ಕೃಷಿ ಸ್ಪ್ರೇಯರ್ಎಂದರೆ ದ್ರವವನ್ನು ಚಿಕ್ಕ ಚಿಕ್ಕ ಗಾತ್ರದ ಹನಿಗಳಾಗಿ ಒಡೆಯುವುದು ಮತ್ತು ಅವುಗಳನ್ನು ಎಲೆಗಳ ಮೇಲೆ ಏಕರೂಪವಾಗಿ ಸಿಂಪಡಿಸುವುದು. ಅತಿಯಾದ ಕೀಟನಾಶಕದ ಬಳಕೆಯನ್ನು ತಪ್ಪಿಸಲು ಹಾಗೂ ಬಳಕೆಯ ಪ್ರಮಾಣವನ್ನು ನಿಯಂತ್ರಿಸುವುದು ಮತ್ತೊಂದು ಮುಖ್ಯ ಉದ್ದೇಶವಾಗಿದೆ. ಈ ವಿಡಿಯೋದಲ್ಲಿ ನಾವು ಹೈ ಪ್ರೆಷರ್ ನ್ಯಾಪ್ಸಾಕ್ ಸ್ಪ್ರೇಯರ್ ಬಗ್ಗೆ ತಿಳಿಯೋಣ.
ಈ ಸ್ಪ್ರೇ ಪಂಪ್, ರಬ್ಬರ್-ಪ್ಯಾಡ್ ನಿಂದ ಮಾಡಲ್ಪಟ್ಟ ಭುಜದ ಪಟ್ಟಿಯೊಂದಿಗೆ ಹೆಚ್ಚು ಸೌಕರ್ಯವನ್ನು ನೀಡುತ್ತದೆ. ಟ್ಯಾಂಕ್ ಮತ್ತು ಹ್ಯಾಂಡಲ್ ಅನ್ನು HDPE ನಿಂದ ಮಾಡಲಾಗಿದ್ದು, ಇದು ಸ್ಪ್ರೇಯರ್ ನ ಬಾಳಿಕೆ ದೀರ್ಘಕಾಲ ಬರುವಂತೆ ಮಾಡುತ್ತದೆ. ಸ್ಪ್ರೇ ನೀರಿನಿಂದ ದೂಳು ಮತ್ತು ಜಲ್ಲಿಕಲ್ಲುಗಳನ್ನು ಫಿಲ್ಟರ್ ಮಾಡಲು, ಟ್ಯಾಂಕ್ ಫಿಲ್ಟರ್ ಅನ್ನು ಸಹ ಹೊಂದಿದೆ. ರೇಗುಲೇಟರ್ ಸಹಾಯದಿಂದ ಒತ್ತಡ(ಪ್ರೆಜರ್)ವನ್ನು ಅವಶ್ಯಕತೆಗಳಿಗೆ ತಕ್ಕಂತೆ ಸರಿಹೊಂದಿಸಿಕೊಳ್ಳಬಹುದು.
ಹೈ ಪ್ರೆಷರ್ ನ್ಯಾಪ್ಸಾಕ್ ಸ್ಪ್ರೇಯರ್ ನ ವಿಶೇಷತೆಗಳು :
- ಬಳಕೆದಾರರ ಕೈಪಿಡಿ – ಇದರಲ್ಲಿ ನಾವು ಸ್ಪ್ರೇಯರ್ ಯನ್ನು ಹೇಗೆ ಬಳಸಬೇಕು ಹಾಗೂ ಸ್ಪ್ರೇಯರ್ ನ ವಿವಿಧ ಭಾಗಗಳ ಬಗ್ಗೆ ಎಲ್ಲಾ ವಿವರಗಳನ್ನುಓದಿ ತಿಳಿಯಬಹುದು.
- ಈ ಸ್ಪ್ರೇಯರ್ 16 ಲೀಟರ್ ಸಾಮರ್ಥ್ಯವನ್ನು ಹೊಂದಿದೆ
- ಫಿಲ್ಟರ್- ಇದು ಸ್ಪ್ರೇ ನೀರಿನಿಂದ ದೂಳು ಮತ್ತು ಜಲ್ಲಿಕಲ್ಲುಗಳನ್ನು ಫಿಲ್ಟರ್ ಮಾಡುತ್ತದೆ
- ಇದು ಸ್ಪ್ರೇ ಲ್ಯಾನ್ಸ್ ಪೈಪ್ ಅನ್ನು ಹೊಂದಿದೆ.
- ಹೊಸ್ ಪೈಪ್ ಅಥವಾ ಔಟ್ಲೆಟ್ ಪೈಪ್ ಅನ್ನು ಹೊಂದಿದೆ.
- ಇವೆಲ್ಲಾ ವಿವಿಧ ರೀತಿಯ ನಳಿಕೆಗಳು ಅಥವಾ ನಾಝಲ್ಸ್ ಅಂತ ಹೇಳಬಹುದು
ಈಗ ಸ್ಪ್ರೇಯರ್ ಅನ್ನು ಜೋಡಿಸೋಣ
- ಹೊಸ್ ಪೈಪ್ ಅನ್ನು ಸ್ಪ್ರೇಯರ್ ನ ಔಟ್ಲೆಟ್ಗೆ ಕನೆಕ್ಟ್ ಮಾಡಬೇಕು.
- ಹೊಸ್ ಪೈಪ್ ನ ಮತ್ತೊಂದು ತುದಿಯನ್ನು ಟ್ರಿಗರ್ ಗೆ ಕನೆಕ್ಟ್ ಮಾಡಬೇಕು.
- ಟ್ರಿಗರ್ ಸಹ ಆನ್/ಆಫ್ ಸ್ವಿಚ್ ಹೊಂದಿರುತ್ತದೆ, ಅದನ್ನು ಬಳಸುವುದು ಸಹ ಸುಲಭ.
- ಟ್ರಿಗರ್ ನ ಮತ್ತೊಂದು ತುದಿಯನ್ನು ಸ್ಪ್ರೇ ಲ್ಯಾನ್ಸ್ ಪೈಪ್ ಗೆ ಕನೆಕ್ಟ್ ಮಾಡಬೇಕು.
- ನಂತರ ಲ್ಯಾನ್ಸ್ ಅನ್ನು ನಾಝಲ್ ಗೆ ಕನೆಕ್ಟ್ ಮಾಡಬೇಕು.ನಾಝಲ್ ಗಳಲ್ಲಿ ಮತ್ತೆ ಹಲವು ವಿಧಗಳಿವೆ, ಅವಶ್ಯಕತೆಗೆ ಅನುಗುಣವಾಗಿ ಬಳಸಬಹುದು.
- ಸಾಮಾನ್ಯವಾಗಿ ಬಳಸವುದು ಎಂದರೆ ಫ್ಲವರ್ ಸ್ಪ್ರೇ ನಾಝಲ್.
- ಕೆಲವು ಇತರ ರೀತಿಯ ನಾಝಲ್ ಗಳು ಇವೆ , ಅವುಗಳನ್ನು ಅವಶ್ಯಕತೆಗಳಿಗೆ ಅನುಗುಣವಾಗಿ ಬಳಸಬಹುದು.
- ಈಗ ನಮ್ಮ ಸ್ಪ್ರೇಯರ್ ಬಳಸಲು ಸಿದ್ಧವಾಗಿದೆ.
ನಿರ್ಣಯ:
ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗೆ ನೀಡಲಾದ ಲಿಂಕ್ ಗಳನ್ನು ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ.