ಪರಿಚಯ:
2023-24 ನೇ ಆರ್ಥಿಕ ಸಾಲಿನ ಭಾರತೀಯ ಬಜೆಟ್ ಅಧಿವೇಶನದಲ್ಲಿ ಮೀನುಗಾರಿಕಾ ಇಲಾಖೆಗೆ ರೂ. 2248.77 ಕೋಟಿಗಳ ಗಮನಾರ್ಹ ಮೊತ್ತವನ್ನು ಮೀಸಲಾಗಿದ್ದು, ಹಿಂದಿನ ಸಾಲಿಗೆ ಹೋಲಿಸಿದಾಗ ಶೇಕಡ 38.45 ರಷ್ಟು ಹೆಚ್ಚಳ ಕಂಡು ಬಂದಿದೆ. ಮೀನುಗಾರಿಕೆ ವಲಯದಲ್ಲಿ ಹೆಚ್ಚಿನ ಆದಾಯ ಸೃಷ್ಟಿಸಲು ಹಣಕಾಸು ಸಚಿವರು, ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಾಹ್–ಯೋಜನಾ (PM-MKSSY) ಎಂಬ ಹೊಸ ಉಪ ಯೋಜನೆಯನ್ನು ಘೋಷಿಸಿದರು. ಇದರ ಜೊತೆಗೆ ಪ್ರಾಥಮಿಕ ಸಹಕಾರ ಸಂಘಗಳ ಅಭಿವೃದ್ಧಿ, ಸಂಸ್ಥೆಯ ಹಣಕಾಸು ಹೆಚ್ಚಿಸುವುದು, ಆಮದು ಸುಂಕವನ್ನು ಕಡತಗೊಳಿಸುವುದು ಹಾಗೂ ಆವಿಷ್ಕಾರಗಳನ್ನು ಉತ್ತೇಜಿಸುವುದು ಬಜೆಟ್ ನ ಉದ್ದೇಶವಾಗಿದೆ.
ಅವಲೋಕನ:
2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬಜೆಟ್ ಅಧಿವೇಶನದಲ್ಲಿ ಮೀನುಗಾರಿಕಾ ಇಲಾಖೆಗೆ ಗಮನಾರ್ಹ ಪ್ರಮಾಣದ ಮೊತ್ತವನ್ನು ಮೀಸಲಿಟ್ಟಿದೆ. ಮೀನುಗಾರಿಕಾ ಇಲಾಖೆಗೆ ರೂ. 2248.77 ಕೋಟಿಗಳ ಹಂಚಿಕೆಯು, ಇಲ್ಲಿಯವರೆಗೆ ಒದಗಿಸಿದ ಅತ್ಯಧಿಕ ವಾರ್ಷಿಕ ಬಜೆಟ್ ಬೆಂಬಲ ಆಗಿದ್ದು, ಸುಮಾರು ಹಿಂದಿನ ವರ್ಷಕ್ಕಿಂತ 38.45% ಹೆಚ್ಚಳವನ್ನು ಸೂಚಿಸಿದೆ. ಅದಲ್ಲದೇ ಹಣಕಾಸು ಸಚಿವರು PM-MKSSY ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದು, ಸುಮಾರು 6,000 ಕೋಟಿಗಳ ಹೂಡಿಕೆಯೊಂದಿಗೆ ಮೀನುಗಾರರಿಗೆ, ಮತ್ಸ್ಯ ಮಾರಾಟಗಾರರಿಗೆ ಹಾಗೂ ಸದರಿ ಉದ್ಯಮದಲ್ಲಿ ಸಣ್ಣ ವ್ಯವಹಾರಗಳನ್ನು ಉತ್ತೇಜಿಸುವ ಮುಖಾಂತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಬಜೆಟ್ ಅಧಿವೇಶನದಲ್ಲಿ ಮೀನುಗಾರಿಕೆ ಸಹಕಾರ ಸಂಘಗಳು ಸೇರಿದಂತೆ ಪ್ರಾಥಮಿಕ ಸಹಕಾರ ಸಂಘಗಳ ರಚನೆ ಹಾಗೂ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸೇರಿದಂತೆ ಕೃಷಿ ಮತ್ತು ಇತರೆ ಸಂಬಂಧಿತ ವಲಯಗಳಿಗೆ ಆದಾಯ ಉತ್ಪತ್ತಿ ಆಗುವ ಬಗ್ಗೆ ಒತ್ತು ನೀಡಲಾಯಿತು. ಇದರ ಜೊತೆಗೆ ಸಾಲ, ಸಾಧನಗಳು ಮತ್ತು ಹೊಸ ನಾವೀನ್ಯತೆ ಮತ್ತು ರಫ್ತುಗಳನ್ನು ಉತ್ತೇಜಿಸುವ ಮೂಲಕ ಮೀನುಗಾರಿಕೆ ಮತ್ತು ಜಲಚರಗಳ ವಲಯದ ಏಳಿಗೆಗೆ ಬಜೆಟ್ ನಾಂದಿಯಾಗಿದೆ.
2023-24ನೇ ಸಾಲಿನ ಬಜೆಟ್ನಲ್ಲಿ, ಮೀನುಗಾರಿಕೆ ಇಲಾಖೆಗೆ ಅನುದಾನ ಮೀಸಲಿಟ್ಟಿರುವುದರಿಂದ ಮೀನು ಸಾಕಾಣಿಕೆಯಲ್ಲಿ ಹೆಚ್ಚಿನ ಲಾಭ ಪ್ರಾಪ್ತಿಯಾಗಲಿದೆ. ಮೀನುಗಾರಿಕಾ ಸಹಕಾರ ಸಂಘಗಳು, ಮೀನುಗಾರಿಕಾ ಪ್ರಾಥಮಿಕ ಸಹಕಾರ ಸಂಘಗಳ ರಚನೆಯು ಮೀನುಗಾರಿಕಾ ಕ್ಷೇತ್ರಕ್ಕೆ ಔಪಚಾರಿಕ ರಚನೆಯನ್ನು ಒದಗಿಸುತ್ತದೆ. ರೈತರಿಗೆ ಉತ್ಪಾದನೆ ಹಾಗೂ ಕೊಯ್ಲಿನ ನಂತರದ ಚಟುವಟಿಕೆಗಳನ್ನು ಸಂಘಟಿತ ರೀತಿಯಲ್ಲಿ ಕೈಗೊಳ್ಳುವಂತೆ ಸಹಾಯ ಮಾಡಿದೆ. ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ–ಯೋಜನಾ(PM-MKSSY) ಎಂಬ ಹೊಸ ಉಪ ಯೋಜನೆಯು, ಮೀನುಗಾರಿಕಾ ಉದ್ಯಮದಲ್ಲಿ ಮೀನುಗಾರರು, ಮೀನು ವ್ಯಾಪಾರಿಗಳು ಹಾಗೂ ಸೂಕ್ಷ್ಮ ಮತ್ತು ಸಣ್ಣ ವ್ಯಾಪಾರಗಳ ಆದಾಯವನ್ನು ಹೆಚ್ಚಿಸುತ್ತದೆ. ಸದರಿ ಯೋಜನೆಯು ಮೀನುಗಾರಿಕೆಯಲ್ಲಿ ಔಪಚಾರಿಕತೆಯನ್ನು ಸೃಷ್ಟಿಸಲು ಡಿಜಿಟಲ್ ಸೇರ್ಪಡೆ, ಸಾಂಸ್ಥಿಕ ಹಣಕಾಸು ಪ್ರವೇಶ ಮೀನುಗಾರಿಕೆಯಲ್ಲಿ ಕಂಡು ಬರುವ ತೊಂದರೆಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಮುಂದೂವರಿದು, 2023-24ನೇ ಸಾಲಿನ ಬಜೆಟ್ ಮೀನುಗಾರಿಕೆ ಮತ್ತು ಜಲಕೃಷಿಯಲ್ಲಿ ಹೊಸ ತಿರುವಿನ ಬೆಳವಣಿಗೆಯನ್ನು ಸಾಧಿಸಲಿದೆ. ಹಾಗೆಯೇ, ಸಂಸ್ಥೆಯ ಆರ್ಥಿಕ ಸುಧಾರಣೆ, ಅಪಾಯ ಕಡಿಮೆಗೊಳಿಸುವ ಸಾಧನಗಳು, ಮಾರುಕಟ್ಟೆಯ ವಿಸ್ತರಣೆ ಮತ್ತು ಹೊಸ ನಾವೀನ್ಯತೆಗಳ ಪ್ರೋತ್ಸಾಹಕ್ಕೆ ಹೆಜ್ಜೆಯಿಟ್ಟಿದೆ.
ಪ್ರಮುಖ ಅಂಶಗಳು:
- ಕೇಂದ್ರ ಹಣಕಾಸು ಸಚಿವರು 2023-24ನೇ ಆರ್ಥಿಕ ಸಾಲಿನ ಬಜೆಟ್ ಅಧಿವೇಶನದಲ್ಲಿ ಮೀನುಗಾರಿಕಾ ಇಲಾಖೆಗೆ ರೂ. 2248.77 ಕೋಟಿಗಳ ಗಮನಾರ್ಹ ಮೊತ್ತವನ್ನು ಮೀಸಲಾಗಿದ್ದು, ಹಿಂದಿನ ಸಾಲಿಗೆ ಹೋಲಿಸಿದಾಗ ಶೇಕಡ 38.45 ರಷ್ಟು ಹೆಚ್ಚಿದೆ.
- ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಾಹ್-ಯೋಜನೆಯು (PM-MKSSY) ಮೀನುಗಾರಿಕಾ ವಲಯದಲ್ಲಿ ಆದಾಯವನ್ನು ಹೆಚ್ಚಿಸಲು ರೂ. 6,000 ಕೋಟಿ ಹೂಡಿಕೆ ಮಾಡುವ ನಿಟ್ಟಿನಲ್ಲಿದೆ.
- ಬಜೆಟಿನ ಭಾಷಣದಲ್ಲಿ ಪ್ರತಿ ಪಂಚಾಯತಿಗೆ ಮೀನುಗಾರಿಕಾ ಸಹಕಾರ ಸಂಘ ಸೇರಿದಂತೆ ಪ್ರಾಥಮಿಕ ಸಹಕಾರ ಸಂಘಗಳ ರಚನೆಗೆ ಅನುವು ಮಾಡಿದ್ದು ಔಪಚಾರಿಕಗೊಳಿಸಲು ಸಹಾಯ ಮಾಡಲಿದೆ.
- ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸೇರಿದಂತೆ ಕೃಷಿ ಮತ್ತು ಇತರೆ ಸಂಬಂಧಿತ ವಲಯದ ಆರ್ಥಿಕ ಗುರಿಯನ್ನು ರೂ.20 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ.
- ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಮತ್ತು ರಫ್ತುಗಳನ್ನು ಸುಧಾರಿಸಲು ಸೀಗಡಿ ಆಹಾರಕ್ಕೆ ಅಗತ್ಯವಿರುವ ಒಳಹರಿವು ಮತ್ತು ಜಲವಾಸಿ ಆಹಾರ ಪದಾರ್ಥಗಳ ಮೇಲೆ ಆಮದು ಸುಂಕವನ್ನು ಕಡಿಮೆ ಮಾಡಲಾಗಿದೆ.
- ಕೃತಕ ಬುದ್ಧಿಮತ್ತೆಗಾಗಿ(ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಭಾರತದಲ್ಲಿ ಮೂರು ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು,ಇದು ಮೀನು ಮಾರಾಟ ವ್ಯವಸ್ಥೆಯಲ್ಲಿ ಸುಧಾರಣೆಗೆ ಅವಕಾಶಗಳನ್ನು ನೀಡುತ್ತದೆ.
- ಸದರಿ ಬಜೆಟ್ ಅಧಿವೇಶನದಿಂದ ಮೀನುಗಾರಿಕೆ ಮತ್ತು ಜಲಚರಗಳ ವಲಯದಲ್ಲಿ ಸಾಂಸ್ಥಿಕ ಆದಾಯಕ್ಕೆ ಹೆಚ್ಚಿನ ಆಧ್ಯತೆ, ಅಪಾಯ ತಗ್ಗಿಸುವಿಕೆ, ಮಾರುಕಟ್ಟೆ ವಿಸ್ತರಣೆ ಮತ್ತು ನಾವೀನ್ಯತೆಯ ಮೂಲಕ ಶ್ರೀಘ್ರವಾದ ಬೆಳವಣಿಗೆಯನ್ನು ಉಪೇಕ್ಷಿಸಬಹುದು.
ತೀರ್ಮಾನ:
2023-24ನೇ ಸಾಲಿನ ಬಜೆಟ್ ಅಧಿವೇಶನವು, ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಕ್ಷೇತ್ರಕ್ಕೆ ಹೊಸ ಬೆಳವಣಿಗೆಯ ಯುಗವನ್ನು ನೀಡಲಿದೆ. ಸದರಿ ಅಧಿವೇಶನದಲ್ಲಿ ನೀಡಿರುವ ರೂ.2248.77 ಕೋಟಿಯ ಅನುದಾನವು, ಕಳೆದ ಸಾಲಿಗಿಂತ ಶೇಕಡ 38.45 ರಷ್ಟು ಹೆಚ್ಚಾಗಿದ್ದು, ಮೀನುಗಾರರ, ಮೀನು ಮಾರಾಟಗಾರ ಮತ್ತು ಸದರಿ ಸಣ್ಣ ವ್ಯಾಪಾರಿಗಳ ಆದಾಯವನ್ನು ಹೆಚ್ಚಿಸುತ್ತದೆ. ಅದಲ್ಲದೇ, ಹೊಸ ಉಪ ಯೋಜನೆಯಾದ ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ–ಯೋಜನೆಯು ಸದರಿ ಕ್ಷೇತ್ರದಲ್ಲಿ ಔಪಚಾರಿಕತೆಯನ್ನು ತರುತ್ತದೆ ಮತ್ತು ಸಾಂಸ್ಥಿಕ ಹಣಕಾಸನ್ನು ಅಧಿಕಗೊಳಿಸಿದೆ. ಸಹಕಾರ ಸಂಘಗಳ ರಚನೆಯಿಂದ ಮೀನುಗಾರರಿಗೆ ಉತ್ಪಾದನೆ ಮತ್ತು ಕೊಯ್ಲಿನ ನಂತರದ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಮಾಡಿದೆ. ಸದರಿ ಅನುದಾನವು ಕೃಷಿ ಮತ್ತು ಸಂಬಂಧಿತ ಕ್ಷೇತ್ರದಲ್ಲೂ ಪ್ರಯೋಜನಕರಿಯಾಗಲಿದೆ. ಸದರಿ ಮೀನುಗಾರಿಕೆ ವಲಯವು ಇನ್ನೂ ಹೆಚ್ಚು ಸಾಧನೆ ಮಾಡಲು ಹಾಗೂ ಬಡ ಸಮುದಾಯಗಳಿಗೆ ಒಂದು ಸುಸ್ಥಿರವಾದ ಜೀವನೋಪಾಯವನ್ನು ಒದಗಿಸುವ ನಿಟ್ಟಿನಲ್ಲಿದೆ.