HomeMachineryಫಾರ್ಮೊಗಾರ್ಡ್ ಹೈ ಪ್ರೆಷರ್ ನ್ಯಾಪ್‌ಸಾಕ್ ಸ್ಪ್ರೇಯರ್ 16 ಲೀ. | ಸ್ಪ್ರೇಯರ್ ಹೊರ ತೆಗೆದು ನೋಡೋಣ...

ಫಾರ್ಮೊಗಾರ್ಡ್ ಹೈ ಪ್ರೆಷರ್ ನ್ಯಾಪ್‌ಸಾಕ್ ಸ್ಪ್ರೇಯರ್ 16 ಲೀ. | ಸ್ಪ್ರೇಯರ್ ಹೊರ ತೆಗೆದು ನೋಡೋಣ ಬನ್ನಿ

ಕೃಷಿ ಸ್ಪ್ರೇಯರ್‌ಎಂದರೆ  ದ್ರವವನ್ನು  ಚಿಕ್ಕ ಚಿಕ್ಕ ಗಾತ್ರದ ಹನಿಗಳಾಗಿ ಒಡೆಯುವುದು ಮತ್ತು ಅವುಗಳನ್ನು ಎಲೆಗಳ  ಮೇಲೆ ಏಕರೂಪವಾಗಿ ಸಿಂಪಡಿಸುವುದು.  ಅತಿಯಾದ ಕೀಟನಾಶಕದ ಬಳಕೆಯನ್ನು ತಪ್ಪಿಸಲು  ಹಾಗೂ ಬಳಕೆಯ ಪ್ರಮಾಣವನ್ನು ನಿಯಂತ್ರಿಸುವುದು ಮತ್ತೊಂದು ಮುಖ್ಯ ಉದ್ದೇಶವಾಗಿದೆ. ಈ ವಿಡಿಯೋದಲ್ಲಿ ನಾವು ಹೈ ಪ್ರೆಷರ್ ನ್ಯಾಪ್‌ಸಾಕ್ ಸ್ಪ್ರೇಯರ್  ಬಗ್ಗೆ ತಿಳಿಯೋಣ. 

ಈ ಸ್ಪ್ರೇ ಪಂಪ್, ರಬ್ಬರ್-ಪ್ಯಾಡ್ ನಿಂದ ಮಾಡಲ್ಪಟ್ಟ ಭುಜದ ಪಟ್ಟಿಯೊಂದಿಗೆ ಹೆಚ್ಚು ಸೌಕರ್ಯವನ್ನು ನೀಡುತ್ತದೆ. ಟ್ಯಾಂಕ್ ಮತ್ತು ಹ್ಯಾಂಡಲ್ ಅನ್ನು HDPE ನಿಂದ ಮಾಡಲಾಗಿದ್ದು, ಇದು ಸ್ಪ್ರೇಯರ್ ನ ಬಾಳಿಕೆ ದೀರ್ಘಕಾಲ ಬರುವಂತೆ ಮಾಡುತ್ತದೆ. ಸ್ಪ್ರೇ ನೀರಿನಿಂದ ದೂಳು ಮತ್ತು ಜಲ್ಲಿಕಲ್ಲುಗಳನ್ನು ಫಿಲ್ಟರ್ ಮಾಡಲು, ಟ್ಯಾಂಕ್ ಫಿಲ್ಟರ್ ಅನ್ನು ಸಹ ಹೊಂದಿದೆ. ರೇಗುಲೇಟರ್ ಸಹಾಯದಿಂದ ಒತ್ತಡ(ಪ್ರೆಜರ್)ವನ್ನು ಅವಶ್ಯಕತೆಗಳಿಗೆ ತಕ್ಕಂತೆ ಸರಿಹೊಂದಿಸಿಕೊಳ್ಳಬಹುದು. 

ಹೈ ಪ್ರೆಷರ್ ನ್ಯಾಪ್‌ಸಾಕ್ ಸ್ಪ್ರೇಯರ್  ನ ವಿಶೇಷತೆಗಳು : 

  • ಬಳಕೆದಾರರ ಕೈಪಿಡಿ – ಇದರಲ್ಲಿ ನಾವು ಸ್ಪ್ರೇಯರ್ ಯನ್ನು ಹೇಗೆ ಬಳಸಬೇಕು  ಹಾಗೂ ಸ್ಪ್ರೇಯರ್ ನ  ವಿವಿಧ ಭಾಗಗಳ ಬಗ್ಗೆ ಎಲ್ಲಾ ವಿವರಗಳನ್ನುಓದಿ ತಿಳಿಯಬಹುದು. 
  • ಈ ಸ್ಪ್ರೇಯರ್ 16 ಲೀಟರ್ ಸಾಮರ್ಥ್ಯವನ್ನು ಹೊಂದಿದೆ
  • ಫಿಲ್ಟರ್- ಇದು ಸ್ಪ್ರೇ ನೀರಿನಿಂದ ದೂಳು ಮತ್ತು ಜಲ್ಲಿಕಲ್ಲುಗಳನ್ನು ಫಿಲ್ಟರ್ ಮಾಡುತ್ತದೆ
  • ಇದು ಸ್ಪ್ರೇ ಲ್ಯಾನ್ಸ್ ಪೈಪ್ ಅನ್ನು ಹೊಂದಿದೆ. 
  • ಹೊಸ್ ಪೈಪ್ ಅಥವಾ ಔಟ್ಲೆಟ್ ಪೈಪ್ ಅನ್ನು ಹೊಂದಿದೆ.
  • ಇವೆಲ್ಲಾ  ವಿವಿಧ ರೀತಿಯ ನಳಿಕೆಗಳು ಅಥವಾ ನಾಝಲ್ಸ್ ಅಂತ ಹೇಳಬಹುದು 

ಈಗ ಸ್ಪ್ರೇಯರ್ ಅನ್ನು ಜೋಡಿಸೋಣ

  • ಹೊಸ್ ಪೈಪ್ ಅನ್ನು ಸ್ಪ್ರೇಯರ್ ನ  ಔಟ್ಲೆಟ್ಗೆ ಕನೆಕ್ಟ್ ಮಾಡಬೇಕು. 
  • ಹೊಸ್ ಪೈಪ್ ನ  ಮತ್ತೊಂದು ತುದಿಯನ್ನು ಟ್ರಿಗರ್ ಗೆ ಕನೆಕ್ಟ್ ಮಾಡಬೇಕು.  
  • ಟ್ರಿಗರ್ ಸಹ ಆನ್/ಆಫ್ ಸ್ವಿಚ್ ಹೊಂದಿರುತ್ತದೆ, ಅದನ್ನು ಬಳಸುವುದು ಸಹ ಸುಲಭ. 
  • ಟ್ರಿಗರ್ ನ ಮತ್ತೊಂದು ತುದಿಯನ್ನು ಸ್ಪ್ರೇ ಲ್ಯಾನ್ಸ್ ಪೈಪ್ ಗೆ ಕನೆಕ್ಟ್ ಮಾಡಬೇಕು. 
  • ನಂತರ ಲ್ಯಾನ್ಸ್ ಅನ್ನು ನಾಝಲ್ ಗೆ ಕನೆಕ್ಟ್ ಮಾಡಬೇಕು.ನಾಝಲ್ ಗಳಲ್ಲಿ ಮತ್ತೆ ಹಲವು ವಿಧಗಳಿವೆ,  ಅವಶ್ಯಕತೆಗೆ ಅನುಗುಣವಾಗಿ ಬಳಸಬಹುದು. 
  • ಸಾಮಾನ್ಯವಾಗಿ ಬಳಸವುದು ಎಂದರೆ ಫ್ಲವರ್ ಸ್ಪ್ರೇ ನಾಝಲ್. 
  • ಕೆಲವು ಇತರ ರೀತಿಯ ನಾಝಲ್ ಗಳು ಇವೆ , ಅವುಗಳನ್ನು ಅವಶ್ಯಕತೆಗಳಿಗೆ ಅನುಗುಣವಾಗಿ ಬಳಸಬಹುದು. 
  • ಈಗ ನಮ್ಮ ಸ್ಪ್ರೇಯರ್ ಬಳಸಲು ಸಿದ್ಧವಾಗಿದೆ. 

ನಿರ್ಣಯ: 

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗೆ  ನೀಡಲಾದ ಲಿಂಕ್ ಗಳನ್ನು  ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ. 

spot_img

Read More

Stay in Touch

Subscribe to receive latest updates from us.

Related Articles