ರೇಯರ್ ಯನ್ನು ಹೇಗೆ ಬಳಸಬೇಕು  ಹಾಗೂ ಸ್ಪ್ರೇಯರ್ ನ  ವಿವಿಧ ಭಾಗಗಳ ಬಗ್ಗೆ ಎಲ್ಲಾ ವಿವರಗಳನ್ನು ಓದಿ ತಿಳಿಯಬಹುದು. 

ಪವರ್ ಸಾಕೆಟ್ ಅಥವಾ ಚಾರ್ಜಿಂಗ್ ಸಾಕೆಟ್ 

ಪ್ರೆಜರ್  ರೇಗುಲೇಟರ್ – ಇದು ಹೊರಹೋಗುವ ಸ್ಪ್ರೇ ಪರಿಮಾಣವನ್ನು ನಿಯಂತ್ರಿಸುತ್ತದೆ. 

ಫಿಲ್ಟರ್ – ಸ್ಪ್ರೇ ನೀರಿನಿಂದ ದೂಳು ಮತ್ತು ಜಲ್ಲಿಕಲ್ಲುಗಳನ್ನು ಫಿಲ್ಟರ್ ಮಾಡುತ್ತದೆ. 

ಸ್ಪ್ರೇಯರ್ ಅನ್ನು ಚಾರ್ಜ್ ಮಾಡಬೇಕು.  

ಬನ್ನಿ ಈಗ ಸ್ಪ್ರೇಯರ್ ಅನ್ನು ಜೋಡಿಸೋಣ

  • ಹೊಸ್ ಪೈಪ್ ಅನ್ನು ಸ್ಪ್ರೇಯರ್ ನ  ಔಟ್ಲೆಟ್ಗೆ ಕನೆಕ್ಟ್ ಮಾಡಬೇಕು 
  • ಹೊಸ್ ಪೈಪ್ ನ  ಮತ್ತೊಂದು ತುದಿಯನ್ನು ಟ್ರಿಗರ್ ಗೆ ಕನೆಕ್ಟ್ ಮಾಡಬೇಕು 
  • ಟ್ರಿಗರ್ ಸಹ ಆನ್/ಆಫ್ ಸ್ವಿಚ್ ಹೊಂದಿರುತ್ತದೆ, ಅದನ್ನು ಬಳಸುವುದು ಸಹ ಸುಲಭ. 
  • ಟ್ರಿಗರ್ ನ ಮತ್ತೊಂದು ತುದಿಯನ್ನು ಸ್ಪ್ರೇ ಲ್ಯಾನ್ಸ್ ಪೈಪ್ ಗೆ ಕನೆಕ್ಟ್ ಮಾಡಬೇಕು
  • ನಂತರ ಲ್ಯಾನ್ಸ್ ಅನ್ನು ನಾಝಲ್ ಗೆ ಕನೆಕ್ಟ್ ಮಾಡಬೇಕು.ನಾಝಲ್ ಗಳಲ್ಲಿ ಮತ್ತೆ ಹಲವು ವಿಧಗಳಿವೆ.  ಅವಶ್ಯಕತೆಗೆ ಅನುಗುಣವಾಗಿ ಬಳಸಬಹುದು
  • ಸಾಮಾನ್ಯವಾಗಿ ಬಳಸವುದು ಎಂದರೆ ಫ್ಲವರ್ ಸ್ಪ್ರೇ ನಾಝಲ್
  • ಕೆಲವು ಇತರ ರೀತಿಯ ನಾಝಲ್ ಗಳು ಇವೆ , ಅವುಗಳನ್ನು ಅವಶ್ಯಕತೆಗಳಿಗೆ ಅನುಗುಣವಾಗಿ ಬಳಸಬಹುದು 
  • ಈಗ ನಮ್ಮ ಸ್ಪ್ರೇಯರ್ ಬಳಸಲು ಸಿದ್ಧವಾಗಿದೆ

ನಿರ್ಣಯ: 

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗೆ  ನೀಡಲಾದ ಲಿಂಕ್ ಗಳನ್ನು  ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ. 

spot_img

Read More

Stay in Touch

Subscribe to receive latest updates from us.

Related Articles