HomeNewsNational Agri Newsಭಾರತೀಯ ಕೃಷಿಯನ್ನು ಕ್ರಾಂತಿಗೊಳಿಸುವುದು: ಕೃಷಿ ಮೂಲಭೂತ ಸೌಕರ್ಯ ನಿಧಿಯ (AIF) ಪರಿಣಾಮ

ಭಾರತೀಯ ಕೃಷಿಯನ್ನು ಕ್ರಾಂತಿಗೊಳಿಸುವುದು: ಕೃಷಿ ಮೂಲಭೂತ ಸೌಕರ್ಯ ನಿಧಿಯ (AIF) ಪರಿಣಾಮ

ಪರಿಚಯ

   ಕೃಷಿ ಮೂಲಭೂತ ಸೌಕರ್ಯ ನಿಧಿ (AIF) ಜುಲೈ 8, 2020 ರಂದು ಸ್ಥಾಪನೆಯಾದ ಸರ್ಕಾರಿ ಕಾರ್ಯಕ್ರಮವಾಗಿದ್ದು, ಬೆಳೆ ಕಟಾವಿನ ನಂತರದ ನಿರ್ವಹಣೆಗೆ ಹಾಗೂ ಸಮುದಾಯ ಆಧಾರಿತ ಕೃಷಿಗೆ ಸುಮಾರು 1 ಲಕ್ಷ ಕೋಟಿ ಬಜೆಟ್‌ಅನ್ನು 2025-26 ರ ಆರ್ಥಿಕ ವರ್ಷದೊಳಗೆ ಖರ್ಚು ಮಾಡುವಂತೆ ನೀಡಲಾಗಿದೆ. ಪ್ರಸ್ತುತ ಮಾಹಿತಿಯಂತೆ, ಈ ಕಾರ್ಯಕ್ರಮವು ಕೃಷಿ ಮೂಲಸೌಕರ್ಯ ಉಪಕ್ರಮಗಳಿಗಾಗಿ ಸುಮಾರು 30,000 ಕೋಟಿಗಳನ್ನು ಸಂಗ್ರಹಿಸಿದೆ, ಇದರಲ್ಲಿ ಸುಮಾರು 15000 ಕೋಟಿ ಮೊತ್ತವು  AIFನಿಂದ ನಿಗದಿಪಡಿಸಲಾಗಿದೆ. AIF, ಶೇಕಡ 3 ಪ್ರತಿಷತ ಬಡ್ಡಿ ರಿಯಾಯಿತಿ ಸಹಾಯದೊಂದಿಗೆ, ಖಚಿತ ಸಾಲ ಬೆಂಬಲ ಹಾಗೂ  ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಇತರೆ ಯೋಜನೆಗಳೊಂದಿಗೆ ರೈತರಿಗೆ, ಕೃಷಿ ಉದ್ಯಮಿಗಳಿಗೆ ಹಾಗೂ ಕೃಷಿ ವಲಯದ ಪಾಲುದಾರರಿಗೆ ಬೆಂಬಲಿಸಲಿದೆ.

ಅವಲೋಕನ

ಈ ಕಾರ್ಯಕ್ರಮವು ಕೃಷಿ ಮೂಲಸೌಕರ್ಯ ಉಪಕ್ರಮಗಳಿಗಾಗಿ ಸುಮಾರು 30,000 ಕೋಟಿಗಳನ್ನು ಸಂಗ್ರಹಿಸಿದೆ, ಇದರಲ್ಲಿ ಸುಮಾರು 15000 ಕೋಟಿ ಮೊತ್ತವು  AIFನಿಂದ ನಿಗದಿಪಡಿಸಲಾಗಿದೆ.ಸದರಿ ಯೋಜನೆಯು ರೈತರಿಗೆ, ಕೃಷಿ ಉದ್ಯಮಿಗಳಿಗೆ ಹಾಗೂ ರೈತಸಂಘಗಳಿಗೆ,  ಬಡ್ಡಿ ರಿಯಾಯಿತಿ ನೀಡುವ ಮೂಲಕ, ಖಚಿತ ಸಾಲ ಬೆಂಬಲ ನೀಡುವ ಮೂಲಕ ಹಾಗೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಇತರೆ ಯೋಜನೆಗಳ ಸಹಯೋಗದಿಂದ ಉತ್ತಮ ಅವಕಾಶ ಕಲ್ಪಿಸಿದೆ. ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಯೋಗೇಶ್ ಸಿ. ಬಿ. ಮತ್ತು ಮಧ್ಯ ಪ್ರದೇಶದ ಜಬಲ್‌ಪುರ ಜಿಲ್ಲೆಯ ಆನಂದ್ ಪಟೇಲ್ ಎಂಬವರು ಸದರಿ ಯೋಜನೆಯ 20 ಸಾವಿರ ಫಲಾನುಭವಿಗಳಲ್ಲಿ ಪ್ರಮುಖರಾಗಿದ್ದಾರೆ. ಯೋಗೇಶ್ ಸಿ. ಬಿ. ರವರು  ಪ್ರಾಥಮಿಕ ತರಕಾರಿ ಸಂಸ್ಕರಣಾ ಕೇಂದ್ರ ಮಾಡುವಲ್ಲಿ  ಹಾಗೂ ಆನಂದ್ ಪಟೆಲ್ ರವರು ಸ್ಥಳೀಯರಿಗೆ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುವ ಹೈಟೆಕ್ ಹಬ್ ಅನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಯೋಜನೆಯು ಭಾರತದ ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸುವ ಮೂಲಕ, ರೈತರ ಫಸಲಿಗೆ ಉತ್ತಮ ಬೆಲೆಯನ್ನು ಕಂಡುಕೊಳ್ಳುವಲ್ಲಿ ಪ್ರಯೋಜನಕಾರಿಯಾಗಿದೆ.

ಸದರಿ ಮಾಹಿತಿಯು ಪ್ರತ್ಯೇಕವಾಗಿ ಕೃಷಿಕರಿಗೆ, ಕೃಷಿ ಉದ್ಯಮೆದಾರರಿಗೆ ಹಾಗು ರೈತ ಸಂಘಗಳಿಗೆ ಉಪಯೋಗವಾಗಲಿದ್ದು, ಇವರಿಗೆ ಕೃಷಿ ವಲಯದಲ್ಲಿ ಮೂಲಭೂತಸೌಕರ್ಯಗಳನ್ನು ಸ್ಥಾಪಿಸಲು ಮತ್ತು ಆಧುನೀಕರಿಸಲು ಆರ್ಥಿಕ ಬೆಂಬಲವನ್ನು ಒದಗಿಸಿದೆ. ಪ್ರಸ್ತುತ ಯೋಜನೆಯು ಸಂಘಗಳಿಗೆ ಕೊಯ್ಲಿನ ನಂತರದ  ನಿರ್ವಹಣೆ ಕಾರ್ಯಗಳಿಗೆ ಮೂಲಸೌಕರ್ಯನಿಧಿ ಹಾಗೂ ಸಮುದಾಯ ಕೃಷಿಗೆ ಆರ್ಥಿಕ ಮೌಲ್ಯಕ್ಕೆ ಸರಿಹೊಂದುವ ಗುರಿಯನ್ನು ನೀಡಿ, ಸದರಿಯವರಿಗೆ ಬಡ್ಡಿ ರಿಯಾಯಿತಿ, ಕ್ರೆಡಿಟ್ ಗ್ಯಾರಂಟಿ ಬೆಂಬಲ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಇತರೆ ಯೋಜನೆಗಳ ಒಮ್ಮುಖದ ಫಲವನ್ನು ನೀಡುವ ನಿಟ್ಟಿನಲ್ಲಿ ಸಹಾಯ ಮಾಡಲಿದೆ.  

ಪ್ರಮುಖ ಮಾಹಿತಿ

ü  ಕೃಷಿ ಮೂಲಭೂತಸೌಕರ್ಯ ನಿಧಿ (AIF) ಯೋಜನೆಯು ಕೇಂದ್ರ ಸರ್ಕಾರ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು, ಕೃಷಿ ವಲಯದ ಮೂಲಭೂತಸೌಕರ್ಯಗಳನ್ನು ಸೃಷ್ಟಿಸುವ ಹಾಗೂ ಆಧುನೀಕರಿಸುವ ಗುರಿ ಹೊಂದಿದೆ.

ü  ಈ ಯೋಜನೆಯು ರೈತರಿಗೆ, ಕೃಷಿ ಉದ್ಯಮಿಗಳಿಗೆ ಹಾಗೂ ರೈತ ಸಂಘಗಳಿಗೆ,  ಬಡ್ಡಿ ರಿಯಾಯಿತಿ ನೀಡುವ ಮೂಲಕ, ಖಚಿತ ಸಾಲ ಬೆಂಬಲ ನೀಡುವ ಮೂಲಕ ಹಾಗೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಇತರೆ ಯೋಜನೆಗಳ ಸಹಯೋಗದಿಂದ ಅಧಿಕ ಆರ್ಥಿಕ ಬೆಂಬಲವನ್ನು ನೀಡಿದೆ.

ü  AIF ಕಟಾವಿನ ನಂತರದ ನಷ್ಟವನ್ನು  ಕಡತಗೊಳಿಸಲು,  ಆಧುನಿಕ ಕೃಷಿ ಅಳವಡಿಸಿ ಮುಂದೆ ರೈತರ ಫಸಲಿಗೆ ಉತ್ತಮ ಬೆಲೆ ಒದಗಿಸುವ ನಿಟ್ಟಿನಲ್ಲಿದೆ.

ü  ಈ ಯೋಜನೆಯು ಸಹಸ್ರಾರು ರೈತರಿಗೆ ಹಾಗೂ ಸಂಘಗಳಿಗೆ, ಪ್ರಾಥಮಿಕ ತರಕಾರಿ ಸಂಸ್ಕರಣಾ ಕೇಂದ್ರ ಸ್ಥಾಪಿಸುವಲ್ಲಿ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುವ ಹೈಟೆಕ್ ಹಬ್ ಅನ್ನು ಸ್ಥಾಪಿಸುವಲ್ಲಿ ಪ್ರಯೋಜನಕಾರಿಯಾಗಿದೆ.

ü  ಸದರಿ ಯೋಜನೆಯು ಕೃಷಿ ಕ್ಷೇತ್ರದ ನಿರ್ದಿಷ್ಟ ಗುಂಪುಗಳನ್ನು ಆಯ್ಕೆಮಾಡಿ, ಕೃಷಿ ವಲಯದಲ್ಲಿ ಅವರ ಅಭಿವೃದ್ಧಿಯನ್ನು ಸೃಷ್ಟಿಸುವಲ್ಲಿ ಹಾಗೂ ಪ್ರತ್ಯೇಕವಾಗಿ ಅವರ ಜೀವನ ಸಾಗಿಸುವಲ್ಲಿ ನೇರ ಪರಿಣಾಮ ಬೀರುವ ಉದ್ದೇಶವನ್ನು ಹೊಂದಿದೆ.

ತೀರ್ಮಾನ-

         ಪ್ರಸ್ತುತ ಲೇಖನವು, ಸರ್ಕಾರ ಪ್ರಾಯೋಜಿತ ಕಾರ್ಯಕ್ರಮವಾದ ಕೃಷಿ ಮೂಲಭೂತಸೌಕರ್ಯ ನಿಧಿಯ (AIF) ಪಾತ್ರವನ್ನು ಸಾರಿ,  ಭಾರತ ದೇಶದ ಕೃಷಿ ಕ್ಷೇತ್ರದಲ್ಲಿ ಮೂಲಭೂತಸೌಕರ್ಯವನ್ನು ಸೃಷ್ಟಿಸುವ ಹಾಗೂ ಆಧುನೀಕರಣಗೊಳಿಸುವ ಧ್ಯೇಯ ಹೊಂದಿದೆ. ಪ್ರಸ್ತುತ ಯೋಜನೆಯು ಕೃಷಿಕರಿಗೆ, ಕೃಷಿ ಉದ್ಯಮೆದಾರರಿಗೆ ಹಾಗು ರೈತ ಸಂಘಗಳಿಗೆ ಬಡ್ಡಿ ರಿಯಾಯಿತಿ ನೀಡುವ ಮೂಲಕ, ಖಚಿತ ಸಾಲ ಬೆಂಬಲ ನೀಡುವ ಮೂಲಕ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇತರೆ ಯೋಜನೆಗಳ ವಿನಿಮಯ, ಮುಂತಾದ ಹಲವಾರು ವಿಧಗಳ ಮೂಲಕ ಆರ್ಥಿಕ ಬೆಂಬಲವನ್ನು ನೀಡಿದೆ. ಪ್ರತ್ಯೇಕವಾಗಿ AIF ಕಾರ್ಯಕ್ರಮವು ಕೃಷಿ ವಲಯದ ದಕ್ಷತೆ ಹಾಗೂ ಲಾಭವನ್ನು ಸುಧಾರಿಸುವ ನಿಟ್ಟಿನಲ್ಲಿ, ರೈತರ  ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ನೀಡಿ  ಆದಾಯ ಹೆಚ್ಚಿಸುವ ಗುರಿ ಇಟ್ಟುಕೊಂಡಿದೆ.  ಎಲ್ಲಕ್ಕೂ ಹೆಚ್ಚಾಗಿ ಕೃಷಿ ಮೂಲಭೂತಸೌಕರ್ಯ ನಿಧಿಯು, ಕೃಷಿ ಕ್ಷೇತ್ರದಲ್ಲಿ ಸುಸ್ಥಿರವಾದ ಹಾಗೂ ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸುವ ಪ್ರಮುಖ ಉಪಕ್ರಮವಾಗಿದೆ.

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು