ಕೃಷಿಯು ಪ್ರತಿಯೊಂದು ದೇಶದ ಆರ್ಥಿಕತೆಯ ಬೆನ್ನುಲುಬಾಗಿದ್ದು ಭಾರತದ ಆರ್ಥಿಕ ಯಶಸ್ಸು ಕೃಷಿ ಕ್ಷೇತ್ರದ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ.ಆದರೆ ಭಾರತದಲ್ಲಿ ಕಡಿಮೆ ಹೂಡಿಕೆಯಲ್ಲಿ ಲಾಭದಾಯಕ ಕೃಷಿ ಉದ್ಯಮವನ್ನು ಪ್ರಾರಂಭಿಸುವುದು ಸುಲಭದ ಕೆಲಸವಲ್ಲ. ಕೃಷಿಯು ಪ್ರತಿಯೊಬ್ಬರ ಜೀವನದ ಅತ್ಯಂತ ಅವಶ್ಯಕ ಮತ್ತು ಪ್ರಮುಖ ಭಾಗವಾಗಿದೆ. ಆದ್ದರಿಂದ, ಇದು ಯಶಸ್ವಿ ವ್ಯಾಪಾರ ಕಲ್ಪನೆಯಾಗಿದ್ದು,ಕಡಿಮೆ ಹೂಡಿಕೆಯೊಂದಿಗೆ ಭಾರತದಲ್ಲಿ ಸ್ವಂತ ಲಾಭದಾಯಕ ಕೃಷಿ ವ್ಯವಹಾರವನ್ನು ಪ್ರಾರಂಭಿಸಲು ಈ ಲೇಖನವು ನಿಮಗೆ ಸಹಾಯ ಮಾಡುತ್ತದೆ.
- ನಿಮ್ಮ ಬಳಿ ಭೂಮಿ ಇದ್ದರೆ ಅಥವಾ ಭೂಮಿ ಖರೀದಿಸಬಹುದಾದರೆ, ನೀವು ಆ ಭೂಮಿಯಲ್ಲಿ ವೈಜ್ಞಾನಿಕ ಕೃಷಿ ಮಾಡಬಹುದು.
- ಇದು ಭಾರತದಲ್ಲಿ ಉತ್ತಮ ಉದ್ಯಮವಾಗಿದ್ದು ದೇಶದ ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ ಮತ್ತು ಸರ್ಕಾರವು ಈ ಉದ್ಯಮಕ್ಕೆ ಹೆಚ್ಚಿನ ಬೆಂಬಲವನ್ನು ನೀಡುತ್ತದೆ.
- ಕೃಷಿ ಉದ್ಯಮವನ್ನು ಪ್ರಾರಂಭಿಸುವ ಮೊದಲು, ನೀವು ಕೃಷಿ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿರಬೇಕು.
ಕೋಳಿ ಸಾಕಾಣೆ :
- ಕೋಳಿ ಸಾಕಾಣೆ ಉದ್ಯಮವು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದ್ದು ಕೋಳಿ ಸಾಕಾಣೆ ಘಟಕವನ್ನು ಎಲ್ಲೆಡೆ ಸುಲಭವಾಗಿ ಸ್ಥಾಪಿಸಬಹುದು .
- ಉತ್ತಮ ತಳಿಯ ಕೋಳಿಗಳನ್ನು ಹೊಂದಿದ್ದರೆ ಅದು ಅದು ತಿಂಗಳಿಗೆ 20-25 ಮೊಟ್ಟೆಗಳನ್ನು ಇಡುತ್ತದೆ.
- ಕೋಳಿ ಸಾಕಣೆಯು ಭಾರತೀಯ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಒಂದಾಗಿದೆ.
- ಕಳೆದ ಮೂರು ದಶಕಗಳಲ್ಲಿ, ಇದು ಹಿತ್ತಲಿನ ಕೃಷಿಯಿಂದ ತಾಂತ್ರಿಕ-ವಾಣಿಜ್ಯ ಕೃಷಿಗೆ ರೂಪಾಂತರಗೊಂಡಿದೆ.
- ಇದು ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ, ಈ ಉದ್ಯಮವನ್ನು ಪ್ರಾರಂಭಿಸಿದ ನಂತರ ನೀವು ಕೇವಲ ಒಂದು ತಿಂಗಳಲ್ಲಿ ಲಾಭಗಳಿಸಲು ಪ್ರಾರಂಭಿಸಬಹುದು.
ಸಾವಯವ ಕೃಷಿ ಉದ್ಯಮ :
- ಕೃಷಿ ವ್ಯವಹಾರ ಕಲ್ಪನೆಗಳು (ಸಾವಯವ ಕೃಷಿ)
- ಈ ಕೃಷಿಯಲ್ಲಿ ಸಾವಯವ ತ್ಯಾಜ್ಯ ಉತ್ಪನ್ನ (ತ್ಯಾಜ್ಯ ಆಹಾರ, ಮರದ ಎಲೆ, ಸಗಣಿ ಇತ್ಯಾದಿ)ಗಳನ್ನ ಬಳಸಲಾಗುತ್ತದೆ.
- ಕಡಿಮೆ ಹೂಡಿಕೆದಾರರಿಗೆ ಇದು ಅತ್ಯಂತ ಲಾಭದಾಯಕ ಕೃಷಿ ಉದ್ಯಮವಾಗಿದೆ.
- ಇಂದು ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ ಆದರೆ ಇವುಗಳು ಕಡಿಮೆ. ಈಗ ಈ ವ್ಯವಹಾರವನ್ನು ಪ್ರಾರಂಭಿಸಲು ನಿಮಗೆ ಸರ್ಕಾರದಿಂದ ಸಬ್ಸಿಡಿಯ ಸುವರ್ಣಾವಕಾಶ.
- ಈ ವ್ಯವಹಾರವನ್ನು ಪ್ರಾರಂಭಿಸುವ ಮೊದಲು ನಿಮಗೆ ಸಾವಯವ ಕೃಷಿ ವ್ಯವಹಾರದ ಬಗ್ಗೆ ಜ್ಞಾನವಿರಬೇಕು.
- ಸಾವಯವ ಉತ್ಪನ್ನಕ್ಕೆ ಸಾಕಷ್ಟು ಬೇಡಿಕೆ ಇರುವುದರಿಂದ ಇದರ ಸ್ಟಾರ್ಟಪ್ ಗಳ ಭವಿಷ್ಯಕ್ಕೆ ಉತ್ತಮವಾಗಿದೆ, ಸರ್ಕಾರವು ಈ ಉದ್ಯಮವನ್ನು ಬೆಂಬಲಿಸುತ್ತದೆ.
- ಸಾವಯವ ಕೃಷಿಗಾಗಿ ಸರ್ಕಾರದ ಯೋಜನೆ – ಪರಂಪರಾಗತ್ ಕೃಷಿ ವಿಕಾಸ ಯೋಜನೆ (PKVY), ಮಣ್ಣಿನ ಆರೋಗ್ಯ ನಿರ್ವಹಣೆ (SHM) ಇತ್ಯಾದಿ.
ಎರೆ ಹುಳು ಗೊಬ್ಬರ ತಯಾರಿಕೆ:
- ಎರೆಹುಳು ಗೊಬ್ಬರವು ಸಾವಯವ ಕೃಷಿಯಲ್ಲಿಯೂ ಸೇರಿದೆ ಆದ್ದರಿಂದ ಎರೆಹುಳವನ್ನು ರೈತರ ಸ್ನೇಹಿತ ಎಂದೂ ಕರೆಯುತ್ತಾರೆ
- ಎರೆಹುಳುಗಳು ತ್ಯಾಜ್ಯ ವಸ್ತುಗಳನ್ನು ಕೊಳೆಸುತ್ತವೆ ಮತ್ತು ಮಣ್ಣನ್ನು ಪೋಷಕಾಂಶಗಳಿಂದ ಸಮೃದ್ಧಗೊಳಿಸುತ್ತವೆ
- ಎರೆಹುಳು ತಳಿಯ ಬಗ್ಗೆ ನಿಮಗೆ ಸ್ವಲ್ಪ ಜ್ಞಾನವಿದ್ದರೂ ಸಹ, ನೀವು ಈ ಉದ್ಯಮವನ್ನು ಪ್ರಾರಂಭಿಸಬಹುದು.
- ನಿಮ್ಮ ವರ್ಮಿಕಾಂಪೋಸ್ಟ್ ಮಣ್ಣಿನ ಉತ್ಪನ್ನವನ್ನು ನೀವು ಪ್ರಾರಂಭಿಸಬಹುದು ಮತ್ತು ಅದನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು
- ಕಡಿಮೆ ಹೂಡಿಕೆ ಮತ್ತು ದೊಡ್ಡ ಲಾಭದೊಂದಿಗೆ ಇದು ಸುಲಭ ಉದ್ಯಮವಾಗಿದೆ.
ಹೈನುಗಾರಿಕೆ :
- ಇದು ಭಾರತದ ಅತ್ಯುತ್ತಮ ಕೃಷಿ ಉದ್ಯಮವಾಗಿದೆ.
- ದಿನದಿಂದ ದಿನಕ್ಕೆ ಹಾಲಿನ ಬೇಡಿಕೆ ಏರುತ್ತಿರುವುದರಿಂದ ಇದರಲ್ಲಿ ಹೆಚ್ಚಿನ ಲಾಭ ಪಡೆಯಬಹುದು. .
- ಸಂಪೂರ್ಣ ಕೃಷಿ ಉದ್ಯಮದಲ್ಲಿ ಇದು ಅತ್ಯಂತ ಲಾಭದಾಯಕ ಉದ್ಯಮವಾಗಿದೆ.
- ಭಾರತ ಸರ್ಕಾರ ಮತ್ತು ನಬಾರ್ಡ್ ಈ ಉದ್ಯಮಕ್ಕೆ ಸಂಪೂರ್ಣ ಸಹಕಾರವನ್ನು ನೀಡುತ್ತದೆ.
- ಹೈನುಗಾರಿಕೆಗೆ ಬ್ಯಾಂಕ್ ನಿಂದ 10 ಲಕ್ಷದವರೆಗೆ ಸಾಲ ಸಿಗುತ್ತದೆ. .
- ಇದರಿಂದ ಹೆಚ್ಚು ಗೊಬ್ಬರ ಉತ್ಪಾದನೆಯಾಗುತ್ತದೆ (ಸಾವಯವ ಕೃಷಿಗೆ ಬಳಸುವ ಸಗಣಿ).
- ಈ ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಹೈನುಗಾರಿಕೆಯ ಬಗ್ಗೆ ಸರಿಯಾದ ಜ್ಞಾನ ಹಾಗೂ ಸಂಪೂರ್ಣ ಮಾಹಿತಿಯನ್ನು ಹೊಂದಿರಬೇಕು.
ಮೀನುಗಾರಿಕೆ :
- ಈಗ ಭಾರತದಲ್ಲಿ ಮೀನಿನ ಮಾಂಸವು ಅತ್ಯಂತ ಜನಪ್ರಿಯವಾಗಿದೆ.
- ಭಾರತ ಸರ್ಕಾರವು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ಅನ್ನು ಪ್ರಾರಂಭಿಸಿದೆ .
- ಈ ಯೋಜನೆಯಡಿ ಅಭ್ಯರ್ಥಿಯ ಒಟ್ಟು ವೆಚ್ಚದ 75% ಅನ್ನು ಸಬ್ಸಿಡಿಯಾಗಿ ಹಿಂತಿರುಗಿಸಲಾಗುತ್ತದೆ.
- ಅನೇಕ ಜಾತಿಯ ಮೀನುಗಳನ್ನು ಔಷಧಕ್ಕಾಗಿ ಬಳಸಲಾಗುತ್ತದೆ ಮತ್ತು ಎಣ್ಣೆಯನ್ನು ಸಹ ತಯಾರಿಸಲಾಗುತ್ತದೆ.
- ಮೀನು ಸಾಕಾಣೆ ಬಹಳ ಲಾಭದಾಯಕ ಉದ್ಯಮವಾಗಿದೆ.
ಗಿಡಮೂಲಿಕೆಗಳ ಕೃಷಿ
- ವಾಣಿಜ್ಯ ಉದ್ದೇಶಕ್ಕಾಗಿ ಗಿಡಮೂಲಿಕೆಗಳನ್ನು ಬೆಳೆಯಲು ಮೀಸಲಾಗಿರುವ ಫಾರ್ಮ್ ಆಗಿರಬೇಕು.
- ಅನೇಕ ಜನರು ತಮ್ಮ ಛಾವಣಿಯ ಮೇಲೆ ನಿರ್ದಿಷ್ಟ ಗಿಡಮೂಲಿಕೆಗಳನ್ನು ಬೆಳೆಸುತ್ತಾರೆ, ಜನರು ದಿನದಿಂದ ದಿನಕ್ಕೆ ತಾರಸಿಯಲ್ಲಿ ಗಿಡಮೂಲಿಕೆಗಳ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದಾರೆ.
- ತಾರಸಿಯ ಮೇಲೆ ಕೇಸರಿ ಹೂವನ್ನು (ಕೇಸರ) ಬೆಳೆಸಿ. ಈ ಹೂವು ವಿಶ್ವದ ಅತ್ಯಂತ ದುಬಾರಿಯಾಗಿದೆ.
- ಇದು ಪರಿಪೂರ್ಣ ಕೃಷಿ ಉದ್ಯಮವಾಗಿದ್ದು ಹೂಡಿಕೆಯಿಲ್ಲದೆ ನಿಮ್ಮ ಮನೆಯಲ್ಲಿ ಬೆಳೆಯಬಹುದು.
- ಗಿಡಮೂಲಿಕೆಗಳು ಹೆಚ್ಚಿನ ರಫ್ತು ಮೌಲ್ಯವನ್ನು ಹೊಂದಿದ್ದು, ಉತ್ತಮ ಲಾಭ ಪಡೆಯುವ ಕೃಷಿಯಾಗಿದೆ.
ನರ್ಸರಿ ಉದ್ಯಮ :
- ಮರ ಅಥವಾ ಸಸ್ಯ ನರ್ಸರಿ ಎಂದರೆ ಎಲ್ಲಾ ರೀತಿಯ ಗಿಡಗಳು ಇಲ್ಲಿ ಸಿಗುತ್ತವೆ.
- ಇಂದು ಪ್ರತಿಯೊಬ್ಬ ವ್ಯಕ್ತಿಯು ಪೂರ್ಣವಾಗಿ ಬೆಳೆದ ಸಸ್ಯವನ್ನು ಬಯಸುತ್ತಾನೆ ಏಕೆಂದರೆ ಬೀಜವು ಬೆಳೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.
- ಈ ವ್ಯಾಪಾರವು ಮಾರುಕಟ್ಟೆಯಲ್ಲಿ ಅಥವಾ ಮಾರುಕಟ್ಟೆಯ ಸಮೀಪದಲ್ಲಿ ಬಹಳ ಲಾಭದಾಯಕವಾಗಿದೆ.
- ಇಂದು ತೋಟಗಾರಿಕೆ ನರ್ಸರಿ ಜನಪ್ರಿಯವಾಗಿದೆ ಮತ್ತು ಬೆಳೆದ ಸಸ್ಯಗಳನ್ನು ತೋಟಗಾರಿಕೆಯಲ್ಲಿ ಬಳಸಲಾಗುತ್ತದೆ ಹಾಗೂ ತೋಟಗಾರಿಕ ಗಿಡಗಳು ಸಸ್ಯ ನರ್ಸರಿಗಳಲ್ಲಿ ಮಾತ್ರ ಲಭ್ಯವಿರುತ್ತವೆ.
- ಈ ವ್ಯವಹಾರವನ್ನು ಪ್ರಾರಂಭಿಸುವ ಮೊದಲು, ನರ್ಸರಿ ವ್ಯಾಪಾರವು ಆ ಸ್ಥಳದಲ್ಲಿ ಲಾಭದಾಯಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬೇಕು.
ಜೇನು ಸಾಕಾಣೆ :
- ಜೇನುಸಾಕಾಣೆ ಮತ್ತೊಂದು ಜನಪ್ರಿಯ ಸಣ್ಣ ಕೃಷಿ ಉದ್ಯಮವಾಗಿದ್ದು , ಇದು 25 ರಿಂದ 30 ಸಾವಿರ ರೂಪಾಯಿಗಳಿಗಿಂತ ಕಡಿಮೆ ಹೂಡಿಕೆಯೊಂದಿಗೆ ಪ್ರಾರಂಭಿಸಬಹುದು ಮತ್ತು ಹಳ್ಳಿಗಳು ಮತ್ತು ನಗರಗಳಲ್ಲಿ ವಾಸಿಸುವ ಅನೇಕ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ.
- ಇದು ಹೆಚ್ಚುವರಿ ಆದಾಯದ ಉತ್ತಮ ಮೂಲವಾಗಿದೆ ಮತ್ತು ಕಡಿಮೆ ನಿರ್ವಹಣೆ ಅಗತ್ಯವಿರುತ್ತದೆ.
ಅಣಬೆ ಕೃಷಿ :
- ಅಣಬೆಗಳು ಆಹಾರ, ಔಷಧ, ನಿರ್ಮಾಣ ಸಾಮಗ್ರಿಗಳು ಮತ್ತು ಇತರ ವಾಣಿಜ್ಯ ಉತ್ಪನ್ನಗಳಿಗೆ ಬಳಸಲಾಗುತ್ತದೆ.
- ಈ ಉದ್ಯಮವು ಕಡಿಮೆ ಅವಧಿಯಲ್ಲಿ ಕಡಿಮೆ ಹೂಡಿಕೆಯೊಂದಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ.
- ಭಾರತ ಸರ್ಕಾರವು ಅಣಬೆ ಬೆಳೆಗಾರರಿಗೆ 70% ಸಬ್ಸಿಡಿ ನೀಡುತ್ತದೆ.
- ಈ ಉದ್ಯಮವನ್ನು ಪ್ರಾರಂಭಿಸುವ ಮೊದಲು ನೀವು ಅಣಬೆ ಕೃಷಿಯ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿರಬೇಕು ಏಕೆಂದರೆ ಅಣಬೆಗಳು ಹವಾಮಾನ, ತಾಪಮಾನ ಮತ್ತು ಉತ್ತಮ ಗೊಬ್ಬರ ಮುಂತಾದವುಗಳ ನಿರ್ದಿಷ್ಟ ಸ್ಥಿತಿಯಲ್ಲಿ ಬೆಳೆಯುತ್ತವೆ.
ಹೈಡ್ರೋಪೋನಿಕ್ ರೀಟೇಲ್ ಉದ್ಯಮ
- ಹೈಡ್ರೋಪೋನಿಕ್ ರೀಟೇಲ್ ಉದ್ಯಮವು ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ.
- ಈ ವ್ಯಉದ್ಯಮದಲ್ಲಿ, ಮಣ್ಣಿಲ್ಲದೆ ಕೇವಲ ನೀರಿನಲ್ಲಿ ಸಸ್ಯಗಳನ್ನು ಬೆಳೆಸಲಾಗುತ್ತದೆ.
- ಇದರಲ್ಲಿ ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಬಹುದು.
- ಇದರಿಂದ ಬೆಳೆದ ತರಕಾರಿಗಳು ಹೆಚ್ಚು ರಸಭರಿತವಾಗಿರುತ್ತವೆ. ಆದ್ದರಿಂದ ಇಂತಹ ಬೆಳೆಗಳಿಗೆ ಹೆಚ್ಚು ಬೇಡಿಕೆಯಿದೆ.
- ಹೂಡಿಕೆ ಹೆಚ್ಚಾಗಿದ್ದರೂ ಒಮ್ಮೆ ಲಾಭ ಬರಲು ಪ್ರಾರಂಭಿಸಿದರೆ ಅತೀ ಹೆಚ್ಚು ಲಾಭವನ್ನು ಕಾಣಬಹುದು
ಕೃಷಿ ಉದ್ಯಮವನ್ನು ಪ್ರಾರಂಭಿಸುವ ಮುನ್ನ ತಿಳಿಯಬೇಕಾದ ವಿಷಯಗಳು:
- ನಿಮ್ಮ ಕೃಷಿ ಉದ್ಯಮದ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು.
- ಕೃಷಿ ಉದ್ಯಮವನ್ನು ಪ್ರಾರಂಭಿಸಿದ ನಂತರ ನಿಮ್ಮ ಸ್ವಂತ ಉತ್ಪನ್ನಗಳನ್ನು ಪ್ರಾರಂಭಿಸಿ.
- ನಿಮ್ಮ ಕೃಷಿ ಉದ್ಯಮದಲ್ಲಿ ಸರ್ಕಾರ ಮತ್ತು ನಬಾರ್ಡ್ ಸಹ ಸಬ್ಸಿಡಿ ನೀಡುತ್ತದೆ
- ಉತ್ಪನ್ನಗಳನ್ನು ಪ್ರಾರಂಭಿಸಿದ ನಂತರ ನೀವು ಅದನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವೆಬ್‌ಸೈಟ್ ಹಾಗೂ ಮುಂತಾದ ಆನ್‌ಲೈನ್ ವೇದಿಕೆಗಳಲ್ಲಿ ಪ್ರಚಾರ ಮಾಡಬಹುದು.
- ಆಯ್ಕೆಮಾಡಿದ ಕೃಷಿ ಉದ್ಯಮದ ಬಗ್ಗೆ ಸಂಪೂರ್ಣ ಸಂಶೋಧನೆ ಮಾಡಿ ಮತ್ತು ಅದರ ಸಾಧಕ-ಬಾಧಕಗಳನ್ನು ನಿರ್ಣಯಿಸಿ. ಅದರ ಭವಿಷ್ಯ, ಮಾರ್ಕೆಟಿಂಗ್ ಪ್ರಕ್ರಿಯೆ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ಕಾನೂನು ಸಮಸ್ಯೆಗಳ ಬಗ್ಗೆಯೂ ತಿಳಿದುಕೊಳ್ಳಿ .
- ನಿಮ್ಮ ಸಂಶೋಧನೆಯ ಆಧಾರದ ಮೇಲೆ ವ್ಯಾಪಾರ ಯೋಜನೆಯನ್ನು ರಚಿಸಿ.
- ನೀವು ಆಯ್ಕೆ ಮಾಡಿದ ಕೃಷಿ ಉದ್ಯಮಕ್ಕೆ ಸಂಬಂಧಿಸಿದ ವಿವಿಧ ಕಾನೂನುಗಳು ಮತ್ತು ನಿಬಂಧನೆಗಳನ್ನು ಅರ್ಥಮಾಡಿಕೊಳ್ಳಿ.
- ನಿಮ್ಮ ವ್ಯಾಪಾರವನ್ನು ನೋಂದಾಯಿಸಿ ಮತ್ತು ಅಗತ್ಯ ಪರವಾನಗಿ ಮತ್ತು ಪ್ರಮಾಣೀಕರಣಗಳನ್ನು ಪಡೆದುಕೊಳ್ಳಿ.
ಕೃಷಿ ಉದ್ಯಮವು ನಿರಂತರವಾಗಿ ವಿಸ್ತರಿಸುತ್ತಿದೆ ಆದ್ದರಿಂದ ಭವಿಷ್ಯದಲ್ಲಿಯೂ ಹೆಚ್ಚಿನ ಆಲೋಚನೆಗಳು, ಯೋಜನೆಗಳು ಬರುತ್ತವೆ. ಕೃಷಿ ಉದ್ಯಮವನ್ನು ಯಾರಾದರೂ ಪ್ರಾರಂಭಿಸಬಹುದಾದ ಈ ಕೃಷಿ ಉದ್ಯಮಗಳು ಅವುಗಳದ್ದೇ ಆದ ವ್ಯವಹಾರ ಕಲ್ಪನೆ ಮತ್ತು ಅವುಗಳ ಏರಿಳಿತಗಳ ಪಾಲನ್ನು ಹೊಂದಿರುತ್ತದೆ, ಅವು ನಿಮಗೆ ಉದ್ಯಮದ ಬಗ್ಗೆ ಸಂಪೂರ್ಣ ಜ್ನ್ಯಾನವನ್ನು ನೀಡುತ್ತದೆ.