HomeNewsNational Agri Newsರೈತರ ಬಾಳಲ್ಲಿ ಚಿಗುರು ಮೂಡಿಸಿದ ಆಧುನಿಕ ಕೃಷಿ ತಂತ್ರಜ್ಞಾನ: SMAM ಯೋಜನೆಯ ಉಪಕ್ರಮ

ರೈತರ ಬಾಳಲ್ಲಿ ಚಿಗುರು ಮೂಡಿಸಿದ ಆಧುನಿಕ ಕೃಷಿ ತಂತ್ರಜ್ಞಾನ: SMAM ಯೋಜನೆಯ ಉಪಕ್ರಮ

ಪರಿಚಯ

         ವಿವಿಧ ಬೆಳೆಗಳು, ಭೌಗೋಳಿಕ ಪರಿಸ್ಥಿತಿಗಳು ಮತ್ತು ಇತರ ಅಂಶಗಳನ್ನು ಅವಲಂಬಿಸಿ ಭಾರತದ ಕೃಷಿಯಲ್ಲಿ ಯಾಂತ್ರೀಕರಣ ಬದಲಾಗುತ್ತದೆ. ಸಣ್ಣ ರೈತರ ಹಿಡುವಳಿಗೆ ಕೃಷಿ ಉಪಕರಣಗಳ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಕೃಷಿ ಯಂತ್ರಗಳ ಖರೀದಿಗೆ ಹಣಕಾಸಿನ ನೆರವು ನೀಡಲು ಕೇಂದ್ರ ಸರ್ಕಾರ ಪ್ರಾಯೋಜಿತ ಕಾರ್ಯಕ್ರಮವಾದ ಸಬ್ಮಿಷನ್ ಆನ್ ಅಗ್ರಿಕಲ್ಚರಲ್ ಮೆಕನೈಸೇಶನ್ (SMAM)ಯೋಜನೆಯ ಮೂಲಕ ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸಿದೆ. ಸದರಿ ಯೋಜನೆಯಡಿಯಲ್ಲಿ 40,900 ಕಸ್ಟಮ್ ನೇಮಕಾತಿ ಕೇಂದ್ರಗಳು/ಹೈಟೆಕ್ ಹಬ್ಗಳು/ಕೃಷಿ ಯಂತ್ರಗಳ ಬ್ಯಾಂಕ್ಗಳನ್ನು ಸ್ಥಾಪಿಸಲಾಗಿದೆ.

ಅವಲೋಕನ

            ಕೃಷಿಯಲ್ಲಿ ದಕ್ಷತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಮುಖ್ಯ ಧ್ಯೇಯವನ್ನಿಟ್ಟುಕೊಂಡು ಕೃಷಿಯಲ್ಲಿ ಯಂತ್ರೋಪಕರಣಗಳು ಮತ್ತು ಸಲಕರಣೆಗಳನ್ನು  ಬಳಸುವಂತೆ ಸೂಚಿಸುತ್ತದೆ. ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸಲು ಭಾರತ ಸರ್ಕಾರವು ಅನುವು ಮಾಡಿದೆ. ಸಬ್ಮಿಷನ್ ಆನ್ ಅಗ್ರಿಕಲ್ಚರಲ್ ಮೆಕನೈಸೇಶನ್ ಯೋಜನೆಯು ರೈತರಿಗೆ, ಗ್ರಾಮೀಣ ಯುವಕರಿಗೆ ಹಾಗೂ ರೈತ ಉತ್ಪಾದಕ ಸಂಸ್ಥೆಗಳಿಗೆ ಕೃಷಿ ಯಂತ್ರೋಪಕರಣಗಳ ಖರೀದಿಗೆ ಹಾಗು ಕಸ್ಟಮ್ ಬಾಡಿಗೆ ಕೇಂದ್ರಗಳ ಸ್ಥಾಪನೆಗೆ ಹಣಕಾಸಿನ ನೆರವು ನೀಡುತ್ತದೆ. ರೈತರಿಗೆ, ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸಾಧ್ಯವಾಗದ ಕಾರಣ ಸದರಿ ಕಸ್ಟಮ್ ಬಾಡಿಗೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ಇವು ರೈತರು ಕೃಷಿ ಉಪಕರಣಗಳನ್ನು ಬಾಡಿಗೆಗೆ ಪಡೆಯುವ ಸ್ಥಳವಾಗಿದೆ. ರೈತರ  ಆರ್ಥಿಕ ಪರಿಸ್ಥಿತಿಯನ್ನು ಹಾಗೂ ಜಮೀನಿನ ಗಾತ್ರವನ್ನು ಪರಿಗಣಿಸದೆ, ಕೃಷಿ ಉಪಕರಣಗಳ ಲಭ್ಯತೆಯನ್ನು ಹೆಚ್ಚಿಸುವುದು ಸದರಿ ಯೋಜನೆಯ ಮುಖ್ಯ ಗುರಿಸದರಿ ಕಾರ್ಯಕ್ರಮವು ಇಳುವರಿ ಹಾಗೂ ಕೃಷಿ ಕ್ಷಮತೆಯನ್ನು ಹೆಚ್ಚಿಸುವುದರ ಜೊತೆಗ ರೈತರಿಗೆ ಹಾಗೂ ಭಾರತೀಯ ಆರ್ಥಿಕತೆಯನ್ನು ಅಧಿಕ ಗೊಳಿಸಲು ನೆರವಾಗಿದೆ.

         ಭಾರತದೇಶದ ರೈತರು ಸಬ್-ಮಿಷನ್ ಆನ್ ಅಗ್ರಿಕಲ್ಚರಲ್ ಮೆಕನೈಸೇಶನ್ ಕಾರ್ಯಕ್ರಮದ ಪ್ರಾಥಮಿಕ ಫಲಾನುಭವಿಗಳಾಗಿದ್ದಾರೆ. ರೈತರ  ಆರ್ಥಿಕ ಪರಿಸ್ಥಿತಿಯನ್ನು ಹಾಗೂ ಜಮೀನಿನ ಪರಿಮಾಣವನ್ನು ಪರಿಗಣಿಸದೆ, ಆಧುನಿಕ ಕೃಷಿ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಅಳವಡಿಸುವಂತೆ ಸದರಿ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಸದರಿ ಯೋಜನೆಯು ಹಣಕಾಸಿನ ನೆರವು ನೀಡುವ ಮೂಲಕ, ರೈತರಿಗೆ ಅಗತ್ಯವಿರುವ ಉಪಕರಣಗಳನ್ನು ಖರೀದಿಸಲು ಅನುವು ಮಾಡಿದ್ದು ತಮ್ಮ ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಲು ನಾಂದಿಯಾಗಿದೆ. ಮುಂದೆ,  ಕಸ್ಟಮ್ ನೇಮಕಾತಿ ಕೇಂದ್ರಗಳನ್ನು ಸ್ಥಾಪಿಸಿದ್ದು, ರೈತರಿಗೆ ಬಾಡಿಗೆ ಆಧಾರಿತ ಕೃಷಿ ಉಪಕರಣಗಳನ್ನು ಪಡೆಯಲು ನೆರವಾಗಿದೆ. ಸದರಿಯು ರೈತರಿಗೆ ಆಧುನಿಕ ಉಪಕರಣ ಮತ್ತು ತಂತ್ರಜ್ಞಾನಕ್ಕೆ ಮಾರ್ಗ ನೀಡಿ ಇಳುವರಿ ಹಾಗೂ ಕೃಷಿ ದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡಿದೆ. ಕಾರ್ಯಕ್ರಮದಿಂದ, ಭಾರತದ ರೈತರು ಕೃಷಿಯಲ್ಲಿನ ಇತ್ತೀಚಿನ ಆಧುನಿಕತೆಯ ಲಾಭವನ್ನು ಪಡೆಯಬಹುದು, ಸದರಿಯು ರೈತ ಸಮುದಾಯಕ್ಕೆ ಉತ್ತಮ ಭವಿಷ್ಯವನ್ನು ರೂಪಿಸಿದೆ.

ಪ್ರಮುಖ ಅಂಶಗಳು

  •     ಸಬ್-ಮಿಷನ್ ಆನ್ ಅಗ್ರಿಕಲ್ಚರಲ್ ಮೆಕನೈಸೇಶನ್ (SMAM)ಯೋಜನೆಯು ಭಾರತದಲ್ಲಿ ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
  •     ಸದರಿ ಯೋಜನೆಯು ರೈತರಿಗೆ, ಗ್ರಾಮೀಣ ಯುವಕರಿಗೆ ಹಾಗೂ ರೈತ ಉತ್ಪಾದಕ ಸಂಸ್ಥೆಗಳಿಗೆ  ಕೃಷಿ ಯಂತ್ರೋಪಕರಣಗಳ ಖರೀದಿಗೆ ಹಾಗು ಕಸ್ಟಮ್ ಬಾಡಿಗೆ ಕೇಂದ್ರಗಳ ಸ್ಥಾಪನೆಗೆ ಹಣಕಾಸಿನ ನೆರವು ನೀಡುತ್ತದೆ.
  •     ಕೃಷಿ ಯಂತ್ರೋಪಕರಣಗಳ ಖರೀದಿಸಲು ಸಾಧ್ಯವಾಗದ ಕಾರಣ ಕಸ್ಟಮ್ ಬಾಡಿಗೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇವು ರೈತರು ಕೃಷಿ ಉಪಕರಣಗಳನ್ನು ಬಾಡಿಗೆಗೆ ಪಡೆಯುವ ಸ್ಥಳವಾಗಿದೆ
  •     ರೈತರ  ಆರ್ಥಿಕ ಪರಿಸ್ಥಿತಿಯನ್ನು ಹಾಗೂ ಜಮೀನಿನ ಪರಿಮಾಣವನ್ನು ಪರಿಗಣಿಸದೆ, ಕೃಷಿ ಉಪಕರಣಗಳ ಲಭ್ಯತೆಯನ್ನು ಹೆಚ್ಚಿಸುವುದು ಸದರಿ ಯೋಜನೆಯ ಮುಖ್ಯ ಗುರಿಯಾಗಿದೆ.
  •     ಭಾರತದಾದ್ಯಂತ ಸುಮಾರು 40,000 ಕಸ್ಟಮ್ ಬಾಡಿಗೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು,  ರೈತರಿಗೆ ಆಧುನಿಕ ಉಪಕರಣಗಳ  ಸದುಪಯೋಗ ಮತ್ತು ತಂತ್ರಜ್ಞಾನಕ್ಕೆ ನಾಂದಿಯಾಗಿದೆ.
  •     ಸದರಿ ಯೋಜನೆಯ ಮುಖಾಂತರ ರೈತರು ಕೃಷಿಯಲ್ಲಿನ ಇತ್ತೀಚಿನ ಆಧುನಿಕತೆಯ ಲಾಭವನ್ನು ಪಡೆಯಬಹುದು, ಜೊತೆಗೆ ಸದರಿಯು ಬೆಳೆ ಇಳುವರಿ  ಹಾಗೂ ಕೃಷಿ ಕ್ಷಮತೆಯನ್ನು ಹೆಚ್ಚಿಸಿ ರೈತ ಸಮುದಾಯಕ್ಕೆ ಉತ್ತಮ ಭವಿಷ್ಯವನ್ನು ರೂಪಿಸಿದೆ.

 ತೀರ್ಮಾನ:

         ಸಬ್-ಮಿಷನ್ ಆನ್ ಅಗ್ರಿಕಲ್ಚರಲ್ ಮೆಕನೈಸೇಶನ್ (SMAM) ಕಾರ್ಯಕ್ರಮವು, ಭಾರತದ ರೈತರಿಗೆ ಅಮೂಲ್ಯವಾದ ಸಂಪನ್ಮೂಲವಾಗಿದೆ. ಇದರಿಂದ ರೈತರಿಗೆ ಆಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನದ ಲಾಭವನ್ನು ಪಡೆಯಲು ಸಹಾಯ ಮಾಡುತ್ತದೆ, ಜೊತೆಗೆ ದಕ್ಷತೆ ಮತ್ತು ಉತ್ಪಾದಕತೆಯನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ. ಹಣಕಾಸಿನ ನೆರವು ನೀಡುವ ಮೂಲಕ ಮತ್ತು ಕಸ್ಟಮ್ ಬಾಡಿಗೆ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ, ರೈತರ ಆರ್ಥಿಕ ಪರಿಸ್ಥಿತಿಯನ್ನು ಲೆಕ್ಕಿಸದೆ, ಆಧುನಿಕ ಕೃಷಿಯ ಪ್ರಯೋಜನವನ್ನು ಪಡೆಯಲು ಸಹಾಯ ಮಾಡುತ್ತದೆ. ಸದರಿ ಕಾರ್ಯಕ್ರಮವು ಸಣ್ಣ ಭೂ ಹಿಡುವಳಿದಾರರಿಗೆ ಲಾಭದಾಯಕವಾಗಲಿದೆ.  ಕಸ್ಟಮ್ ಬಾಡಿಗೆ ಕೇಂದ್ರಗಳ ಸ್ಥಾಪನೆಯು ರೈತರಿಗೆ ಅನುಗುಣವಾಗಿ ಅಗತ್ಯವಿರುವ ಉಪಕರಣಗಳನ್ನು ಪಡೆಯಲು ನೆರವಾಗಿದೆ.. ಸದರಿ ಕಾರ್ಯಕ್ರಮದಿಂದ, ಭಾರತದ ರೈತರು ಆಧುನಿಕ ಕೃಷಿಯ ಲಾಭವನ್ನು ಪಡೆದುಕೊಳ್ಳಲು  ನೆರವಾಗಿದ್ದು, ಹೆಚ್ಚು ಸಮೃದ್ಧವಾದ ಭವಿಷ್ಯವನ್ನು ಸೃಷ್ಟಿಸಿದೆ.

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು