HomeNewsImportant Events2023 ರ ಪೂಸಾ ಕೃಷಿ ಮೇಳದಲ್ಲಿ ಪೌಷ್ಠಿಕಾಂಶ ಹಾಗೂ ನಾವೀನ್ಯತೆ: ಭಾರತದಲ್ಲಿ ರೈತರ ಸಬಲೀಕರಣ ಹಾಗೂ...

2023 ರ ಪೂಸಾ ಕೃಷಿ ಮೇಳದಲ್ಲಿ ಪೌಷ್ಠಿಕಾಂಶ ಹಾಗೂ ನಾವೀನ್ಯತೆ: ಭಾರತದಲ್ಲಿ ರೈತರ ಸಬಲೀಕರಣ ಹಾಗೂ ಕೃಷಿ ವರ್ಧನೆ

ಪೂಸಾ ಕೃಷಿ ಮೇಳವನ್ನು ಪ್ರಸ್ತುತ 2023 ರ ಮಾರ್ಚ್ ಮಾಹೆಯ 02 ರಿಂದ 04ರ ವರೆಗೆ 3 ದಿನಗಳ ಕಾಲ ನವದೆಹಲಿಯ ICAR-ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು. ಸದರಿ  ಕಾರ್ಯಕ್ರಮದ ವಿಷಯ (ಥೀಮ್) ‘ಸಿರಿಧಾನ್ಯಗಳ (ಶ್ರೀ ಅನ್ನ) ಮೂಲಕ ಪೌಷ್ಟಿಕಾಂಶ, ಆಹಾರ ಮತ್ತು ಪರಿಸರ ಭದ್ರತೆ’ ಎಂದಾಗಿತ್ತು.  ಈ ಸಮಾರೋಪ ಸಮಾರಂಭದಲ್ಲಿ ರಾಜ್ಯಗಳ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಕೈಲಾಶ್ ಚೌಧರಿ ರವರು ಭಾಗವಹಿಸಿರುತ್ತಾರೆ.

ಅವಲೋಕನ

ಪ್ರಸ್ತುತ ಕಾರ್ಯಕ್ರಮದಲ್ಲಿ 6 ರೈತರು/ರೈತ ಮಹಿಳೆಯರು ಮತ್ತು 42 ನವೀನ ರೈತ/ರೈತ ಮಹಿಳೆಯರಿಗೆ ‘IARI ನವೀನ ರೈತ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯಿತು. ಸದರಿ ಕಾರ್ಯಕ್ರಮದ ಮುಖ್ಯ ಅತಿಥಿಗಳು ಪೌಷ್ಟಿಕಾಂಶದ ಭದ್ರತೆಗಾಗಿ ಸಿರಿಧಾನ್ಯಗಳ ವಿವಿಧ ತಳಿಗಳ ಅಭಿವೃದ್ಧಿಯ ಅವಶ್ಯಕತೆಯನ್ನು ಹಾಗು ಆಹಾರ ಭದ್ರತೆ ಹಾಗು ಪರಿಸರ ಸುರಕ್ಷತೆಯನ್ನು ಸಾಧಿಸುವಲ್ಲಿ ಹೊಸ ಮತ್ತು ನವೀನ ಕೃಷಿ ತಂತ್ರಜ್ಞಾನಗಳ ಪ್ರಾಮುಖ್ಯತೆಯನ್ನು ಸಾರಿದರು. ಮುಂದೂವರಿದು, ಕೃಷಿಯಲ್ಲಿ ತಂತ್ರಜ್ಞಾನ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳ ಪ್ರಯತ್ನವನ್ನು ಅವರು ಪ್ರಸ್ತಾಪಿಸಿದರು.

ಡಾ|| ಹಿಮಾಂಶು ಪಾಠಕ್, ಕಾರ್ಯದರ್ಶಿ, DARA ಮತ್ತು ಡೈರೆಕ್ಟರ್ ಜನರಲ್, ಐಸಿಎಆರ್ ರವರು ಮಾತನಾಡಿ ಐಸಿಎಆರ್ ಸಂಸ್ಥೆಯ ವತಿಯಿಂದ ರೈತರ ಅಭಿವೃದ್ಧಿಗಾಗಿ ವಾರ್ಷಿಕವಾಗಿ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದರು. ಸದರಿ ತರಬೇತಿ ಕಾರ್ಯಕ್ರಮಗಳು ರೈತರಿಗೆ ಇತ್ತೀಚಿನ ಕೃಷಿ ತಂತ್ರಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ನವೀಕೃತರಾಗಲು ಸಹಾಯ ಮಾಡುತ್ತದೆ. 

ಪ್ರಸ್ತುತ ಕೃಷಿ ಮೇಳ ಹಾಗೂ ಸಮಾರೋಪ ಸಮಾರಂಭವು ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳ ಬಗ್ಗೆ  ಹಾಗೂ ನವೀನ ಪದ್ಧತಿಗಳ ಮಾಹಿತಿ ನೀಡುವ ಮೂಲಕ ರೈತರಿಗೆ ಅನುಕುಲದಾಯಕವಾಗಿದೆ. ಅದಲ್ಲದೆ ರೈತರ ಅಭಿವೃದ್ಧಿಗಾಗಿ ಸರ್ಕಾರದ ಪ್ರಯತ್ನಗಳನ್ನು ತಿಳಿಸಿದರು.

ಪ್ರಮುಖ ಅಂಶಗಳು

  • ಪೂಸಾ ಕೃಷಿ ಮೇಳವು 3 ದಿನಗಳ ಕಾಲ ನಡೆದಿದ್ದು, ಸದರಿ ಕಾರ್ಯಕ್ರಮದ ವಿಷಯ(ಥೀಮ್ ) ‘ಸಿರಿಧಾನ್ಯಗಳ (ಶ್ರೀ ಅನ್ನ) ಮೂಲಕ ಪೌಷ್ಟಿಕಾಂಶ, ಆಹಾರ ಮತ್ತು ಪರಿಸರ ಭದ್ರತೆ’ ಆಗಿರುತ್ತದೆ.
  • ಸದರಿ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ  ಶ್ರೀ ಕೈಲಾಶ್ ಚೌಧರಿ ಭಾಗವಹಿಸಿದ್ದರು.
  • ಹಲವಾರು ರೈತರು/ರೈತ ಮಹಿಳೆಯರಿಗೆ ‘IARI ನವೀನ ರೈತ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯಿತು.
  • ಮುಖ್ಯ ಅತಿಥಿಗಳು ಪೌಷ್ಟಿಕಾಂಶದ ಭದ್ರತೆಗಾಗಿ ಸಿರಿಧಾನ್ಯಗಳ ವಿವಿಧ ತಳಿಗಳ ಅಭಿವೃದ್ಧಿಯ ಅವಶ್ಯಕತೆಯನ್ನು ಹಾಗು ಆಹಾರ ಭದ್ರತೆ ಹಾಗು ಪರಿಸರ ಸುರಕ್ಷತೆಯನ್ನು ಸಾಧಿಸುವಲ್ಲಿ ಹೊಸ ಮತ್ತು ನವೀನ ಕೃಷಿ ತಂತ್ರಜ್ಞಾನಗಳ ಪ್ರಾಮುಖ್ಯತೆಯನ್ನು ತಿಳಿಸಿರುತ್ತಾರೆ.

ತೀರ್ಮಾನ

ICAR-ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ನವದೆಹಲಿಯಲ್ಲಿ ನಡೆದ ಪೂಸಾ ಕೃಷಿ ಮೇಳವು ಕೃಷಿಯಲ್ಲಿ ಪ್ರಗತಿ ಹಾಗೂ ರೈತರ ಆರ್ಥಿಕ ಏಳಿಗೆಯ ಮೇಲೆ ಪ್ರಭಾವ ಬೀರಿತು. ‘ಸಿರಿಧಾನ್ಯಗಳ ಮೂಲಕ ಪೌಷ್ಟಿಕಾಂಶ, ಆಹಾರ ಮತ್ತು ಪರಿಸರ ಭದ್ರತೆ’ ಎಂಬ ವಿಷಯವನ್ನು  (ಥೀಮ್) ಹೊಂದಿದ್ದು, ಹೊಸ ನವೀನ ಕೃಷಿ ಪದ್ದತಿಗಳ ಹಾಗೂ ಹವಾಮಾನಕ್ಕೆ ಹೊಂದುವ ಕೃಷಿ ಪದ್ಧತಿಗಳ ಮಾಹಿತಿ ಪ್ರಸರಿಸಲಾಗಿತ್ತು. ಹಲವಾರು ICAR ಸಂಸ್ಥೆಗಳು ಪಾಲ್ಗೊಳ್ಳುವಿಕೆಯಿಂದ ಹಾಗೂ ನವೀನ ರೈತರ ಸನ್ಮಾನದಿಂದ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸುವುದರಿಂದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ತಮ್ಮ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಹಾಗೂ ಲಾಭ ಹೆಚ್ಚಿಸಿಕೊಳ್ಳಲು ಉಪಯೋಗವಾಗಲಿದೆ. ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಸರ್ಕಾರದ ಪ್ರಯತ್ನ ಹಾಗೂ ತಂತ್ರಜ್ಞಾನ ಅಳವಡಿಕೆಯಲ್ಲಿ ಕೃಷಿಕರ ಸುಸ್ಥಿರ ಹಾಗೂ ಲಾಭದಾಯಕ ಭವಿಷ್ಯಕ್ಕೆ ನಾಂದಿಯಾಗಲಿದೆ.

 

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು