HomeMachineryನೆಪ್ಚೂನ್ ಬ್ಯಾಟರಿ ಚಾಲಿತ ನ್ಯಾಪ್‌ಸಾಕ್ ಗಾರ್ಡನ್ ಸ್ಪ್ರೇಯರ್‌ (BS 13 ಪ್ಲಸ್) ಅನ್ನು ಹೊರ ತೆಗೆದು...

ನೆಪ್ಚೂನ್ ಬ್ಯಾಟರಿ ಚಾಲಿತ ನ್ಯಾಪ್‌ಸಾಕ್ ಗಾರ್ಡನ್ ಸ್ಪ್ರೇಯರ್‌ (BS 13 ಪ್ಲಸ್) ಅನ್ನು ಹೊರ ತೆಗೆದು ನೋಡೋಣ ಬನ್ನಿ

ಕೀಟಗಳನ್ನು ನಿಯಂತ್ರಿಸಲು ಸ್ಪ್ರೆಯೇರನ್ನು ಬಳಸಲಾಗುತ್ತದೆ. ಕೀಟನಾಶಕಗಳನ್ನು ನೀರಿನಲ್ಲಿ ಬೆರೆಸಿ ನಂತರ ಸೋಂಕಿತ ಪ್ರದೇಶಗಳಿಗೆ ಸಿಂಪಡಿಸಲಾಗುತ್ತದೆ. ಉತ್ಪಾದನೆಯನ್ನು ಕಡಿಮೆ ಮಾಡುವ, ಅಪಾಯಕಾರಿ ಕೀಟಗಳನ್ನು ಕೊಲ್ಲಲು  ಬಳಸಲಾಗುತ್ತದೆ. ಬೆಳೆ ಬೆಳವಣಿಗೆಯ ಸಮಯದಲ್ಲಿ   ಸಸ್ಯಗಳಿಗೆ ರಸಗೊಬ್ಬರಗಳು ಮತ್ತು ಕೀಟನಾಶಕಗಳಂತಹ ದ್ರವಗಳನ್ನು ಸಿಂಪಡಿಸಲು  ಇದನ್ನು ಬಳಸಲಾಗುತ್ತದೆ.

ಈ ಸ್ಪ್ರೇಯರ್, ಬಳಕೆದಾರರ ಆದ್ಯತೆಗಳ ಪ್ರಕಾರ ಒತ್ತಡ (ಪ್ರೆಜರ್)ವನ್ನು ನಿಯಂತ್ರಿಸಲು ರೇಗುಲೇಟರ್ ಅನ್ನು ಹೊಂದಿದೆ. ನೆಪ್ಚೂನ್ ನ್ಯಾಪ್‌ಸಾಕ್ ಸ್ಪ್ರೇಯರ್ ಅನ್ನು ಅಧಿಕ ಸಾಮರ್ಥ್ಯದ ಪಾಲಿಥಿಲೀನ್ ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದೆ, ಇದು ತುಕ್ಕು ನಿರೋಧಕವಾಗಿದೆ. ಈ ಸ್ಪ್ರೇ ಪಂಪ್ ,ಹ್ಯಾಂಡಲ್ ಅನ್ನು ಹೊಂದಿದ್ದು, ಇದನ್ನು ಬಳೆಕೆದಾರರ ಸೌಕರ್ಯಕ್ಕಾಗಿ ವಿನ್ಯಾಸಗೊಳಿಸಲಾಗಿದೆ. 

ನೆಪ್ಚೂನ್ ಬಿ ಎಸ್ 13+ (ಪ್ಲಸ್) ಡಬಲ್ ಮೋಟರ್‌ ಬ್ಯಾಟರಿ ಚಾಲಿತ ಸ್ಪ್ರೇಯರ್ ನ ವಿಶೇಷತೆಗಳು : 

  • ಬಳಕೆದಾರರ ಕೈಪಿಡಿ – ಇದರಲ್ಲಿ ನಾವು ಸ್ಪ್ರೇಯರ್ ಯನ್ನು ಹೇಗೆ ಬಳಸಬೇಕು  ಹಾಗೂ ಸ್ಪ್ರೇಯರ್ ನ  ವಿವಿಧ ಭಾಗಗಳ ಬಗ್ಗೆ ಎಲ್ಲಾ ವಿವರಗಳನ್ನುಓದಿ ತಿಳಿಯಬಹುದು. 
  • ಈ ಸ್ಪ್ರೇಯರ್ 20 ಲೀಟರ್ ಸಾಮರ್ಥ್ಯವನ್ನು ಹೊಂದಿದೆ. 
  • ಈ ಸ್ಪ್ರೇಯರ್ ಡಬಲ್ ಮೋಟರ್ ಬ್ಯಾಟರಿಯನ್ನು ಹೊಂದಿದೆ . 
  • ಈ ಸ್ಪ್ರೇಯರ್  ಪವರ್ ಸಾಕೆಟ್ ಅಥವಾ ಚಾರ್ಜಿಂಗ್ ಸಾಕೆಟ್ ಹೊಂದಿದೆ . 
  • ಪ್ರೆಜರ್ ರೇಗುಲೇಟರ್– ಇದು ಹೊರಹೋಗುವ ಸ್ಪ್ರೇ ಪರಿಮಾಣವನ್ನು ನಿಯಂತ್ರಿಸುತ್ತದೆ. 
  • ಫಿಲ್ಟರ್– ಸ್ಪ್ರೇ ನೀರಿನಿಂದ ದೂಳು ಮತ್ತು ಜಲ್ಲಿಕಲ್ಲುಗಳನ್ನು ಫಿಲ್ಟರ್ ಮಾಡುತ್ತದೆ. 
  • ಸ್ಪ್ರೇ ಲ್ಯಾನ್ಸ್ ಪೈಪ್ – ಎಕ್ಸ್ಟ್ರಾ ಲ್ಯಾನ್ಸ್‌ ಹೊಂದಿರುತ್ತದೆ, ವಿಶೇಷವಾಗಿ ಪವರ್ ಸ್ಪ್ರೇ ಗೆ  ಬಳಸಲಾಗುತ್ತದೆ . 
  • ಹೊಸ್ ಪೈಪ್ ಅಥವಾ ಔಟ್ಲೆಟ್ ಪೈಪ್ ಅನ್ನು ಹೊಂದಿದೆ.
  • ಟ್ರಿಗರ್– ಇವೆಲ್ಲಾ ವಿವಿಧ ರೀತಿಯ ನಳಿಕೆಗಳು ಅಥವಾ ನಾಝಲ್ಸ್ ಅಂತ ಹೇಳಬಹುದು. 
  • ಸ್ಪ್ರೇಯರ್ ಅನ್ನು ಚಾರ್ಜ್ ಮಾಡಲು ಚಾರ್ಜರ್ ಇರುತ್ತದೆ
  • ಈ ಎಲ್ಲಾ ಭಾಗಗಳು ಅಥವಾ ಪಾರ್ಟ್ಸ್ , ಸ್ಪ್ರೇಯರ್ ಜೊತೆಗೆ  ಲಭ್ಯವಿರುತ್ತದೆ. 

ಸ್ಪ್ರೇಯರ್ ಅನ್ನು ಜೋಡಿಸೋಣ ಬನ್ನಿ : 

  • ಈ ಹೊಸ್ ಪೈಪ್ ಅನ್ನು ಸ್ಪ್ರೇಯರ್ ನ  ಔಟ್ಲೆಟ್ಗೆ ಕನೆಕ್ಟ್ ಮಾಡಬೇಕು.  
  • ಹೊಸ್ ಪೈಪ್ ನ  ಮತ್ತೊಂದು ತುದಿಯನ್ನು ಟ್ರಿಗರ್ ಗೆ ಕನೆಕ್ಟ್ ಮಾಡಬೇಕು. 
  • ಟ್ರಿಗರ್ ಸಹ ಆನ್/ಆಫ್ ಸ್ವಿಚ್ ಹೊಂದಿರುತ್ತದೆ, ಅದನ್ನು ಬಳಸುವುದು ಸಹ ಸುಲಭ. 
  • ಟ್ರಿಗರ್ ನ ಮತ್ತೊಂದು ತುದಿಯನ್ನು ಸ್ಪ್ರೇ ಲ್ಯಾನ್ಸ್ ಪೈಪ್ ಗೆ ಕನೆಕ್ಟ್ ಮಾಡಬೇಕು. 
  • ನಂತರ ಲ್ಯಾನ್ಸ್ ಅನ್ನು ನಾಝಲ್ ಗೆ ಕನೆಕ್ಟ್ ಮಾಡಬೇಕು.
  • ನಾಝಲ್ ಗಳಲ್ಲಿ ಮತ್ತೆ ಹಲವು ವಿಧಗಳಿವೆ.  ಅವಶ್ಯಕತೆಗೆ ಅನುಗುಣವಾಗಿ ಬಳಸಬಹುದು. 
  • ಸಾಮಾನ್ಯವಾಗಿ ಬಳಸವುದು ಎಂದರೆ ಫ್ಲವರ್ ಸ್ಪ್ರೇ ನಾಝಲ್. 
  • ಕೆಲವು ಇತರ ರೀತಿಯ ನಾಝಲ್ ಗಳು ಇವೆ , ಅವುಗಳನ್ನು ಅವಶ್ಯಕತೆಗಳಿಗೆ ಅನುಗುಣವಾಗಿ ಬಳಸಬಹುದು. 

ನಿರ್ಣಯ: 

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗೆ  ನೀಡಲಾದ ಲಿಂಕ್ ಗಳನ್ನು  ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ.

spot_img

Read More

Stay in Touch

Subscribe to receive latest updates from us.

Related Articles