ಪರಿಚಯ
ಭಾರತೀಯ ಆಹಾರ ನಿಗಮ ಮಂಡಳಿ ಮತ್ತು ರಾಜ್ಯದ ಸಂಸ್ಥೆಗಳ ಮುಖಾಂತರ 22 ಬೆಳೆಗಳಿಗೆ ಬೆಂಬಲ ಬೆಲೆಯ ನೀತಿಯನ್ನು ಭಾರತ ಸರ್ಕಾರವು ಸ್ಥಾಪಿಸಿದೆ. ಸದರಿ ನಿಯಮದಲ್ಲಿ ಕನಿಷ್ಠ ಬೆಂಬಲ ಬೆಲೆಗಳು (MSP) ಮತ್ತು ನ್ಯಾಯಯುತ ಹಾಗೂ ಲಾಭದಾಯಕ ಬೆಲೆ (FRP) ಸೇರಿದ್ದು, ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದಿಂದ ನಿರ್ಧರಿಸಲ್ಪಟ್ಟಿರುತ್ತದೆ. ಇವರ ಮುಖ್ಯ ಉದ್ದೇಶವು ಹಲವಾರು PM-KISAN, PMFBY, PMKSY ಕಾರ್ಯಕ್ರಮಗಳು ಹಾಗೂ ಯೋಜನೆಗಳ ಮೂಲಕ ರೈತರ ಆದಾಯ ಹೆಚ್ಚಳ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಡ್ರೋನ್ ತಂತ್ರಜ್ಞಾನದ ಬಳಕೆ.
ಅವಲೋಕನ
ಭಾರತ ಸರ್ಕಾರವು ರೈತರ ಬೆಳೆಗೆ ಉತ್ತಮ ಬೆಲೆಯನ್ನು ದೊರಕಿಸಿಕೊಡಲು ನೀತಿಗಳನ್ನು ಸ್ಥಾಪಿಸಿದೆ.
ಸದರಿ ನೀತಿಗಳನ್ನು, ಕನಿಷ್ಠ ಬೆಂಬಲ ಬೆಲೆಗಳು (MSP) ಮತ್ತು ನ್ಯಾಯಯುತ ಹಾಗೂ ಲಾಭದಾಯಕ ಬೆಲೆ (FRP) ಎಂದು ಕರೆಯಲಾಗುತ್ತದೆ. ವಿವಿಧ ಸರ್ಕಾರಿ ಏಜೆನ್ಸಿಗಳು ಮತ್ತು ಇತರ ಪ್ರಮುಖ ಅಂಶಗಳ ಅಭಿಪ್ರಾಯಗಳನ್ನು ಪರಿಗಣಿಸಿ, ಸರ್ಕಾರವು 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ನಿರ್ಧರಿಸುತ್ತದೆ. ಭಾರತೀಯ ಆಹಾರ ನಿಗಮ ಮತ್ತು ಇತರ ರಾಜ್ಯ ಏಜೆನ್ಸಿಗಳ ಮೂಲಕ MSP ದರದಲ್ಲಿ ಸರ್ಕಾರವು ರೈತರ ಉತ್ಪನ್ನಗಳನ್ನು ಖರೀದಿಸಿ, ರೈತರಿಗೆ ಲಾಭದಾಯಕವಾಗಿದೆ. ಅದಲ್ಲದೇ, ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರವು ಪೂರಕ ಆದಾಯ, ಬೆಳೆ ವಿಮೆ, ನೀರಾವರಿ ಕಾರ್ಯಕ್ರಮಗಳು, ಕೃಷಿ ಚಟುವಟಿಕೆಗಳಲ್ಲಿ ಡ್ರೋನ್ ತಂತ್ರಜ್ಞಾನದ ಬಳಸುವಂತೆ ಉತ್ತೇಜಿಸಲು ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಾಗೂ ಸುಧಾರಣೆಗಳನ್ನು ಜಾರಿಗೆ ತಂದಿದೆ.
ರೈತರು, ಸರ್ಕಾರ ಸ್ಥಾಪಿಸಿರುವ ಈ ನೀತಿಗಳಿಗೆ ಪ್ರಾಥಮಿಕ ಫಲಾನುಭವಿಗಳಾಗಿರುತ್ತಾರೆ. ಸರ್ಕಾರದಿಂದ ಸ್ಥಾಪನೆಯಾದ ಖರೀದಿ ಕಾರ್ಯಕ್ರಮಗಳ ಮೂಲಕ ರೈತರು ತಮ್ಮ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಪಡೆದುಕೊಳ್ಳುತ್ತಾರೆ. ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರವು 22 ಬೆಳೆಗಳಿಗೆ MSP ನಿಗದಿಪಡಿಸಿದೆ. ಸರ್ಕಾರವು ಪ್ರಮುಖವಾಗಿ ಸದರಿ ಕಾರ್ಯಕ್ರಮಗಳ ಮುಖಾಂತರ ರೈತರಿಗೆ ಕೃಷಿ ಕ್ಷೇತ್ರಕ್ಕೆ ಸ್ಥಿರತೆ ಮತ್ತು ಭದ್ರತೆಯನ್ನು ಒದಗಿಸುವ ಮೂಲಕ ರೈತರು ತಮ್ಮ ಬೆಳೆಗಳಿಂದ ಆದಾಯವನ್ನು ಪಡೆದು ಸುಸ್ಥಿರ ಜೀವನವನ್ನು ಸಾಗಿಸಲು ಅನುವು ಮಾಡಿದೆ.
ಪ್ರಮುಖ ಅಂಶಗಳು
- ಭಾರತ ಸರ್ಕಾರವು, 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳು (MSP) ಮತ್ತು ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಯನ್ನು ನಿಗದಿಪಡಿಸುತ್ತದೆ.
- ಭಾರತೀಯ ಆಹಾರ ನಿಗಮ ಮತ್ತು ಇತರೆ ರಾಜ್ಯ ಏಜೆನ್ಸಿಗಳ ಮೂಲಕ ಸರ್ಕಾರವು ರೈತರ ಉತ್ಪನ್ನಗಳನ್ನು MSP ದರದಲ್ಲಿ ಖರೀದಿಸುತ್ತದೆ.
- ಸರ್ಕಾರವು ರೈತರ ಆದಾಯವನ್ನು ಹೆಚ್ಚಿಸಲು ಕಾರ್ಯಕ್ರಮಗಳು ಮತ್ತು ಸುಧಾರಣೆಗಳನ್ನು ಜಾರಿಗೊಳಿಸಿದೆ, ಅವುಗಳು:
- PM-KISAN ಮುಖಾಂತರ ಪೂರಕ ಆದಾಯ ನೀಡುವುದು.
- ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ಬೆಳೆ ವಿಮೆ
- ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)ಅಡಿಯಲ್ಲಿ ನೀರಾವರಿ
- ಕೃಷಿ ಮೂಲಭೂತಸೌಕರ್ಯ ನಿಧಿ ಅಡಿಯಲ್ಲಿ ಮೂಲಸೌಕರ್ಯ ಸೃಷ್ಟಿ
- ಕೃಷಿ ಮತ್ತು ಸಂಬಂಧಿತ ವಲಯದ ಸಾಲಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು (KCC).
- 10,000 ರೈತ ಉತ್ಪಾದಕ ಸಂಸ್ಥೆಗಳ (FPO) ಸೃಷ್ಟಿ
- ರಾಷ್ಟ್ರೀಯ ಸುಸ್ಥಿರ ಕೃಷಿ ಮಿಷನ್ (NMSA)
- ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನದ ಅಳವಡಿಕೆ
- ಜೇನುಸಾಕಣೆ, ರಾಷ್ಟ್ರೀಯ ಗೋಕುಲ್ ಮಿಷನ್, ನೀಲಿ ಕ್ರಾಂತಿ, ಬಡ್ಡಿ ರಹಿತ ಸಾಲ ಸೃಷ್ಟಿ, ಅಗ್ರೋ-ಫಾರೆಸ್ರ್ಟೀ , ಬಿದಿರು ಮಿಷನ್ ಪುನಸ್ಚೇತನ ಇತ್ಯಾದಿ.
- ಸದರಿ ನೀತಿಗಳು ಮತ್ತು ಸುಧಾರಣೆಗಳು ಕೃಷಿ ಕ್ಷೇತ್ರದಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿ, ರೈತರು ಸುಸ್ಥಿರ ಜೀವನವನ್ನು ಸಾಗಿಸಲು ಸಹಾಯ ಮಾಡುತ್ತದೆ.
ತೀರ್ಮಾನ:
ಭಾರತ ಸರ್ಕಾರವು ದೇಶದ ಕೃಷಿ ಕ್ಷೇತ್ರ ಮತ್ತು ರೈತರನ್ನು ಬೆಂಬಲಿಸಲು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಗಳನ್ನು ನಿಗದಿಪಡಿಸುವುದರಿಂದ, ಹಾಗೂ ಪಿಎಂ-ಕಿಸಾನ್, ಬೆಳೆ ವಿಮೆ ಮತ್ತು ನೀರಾವರಿಗೆ ಪ್ರವೇಶ ಸೃಷ್ಟಿಸುವುದರಿಂದ, ಆದಾಯವನ್ನು ಅಧಿಕಗೊಳಿಸುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ರೈತರ ಅಭಿವೃದ್ಧಿಗೆ ನಾಂದಿಯಾಗಿಸಿ, ಅಗತ್ಯವಾದ ಸಂಪನ್ಮೂಲಗಳನ್ನು ನೀಡಲಾಗುತ್ತಿದೆ. ರೈತರ ಜೀವನೋಪಾಯವನ್ನು ಸುಧಾರಿಸುವುದು ಹಾಗೂ ಕೃಷಿಯಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿ ಸರ್ಕಾರ ಪ್ರಯತ್ನಿಸಿದೆ. ಜೊತೆಗೆ, ಕೃಷಿ ಮೂಲಭೂತಸೌಕರ್ಯ ನಿಧಿಯಂತಹ ಕಾರ್ಯಕ್ರಮಗಳಿಂದ ರೈತರು ಕೃಷಿ ಚಟುವಟಿಕೆಗಳನ್ನು ಮಾಡಿ ಆದಾಯ ಪಡೆದುಕೊಳ್ಳಬಹುದು. ರೈತರನ್ನು ಮತ್ತು ಕೃಷಿ ಉದ್ಯಮೆದಾರರನ್ನು ಬೆಂಬಲಿಸುವ ಮುಖಾಂತರ ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸರ್ಕಾರ ಅನುವು ಮಾಡಿದೆ. ಸರ್ಕಾರದ ಈ ಪ್ರಯತ್ನದಿಂದ ರೈತರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿ ತಮ್ಮ ಉತ್ಪನ್ನಗಳನ್ನು ನ್ಯಾಯಯುತ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ ಮತ್ತು ಕೃಷಿ ಉದ್ಯಮದ ದೀರ್ಘಾವಧಿಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.